150 ಕಿ.ಮೀ ರೇಂಜ್ ನೊಂದಿಗೆ ಹೊಸ ಟಿವಿಎಸ್ ಐಕ್ಯೂಬ್ ಇವಿ ಸ್ಕೂಟರ್ ಬಿಡುಗಡೆ
ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಇವಿ ಸ್ಕೂಟರ್ ಐಕ್ಯೂಬ್ ನವೀಕೃತ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ಈ ಬಾರಿ ಐದು ವೆರಿಯೆಂಟ್ ಗಳೊಂದಿಗೆ ಆಕರ್ಷಕ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ (TVS) ಕಂಪನಿಯು ತನ್ನ ನವೀಕೃತ ಐಕ್ಯೂಬ್ (iQube) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಈ ಬಾರಿ ವಿವಿಧ ಐದು ವೆರಿಯೆಂಟ್ ಗಳನ್ನು ಪರಿಚಯಿಸಲಾಗಿದೆ. ಹೊಸ ಇವಿ ಸ್ಕೂಟರಿನ ಆರಂಭಿಕ ವೆರಿಯೆಂಟ್ ರೂ. 94,999 ಬೆಲೆ ಹೊಂದಿದ್ದರೆ ಟಾಪ್ ಎಂಡ್ ವೆರಿಯೆಂಟ್ ರೂ. 1,85,373 ಬೆಲೆ ಹೊಂದಿದೆ.
ಐಕ್ಯೂಬ್ ಹೊಸ ಇವಿ ಸ್ಕೂಟರಿನಲ್ಲಿ ಬ್ಯಾಟರಿ ಆಯ್ಕೆಗಳನ್ನು ಆಧರಿಸಿ ಐಕ್ಯೂಬ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ಎಸ್ ಟಿ ವೆರಿಯೆಂಟ್ ಗಳನ್ನು ನೀಡಲಾಗಿದ್ದು, ಇದರಲ್ಲಿ 2.2 ಕೆವಿಹೆಚ್, 3.4 ಕೆವಿಹೆಚ್ ಮತ್ತು 5.1 ಕೆವಿಹೆಚ್ ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆದುಕೊಂಡಿವೆ. ಈ ಮೂಲಕ ಹೊಸ ಇವಿ ಸ್ಕೂಟರಿನಲ್ಲಿರುವ 2.2 ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ವೆರಿಯೆಂಟ್ ಪ್ರತಿ ಚಾರ್ಜ್ ಗೆ 75 ಕಿ.ಮೀ ಮೈಲೇಜ್ ನೀಡಿದ್ದಲ್ಲಿ 3.4 ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್ ಗೆ 100 ಕಿ.ಮೀ ಮತ್ತು 5.1 ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಹೈ ಎಂಡ್ ಮಾದರಿಯು 150 ಕಿ.ಮೀ ಮೈಲೇಜ್ ನೀಡುತ್ತದೆ.
ಇದರೊಂದಿಗೆ ಹೊಸ ಐಕ್ಯೂಬ್ ಇವಿ ಸ್ಕೂಟರ್ ಮಾದರಿಯು ಪ್ರತಿ ಗಂಟೆಗೆ 82 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಚಾರ್ಜಿಂಗ್ ಸೌಲಭ್ಯಕ್ಕಾಗಿ 650 ವೊಲ್ಟ್ ಸಾಮರ್ಥ್ಯದ ಪೋರ್ಟಬಲ್ ಚಾರ್ಜರ್ ಹೊಂದಿರಲಿದೆ. ಹೋಂ ಚಾರ್ಜರ್ ಮೂಲಕ ಹೊಸ ಇವಿ ಸ್ಕೂಟರ್ ಗರಿಷ್ಠ 5 ಗಂಟೆಗಳ ಚಾರ್ಜಿಂಗ್ ನಲ್ಲಿ ಶೇ. 80 ರಷ್ಟು ಚಾರ್ಜ್ ಆಗಲಿದ್ದು, ವಿವಿಧ ರೈಡಿಂಗ್ ಮೋಡ್ ಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಬಜಾಜ್ ಸಿಎನ್‌ಜಿ ಬೈಕ್ ಬಿಡುಗಡೆಗೆ ಡೇಟ್ ಫಿಕ್ಸ್
ಹಾಗೆಯೇ ಹೊಸ ಇವಿ ಸ್ಕೂಟರ್ ನಲ್ಲಿ 5 ಇಂಚಿನ ಕಲರ್ ಟಿಎಫ್ ಟಿ ಸ್ಕ್ರೀನ್ ಜೊತೆಗೆ ವಿವಿಧ ಕನೆಕ್ಟೆಡ್ ಫೀಚರ್ಸ್ ಗಳನ್ನು ಹೊಂದಿದ್ದು, ಇದರಲ್ಲಿರುವ 30 ಲೀಟರ್ ಸಾಮರ್ಥ್ಯದ ಸೀಟ್ ಬೂಟ್ ಸ್ಪೇಸ್, ವೆಹಿಕಲ್ ಕ್ರ್ಯಾಶ್ ಮತ್ತು ಟೌ ಅಲರ್ಟ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ವಾಯ್ಸ್ ಅಸಿಸ್ಟ್, ಟಿಪಿಎಂಎಸ್, ಡಿಜಿಟಲ್ ಡಾಕ್ಯುಮೆಂಟ್ ಸೌಲಭ್ಯಗಳು ಗಮನಸೆಳೆಯುತ್ತವೆ.