Registered Vehicle Scrapping Policy: ಸರ್ಕಾರದ ಅಸಡ್ಡೆ – ಹಳೆಯ ವಾಹನಗಳ ಸ್ಕ್ರಾಪ್​ ನೀತಿಯೇ ಸ್ಕ್ರಾಪ್ ಆಗುತ್ತದಾ?

ಹಳೆಯ ವಾಹನಗಳ ಸ್ಕ್ರಾಪಿಂಗ್ ಕಡ್ಡಾಯಗೊಳಿಸಿಲ್ಲ. ಹಾಗಾಗಿ ಜನ ಸ್ವಯಂಪ್ರೇರಿತವಾಗಿ ಮುಂದೆ ಬರುತ್ತಿಲ್ಲ. ಸಾರಿಗೆ ಇಲಾಖೆಯ ಅಧಿಕಾರಿಗಳೂ ಈ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಹೆಚ್ಚು ಚಿಂತಿತರಾಗಿಲ್ಲ. ಜನರನ್ನು ಪ್ರೇರೇಪಿಸಲು ಜಾಹೀರಾತುಗಳ ಮೂಲಕ ಜಾಗೃತಿ ಮೂಡಿಸುವ ಸಾಹಸಕ್ಕೂ ಕೈಹಾಕುತ್ತಿಲ್ಲ. ಹೆಚ್ಚು ಕೇಳಿದರೆ ಕರ್ನಾಟಕದಲ್ಲಿ ವಾಹನಗಳ ಸ್ಕ್ರಾಪಿಂಗ್ ಜಾರಿಗೊಳಿಸುವ ಜವಾಬ್ದಾರಿಯನ್ನು ಹೊತ್ತಿರುವುದು ಎರಡು ಖಾಸಗಿ ಕಂಪನಿಗಳು ಅವುಗಳೇ ಜಾಗೃತಿ/ ಪ್ರಚಾರದಲ್ಲಿ ತೊಡಗಬೇಕು ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ ಇಲಾಖೆಯ ಉನ್ನತಾಧಿಕಾರಿಗಳು.

Registered Vehicle Scrapping Policy: ಸರ್ಕಾರದ ಅಸಡ್ಡೆ - ಹಳೆಯ ವಾಹನಗಳ ಸ್ಕ್ರಾಪ್​ ನೀತಿಯೇ ಸ್ಕ್ರಾಪ್ ಆಗುತ್ತದಾ?
ಹಳೆಯ ವಾಹನಗಳ ಸ್ಕ್ರಾಪ್​ ನೀತಿಯೇ ಸ್ಕ್ರಾಪ್ ಆಗುತ್ತದಾ?
ಸಾಧು ಶ್ರೀನಾಥ್​

Updated on: Jul 13, 2024 | 10:40 AM

ಬೆಂಗಳೂರು: ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ನೀತಿಯನ್ನು ಕರ್ನಾಟಕ ಸರ್ಕಾರ ( Karnataka Registered Vehicle Scrapping Policy) ಇತ್ತೀಚೆಗೆ ಮಾರ್ಪಡಿಸಿದೆ. ಹಳೆಯ ವಾಹನವನ್ನು ಸ್ಕ್ರಾಪ್ ಮಾಡಿದ ನಂತರ ಅದರ ಮಾಲೀಕರು ನೂತನ ವಾಹನ ತೆಗೆದುಕೊಳ್ಳುವಾಗ ಮೋಟಾರು ವಾಹನ ತೆರಿಗೆಯಲ್ಲಿ ಪರಿಷ್ಕೃತ ದರಗಳ ರಿಯಾಯಿತಿ ಈ ಹಿಂದಿನಂತೆ ಮುಂದುವರಿಯಲಿದೆ . ಟ್ರಾಕ್ಟರ್ ಸೇರಿದಂತೆ ಎಲ್ಲಾ ನಿರ್ಮಾಣ ಸಲಕರಣೆಗಳ ವಾಹನಗಳ ಮೇಲೆ 10% ತೆರಿಗೆ ರಿಯಾಯಿತಿ ಸಿಗಲಿದೆ. ಹೊಸದಾಗಿ ನೋಂದಾಯಿಸಲಾದ ಸಾರಿಗೆ ವಾಹನಗಳಿಗೆ ಜೀವಿತಾವಧಿ ತೆರಿಗೆ (ಎಲ್‌ಟಿಟಿ) ಮೇಲೆ 10 % ತೆರಿಗೆ ರಿಯಾಯಿತಿ, ಪಾವತಿಸಬೇಕಾದ ಒಟ್ಟು ತೆರಿಗೆಯ ಮೇಲೆ 10 % ತೆರಿಗೆ ರಿಯಾಯಿತಿ ಸಿಗಲಿದೆ. ಹೊಸದಾಗಿ ನೋಂದಾಯಿಸಲಾದ ಸಾರಿಗೆ ವಾಹನಗಳಿಗೆ 8 ವರ್ಷಗಳವರೆಗೆ ವಾರ್ಷಿಕವಾಗಿ 50 ರೂಪಾಯಿ ತೆರಿಗೆ ರಿಯಾಯಿತಿಯನ್ನು (ತ್ರೈಮಾಸಿಕದಲ್ಲಿ) ನೀಡಲಾಗುತ್ತದೆ. ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ನೀತಿ ಕರ್ನಾಟಕ-2022 ರ ಪ್ರಕಾರ ಕರ್ನಾಟಕದ ಮೊದಲ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ (Karnataka’s first Registered Vehicles Scrapping Facility -RVSF) ) ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ವಿಜಯಪುರದಲ್ಲಿದೆ. ಇದು ಖಾಸಗಿ ಮರುಬಳಕೆ ಕೇಂದ್ರವಾಗಿದ್ದು, ಸಂಸ್ಥೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹಳೆಯ ವಾಹನಗಳ ಮಾಲೀಕರು ಸ್ವಯಂಪ್ರೇರಣೆಯಿಂದ ತಮ್ಮ ಹಳೆಯ ಮತ್ತು ಸಂಚಾರ ಯೋಗ್ಯವಲ್ಲದ ವಾಹನಗಳನ್ನು ಸ್ಕ್ರ್ಯಾಪ್ ಮಾಡಬಹುದು. ಈ ಕೇಂದ್ರವು ಆರಂಭದಲ್ಲಿ...

Published On - 10:35 am, Sat, 13 July 24

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