ರೆಟ್ರೋ ಲುಕ್, ಎಲೆಕ್ಟ್ರಿಕ್ ಪವರ್: ಹೊಸ ಅವತಾರದಲ್ಲಿ ಮಾರುತಿ 800 ‘ಇವಿ’ ಬಂದರೆ ಹೇಗಿರುತ್ತೆ?

ಭಾರತೀಯರ ಅಚ್ಚುಮೆಚ್ಚಿನ 'ಮಾರುತಿ 800' ಕಾರು ಈಗ ಎಲೆಕ್ಟ್ರಿಕ್ ರೂಪದಲ್ಲಿ ಹೊಸ ಅವತಾರ ಕಂಡಿದೆ. ಡಿಜಿಟಲ್ ಕಲಾವಿದ ರಿಷವ್ ಕುಮಾರ್ ಅವರ ಈ ರೆಂಡರ್, ಮೂಲ ಕಾರಿನ ಬಾಕ್ಸಿ ವಿನ್ಯಾಸವನ್ನು ಉಳಿಸಿಕೊಂಡು ಸೈಬರ್‌ಪಂಕ್ ಮತ್ತು ಫ್ಯೂಚರಿಸ್ಟಿಕ್ ಸ್ಪರ್ಶ ನೀಡಿದೆ. ನಿಯೋ-ರೆಟ್ರೋ ಶೈಲಿ, ಸ್ಮಾರ್ಟ್ ಎಲ್ಇಡಿ ಲೈಟಿಂಗ್, ಮತ್ತು ಹೈ-ಟೆಕ್ ವೈಶಿಷ್ಟ್ಯಗಳೊಂದಿಗೆ ಈ ಇವಿ ಕಾನ್ಸೆಪ್ಟ್, ಹಳೆಯ ನೆನಪುಗಳನ್ನು ಕೆರಳಿಸಿ ಹೊಸ ತಲೆಮಾರಿಗೆ ಭವಿಷ್ಯದ ದೃಷ್ಟಿ ನೀಡಿದೆ.

ರೆಟ್ರೋ ಲುಕ್, ಎಲೆಕ್ಟ್ರಿಕ್ ಪವರ್: ಹೊಸ ಅವತಾರದಲ್ಲಿ ಮಾರುತಿ 800 ‘ಇವಿ’ ಬಂದರೆ ಹೇಗಿರುತ್ತೆ?
ಮಾರುತಿ 800
Image Credit source: social Media

Updated on: Feb 18, 2026 | 4:25 PM

ಭಾರತೀಯ ಆಟೋಮೊಬೈಲ್ ಇತಿಹಾಸದಲ್ಲಿ ‘ಮಾರುತಿ 800’ ಎಂಬುದು ಕೇವಲ ಒಂದು ಕಾರಲ್ಲ, ಅದು ಕೋಟ್ಯಾಂತರ ಕುಟುಂಬಗಳ ಕನಸು. 1983ರಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಈ ಪುಟ್ಟ ಕಾರು, ಅಗ್ಗದ ಬೆಲೆ ಮತ್ತು ಅದ್ಭುತ ಕಾರ್ಯಕ್ಷಮತೆಯಿಂದ ದೇಶವನ್ನೇ ಅಚ್ಚರಿಗೊಳಿಸಿತು. ಈಗ ಇದೇ ಲೆಜೆಂಡರಿ ಕಾರನ್ನು ಎಲೆಕ್ಟ್ರಿಕ್ ಕಾಲಕ್ಕೆ ತಕ್ಕಂತೆ ಆಧುನಿಕವಾಗಿ ಮರುಕಲ್ಪಿಸಿರುವ (Digital Render) ಚಿತ್ರಗಳು ವಾಹನ ಪ್ರಿಯರ ಗಮನ ಸೆಳೆಯುತ್ತಿವೆ. ಡಿಜಿಟಲ್ ಕಲಾವಿದ ರಿಷವ್ ಕುಮಾರ್ (Rishav Kumar) ಎಂಬುವವರು ಈ ಹೊಸ ಮಾರುತಿ 800 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಮೂಲ ಕಾರಿನ ಸಾಂಪ್ರದಾಯಿಕ ‘ಬಾಕ್ಸಿ’ (ಚೌಕಾಕಾರದ) ವಿನ್ಯಾಸವನ್ನು ಉಳಿಸಿಕೊಂಡೇ ಇದಕ್ಕೆ ‘ಸೈಬರ್ ಪಂಕ್’ ಮತ್ತು ‘ಫ್ಯೂಚರಿಸ್ಟಿಕ್’ ಲುಕ್ ನೀಡಲಾಗಿದೆ.

