ಫೋಕ್ಸ್‌ವ್ಯಾಗನ್ ನಿರ್ಮಾಣದ ಈ ಕಾರಿನ ಮೇಲೆ ರೂ. 4.20 ಲಕ್ಷ ಇಯರ್ ಎಂಡ್ ಆಫರ್ ಘೋಷಣೆ
ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಆಕರ್ಷಕ ವರ್ಷಾಂತ್ಯದ ಆಫರ್ ಘೋಷಣೆ ಮಾಡಿದ್ದು, ಆಫರ್ ಗಳಲ್ಲಿ ಹೊಸ ಕಾರು ಖರೀದಿಸುವ ಗ್ರಾಹಕರು ಭಾರೀ ಪ್ರಮಾಣದ ಉಳಿತಾಯ ಮಾಡಬಹುದಾಗಿದೆ.
ಪ್ರೀಮಿಯಂ ಕಾರು ಉತ್ಪಾದನಾ ಕಂಪನಿಯಾಗಿರುವ ಫೋಕ್ಸ್ ವ್ಯಾಗನ್ ಇಂಡಿಯಾ (Volkswagen India) ತನ್ನ ಹೊಸ ಕಾರುಗಳ ಖರೀದಿಗಾಗಿ ಅತ್ಯುತ್ತಮ ಇಯರ್ ಎಂಡ್ ಆಫರ್ ಗಳನ್ನು ನೀಡುತ್ತಿದ್ದು, ಹೊಸ ಟಿಗ್ವಾನ್ (Tiguan) ಎಸ್ ಯುವಿ ಖರೀದಿಯ ಮೇಲೆ ದಾಖಲೆ ಪ್ರಮಾಣದ ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಆಕರ್ಷಕ ಬೆಲೆಯ ಸರ್ವಿಸ್ ಪ್ಯಾಕೇಜ್ ನೀಡಲಾಗುತ್ತಿದೆ.
ಟಿಗ್ವಾನ್ ಎಸ್ ಯುವಿ ಖರೀದಿಯ ಮೇಲೆ ಒಟ್ಟು ರೂ. 4.20 ಲಕ್ಷ ಮೌಲ್ಯದ ಆಫರ್ ಗಳು ಲಭ್ಯವಿದ್ದು, ಇದರಲ್ಲಿ ರೂ. 75 ಸಾವಿರ ಕ್ಯಾಶ್ ಬ್ಯಾಕ್, ರೂ. 75 ಸಾವಿರ ಎಕ್ಸ್ ಚೆಂಜ್ ಆಫರ್, ರೂ. 1 ಲಕ್ಷ ಮೌಲ್ಯದ ಕಾರ್ಪೊರೇಟ್ ಡಿಸ್ಕೌಂಟ್, ರೂ. 86 ಸಾವಿರ ಮೌಲ್ಯ ಹೊಂದಿರುವ 4 ವರ್ಷದ ಸರ್ವಿಸ್ ಪ್ಯಾಕೇಜ್ ಮತ್ತು ರೂ. 84 ಸಾವಿರ ಮೌಲ್ಯ ವಿಶೇಷ ಪ್ಯಾಕೇಜ್ ಸಿಗಲಿದೆ.
ಇದನ್ನೂ ಓದಿ: ಭವಾನಿ ರೇವಣ್ಣರ ಒಂದೂವರೆ ಕೋಟಿ ಕಾರಿನಲ್ಲಿ ಏನೆಲ್ಲಾ ಲಗ್ಷುರಿ ಫೀಚರ್ಸ್ ಗಳಿವೆ ನೋಡಿ..
ಹೊಸ ಆಫರ್ ಅನ್ನು ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ಈ ತಿಂಗಳು 31ರ ತನಕ ಮಾತ್ರ ನೀಡಲಿದ್ದು, ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 35.17 ಲಕ್ಷ ಬೆಲೆ ಹೊಂದಿದೆ. ಆಫರ್ ನಂತರ ಟಿಗ್ವಾನ್ ಕಾರು ರೂ. 30.97 ಲಕ್ಷ ಬೆಲೆ ಹೊಂದಿದ್ದು, ಫುಲ್ ಸೈಜ್ ಎಸ್ ಯುವಿ ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಅತ್ಯುತ್ತಮ ಆಫರ್ ಆಗಿದೆ.
ಇನ್ನು ಬಲಿಷ್ಠ ಎಂಜಿನ್ ಮತ್ತು ಐಷಾರಾಮಿ ಫೀಚರ್ಸ್ ಹೊಂದಿರುವ ಟಿಗ್ವಾನ್ ಎಸ್ ಯುವಿ ಕಾರು ಮಾದರಿಯು ಹ್ಯುಂಡೈ ಟ್ಯುಸಾನ್, ಸಿಟ್ರನ್ ಸಿ5 ಏರ್ ಕ್ರಾಸ್, ಜೀಪ್ ಕಂಪಾಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, 2.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ. ಇದರಲ್ಲಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಣೆ ಮಾಡಲಾಗಿದ್ದು, ಇದು 4 ಮೊಷನ್ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಸೌಲಭ್ಯದೊಂದಿಗೆ 187 ಹಾರ್ಸ್ ಪವರ್ ಮತ್ತು 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?
ಜೊತೆಗೆ ಹೊಸ ಟಿಗ್ವಾನ್ ಕಾರಿನಲ್ಲಿ ಹಲವಾರು ಹೈ ಎಂಡ್ ಫೀಚರ್ಸ್ ಜೋಡಣೆ ಮಾಡಲಾಗಿದ್ದು, ಇದರಲ್ಲಿ ಸುಧಾರಿತ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ವೈಯರ್ ಲೆಸ್ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಯೊಂದಿಗೆ 8 ಇಂಚಿನ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಪನೊರಮಿಕ್ ಸನ್ ರೂಫ್, ಕನೆಕ್ಟೆಡ್ ಕಾರ್ ಟೆಕ್ನಾಲಜಿ, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ಪವರ್ಡ್ ಡ್ರೈವರ್ಸ್ ಸೀಟ್, 30 ಆ್ಯಂಬಿಯೆಂಟ್ ಲೈಟಿಂಗ್ಸ್ ಮತ್ತು ಸುರಕ್ಷತೆಗಾಗಿ ಆರು ಏರ್ ಬ್ಯಾಗ್ ಗಳು, ಪಾರ್ಕ್ ಅಸಿಸ್ಟ್ ಸೇರಿದಂತೆ ಹಲವಾರು ಫೀಚರ್ಸ್ ಗಳಿವೆ.
Published On - 4:57 pm, Wed, 6 December 23