Mukesh Ambani: ಅಂಬಾನಿ ಹೊಸ ಕಾರಿಗೆ ಪೈಂಟ್​ ಮಾಡಿಸಲು ಕೋಟಿ ರೂ ಖರ್ಚು, ಇನ್ನು ಅದರ ಪೂರ್ತಿ ಬೆಲೆ ತಿಳಿದರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ತೀರಿ!

Mukesh Ambani Car Paint: ವರದಿಗಳ ಪ್ರಕಾರ, ಈ ಹೊಸ ಕಾರನ್ನು ಮುಕೇಶ್ ಅಂಬಾನಿಗಾಗಿ ಖರೀದಿಸಲಾಗಿಲ್ಲ. ಈ ಹೊಸ ಕಾರನ್ನು ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್‌ಗೆ ನಿಶ್ಚಿತಾರ್ಥದ ಉಡುಗೊರೆಯಾಗಿ ನೀಡಿದ್ದಾರೆ.

Mukesh Ambani: ಅಂಬಾನಿ ಹೊಸ ಕಾರಿಗೆ ಪೈಂಟ್​ ಮಾಡಿಸಲು ಕೋಟಿ ರೂ ಖರ್ಚು, ಇನ್ನು ಅದರ ಪೂರ್ತಿ ಬೆಲೆ ತಿಳಿದರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ತೀರಿ!
Mukesh Ambani: ಇದು ಅಂಬಾನಿ ರೇಂಜ್
Follow us
ಸಾಧು ಶ್ರೀನಾಥ್​
|

Updated on:Jun 28, 2023 | 5:17 PM

ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹಲವಾರು ಐಷಾರಾಮಿ ಕಾರುಗಳನ್ನು (Mukesh Ambani Car) ಹೊಂದಿದ್ದಾರೆ. ರೋಲ್ಸ್ ರಾಯ್ಸ್‌ನಿಂದ ಫೆರಾರಿವರೆಗೆ, ಅಂಬಾನಿ ಕುಟುಂಬವು ವಿಶ್ವದ ಅತ್ಯಂತ ದುಬಾರಿ ಕಾರುಗಳನ್ನು ಹೊಂದಿದೆ. ಇತ್ತೀಚೆಗಷ್ಟೇ ಮೂರನೇ ರೋಲ್ಸ್ ರಾಯ್ಸ್ ಕಲ್ಜಿನಾನ್ ( Rolls Royce Cullinan) ಕಾರು ಕೂಡ ಅಂಬಾನಿ ಗ್ಯಾರೇಜ್ ಪ್ರವೇಶಿಸಿತು. ಈ ಕಾರು ತನ್ನ ವಿಶಿಷ್ಟ ವಿನ್ಯಾಸದಿಂದಾಗಿ ಮಾತ್ರವಲ್ಲದೆ ಅದರ ವಿಶಿಷ್ಟ ನಂಬರ್ ಪ್ಲೇಟ್ ಮತ್ತು ದುಬಾರಿ ಬೆಲೆಯಿಂದಾಗಿಯೂ ಸುದ್ದಿಯಲ್ಲಿದೆ. ಆದರೆ, ಇದೆಲ್ಲದರ ಹೊರತಾಗಿ.. ಈ ಐಷಾರಾಮಿ ಕಾರಿನಲ್ಲಿ ಮತ್ತೊಂದು ಅಚ್ಚರಿಯ ವಿಷಯವಿದೆ. ಈ ಕಾರಿನ ಪೇಂಟಿಂಗ್ (Paint Cost) ಕೆಲಸಕ್ಕೆ ಒಂದು ಕೋಟಿ ರೂ. ಖರ್ಚಾಗಿದೆ. ವರದಿಗಳ ಪ್ರಕಾರ, ಈ ರೋಲ್ಸ್ ರಾಯ್ಸ್ ಕಲ್ಜಿನಾನ್ ಕಾರಿನ ಬೆಲೆ ಸುಮಾರು 13.14 ಕೋಟಿ ರೂಪಾಯಿ! ಸಾಮಾನ್ಯವಾಗಿ, ರೋಲ್ಸ್ ರಾಯ್ಸ್ ಕಲ್ಜಿನಾನ್ ಕಾರಿನ ಬೆಲೆ ರೂ.6.8 ಕೋಟಿಗಳಿಂದ ಪ್ರಾರಂಭವಾಗುತ್ತದೆ. ಆದರೆ ಪೇಂಟಿಂಗ್, 21 ಇಂಚಿನ ಚಕ್ರಗಳು ಮತ್ತು ಇತರ ಕಸ್ಟಮೈಸೇಶನ್ ಕೆಲಸಗಳೊಂದಿಗೆ ಕಾರಿನ ಬೆಲೆ 13.14 ಕೋಟಿ ರೂ. ತಲುಪಿದೆ.

