Maruti Suzuki XL6 CNG: ಅತ್ಯುತ್ತಮ ಮೈಲೇಜ್ ನೀಡುವ ಮಾರುತಿ ಸುಜುಕಿ ಎಕ್ಸ್ಎಲ್6 ಸಿಎನ್​ಜಿ ಬಿಡುಗಡೆ

ಮಾರುತಿ ಸುಜುಕಿ ಕಂಪನಿಯು ಎಕ್ಸ್ಎಲ್6 ಎಂಪಿವಿ ಮಾದರಿಯಲ್ಲಿ ಹೊಸದಾಗಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ಜೆಟಾ ವೆರಿಯೆಂಟ್ ಆಧರಿಸಿ ಖರೀದಿಗೆ ಲಭ್ಯವಿದೆ.

Maruti Suzuki XL6 CNG: ಅತ್ಯುತ್ತಮ ಮೈಲೇಜ್ ನೀಡುವ ಮಾರುತಿ ಸುಜುಕಿ ಎಕ್ಸ್ಎಲ್6 ಸಿಎನ್​ಜಿ ಬಿಡುಗಡೆ
ಮಾರುತಿ ಸುಜುಕಿ ಎಕ್ಸ್ಎಲ್6 ಸಿಎನ್​ಜಿ ಬಿಡುಗಡೆ
Follow us
Praveen Sannamani
|

Updated on:Nov 01, 2022 | 2:06 PM

ಸಿಎನ್ ಜಿ ಕಾರುಗಳು(CNG Cars) ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿಯು(Maruti Suzuki) ತನ್ನ ಪ್ರಮುಖ ಕಾರುಗಳಲ್ಲಿ ಸಿಎನ್ ಜಿ ಕಾರುಗಳ ಮಾದರಿಗಳ ಮಾರಾಟವನ್ನು ಹೆಚ್ಚಿಸುತ್ತಿದ್ದು, ಇದೀಗ ಕಂಪನಿಯು ತನ್ನ ಎಕ್ಸ್ಎಲ್6 ಎಂಪಿವಿ(XL6 MPV) ಕಾರು ಮಾದರಿಯಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿದೆ. ಹೊಸ ಎಕ್ಸ್ಎಲ್6 ಸಿಎನ್ ಜಿ ಮಾದರಿಯು ಜೆಟಾ ವೆರಿಯೆಂಟ್ ನಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 12.24 ಲಕ್ಷ ಬೆಲೆ ಹೊಂದಿದೆ.

ಎಕ್ಸ್ಎಲ್6 ಎಂಟ್ರಿ ಲೆವಲ್ ಜೆಟಾ ವೆರಿಯೆಂಟ್ ನಲ್ಲಿ ಮಾತ್ರ ಸಿಎನ್ ಜಿ ವರ್ಷನ್ ಖರೀದಿಗೆ ಲಭ್ಯವಿದ್ದು, ಇದು ಸಾಮಾನ್ಯ ಪೆಟ್ರೋಲ್ ಮಾದರಿಗಿಂತ ರೂ. 95 ಸಾವಿರದಷ್ಟು ದುಬಾರಿಯಾಗಿರಲಿದೆ. ನೆಕ್ಸಾ ಕಾರು ಮಾದರಿಗಳಲ್ಲಿ ಮಾರುತಿ ಸುಜುಕಿಯು ಬಲೆನೊ ಹ್ಯಾಚ್ ಬ್ಯಾಕ್ ನಂತರ ಇದೀಗ ಎಕ್ಸ್ಎಲ್6 ಎಂಪಿವಿಯಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿದ್ದು, ಸಿಎನ್ ಜಿ ಕಿಟ್ ಹೊರತಾಗಿ ಹೊಸ ಕಾರಿನಲ್ಲಿ ಯಾವುದೇ ಹೊಸ ಬದಲಾವಣೆಗಳನ್ನು ಮಾಡಲಾಗಿಲ್ಲ.

