Virat Kohli: ವಿರಾಟ್ ಕೊಹ್ಲಿ ಖರೀದಿಸಿದ ಮೊದಲು ಕಾರು ಯಾವುದು ಗೊತ್ತೇ?: ಈಗ ಆ ಕಾರಿನ ಬೆಲೆ ಎಷ್ಟು?

Virat Kohli Car Collection: ವಿರಾಟ್ ಕೊಹ್ಲಿ ಅವರ ಮೊದಲ ಕಾರು ಟಾಟಾ ಸಫಾರಿ. ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಸ್ವತಃ ಕೊಹ್ಲಿ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ. ವಿರಾಟ್ ಈ ಕಾರನ್ನು ಖರೀದಿಸುವುದರ ಹಿಂದೆ ಒಂದು ಮುಖ್ಯ ಕಾರಣವಿತ್ತು. ಆ ಕಾಲದಲ್ಲಿ ಸಫಾರಿ ಕಾರು ಎಷ್ಟು ಚೆನ್ನಾಗಿತ್ತು ಎಂದರೆ, ಅದು ರಸ್ತೆಯಲ್ಲಿ ಓಡುವಾಗಲೆಲ್ಲಾ, ಮುಂಭಾಗದಿಂದ ಬರುತ್ತಿದ್ದವರೆಲ್ಲ ಪಕ್ಕಕ್ಕೆ ಸರಿಯುತ್ತಿದ್ದರು ಎಂದು ಹೇಳಿದ್ದಾರೆ.

Virat Kohli: ವಿರಾಟ್ ಕೊಹ್ಲಿ ಖರೀದಿಸಿದ ಮೊದಲು ಕಾರು ಯಾವುದು ಗೊತ್ತೇ?: ಈಗ ಆ ಕಾರಿನ ಬೆಲೆ ಎಷ್ಟು?
Virat Kohli First Car
Edited By:

Updated on: Feb 27, 2025 | 11:19 AM

ಬೆಂಗಳೂರು (ಫೆ. 27): ವಿರಾಟ್ ಕೊಹ್ಲಿ (Virat Kohli) ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ವಿರಾಟ್ ಅವರ ಹೆಸರು ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಪ್ರಸ್ತುತ ಕಿಂಗ್ ಕೊಹ್ಲಿ ಚಾಂಪಿಯನ್ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಮೊನ್ನೆಯಷ್ಟೆ ಫೆಬ್ರವರಿ 23 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಸದ್ಯ ಕೊಹ್ಲಿ ಕುರಿತು ಕೆಲ ಇಂಟ್ರೆಸ್ಟಿಂಗ್ ವಿಚಾರ ನೋಡೋಣ. ವಿರಾಟ್ ಕೊಹ್ಲಿ ಖರೀದಿಸಿದ ಮೊದಲ ಕಾರು ಯಾವುದು ಮತ್ತು ಇಂದು ಆ ಕಾರಿನ ಬೆಲೆ ಎಷ್ಟು ಎಂದು ನಿಮಗೆ ತಿಳಿದಿದೆಯೇ?.

ವಿರಾಟ್ ಕೊಹ್ಲಿಯ ಮೊದಲ ಕಾರು:

ವಿರಾಟ್ ಕೊಹ್ಲಿ ಅವರ ಮೊದಲ ಕಾರು ಟಾಟಾ ಸಫಾರಿ. ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಸ್ವತಃ ಕೊಹ್ಲಿ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ. ವಿರಾಟ್ ಈ ಕಾರನ್ನು ಖರೀದಿಸುವುದರ ಹಿಂದೆ ಒಂದು ಮುಖ್ಯ ಕಾರಣವಿತ್ತು. ಆ ಕಾಲದಲ್ಲಿ ಸಫಾರಿ ಕಾರು ಎಷ್ಟು ಚೆನ್ನಾಗಿತ್ತು ಎಂದರೆ, ಅದು ರಸ್ತೆಯಲ್ಲಿ ಓಡುವಾಗಲೆಲ್ಲಾ, ಮುಂಭಾಗದಿಂದ ಬರುತ್ತಿದ್ದವರೆಲ್ಲ ಪಕ್ಕಕ್ಕೆ ಸರಿಯುತ್ತಿದ್ದರು ಎಂದು ಕೊಹ್ಲಿ ಸಂದರ್ಶನದಲ್ಲಿ ಹೇಳಿದ್ದಾರೆ. ರಸ್ತೆಗಳಲ್ಲಿ ಚಲಿಸುವಾಗ ಇದು ನೋಡಲು ಉತ್ತಮವಾಗಿ ಕಾಣುತ್ತಿತ್ತು.. ಹೀಗಾಗಿ ನಾನು ಇದನ್ನು ಖರೀದಿಸಿದೆ ಎಂದು ವಿರಾಟ್ ಹೇಳಿದ್ದಾರೆ.

