ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಹೇಗೆಲ್ಲಾ ಮೋಸ ಮಾಡ್ತಾರೆ ನೋಡಿ..

ದೇಶಿಯ ಮಾರುಕಟ್ಟೆಯಲ್ಲಿ ಬಳಸಿದ ಕಾರುಗಳ ಮರುಮಾರಾಟ ಮತ್ತು ಖರೀದಿ ಪ್ರಕ್ರಿಯೆ ನೀರಿಕ್ಷಿತ ಮಟ್ಟಕ್ಕಿಂತಲೂ ಹೆಚ್ಚು ಬೆಳವಣಿಗೆ ಸಾಧಿಸುತ್ತಿದ್ದು, ಆದರೆ ಬಳಸಿದ ಕಾರುಗಳ ಖರೀದಿ ಪ್ರಕ್ರಿಯೆಯಲ್ಲಿ ನಡೆಯಬಹುದಾದ ಸಂಭಾವ್ಯ ಮೋಸಗಳ ಕುರಿತು ಗ್ರಾಹಕರ ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಹೇಗೆಲ್ಲಾ ಮೋಸ ಮಾಡ್ತಾರೆ ನೋಡಿ..
ಸೆಕೆಂಡ್ ಹ್ಯಾಂಡ್ ಕಾರುಗಳು
Follow us
|

Updated on: Aug 23, 2024 | 3:44 PM

ಭಾರತದಲ್ಲಿ ಹೊಸ ಕಾರುಗಳ ಖರೀದಿ ಟ್ರೆಂಡ್ ಜೋರಾಗಿದ್ದು, ಹೊಸ ಕಾರುಗಳ ಜೊತೆ ಜೊತೆಗೆ ಬಳಕೆ ಮಾಡಿದ ಕಾರುಗಳಿಗೂ (Used Cars) ಕೂಡಾ ಹೆಚ್ಚಿನ ಬೇಡಿಕೆ ಹರಿದುಬರುತ್ತಿದೆ. ಹೀಗಾಗಿ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಹೊಸ ಕಾರು ಇಲ್ಲವೇ ಬಳಸಿದ ಕಾರುಗಳ ಮಾಲೀಕತ್ವ ಪಡೆದುಕೊಳ್ಳುತ್ತಿದ್ದು, ಬಳಸಿದ ಕಾರುಗಳ ಖರೀದಿ ಪ್ರಕ್ರಿಯೆ ಹೊಸ ಕಾರುಗಳ ಖರೀದಿಗಿಂತಲೂ ತುಸು ಸಂಕೀರ್ಣ ಪ್ರಕ್ರಿಯೆಗಳನ್ನು ಹೊಂದಿದೆ. ಹೀಗಾಗಿ ಬಳಸಿದ ಕಾರುಗಳ ಆಯ್ಕೆಗೂ ಮುನ್ನ ಖರೀದಿದಾರರು ಕೆಲವು ವಿಚಾರಗಳನ್ನು ತಪ್ಪದೇ ತಿಳಿದುಕೊಳ್ಳಬೇಕಾಗುತ್ತದೆ.

ಸಂಚಾರಿ ನಿಯಮ ಉಲ್ಲಂಘನೆಯ ದಂಡಗಳನ್ನು ಪರಿಶೀಲಿಸಿ

ಯಾವುದೇ ರೀತಿಯ ಬಳಸಿದ ವಾಹನಗಳನ್ನು ಖರೀದಿಸುವಾಗ ಪ್ರಾಥಮಿಕವಾಗಿ ಪರಿಶೀಲನೆ ಮಾಡಬೇಕಾದ ಅಂಶವೆಂದರೆ ನೀವು ಆಯ್ಕೆ ಮಾಡುತ್ತಿರುವ ವಾಹನವು ಟ್ರಾಫಿಕ್ ಉಲ್ಲಂಘನೆಗಾಗಿ ಯಾವುದೇ ರೀತಿಯ ಬಾಕಿ ದಂಡವನ್ನು ಹೊಂದಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಬಾಕಿ ಉಳಿದಿರುವ ದಂಡಗಳಿದ್ದರೆ ಸಂಪೂರ್ಣವಾಗಿ ದಂಡಪಾವತಿಗೆ ಸೂಚಿಸಬೇಕಾಗುತ್ತದೆ. ಒಂದು ವೇಳೆ ದಂಡದ ಮೊತ್ತ ಬಾಕಿಯಿದ್ದಲ್ಲಿ ವಾಹನದ ನೋಂದಣಿಯ ಪ್ರಕ್ರಿಯೆಯಲ್ಲಿ ವರ್ಗಾಯಿಸುವುದು ಸಮಸ್ಯೆಯಾಗಬಹುದು. ಜೊತೆಗೆ ಮೋಟಾರು ವಾಹನಗಳ ಕಾಯಿದೆಯ ಪ್ರಕಾರ ಯಾವುದೇ ಬಳಸಿದ ವಾಹದ ಮಾಲೀಕತ್ವ ವರ್ಗಾವಣೆ ಮತ್ತು ಎಫ್‌ಸಿ ನವೀಕರಣಕ್ಕಾಗಿ ಸಂಚಾರಿ ನಿಯಮ ಉಲ್ಲಂಘನೆಗಳ ದಂಡವನ್ನು ಹೊಂದಿರಬಾರದು ಎನ್ನುವ ನಿಯಮವಿದೆ.