ಅಂಬಾನಿ ಕುಟುಂಬದ ಒಡೆತನದ ಈ ಹೊಸ ರೋಲ್ಸ್ ರಾಯ್ಸ್ ಕಲ್ಜಿನಾನ್ ಕಾರನ್ನು ಇತ್ತೀಚೆಗೆ ಮರ್ಸಿಡಿಸ್ ಎಎಂಜಿ-ವ್ಯಾಗನ್, ಎಂಜಿ ಗ್ಲೋಸ್ಟರ್ಸ್ ರವಾನೆ ಮಾಡಿದ್ದಾರೆ. ಈ ಹೊಸ ಕಾರು ಟಸ್ಕನ್ ಸನ್ ಕಲರ್ ಶೇಡ್‌ನಲ್ಲಿ ಬರುತ್ತದೆ. ಈ ಕಲರ್ ಪೇಂಟಿಂಗ್ ಗೆ 1 ಕೋಟಿ ರೂ ವೆಚ್ಚವಾಗಿದೆ ಎನ್ನಲಾಗಿದೆ. ಕಾರಿನ ನೋಂದಣಿ ಸಂಖ್ಯೆ ‘0001’ ಆಗಿದ್ದು, ಇದಕ್ಕಾಗಿ ಅಂಬಾನಿ ಕುಟುಂಬ ರೂ. 12 ಲಕ್ಷ ಖರ್ಚು ಮಾಡಿದೆ.

ಪ್ರಸ್ತುತ ಸರಣಿಯಲ್ಲಿನ ಎಲ್ಲಾ ಸಂಖ್ಯೆಗಳು ಇವೆ. ಹಾಗಾಗಿ ಅಂಬಾನಿ ಕುಟುಂಬ ಹೊಸ ಸರಣಿ ಸಂಖ್ಯೆಗಳನ್ನು ಆಯ್ಕೆ ಮಾಡಿದೆ. ಇದಕ್ಕೂ ಭಾರಿ ಮೊತ್ತ ನೀಡಲಾಗಿದೆ. ಈ ಕಾರಿನ ನೋಂದಣಿಯು ಜನವರಿ 2037 ರವರೆಗೆ ಮಾನ್ಯವಾಗಿರುತ್ತದೆ. ಈ ಎಲ್ಲಾ ವೆಚ್ಚಗಳ ಜೊತೆಗೆ 40,000 ರೂ. ರಸ್ತೆ ಸುರಕ್ಷತೆ ತೆರಿಗೆಯನ್ನೂ ಪಾವತಿಸಲಾಗಿದೆ.

ವರದಿಗಳ ಪ್ರಕಾರ, ಈ ಹೊಸ ಕಾರನ್ನು ಮುಕೇಶ್ ಅಂಬಾನಿಗಾಗಿ ಖರೀದಿಸಲಾಗಿಲ್ಲ. ಈ ಹೊಸ ಕಾರನ್ನು ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್‌ಗೆ ನಿಶ್ಚಿತಾರ್ಥದ ಉಡುಗೊರೆಯಾಗಿ ನೀಡಿದ್ದಾರೆ. ಅವರಿಬ್ಬರೂ ಜನವರಿ 2023 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈ ಕಾರನ್ನು ಅದೇ ತಿಂಗಳಲ್ಲಿ ನೋಂದಾಯಿಸಲಾಗಿದೆ.

ಭದ್ರತಾ ಕಾರಣಗಳಿಗಾಗಿ ಅವರು ಬುಲೆಟ್ ಪ್ರೂಫ್ ವಾಹನದಲ್ಲಿ ಪ್ರಯಾಣ ಮಾಡುತ್ತಾರೆ. ಮುಕೇಶ್ ಅಂಬಾನಿ ಅವರ ಆಂಟಿಲಿಯಾ ಮನೆಯಲ್ಲಿ ಐಷಾರಾಮಿ ಕಾರ್ ಪಾರ್ಕಿಂಗ್‌ಗೆ ಹೆಚ್ಚಿನ ಜಾಗವನ್ನು ಮೀಸಲಿಡಲಾಗಿದೆ. ಕಾರ್ ಪಾರ್ಕಿಂಗ್‌ಗಾಗಿ ಆಂಟಿಲಿಯಾ 4,00,000 ಚದರ ಅಡಿ ಜಾಗವನ್ನು ಹೊಂದಿದೆ. ಇಲ್ಲಿ ಹೆಚ್ಚುವರಿಯಾಗಿ 158 ದೊಡ್ಡ ಕಾರುಗಳನ್ನು ನಿಲುಗಡೆ ಮಾಡಬಹುದು.

ವಾಹನೋದ್ಯಮ ಕುರಿತಾದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Wed, 28 June 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್