ಕಾರಿನ ವಿನ್ಯಾಸದ ಪ್ರಮುಖ ಅಂಶಗಳು:

ನಿಯೋ-ರೆಟ್ರೋ ಶೈಲಿ: ಕಾರಿನ ಹಳೆಯ ಚಾರ್ಮ್ ಹಾಗೆಯೇ ಇದೆ, ಆದರೆ ಶಾರ್ಪ್ ಲೈನ್‌ಗಳು ಇದಕ್ಕೆ ಆಧುನಿಕ ಕಲೆ ನೀಡಿವೆ.

ಸ್ಮಾರ್ಟ್ ಲೈಟಿಂಗ್: ಮುಂಭಾಗದ ಹಳೆಯ ಗ್ರಿಲ್ ಬದಲಿಗೆ ಸಂಪೂರ್ಣವಾಗಿ ಮುಚ್ಚಿದ ಸ್ಲೀಕ್ ಫೇಸಿಯಾ ನೀಡಲಾಗಿದೆ. ಆಯತಾಕಾರದ ಹೆಡ್‌ಲ್ಯಾಂಪ್‌ಗಳ ಒಳಗೆ ಅಲ್ಟ್ರಾ-ಸ್ಲಿಮ್ ಎಲ್‌ಇಡಿ (LED) ಲೈಟ್ ಬಾರ್ ಇರುವುದು ಕಾರಿನ ಅಂದವನ್ನು ಹೆಚ್ಚಿಸಿದೆ.

ಹೈ-ಟೆಕ್ ಫೀಚರ್ಸ್: ಫ್ಲಶ್ ಡೋರ್ ಹ್ಯಾಂಡಲ್‌ಗಳು (ಬಾಗಿಲಿನ ಒಳಗೆ ಹುದುಗಿರುವ ಹ್ಯಾಂಡಲ್), ಏರೋ-ಡಿಸ್ಕ್ ವೀಲ್ಸ್‌ ಮತ್ತು ಕಪ್ಪು ಬಣ್ಣದ ಕ್ಲಾಡಿಂಗ್ ಈ ಕಾರಿಗೆ ಹೈ-ಟೆಕ್ ಲುಕ್ ನೀಡಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಬ್ಯಾಟರಿ ದೀರ್ಘ ಬಾಳಿಕೆ ಬರಬೇಕಾ? ಇಲ್ಲಿದೆ ಏಳು ಟಿಪ್ಸ್

ಅಂದಿನ ಇಂಜಿನ್ vs ಇಂದಿನ ಕಲ್ಪನೆ:

80ರ ಕಾಲದಲ್ಲಿ ಮಾರುತಿ 800 ಕೇವಲ 796 ಸಿಸಿ (cc) ಇಂಜಿನ್ ಹೊಂದಿತ್ತು. ಅದು 40 ಹೊರ್ಸ್ ಪವರ್ ಮತ್ತು 59 ಎನ್ಎಂ ಟಾರ್ಕ್ ಉತ್ಪಾದಿಸುತ್ತಿತ್ತು. ಅಂದಿನ ಕಾಲಕ್ಕೆ ಅಷ್ಟೇ ಸಾಕಾಗಿತ್ತು. ಆದರೆ ಈ ಹೊಸ ಡಿಜಿಟಲ್ ರೆಂಡರ್‌ನಲ್ಲಿ ಪೆಟ್ರೋಲ್ ಇಂಜಿನ್ ಬದಲಿಗೆ ಎಲೆಕ್ಟ್ರಿಕ್ ಮೋಟಾರ್ ಬಳಸಲಾಗಿದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ಪರಿಸರ ಸ್ನೇಹಿ ವಾಹನಗಳ ಕ್ರಾಂತಿಯ ಸಂಕೇತವಾಗಿದೆ.

ಇಲ್ಲಿದೆ ನೋಡಿ ಇನ್ಸ್ಟಾಗ್ರಾಮ್​​ ಪೋಸ್ಟ್​

ಒಳಾಂಗಣ ವಿನ್ಯಾಸ:

ಮಾರುತಿ ಸುಜುಕಿ ಕಂಪನಿಯು ಈ ಕಾರನ್ನು ಅಧಿಕೃತವಾಗಿ ತಯಾರಿಸಿಲ್ಲವಾದರೂ, ಈ ಡಿಜಿಟಲ್ ರೆಂಡರ್ ಹಳೆಯ ತಲೆಮಾರಿನ ನೆನಪುಗಳನ್ನು ಕೆರಳಿಸಿದೆ ಮತ್ತು ಹೊಸ ತಲೆಮಾರಿನ ಎಕೊ-ಫ್ರೆಂಡ್ಲಿ ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಒಂದು ವೇಳೆ ಮಾರುತಿ 800 ಈ ರೂಪದಲ್ಲಿ ಮರಳಿದರೆ, ಅದು ಮತ್ತೊಮ್ಮೆ ಕ್ರಾಂತಿ ಮಾಡುವುದರಲ್ಲಿ ಸಂಶಯವಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