Toyota Innova Hycross: ಐಷಾರಾಮಿ ಫೀಚರ್ಸ್ ಜೊತೆ ಹೈಬ್ರಿಡ್ ಎಂಜಿನ್ ನೊಂದಿಗೆ ಟೊಯೊಟಾ ಇನೋವಾ ಹೈಕ್ರಾಸ್ ಅನಾವರಣ

ಟೊಯೊಟಾ ಕಂಪನಿಯು ತನ್ನ ಬಹುನೀರಿಕ್ಷಿತ ಇನೋವಾ ಹೊಸ ತಲೆಮಾರಿನ ಆವೃತ್ತಿಯನ್ನು ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಮೊದಲ ಹಂತದಲ್ಲಿ ಇಂಡೋನೇಷ್ಯಾದಲ್ಲಿ ಹೊಸ ಇನೋವಾ ಜೆನಿಕ್ಸ್ ಹೈಬ್ರಿಡ್ ಅನಾವರಣಗೊಂಡಿದ್ದು, ಇದೇ ತಿಂಗಳು 25ರಂದು ಭಾರತದಲ್ಲಿ ಇನೋವಾ ಹೈಕ್ರಾಸ್ ಹೆಸರಿನಲ್ಲಿ ಅನಾವರಣಗೊಳ್ಳಲಿದೆ.

Toyota Innova Hycross: ಐಷಾರಾಮಿ ಫೀಚರ್ಸ್ ಜೊತೆ ಹೈಬ್ರಿಡ್ ಎಂಜಿನ್ ನೊಂದಿಗೆ ಟೊಯೊಟಾ ಇನೋವಾ ಹೈಕ್ರಾಸ್ ಅನಾವರಣ
ಐಷಾರಾಮಿ ಫೀಚರ್ಸ್ ಜೊತೆ ಹೈಬ್ರಿಡ್ ಎಂಜಿನ್ ನೊಂದಿಗೆ ಟೊಯೊಟಾ ಇನೋವಾ ಹೈಕ್ರಾಸ್ ಅನಾವರಣ
Praveen Sannamani

|

Nov 21, 2022 | 6:57 PM

ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಟೊಯೊಟಾ(Toyota) ಕಂಪನಿಯು ತನ್ನ ಜನಪ್ರಿಯ ಎಂಪಿವಿ ಕಾರು ಮಾದರಿಯಾದ ಇನೋವಾ ಹೊಸ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ. ಹೊಸ ಕಾರು ಇಂಡೋನೇಷ್ಯಾದಲ್ಲಿ ಜೆನಿಕ್ಸ್ ಹೆಸರಿನಲ್ಲಿ ಮಾರಾಟಗೊಳ್ಳಲಿದ್ದರೆ ಅದೇ ಕಾರು ಮಾದರಿಯು ಭಾರತದಲ್ಲಿ ಕೆಲವು ಬದಲಾವಣೆಗಳೊಂದಿಗೆ ಇನೋವಾ ಹೈಕ್ರಾಸ್(Innova Hycross) ಹೆಸರಿನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಹೊಸ ಇನೋವಾ ಜೆನಿಕ್ಸ್ ಕಾರನ್ನು ಸದ್ಯ ಇಂಡೋನೇಷ್ಯಾದಲ್ಲಿ ಅನಾವರಣಗೊಳಿಸಿರುವ ಟೊಯೊಟಾ ಕಂಪನಿಯು ಇದೇ ತಿಂಗಳು 25ರಂದು ಭಾರತದಲ್ಲಿ ಇನೋವಾ ಹೈಕ್ರಾಸ್ ಹೆಸರಿನಲ್ಲಿ ಅನಾವರಣಗೊಳಿಸಲಿದೆ. ಜೆನಿಕ್ಸ್ ಮತ್ತು ಹೈಕ್ರಾಸ್ ಮಾದರಿಗಳಲ್ಲಿನ ಎಂಜಿನ್ ಆಯ್ಕೆ ಮತ್ತು ಕೆಲವು ಪ್ರೀಮಿಯಂ ಫೀಚರ್ಸ್ ಗಳು ಒಂದೇ ಆಗಿರಲಿದ್ದು, ವಿನ್ಯಾಸದಲ್ಲಿ ತುಸು ಬದಲಾವಣೆಗಳಾಗಬಹುದಾಗಿದೆ.

Toyota Innova Hycross

ಹೊಸ ಇನೋವಾ ಜೆನಿಕ್ಸ್ ಮತ್ತು ಹೈಕ್ರಾಸ್ ಮಾದರಿಯಲ್ಲಿ ಟೊಯೊಟಾ ಕಂಪನಿಯು ಈ ಬಾರಿ ಎಸ್ ಯುವಿ ವಿನ್ಯಾಸವನ್ನು ನೀಡಿದ್ದು, ಇವು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಮಾದರಿಗಿಂತಲೂ 100 ಎಂಎಂ ಹೆಚ್ಚುವರಿ ಉದ್ದಳತೆಯೊಂದಿಗೆ ವಿಸ್ತರಿತ ಮೂರನೇ ಸಾಲಿನ ಆಸನ ಪಡೆದುಕೊಳ್ಳಲಿವೆ. ಹೊಸ ಕಾರು 4,755 ಎಂಎಂ ಉದ್ದ, 1,855 ಎಂಎಂ ಅಗಲ, 1,795 ಎಂಎಂ ಎತ್ತರ ಮತ್ತು 185 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಎಂಜಿನ್ ಆಯ್ಕೆ

