Tata Altroz CNG: ಭರ್ಜರಿ ಮೈಲೇಜ್ ನೀಡುವ ಟಾಟಾ ಆಲ್ಟ್ರೊಜ್ ಸಿಎನ್ ಜಿ ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ಆಲ್ಟ್ರೊಜ್ ಕಾರಿನಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

Follow us
Praveen Sannamani
|

Updated on: May 23, 2023 | 9:48 PM

ಭಾರತದಲ್ಲಿ ಸಿಎನ್ ಜಿ ಕಾರುಗಳ(CNG Cars) ಮಾರಾಟ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಈ ಹಿನ್ನಲೆಯಲ್ಲಿ ಟಾಟಾ ಮೋಟಾರ್ಸ್(Tata Motors) ಕಂಪನಿ ಸಹ ತನ್ನ ಪ್ರಮುಖ ಕಾರುಗಳಲ್ಲಿ ಸಿಎನ್ ಜಿ ಆವೃತ್ತಿಗಳನ್ನ ಹೆಚ್ಚಿಸುತ್ತಿದ್ದು, ಇದೀಗ ಆಲ್ಟ್ರೊಜ್(Altroz) ಕಾರಿನಲ್ಲೂ ಹೊಸ ಆವೃತ್ತಿ ಬಿಡುಗಡೆ ಮಾಡಿದೆ. ಆಲ್ಟ್ರೊಜ್ ಸಿಎನ್ ಜಿ ಮಾದರಿಯು ಆಕರ್ಷಕ ಬೆಲೆಯಲ್ಲಿ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹೊಸ ಕಾರಿನ ಮತ್ತಷ್ಟು ಮಾಹಿತಿ ಇಲ್ಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಸಿಎನ್ ಜಿ ಕಾರುಗಳ ಅಬ್ಬರವು ಕೂಡಾ ಹೆಚ್ಚಾಗುತ್ತಿದೆ. ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರುಗಳಲ್ಲಿ ಸಿಎನ್ ಜಿ ಆವೃತ್ತಿಗಳನ್ನ ಪರಿಚಯಿಸಲಾಗುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿ ಇದೀಗ ಆಲ್ಟ್ರೊಜ್ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿದೆ. 2023ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಹೊಸ ಕಾರನ್ನು ಟಾಟಾ ಕಂಪನಿ ಇದೀಗ ಅಧಿಕೃತವಾಗಿ ಪರಿಚಯಿಸಿದೆ.

ಇದನ್ನೂ ಓದಿ: ಹೆಚ್ಚು ಮೈಲೇಜ್ ಜೊತೆಗೆ ಅತ್ಯುತ್ತಮ ಫೀಚರ್ಸ್ ಹೊಂದಿರುವ ಬಜೆಟ್ ಸಿಎನ್ ಜಿ ಕಾರುಗಳಿವು..

ಹೊಸ ಆಲ್ಟ್ರೊಜ್ ಸಿಎನ್ ಜಿ ಕಾರು ಮಾದರಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ವಿವಿಧ ವೆರಿಯೆಂಟ್ ಗಳಲ್ಲಿ ಬಿಡುಗಡೆಯಾಗಿದೆ. ಹೊಸ ಸಿಎನ್ ಜಿ ಕಾರು ಪ್ರಮುಖ ಮೂರು ವೆರಿಯೆಂಟ್ ಗಳನ್ನು ಹೊಂದಿದ್ದು, ಇವು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.55 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10.55 ಲಕ್ಷ ಬೆಲೆ ಪಡೆದುಕೊಂಡಿದೆ. ಇದು ಸಾಮಾನ್ಯ ಪೆಟ್ರೋಲ್ ಮಾದರಿಯ ಬೆಲೆಗಿಂತ ರೂ. 90 ಸಾವಿರದಷ್ಟು ದುಬಾರಿಯಾಗಿದ್ದು, ಹಲವಾರು ಹೊಸ ವೈಶಿಷ್ಟ್ಯತೆಗಳನ್ನ ಪಡೆದುಕೊಂಡಿದೆ.

