Maruti Suzuki: ಮಾರುತಿ ಸುಜುಕಿ ಇಗ್ನಿಸ್, ಬಲೆನೊ ಮತ್ತು ಸಿಯಾಜ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಹಬ್ಬದ ಋತು ಹಿನ್ನಲೆ ವಿವಿಧ ಕಾರು ಕಂಪನಿಗಳು ಗ್ರಾಹಕರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಮಾರುತಿ ಸುಜುಕಿ ಕೂಡಾ ತನ್ನ ಪ್ರಮುಖ ನೆಕ್ಸಾ ಕಾರುಗಳ ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ.

Maruti Suzuki: ಮಾರುತಿ ಸುಜುಕಿ ಇಗ್ನಿಸ್, ಬಲೆನೊ ಮತ್ತು ಸಿಯಾಜ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್
ಇಗ್ನಿಸ್, ಬಲೆನೊ ಮತ್ತು ಸಿಯಾಜ್ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್
Follow us
Praveen Sannamani
|

Updated on: Oct 09, 2023 | 9:00 PM

ದಸರಾ ಮತ್ತು ದೀಪಾವಳಿ ಹಬ್ಬದ ಹಿನ್ನಲೆ ವಿವಿಧ ಕಾರು ಕಂಪನಿಗಳು ಭರ್ಜರಿ ಆಫರ್ ಘೋಷಣೆ ಮಾಡುತ್ತಿದ್ದು, ಮಾರುತಿ ಸುಜುಕಿ(Maruti Suzuki) ಕೂಡಾ ತನ್ನ ಪ್ರಮುಖ ನೆಕ್ಸಾ(Nexa) ಕಾರುಗಳ ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಹೊಸ ಆಫರ್ ಗಳಲ್ಲಿ ಗ್ರಾಹಕರು ಕ್ಯಾಶ್ ಬ್ಯಾಕ್ ಡಿಸ್ಕೌಂಟ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಎಕ್ಸ್ ಚೆಂಜ್ ಬೋನಸ್ ಪಡೆದುಕೊಳ್ಳಬಹುದಾಗಿದ್ದು, ಹೊಸ ಆಫರ್ ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ.

ಹೊಸ ಆಫರ್ ಗಳಲ್ಲಿ ಇಗ್ನಿಸ್, ಬಲೆನೊ ಮತ್ತು ಸಿಯಾಜ್ ಕಾರುಗಳ ಖರೀದಿ ಮೇಲೆ ಹೆಚ್ಚಿನ ಆಫರ್ ಪಡೆದುಕೊಳ್ಳಬಹುದಾಗಿದ್ದು, ಹೊಸ ಆಫರ್ ಗಳಲ್ಲಿ ಇಗ್ನಿಸ್ ಕಾರು ಖರೀದಿಯ ಮೇಲೆ ರೂ. 65 ಸಾವಿರ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ರೂ. 5 ಸಾವಿರ ಮೌಲ್ಯದ ವಿಶೇಷ ಆಫರ್ ಸಹ ಒಳಗೊಂಡಿದ್ದು, ನಿಗದಿತ ಅವಧಿಯಲ್ಲಿ ಬುಕಿಂಗ್ ಸಲ್ಲಿಸುವ ಗ್ರಾಹಕರಿಗೆ ಮಾತ್ರ ವಿಶೇಷ ಆಫರ್ ಅನ್ವಯಿಸಲಿದೆ. ಅಕ್ಟೋಬರ್ 15ರ ಒಳಗಾಗಿ ತನಕ ಬುಕಿಂಗ್ ಸಲ್ಲಿಸುವ ಗ್ರಾಹಕರು ರೂ. 5 ಸಾವಿರ ಮೌಲ್ಯ ವಿಶೇಷ ಆಫರ್ ಪಡೆದುಕೊಳ್ಳಬಹುದಾಗಿದ್ದು, ಹೊಸ ಆಫರ್ ಗಳೊಂದಿಗೆ ಮಾರುತಿ ಸುಜುಕಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಇದನ್ನೂ ಓದಿ: ಹೋಂಡಾ ಎಲಿವೇಟ್ Vs ಸಿಟ್ರನ್ ಸಿ3 ಏರ್‌ಕ್ರಾಸ್: ಹೊಸ ಎಸ್ ಯುವಿಗಳಲ್ಲಿ ಯಾವುದು ಖರೀದಿಗೆ ಬೆಸ್ಟ್?

