Cow Dung: ಹಸುವಿನ ಸಗಣಿಯಿಂದ ತಯಾರಿಸಿದ ಪರ್ಯಾಯ ಇಂಧನ ಬಳಕೆ ಸಕ್ಸಸ್

ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಜಾಗತಿಕ ಪ್ರಯತ್ನ ನಡೆಯುತ್ತಿರುವ ಸಮಯದಲ್ಲಿ ಪರ್ಯಾಯ ಇಂಧನಗಳ ಬಳಕೆ ಮಾಲಿನ್ಯವನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.

Cow Dung: ಹಸುವಿನ ಸಗಣಿಯಿಂದ ತಯಾರಿಸಿದ ಪರ್ಯಾಯ ಇಂಧನ ಬಳಕೆ ಸಕ್ಸಸ್
ಹಸುವಿನ ಸಗಣಿಯಿಂದ ತಯಾರಿಸಿದ ಪರ್ಯಾಯ ಇಂಧನ ಬಳಕೆ ಸಕ್ಸಸ್
Follow us
Praveen Sannamani
|

Updated on: Mar 01, 2023 | 2:43 PM

ವಿಶ್ವಾದ್ಯಂತ ಹೆಚ್ಚುತ್ತಿರುವ ವಾಹನಗಳ ಪರಿಣಾಮ ಮಾಲಿನ್ಯ ಹೊರಸೂಸುವಿಕೆ ಪ್ರಮಾಣವನ್ನ ಪರಿಣಾಮಕಾರಿ ತಗ್ಗಿಸಲು ಹಲವು ಮಹತ್ವದ ಕ್ರಮಗಳನ್ನ ಕೈಗೊಳ್ಳಲಾಗುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಲಂಬನೆ ತಗ್ಗಿಸಲು ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಪರ್ಯಾಯ ಇಂಧನ ಬಳಕೆಯ ವಾಹನಗಳ ಬಳಕೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ತಗ್ಗಿಸುವುದಕ್ಕಾಗಿ ಫಾನ್ಸ್ ಮೂಲದ ಫಾರ್ಮಾ ಹೌಸ್ ಮಾಲೀಕರೊಬ್ಬರು ಹೊಸ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು, ಹಸುವಿನ ಸಗಣಿಯಿಂದ ತಯಾರಿಸಿದ ಜೈವಿಕ ಇಂಧನ ಬಳಕೆಯೊಂದಿಗೆ ಹೊಸ ಸಂಚಲನಕ್ಕೆ ಮೂಡಿಸಿದ್ದಾರೆ.

ಡೀಸೆಲ್‌ಗಿಂತಲೂ ಶುದ್ದವಾದ ಮತ್ತು ಅಗ್ಗವಾಗಿರುವ ಹೊಸ ಪರ್ಯಾಯ ಇಂಧನ ಉತ್ಪಾದನೆಯನ್ನ ಈಗಾಗಲೇ ಹಂತ-ಹಂತವಾಗಿ ಸುಧಾರಿಸಲಾಗಿದ್ದು, ಇದೀಗ ಹೊಸ ಪರ್ಯಾಯ ಇಂಧನ ಮಾದರಿಯು ಸಾಮೂಹಿಕ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿದೆ.

ಪರ್ಯಾಯ ಇಂಧನ ಉತ್ಪಾದನಾ ತಂತ್ರಜ್ಞಾನ

ಹಸುಗಳ ಕೊಟ್ಟಿಗೆಯಿಂದ ಸಂಗ್ರಹವಾಗುವ ಗೊಬ್ಬರದಿಂದ ಉತ್ಪತ್ತಿಯಾಗುವ ಮೀಥೇನ್ ಅನಿಲವನ್ನ ಶುದ್ಧ ಇಂಧನವಾಗಿ ಪರಿವರ್ತಿಸಲು ಹಲವು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳನ್ನ ಬಳಕೆ ಮಾಡಲಾಗುತ್ತಿದೆ. ಸಂಪೂರ್ಣವಾಗಿ ಮಚ್ಚಲಾಗಿರುವ ಟ್ಯಾಂಕರ್ ಗಳಲ್ಲಿ ಹಸುಗಳ ಗೊಬ್ಬರವನ್ನು 38 ಡಿಗ್ರಿ ಸೆಲ್ಸಿಯಸ್ ನಲ್ಲಿ ಹುದುಗಿಸಲಿದ್ದು, ಇದರಿಂದ ಇಂಗಾಲದ ಡೈಆಕ್ಸೈಡ್ ಮತ್ತು ಮೀಥೇನ್ ಬಿಡುಗಡೆಯಾಗುತ್ತವೆ.

ಕೊಳೆಯುವಿಕೆ ಪ್ರಕ್ರಿಯೆಯನ್ನು ವೇಗಗೊಳಿಸುವುದಕ್ಕಾಗಿ ತ್ಯಾಜ್ಯ ಸಂಗ್ರಹ ಘಟಕಗಳಿಗೆ ಪ್ರತಿ ದಿನ 40 ಟನ್‌ಗಳಷ್ಟು ಸಾವಯವ ಪದಾರ್ಥಗಳು, ಮೂರನೇ ಎರಡರಷ್ಟು ಹಸುವಿನ ಗೊಬ್ಬರ ಮತ್ತು ಮೂರನೇ ಒಂದು ಭಾಗದಷ್ಟು ಆಹಾರ ತ್ಯಾಜ್ಯ ಸುರಿಯವಾಗುತ್ತದೆ. ಇದರಿಂದ ಬಿಡುಗಡೆಯಾಗುವ ಮೀಥೇನ್ ಅನ್ನು ಶುದ್ಧೀಕರಿಸಿ ನಂತರ ವಾಹನಗಳಲ್ಲಿ ಬಳಸಲು ಸಂಕುಚಿತಗೊಳಿಸಲಾಗುತ್ತದೆ.

ಜೊತೆಗೆ ಮೀಥೇನ್ ಘಟಕಗಳಲ್ಲಿ ಕೊಳೆತ ತ್ಯಾಜ್ಯವನ್ನು ಕೊನೆಯ ಹಂತದಲ್ಲಿ ಜಮೀನುಗಳಿಗೆ ಗೊಬ್ಬರವಾಗಿ ಬಳಸಲಿದ್ದು, ಇದು ಕೂಡಾ ಪಳೆಯುಳಿಕೆ ಇಂಧನಗಳಿಂದ ತಯಾರಿಸಿದ ಸಂಶ್ಲೇಷಿತ ರಸಗೊಬ್ಬರಗಳ ಬಳಕಯನ್ನ ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ.

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