ಹೊಸ ಆಲ್ಟ್ರೊಜ್ ಸಿಎನ್ ಜಿ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಐಸಿಎನ್ ಜಿ ತಂತ್ರಜ್ಞಾನ ಜೋಡಣೆ ಮಾಡಲಾಗಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 88 ಹಾರ್ಸ್ ಪವರ್ ಮತ್ತು 115 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಮೂಲಕ ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಿಂತಲೂ ಉತ್ತಮ ಕಾರ್ಯಕ್ಷಮತೆ ಹೊಂದಿದ್ದು, ಪ್ರತಿ ಕೆಜಿ ಸಿಎನ್ ಜಿಗೆ ಬರೋಬ್ಬರಿ 28 ರಿಂದ 30 ಕಿ.ಮೀ ಮೈಲೇಜ್ ಖಾತ್ರಿಪಡಿಸುತ್ತದೆ.

ಇದನ್ನೂ ಓದಿ: ರೂ.10 ಲಕ್ಷಕ್ಕೆ ಖರೀದಿಗೆ ಲಭ್ಯವಿರುವ ಬೆಸ್ಟ್ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳಿವು!

ಇದರೊಂದಿಗೆ ಹೊಸ ಕಾರಿನಲ್ಲಿರುವ ಡ್ಯುಯಲ್ ಸಿಎನ್ ಜಿ ಸಿಲಿಂಡರ್ ಜೋಡಣೆಯು ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ಸಾಮಾನ್ಯ ಕಾರಿನಲ್ಲಿರುವಂತೆ ಬೂಟ್ ಸ್ಪೆಸ್ ಲಭ್ಯವಿರಲಿದೆ. ಸಾಮಾನ್ಯವಾಗಿ ಸಿಎನ್ ಜಿ ಕಾರುಗಳಲ್ಲಿ ಕಡಿಮೆ ಬೂಟ್ ಸ್ಪೆಸ್ ಹೊಂದಿರುವುದು ಕೆಲವು ಗ್ರಾಹಕರಲ್ಲಿ ಅಸಮಾಧಾನವಿದ್ದು, ಈ ಹಿನ್ನಲೆಯಲ್ಲಿ ಟಾಟಾ ಕಂಪನಿ ಡ್ಯುಯಲ್ ಸಿಲಿಂಡರ್ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಹೊಸ ಆಲ್ಟ್ರೊಜ್ ಸಿ ವರ್ಷನ್ ನಲ್ಲಿ ಹಲವಾರು ಪ್ರಿಮಿಯಂ ಫೀಚರ್ಸ್ ನೀಡಿದ್ದು, ಟಾಪ್ ಎಂಡ್ ವೆರಿಯೆಂಟ್ ನಲ್ಲಿ ಸನ್ ರೂಫ್ ಸೌಲಭ್ಯವನ್ನು ಜೋಡಣೆ ಮಾಡಿದೆ. ಜೊತೆಗೆ ಹೊಸ ಕಾರು ಸುರಕ್ಷತೆಯಲ್ಲೂ ಗಮನಸೆಳೆಯಲಿದ್ದು, ಐ-ಸಿಎನ್​ಜಿ ತಂತ್ರಜ್ಞಾನವು ಟಾಟಾ ಕಂಪನಿಗೆ ಭರ್ಜರಿ ಬೇಡಿಕೆ ತಂದುಕೊಡುತ್ತಿದೆ. ಈ ಮೂಲಕ ಹೊಸ ಕಾರು ಮಾರುತಿ ಬಲೆನೊ ಸಿಎನ್ ಜಿ ಮತ್ತು ಟೊಯೊಟಾ ಗ್ಲಾಂಝಾ ಸಿಎನ್ ಜಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಕಾರುಗಳು ಸಿಎನ್ ಜಿ ವರ್ಷನ್ ನಲ್ಲಿ ಬಿಡುಗಡೆಯಾಗಲಿವೆ.

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!