ಹಳೆಯ ವಾಹನದ ಹಿನ್ನಲೆಯನ್ನು ಕೂಲಂಕಷವಾಗಿ ಪರಿಶೀಲಿಸಿ

ಬಳಸಿದ ಕಾರುಗಳನ್ನು ಖರೀದಿಸುವಾಗ ಹೊಸ ಮಾಲೀಕರು ಅದರ ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸುವುದು ಬಹಳ ಮುಖ್ಯವಾಗಿದೆ. ನೀವು ಖರೀದಿ ಮಾಡುವ ಕಾರು ಸುಸ್ಥಿತಿಯಲ್ಲಿರುವುದು ಮಾತ್ರವಲ್ಲದೆ ಯಾವುದೇ ರೀತಿಯ ಬಾಕಿ ಇರುವ ದಂಡಗಳಿಂದ ಮುಕ್ತವಾಗಿದೆ ಪರೀಕ್ಷಿಸಿ. ಇದಕ್ಕಾಗಿ ಅಗತ್ಯವಾಗ ಎನ್ಒಸಿ ಕೇಳಿ ಪಡೆಯುವುದನ್ನು ಮಾತ್ರ ಮರೆಯಬೇಡಿ. ಒಂದು ವೇಳೆ ಬಾಕಿ ಮೊತ್ತಗಳೊಂದಿಗೆ ನಿಮ್ಮ ಹೆಸರಿಗೆ ವರ್ಗಾವಣೆಗೊಂಡರೆ ಹಿಂದಿನ ಮಾಲೀಕರು ಪಾವತಿ ಮಾಡಬೇಕಿದ್ದ ದಂಡ ಮೊತ್ತಕ್ಕೆ ನೀವು ಹೊಣೆಯಾಗಬೇಕಾಗುತ್ತದೆ. ಆದ್ದರಿಂದ ಖರೀದಿಸುವ ಮೊದಲು ಸಮಗ್ರ ಪರಿಶೀಲನೆ ನಡೆಸುವುದು ಅತ್ಯಗತ್ಯ.

ಮೋಸವಾದಲ್ಲಿ ಕಾನೂನು ಕ್ರಮಕೈಗೊಳ್ಳಿ

ಒಂದು ವೇಳೆ ನೀವು ಬಳಕೆ ಕಾರನ್ನು ಖರೀದಿಸಿದ ನಂತರ ಆ ವಾಹನದ ಮೇಲೆ ಹೆಚ್ಚಿನ ಪ್ರಮಾಣದ ದಂಡಯಿರುವುದನ್ನು ನೀವು ಕಂಡುಕೊಂಡರೆ ನೀವು ಅವಶ್ಯವಾಗಿ ಕಾನೂನಿನ ಮೊರೆ ಹೋಗಬಹುದು. ನೀವು ಯಾವುದಾರೂ ಸೆಕೆಂಡ್ ಹ್ಯಾಂಡ್ ಕಾರು ಮಾರಾಟಗಾರರಿಂದ ಖರೀದಿ ಮಾಡಿ ಮೋಸ ಹೋಗಿದ್ದರೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೀಗಾಗಿ ಸೆಕೆಂಡ್ ವಾಹನಗಳನ್ನು ಖರೀದಿ ಮಾಡುವಾದ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಇದು ಅನಗತ್ಯ ಕಾನೂನು ವೆಚ್ಚಗಳಿಗೆ ಕಾರಣವಾಗುವುದಲ್ಲದೆ ಮನಃಶಾಂತಿಯನ್ನು ಹಾಳುಮಾಡುತ್ತದೆ.

ಕಳ್ಳತನದ ವಾಹನಗಳ ಬಗ್ಗೆ ಎಚ್ಚರವಿರಲಿ

ಬಳಸಿದ ಕಾರುಗಳನ್ನು ಖರೀದಿಸುವಾಗ ಹೆಚ್ಚಿನ ಮಾಲೀಕರು ಕಡಿಮೆ ಬೆಲೆಯಲ್ಲಿ ಉತ್ತಮ ವಾಹನಗಳನ್ನು ಖರೀದಿ ಬಯಸುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವು ಅನಧಿಕೃತ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುವ ದಲ್ಲಾಳಿಗಳು ಮಾರುಕಟ್ಟೆಗಳಿಂತಲೂ ಕಡಿಮೆ ಬೆಲೆಯ ಆಮೀಷದೊಂದಿಗೆ ಕದ್ದ ವಾಹನಗಳನ್ನು ಮಾರಾಟ ಮಾಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ನೀವು ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಅಧಿಕೃತವಾಗಿ ನೊಂದಣಿಯಾಗಿರುವ ಮಾರಾಟಗಾರರ ಬಳಿಯಲ್ಲಿಯೇ ಖರೀದಿ ಮಾಡಿ. ಇದರಿಂದ ನಿಮಗೆ ಕೆಲವು ಹೆಚ್ಚುವರಿ ಶುಲ್ಕಗಳ ಹೊರತಾಗಿ ಮೋಸದ ವ್ಯವಹಾರಗಳನ್ನು ತಪ್ಪಿಸಬಹುದಾಗಿದೆ. ಒಂದು ವೇಳೆ ಅಧಿಕೃತ ಮಾರಾಟಗಾರನಿಂದಲೂ ಮೋಸವಾಗಿದ್ದರೆ ನೀವು ಅವರ ವಿರುದ್ದ ಸುಲಭವಾಗಿ ಕಾನೂನು ಹೋರಾಟ ಮಾಡಬಹುದಾಗಿದೆ.

ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನವರಾತ್ರಿ: ದುರ್ಗಾ ದೇವಿಗೆ 2.5 ಕೋಟಿ ಮೌಲ್ಯದ ಚಿನ್ನದ ಕಿರೀಟ ಉಡುಗೊರೆ
ನವರಾತ್ರಿ: ದುರ್ಗಾ ದೇವಿಗೆ 2.5 ಕೋಟಿ ಮೌಲ್ಯದ ಚಿನ್ನದ ಕಿರೀಟ ಉಡುಗೊರೆ