ಇದನ್ನೂ ಓದಿ: ಪ್ರತಿ ಚಾರ್ಜ್ ಗೆ 600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ ಇವಿ ಕಾರು ಅನಾವರಣ

ಎಂಜಿನ್ ಮತ್ತು ಮೈಲೇಜ್

ಹೊಸ ಎಕ್ಸ್ಎಲ್6 ಸಿಎನ್ ಜಿ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು 1.5 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆ ಎಸ್-ಸಿಎನ್ ಜಿ ಕಿಟ್ ನೀಡಲಾಗಿದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 87 ಬಿಎಚ್ ಪಿ ಮತ್ತು 121 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಹೊಸ ಸಿಎನ್ ಜಿ ಆವೃತ್ತಿಯು ಪ್ರತಿ ಕೆಜಿಗೆ ಗರಿಷ್ಠ 26.32 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಈ ಮೂಲಕ ಇದು ಎಂಪಿವಿ ಕಾರುಗಳಲ್ಲಿಯೇ ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರಲಿದೆ.

ಡಿಸೈನ್ ಮತ್ತು ಫೀಚರ್ಸ್

ಹೊಸ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು ಸ್ಟ್ಯಾಂಡರ್ಡ್ ಪೆಟ್ರೋಲ್ ಮಾದರಿಯೆಂತೆ ಸಿಎನ್ ಜಿ ಮಾದರಿಯಲ್ಲಿ ವಿನ್ಯಾಸ ಮತ್ತು ಫೀಚರ್ಸ್ ನೀಡಿದ್ದು, ಹೆಚ್ಚುವರಿಯಾಗಿ ಸಿಎನ್ ಜಿ ಬ್ಯಾಡ್ಜ್ ನೊಂದಿಗೆ ಹೊಸ ಕಾರಿನಲ್ಲಿ 7.0 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಸ್ಟಾರ್ಟ್/ಸ್ಟಾಪ್ ಬಟನ್, ಕ್ರೂಸ್ ಕಂಟ್ರೋಲ್, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಪವರ್ ವಿಂಡೋಗಳು, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಸೌಲಭ್ಯಗಳಿವೆ.

ಇದನ್ನೂ ಓದಿ: ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಈ ಟಾಪ್ 5 ಕಾರುಗಳ ವಿಶೇಷತೆಗಳೇನು?

ಚಂದಾದಾರಿಕೆ ಕೂಡಾ ಲಭ್ಯ

ಮಾರುತಿ ಸುಜುಕಿ ಕಂಪನಿಯ ಚಂದಾದಾರಿಕೆ ಯೋಜನೆ ಅಡಿ ಆಸಕ್ತ ಗ್ರಾಹಕರು ಆಕರ್ಷಕ ಬೆಲೆಯಲ್ಲಿ ವಿವಿಧ ಕಾರುಗಳನ್ನು ಲೀಸ್ ಮೂಲಕ ಮಾಲೀಕತ್ವವನ್ನು ಹೊಂದಬಹುದಾಗಿದೆ. ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ಹೊಸ ಕಾರುಗಳನ್ನು 24, 36 ಮತ್ತು 48 ತಿಂಗಳಿಗೆ ಲೀಸ್ ಪಡೆದುಕೊಳ್ಳಬಹುದಾಗಿದ್ದು, ಲೀಸ್ ಮೊತ್ತದಲ್ಲೇ ಕಾರಿನ ನಿರ್ವಹಣಾ ವೆಚ್ಚ, ಪಾಲಿಸಿ ಶುಲ್ಕಗಳು ಒಳಗೊಂಡಿರುತ್ತವೆ. ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಎಕ್ಸ್ಎಲ್6 ಸಿಎನ್ ಜಿ ಮಾದರಿಯು ಪ್ರತಿ ತಿಂಗಳಿಗೆ ರೂ. 30,821 ಆರಂಭಿಕ ಬೆಲೆಯೊಂದಿಗೆ ಚಂದಾದಾರಿಕೆಯಲ್ಲಿ ಲಭ್ಯವಿದ್ದು, ಮಾರುತಿ ಲೀಸ್ ಕಾರುಗಳ ಇನ್ನಷ್ಟು ಮಾಹಿತಿಗಾಗಿ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಬಹುದು.

Published On - 2:06 pm, Tue, 1 November 22

ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?