ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಅನ್ನು ಇಂದು ವಿಶ್ವದಲ್ಲಿ ಕೋಟ್ಯಾಂತರ ಜನರು ಉಪಯೋಗಿಸುತ್ತಿದ್ದಾರೆ. ಇದನ್ನು ಬಳಸುವಾಗ ಯಾವುದೋ ಒಂದು ಹಂತದಲ್ಲಿ ಮೆಸೇಜ್ಗಳ ಸಮಯ ತಪ್ಪಾಗಿರುವುದನ್ನು ನೀವು ನೋಡಿರಬೇಕು. ಮೆಸೇಜ್ ಅನ್ನು ನೀವು ಈಗಷ್ಟೆ ಕಳುಹಿಸಿರುತ್ತೀರಿ, ಆದರೆ ಇದು ಬಹಳ ಹಿಂದೆಯೇ ಕಳುಹಿಸಲಾಗಿದೆ ಎಂದು ತೋರುತ್ತದೆ. ಈ ಸಮಸ್ಯೆಯು ಕೆಲವೊಮ್ಮೆ ತೊಂದರೆಗೆ ಕಾರಣವಾಗಬಹುದು.
ನೀವು ಯಾವುದಾದರು ಬಹುಮುಖ್ಯ ಮೆಸೇಜ್ನ ನಿಖರವಾದ ಸಮಯವನ್ನು ತಿಳಿದುಕೊಳ್ಳಬೇಕಾದಾಗ ಈರೀತಿ ಆಗಿದ್ದರೆ ಅದು ತೊಂದರೆಗೆ ಸಿಲುಕಿ ಹಾಕಿಕೊಳ್ಳುತ್ತೀರಿ. ನೀವು ಕೂಡ ಈ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಇದನ್ನು ನೀವೇ ಸುಲಭವಾಗಿ ಸರಿಪಡಿಸಬಹುದು.
ವಾಟ್ಸ್ಆ್ಯಪ್ ನಲ್ಲಿ ಮೆಸೇಜ್ಗಳ ಸಮಯ ತಪ್ಪಾಗಿ ಕಾಣಿಸಿಕೊಳ್ಳುವುದರ ಹಿಂದಿನ ದೊಡ್ಡ ಕಾರಣವೆಂದರೆ ನಿಮ್ಮ ಫೋನ್‌ನ ಟೈಮ್ ಸೆಟ್ಟಿಂಗ್‌ಗಳಲ್ಲಿನ ದೋಷ. ವಾಟ್ಸ್ಆ್ಯಪ್ ನಿಮ್ಮ ಫೋನ್‌ನ ಸಿಸ್ಟಂ ಗಡಿಯಾರದಿಂದ ಸಮಯವನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಫೋನ್‌ನ ಗಡಿಯಾರದಲ್ಲಿ ನಿಖರವಾದ ಸಮಯ ಮತ್ತು ದಿನಾಂಕವನ್ನು ಹೊಂದಿಸದಿದ್ದರೆ, ಮೆಸೇಜ್ನ ಸಮಯವು ವಾಟ್ಸ್ಆ್ಯಪ್ ನಲ್ಲಿಯೂ ತಪ್ಪಾಗಿ ಕಾಣಿಸುತ್ತದೆ. ಇದಲ್ಲದೆ, ಕೆಲವೊಮ್ಮೆ ವಾಟ್ಸ್ಆ್ಯಪ್ ಅಪ್ಲಿಕೇಶನ್‌ನಲ್ಲಿನ ತಾಂತ್ರಿಕ ದೋಷದಿಂದಲೂ ಈ ಸಮಸ್ಯೆ ಉಂಟಾಗಬಹುದು.
ಕೆಲವೊಮ್ಮೆ ವಾಟ್ಸ್ಆ್ಯಪ್ ಆ್ಯಪ್‌ನಲ್ಲಿನ ಕೆಲವು ತಾಂತ್ರಿಕ ದೋಷದಿಂದ ಈ ಸಮಸ್ಯೆ ಉಂಟಾಗಬಹುದು. ಆದ್ದರಿಂದ ನೀವು ನಿಮ್ಮ ವಾಟ್ಸ್ಆ್ಯಪ್ ಅಪ್ಲಿಕೇಶನ್ ಅನ್ನು ನವೀಕರಿಸಬೇಕು. ಇದಕ್ಕಾಗಿ ನೀವು ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್ ಗೆ ಹೋಗಿ W ವಾಟ್ಸ್ಆ್ಯಪ್ ಅನ್ನು ಅಪ್ಡೇಟ್ ಮಾಡಬಹುದು.
ಇದನ್ನೂ ಓದಿ: ಸ್ಮಾರ್ಟ್ ಟಿವಿಯನ್ನು ಸ್ವಚ್ಛವಾಗಿಡಲು ಏನೆಲ್ಲ ಮಾಡಬೇಕು?: ಈ 8 ಹಂತಗಳನ್ನು ಅನುಸರಿಸಿ
ಅಪ್ಡೇಟ್ ಮಾಡಿದ ನಂತರವೂ ಸಮಸ್ಯೆ ಬಗೆಹರಿಯದಿದ್ದರೆ, ನೀವು ವಾಟ್ಸ್ಆ್ಯಪ್ ಅನ್ನು ಒಮ್ಮೆ ಡಿಲೀಟ್ ಮಾಡಿ ಮತ್ತು ಅದನ್ನು ಮರುಸ್ಥಾಪಿಸಬಹುದು. ಈ ಸಂದರ್ಭ ನಿಮ್ಮ ಡೇಟಾ ಡಿಲೀಟ್ ಆಗುವುದಿಲ್ಲ. ಬೇಕಾದರೆ ಯಾವುದಕ್ಕೂ ಡಿಲೀಟ್ ಮಾಡುವ ಮುನ್ನ ಬ್ಯಾಕಪ್ ಮಾಡಿಟ್ಟುಕೊಳ್ಳಿ.
ಕೆಲವೊಮ್ಮೆ, ಫೋನ್‌ನ ಆಪರೇಟಿಂಗ್ ಸಿಸ್ಟಂನಲ್ಲಿನ ಕೆಲವು ದೋಷದಿಂದಾಗಿ, ವಾಟ್ಸ್ಆ್ಯಪ್ ನಲ್ಲಿ ಅಂತಹ ಗ್ಲಿಚ್ ಸಂಭವಿಸಬಹುದು. ಆದ್ದರಿಂದ, ನಿಮ್ಮ ಫೋನ್‌ನ ಆಪರೇಟಿಂಗ್ ಸಿಸ್ಟಮ್ ನಲ್ಲಿ ಅಪ್ಡೇಟ್ ಇದೆಯೇ ಎಂದು ಪರಿಶೀಲಿಸಿ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