ಟಾಟಾ ಸಫಾರಿ ಬೆಲೆ

ಟಾಟಾ ಸಫಾರಿ ಈಗಲೂ ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಕಾರಾಗಿದೆ. ಈ ಕಾರಿನ ಒಟ್ಟು 32 ರೂಪಾಂತರಗಳು ಮಾರುಕಟ್ಟೆಯಲ್ಲಿವೆ. ಈ ಕಾರು ಆರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಟಾಟಾ ಸಫಾರಿಯ ಎಕ್ಸ್ ಶೋ ರೂಂ ಬೆಲೆ 15.50 ಲಕ್ಷ ರೂ. ಗಳಿಂದ ಪ್ರಾರಂಭವಾಗುತ್ತದೆ. ಈ ಟಾಟಾ ಕಾರು ಗ್ಲೋಬಲ್ NCAP ನಿಂದ ಕ್ರ್ಯಾಶ್ ಪರೀಕ್ಷೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಹ ಪಡೆದುಕೊಂಡಿದೆ. ಈ ಕಾರಿನಲ್ಲಿ ಧ್ವನಿ ನೆರವಿನ ಪನೋರಮಿಕ್ ಸನ್‌ರೂಫ್ ಜೊತೆಗೆ ಹಲವು ಸುರಕ್ಷತಾ ವೈಶಿಷ್ಟ್ಯಗಳು ಲಭ್ಯವಿದೆ.

TVS Jupiter CNG: 1 ಕಿ. ಮೀ ಓಡಲು ಕೇವಲ 1 ರೂ. ಮಾತ್ರ: ವಿಶ್ವದ ಮೊದಲ ಸಿಎನ್‌ಜಿ ಸ್ಕೂಟರ್ ಬಿಡುಗಡೆಗೆ ಸಿದ್ದ

ಟಾಟಾ ಸಫಾರಿ SUV 2-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಇದು ಗರಿಷ್ಠ 170 PS ಪವರ್ ಮತ್ತು 350 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಫಾರಿಯನ್ನು 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಮೈಲೇಜ್ ಬಗ್ಗೆ ಹೇಳುವುದಾದರೆ, ಸಫಾರಿ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನ ಮೈಲೇಜ್ 16.30 ಕಿ. ಮೀ ವರೆಗೆ ಮತ್ತು ಸ್ವಯಂಚಾಲಿತ ರೂಪಾಂತರಗಳ ಮೈಲೇಜ್ 14.50 ಕಿ. ಮೀ ವರೆಗೆ ನೀಡುತ್ತದೆ.

ಇತ್ತೀಚೆಗಷ್ಟೆ ಟಾಟಾ ಸಫಾರಿಯ ಪ್ಯೂರ್ ರೂಪಾಂತರದಲ್ಲಿ ಹಲವು ವೈಶಿಷ್ಟ್ಯಗಳನ್ನು ತೆಗೆದು ಹಾಕಲಾಗಿತ್ತು. ಮೂರನೇ ಸಾಲಿನ ಪ್ರಯಾಣಿಕರಿಗೆ ಎಸಿ ವೆಂಟ್‌ಗಳು, ಆರ್ಮ್‌ರೆಸ್ಟ್, ಸ್ಪೇರ್ ವೀಲ್, ಎರಡನೇ ಮತ್ತು ಮೂರನೇ ಸಾಲಿನ ಪ್ರಯಾಣಿಕರಿಗೆ ರೂಫ್ ಲೈಟ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಎಲ್‌ಇಡಿ ಲೈಟ್ ವೈಶಿಷ್ಟ್ಯಗಳನ್ನು ತೆಗೆದುಹಾಕಲಾಗಿದೆ. ಹೆಚ್ಚುವರಿಯಾಗಿ, ಹಿಂದೆ ಅಸ್ತಿತ್ವದಲ್ಲಿರುವ ಆಟೋ-ಡಿಮ್ಮಿಂಗ್ IRVM ಯುನಿಟ್ ಅನ್ನು ಹಸ್ತಚಾಲಿತ IRVM ಬದಲಾಯಿಸಲಾಗಿದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:37 am, Thu, 27 February 25