ಇಗ್ನಿಸ್ ಹ್ಯಾಚ್ ಬ್ಯಾಕ್ ನಂತರ ಬಲೆನೊ ಹ್ಯಾಚ್ ಬ್ಯಾಕ್ ಕಾರಿನ ಮೇಲೂ ಮಾರುತಿ ಸುಜುಕಿ ಕಂಪನಿಯು ಅತ್ಯುತ್ತಮ ಆಫರ್ ನೀಡುತ್ತಿದೆ. ಬಲೆನೊ ಕಾರು ಖರೀದಿ ಮೇಲೆ ರೂ. 55 ಸಾವಿರ ಆಫರ್ ಲಭ್ಯವಿದ್ದು, ಇದರಲ್ಲೂ ಕೂಡಾ ರೂ. 5 ಸಾವಿರ ಮೌಲ್ಯದ ವಿಶೇಷ ಆಫರ್ ಒಳಗೊಂಡಿದೆ. ಹ್ಯಾಚ್ ಬ್ಯಾಕ್ ಕಾರಿನ ಮಾರಾಟದಲ್ಲಿ ಬಲೆನೊ ಕಾರು ಸದ್ಯ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಆಫರ್ ಗಳಲ್ಲಿ ಸಿಎನ್ ಜಿ ಮಾದರಿಯ ಮೇಲೆ ಹೆಚ್ಚಿನ ಆಫರ್ ಲಭ್ಯವಿದೆ.

ಮಾರುತಿ ಸುಜುಕಿ ಕಂಪನಿಯು ನೆಕ್ಸಾ ಕಾರುಗಳಲ್ಲಿ ಪ್ರಮುಖವಾಗಿರುವ ಸಿಯಾಜ್ ಸೆಡಾನ್ ಮೇಲೂ ಅತ್ಯುತ್ತಮ ಆಫರ್ ನೀಡುತ್ತಿದ್ದು, ರೂ. 53 ಸಾವಿರ ಆಫರ್ ಪಡೆದುಕೊಳ್ಳಬಹುದಾಗಿದೆ. ಸಿಯಾಜ್ ಕಾರಿನ ಮೇಲೂ ವಿಶೇಷ ಆಫರ್ ಜೊತೆಗೆ ಎಕ್ಸ್ ಚೆಂಜ್ ಬೋನಸ್ ನೀಡಲಾಗುತ್ತಿದ್ದು, ಈ ತಿಂಗಳಾಂತ್ಯದ ತನಕ ಆಫರ್ ಲಭ್ಯವಿರಲಿವೆ.

ಇದನ್ನೂ ಓದಿ: ಎಂಜಿ ಜೆಡ್ಎಸ್ ಇವಿ ಮೇಲೆ ಭರ್ಜರಿ ಆಫರ್- ರೂ. 2.30 ಲಕ್ಷ ಬೆಲೆ ಇಳಿಕೆ..

ಇನ್ನು ಮಾರುತಿ ಸುಜುಕಿ ಕಂಪನಿಯು ಕಾರು ಮಾರಾಟಕ್ಕಾಗಿ ಅರೆನಾ ಮತ್ತು ನೆಕ್ಸಾ ಎನ್ನುವ ಎರಡು ಮಾದರಿಯ ಮಾರಾಟ ಮಳಿಗೆಗಳನ್ನು ಹೊಂದಿದೆ. ಇದರಲ್ಲಿ ಪ್ರೀಮಿಯಂ ಕಾರುಗಳ ಮಾರಾಟಕ್ಕಾಗಿ ನೆಕ್ಸಾ ಪ್ಲ್ಯಾಟ್ ಫಾರ್ಮ್ ಹೊಂದಿದ್ದರೆ ಸಾಮಾನ್ಯ ಕಾರು ಮಾದರಿಗಳಾಗಿ ಅರೆನಾ ಪ್ಲ್ಯಾಟ್ ಫಾರ್ಮ್ ಹೊಂದಿದೆ. ನೆಕ್ಸಾ ಶೋರೂಂಗಳಲ್ಲಿ ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್ಎಲ್6, ಫ್ರಾಂಕ್ಸ್, ಜಿಮ್ನಿ, ಗ್ರ್ಯಾಂಡ್ ವಿಟಾರಾ ಮತ್ತು ಇನ್ವಿಕ್ಟೊ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಅರೆನಾ ಶೋರೂಂನಲ್ಲಿ ಇಕೋ, ಎಸ್-ಪ್ರೊಸ್ಸೊ, ಆಲ್ಟೊ, ಆಲ್ಟೊ ಕೆ10, ವ್ಯಾಗನ್ಆರ್, ಸೆಲೆರಿಯೊ, ಸ್ವಿಫ್ಟ್, ಡಿಜೈರ್, ಬ್ರೆಝಾ ಮತ್ತು ಎರ್ಟಿಗಾ ಕಾರುಗಳನ್ನು ಮಾರಾಟ ಮಾಡುತ್ತಿದೆ.