ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರು ಉತ್ಪಾದನಾ ಕಂಪನಿಯಾಗಿರುವ ಸ್ಕೋಡಾ ಇಂಡಿಯಾ (Skoda India) ತನ್ನ ಪ್ರಮುಖ ಕಾರು ಮಾದರಿಗಳಾದ ಕುಶಾಕ್ ಕಂಪ್ಯಾಕ್ಟ್ ಎಸ್ ಯುವಿ ಮತ್ತು ಸ್ಲಾವಿಯಾ ಸೆಡಾನ್ ಮಾದರಿಗಳ ಮೇಲೆ ಅತ್ಯುತ್ತಮ ಆಫರ್ ಗಳನ್ನು ನೀಡುತ್ತಿದ್ದು, ಹೊಸ ಕಾರುಗಳ ಖರೀದಿ ಮೇಲೆ ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಗಳನ್ನು ನೀಡಲಾಗುತ್ತಿದೆ.
ಹೊಸ ಆಫರ್ ಗಳಲ್ಲಿ ಸ್ಕೋಡಾ ಕಂಪನಿಯು ಎರಡು ಕಾರುಗಳಿಗೂ ಅನ್ವಯಿಸುವಂತೆ 3 ವರ್ಷ ಅಥವಾ 45 ಸಾವಿರ ಕಿ.ಮೀ ತನಕ ಉಚಿತ ನಿರ್ವಹಣಾ ಪ್ಯಾಕೇಜ್ ಜೊತೆಗೆ 5 ವರ್ಷ ಅಥವಾ 1.25 ಲಕ್ಷ ತನಕ ವಿಸ್ತರಿತ ವಾರಂಟಿ ಸೌಲಭ್ಯಗಳನ್ನು ನೀಡುತ್ತದೆ.
ಸ್ಲಾವಿಯಾ ಸೆಡಾನ್
ಪ್ರೀಮಿಯಂ ಸೆಡಾನ್ ಮಾದರಿಯಾಗಿರುವ ಸ್ಲಾವಿಯಾ ಖರೀದಿಯ ಮೇಲೆ ಸ್ಕೋಡಾ ಕಂಪನಿಯು ಒಟ್ಟು 1.50 ಲಕ್ಷ ಮೌಲ್ಯದ ಆಫರ್ ನೀಡುತ್ತಿದೆ. ಇದರಲ್ಲಿ ಕ್ಯಾಶ್ ಡಿಸ್ಕೌಂಟ್ ಜೊತೆಗೆ ಎಕ್ಸ್ ಚೆಂಜ್ ಆಫರ್ ಗಳು ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 11.63 ಲಕ್ಷದಿಂದ ರೂ. 19.12 ಲಕ್ಷ ಬೆಲೆ ಹೊಂದಿದೆ. ಇದರಲ್ಲಿ 114 ಹಾರ್ಸ್ ಪವರ್ ಪ್ರೇರಿತ 1.0 ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು 148 ಹಾರ್ಸ್ ಪವರ್ ಪ್ರೇರಿತ 1.5 ಲೀಟರ್ ಟರ್ಬೊ ಪೆಟ್ರೋಲ್ ಆಯ್ಕೆ ಹೊಂದಿದೆ.
ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!
ಕುಶಾಕ್ ಕಂಪ್ಯಾಕ್ಟ್ ಎಸ್ ಯುವಿ
ಕಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಸದ್ಯ ಉತ್ತಮ ಬೇಡಿಕೆಯಲ್ಲಿರುವ ಕುಶಾಕ್ ಮಾದರಿಯ ಮೇಲೆ ರೂ. 2.50 ಲಕ್ಷದ ತನಕ ಆಫರ್ ನೀಡಲಾಗುತ್ತಿದೆ. ಕುಶಾಕ್ ಕಾರು ಖರೀದಿಯ ಮೇಲೆ ಗ್ರಾಹಕರು ಕ್ಯಾಶ್ ಬ್ಯಾಕ್, ಎಕ್ಸ್ ಚೆಂಜ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಘೋಷಿಸಿದ್ದು, ಮಾಂಟೆ ಕಾರ್ಲೊ ಸೇರಿದಂತೆ ವಿವಿಧ ಸ್ಪೆಷಲ್ ಎಡಿಷನ್ ಗಳ ಮೇಲೂ ಆಫರ್ ಗಳನ್ನು ಪಡೆದುಕೊಳ್ಳಬಹುದಾಗಿದೆ.
ಕುಶಾಕ್ ಕಾರು ಮಾದರಿಯು ಸದ್ಯ ಎಕ್ಸ್ ಶೋರೂಂ ಪ್ರಕಾರ ರೂ. 11.99 ಲಕ್ಷದಿಂದ ರೂ. 20.49 ಲಕ್ಷದ ತನಕ ಬೆಲೆ ಹೊಂದಿದ್ದು, ಇದು ಕೂಡಾ 114 ಹಾರ್ಸ್ ಪವರ್ ಪ್ರೇರಿತ 1.0 ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು 148 ಹಾರ್ಸ್ ಪವರ್ ಪ್ರೇರಿತ 1.5 ಲೀಟರ್ ಟರ್ಬೊ ಪೆಟ್ರೋಲ್ ಆಯ್ಕೆ ಹೊಂದಿದೆ. ಈ ಮೂಲಕ ಹೊಸ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಆಫರ್ ಎನ್ನಬಹುದಾಗಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.
ಇದನ್ನೂ ಓದಿ: ಚಿತ್ರದುರ್ಗದಿಂದ ದಾವಣಗೆರೆ ನಡುವಿನ 72 ಕಿ.ಮೀ ಉದ್ದದ ಷಟ್ಪಥ ಹೆದ್ದಾರಿ ವಿಶೇಷತೆಗಳೇನು?
ಇನ್ನು ಕುಶಾಕ್ ಮತ್ತು ಸ್ಲಾವಿಯಾ ಕಾರುಗಳು ಅತ್ಯುತ್ತಮ ಫೀಚರ್ಸ್ ಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇವುಗಳಲ್ಲಿ ಗರಿಷ್ಠ ಸುರಕ್ಷತೆಗಾಗಿ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ನೀಡಲಾಗಿದೆ. ಹೀಗಾಗಿ ಈ ಎರಡೂ ಹೊಸ ಕಾರುಗಳು ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿದ್ದು, ಇವು ಅಪಘಾತದ ವೇಳೆ ಪ್ರಯಾಣಿಕರಿಗೆ ಉತ್ತಮ ಸುರಕ್ಷತೆಯನ್ನು ಖಾತ್ರಿಪಡಿಸುತ್ತವೆ.