ಪ್ರಸ್ತತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಎಂಪಿವಿಯು ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಹೊಸ ಇನೋವಾ ಹೈಕ್ರಾಸ್ ಕಾರು ಮಾದರಿಯು ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಹೊಸ ಇನೋವಾ ಹೈಕ್ರಾಸ್ ಕಾರಿನಲ್ಲಿ ಕಂಪನಿಯು 2.0 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ ಹೊಸದಾಗಿ 2.0 ಲೀಟರ್ ಆಟ್ಕಿನ್ಸ್ ಸೈಕಲ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಪರಿಚಯಿಸಬಹುದಾಗಿದ್ದು, ಇದು ಫ್ರಂಟ್ ವ್ಹೀಲ್ ಡ್ರೈವ್ ಸಿಸ್ಟಂ ಜೊತೆ ಸೆಲ್ಪ್ ಡ್ರೈವ್ ಚಾರ್ಜಿಂಗ್ ವೈಶಿಷ್ಟ್ಯತೆ ಹೊಂದಿದೆ. ಈ ಮೂಲಕ ಹೈಬ್ರಿಡ್ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್ ಗೆ 21 ರಿಂದ 23 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದು ಎನ್ನಲಾಗಿದೆ.

Toyota Innova Hycross

 

ಹೊಸ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣ

ಟಿಎನ್ ಜಿಸಿ-ಎ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗಿರುವ ಹೊಸ ಇನೋವಾ ಹೈಕ್ರಾಸ್ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ. ಹೊಸ ಕಾರಿನಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಸನ್ ರೂಫ್, ಸುಧಾರಿತ ಇನ್ಪೋಟೈನ್ ಮೆಂಟ್ ಸಿಸ್ಟಂ ಮತ್ತು ಹಲವು ಕಾರ್ ಕನೆಕ್ಟ್ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಹೊಸ ಇನೋವಾ ಹೈಕ್ರಾಸ್ ಕಾರಿನಲ್ಲಿ ಗರಿಷ್ಠ ಸೇಫ್ಟಿ ಫೀಚರ್ಸ್ ಹೊಂದಿರುವ ಎಡಿಎಎಸ್(ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಸೌಲಭ್ಯವನ್ನು ಜೋಡಣೆ ಮಾಡಲಾಗಿದೆ.

ಹಾಗೆಯೇ ಹೊಸ ಕಾರಿನಲ್ಲಿ ಗ್ಲಾಸ್ ಬ್ಲ್ಯಾಕ್ ಹೊಂದಿರುವ ಹೆಕ್ಸಾಗೊನಲ್, ಸ್ಪೋರ್ಟಿ ಫಾಗ್ ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಸೇರಿದಂತೆ 18 ಇಂಚಿನ ಸ್ಪೋಕ್ ಅಲಾಯ್ ವ್ಹೀಲ್ ಸೇರಿದಂತೆ ಹಲವು ಹೊಸ ಬದಲಾವಣೆಗಳನ್ನು ಪಡೆದುಕೊಂಡಿದೆ. ಇನ್ನು ಹೊಸ ಕಾರಿನಲ್ಲಿ ಸಂಪೂರ್ಣವಾಗಿ ಡೀಸೆಲ್ ಮಾದರಿಯ ಮಾರಾಟವನ್ನು ಸ್ಥಗಿತಗೊಳಿಸಿರುವ ಕಂಪನಿಯು ಹೈಬ್ರಿಡ್ ಮಾದರಿಯತ್ತ ಗಮನಹರಿಸಿದ್ದು, ಡೀಸೆಲ್ ಕಾರು ಮಾದರಿಯ ಸ್ಥಾನಕ್ಕಾಗಿ ಸರಿಸಮನಾಗಿ ಹೊಸ ಹೈಬ್ರಿಡ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

Toyota Innova Hycross

ಹೈಬ್ರಿಡ್ ಮಾದರಿಯು ಹೆಚ್ಚಿನ ಇಂಧನ ದಕ್ಷತೆ ಹೊಂದಿರುವುದರಿಂದ ಬೇಡಿಕೆ ಹೆಚ್ಚಳವಾಗುವ ನೀರಿಕ್ಷೆಯಿದ್ದು, ಹೈಬ್ರಿಡ್ ಮಾದರಿಯು ಈ ಹಿಂದಿನ ಡೀಸೆಲ್ ಮಾದರಿಗಿಂತಲೂ ತುಸು ಹೆಚ್ಚುವರಿ ಬೆಲೆ ಪಡೆದುಕೊಳ್ಳುವ ನೀರಿಕ್ಷೆಯಿದೆ. ಹೀಗಾಗಿ ಹೊಸ ಕಾರು ಹೊಸ ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 20 ಲಕ್ಷದಿಂದ ಹೈ ಎಂಡ್ ಮಾದರಿಯು ರೂ. 30 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada