AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Volvo C40 Recharge: ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ದುಬಾರಿಯಾದ ವೊಲ್ವೊ ಸಿ40 ರೀಚಾರ್ಜ್

ವೊಲ್ವೊ ಇಂಡಿಯಾ ಕಂಪನಿಯು ಹೊಸ ಸಿ40 ರೀಚಾರ್ಜ್ ಎಲೆಕ್ಟ್ರಿಕ್ ಕೂಪೆ ಕಾರಿನ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

Volvo C40 Recharge: ಬಿಡುಗಡೆಯಾದ ಒಂದೇ ತಿಂಗಳಿನಲ್ಲಿ ದುಬಾರಿಯಾದ ವೊಲ್ವೊ ಸಿ40 ರೀಚಾರ್ಜ್
ವೊಲ್ವೊ ಸಿ40 ರೀಚಾರ್ಜ್
Follow us
Praveen Sannamani
|

Updated on: Oct 13, 2023 | 7:48 PM

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ವೊಲ್ವೊ(Volvo) ತನ್ನ ಹೊಸ ರೀಚಾರ್ಜ್ ಸಿ40 ರೀಚಾರ್ಜ್(C40 Recharge) ಎಲೆಕ್ಟ್ರಿಕ್ ಕೂಪೆ ಎಸ್ ಯುವಿ ಬಿಡುಗಡೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಖರೀದಿ ಯೋಜನೆಯಲ್ಲಿದ್ದ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಪೂರ್ವ ನಿಗದಿಯೆಂತೆ ಹೊಸ ಇವಿ ಕಾರಿನ ಬೆಲೆ ಹೆಚ್ಚಳ ಮಾಡಲಾಗಿದ್ದು, ಹೊಸ ಕಾರು ಇದುವರೆಗೆ ನೂರು ಯುನಿಟ್ ಬುಕಿಂಗ್ ಪಡೆದುಕೊಂಡಿದೆ.

ಸಿ40 ರೀಚಾರ್ಜ್ ಎಲೆಕ್ಟ್ರಿಕ್ ಕೂಪೆ ಬಿಡುಗಡೆಯ ಸಂದರ್ಭದಲ್ಲಿಯೇ ಮೊದಲ 100 ಯುನಿಟ್ ಗಳನ್ನು ಖರೀದಿಸುವ ಗ್ರಾಹಕರಿಗೆ ಮಾತ್ರ ಕಡಿಮೆ ಬೆಲೆ ಘೋಷಣೆ ಮಾಡಿದ್ದ ವೊಲ್ವೊ ಕಂಪನಿಯು ಇದೀಗ ನಿಗದಿತ ಸಂಖ್ಯೆಯ ಬುಕಿಂಗ್ ದಾಖಲಾಗಿರುವುದರಿಂದ ಎಕ್ಸ್ ಶೋರೂಂ ದರದಲ್ಲಿ ರೂ. 1.70 ಲಕ್ಷ ಬೆಲೆ ಹೆಚ್ಚಳ ಮಾಡಿದೆ. ಬೆಲೆ ಹೆಚ್ಚಳದ ನಂತರ ಸಿ40 ರೀಚಾರ್ಜ್ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 62.95 ಲಕ್ಷ ಬೆಲೆ ಹೊಂದಿದ್ದು, ಬೆಲೆ ಹೆಚ್ಚಳದ ನಂತರವೂ ಹೊಸ ಕಾರು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

Volvo C40 Recharge (21)

ಹೊಸ ಸಿ40 ರೀಚಾರ್ಜ್ ಇವಿ ಕಾರು ಸದ್ಯ ಮಾರುಕಟ್ಟೆಯಲ್ಲಿ ಒಂದೇ ವೆರಿಯೆಂಟ್ ನಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಆಕರ್ಷಕ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಅಭಿವೃದ್ದಿಗೊಂಡಿದೆ. ಇದರೊಂದಿಗೆ ಹೊಸ ಇವಿ ಕಾರು ಮುಂದಿನ ಒಂದು ವರ್ಷದೊಳಗಾಗಿ ವೊಲ್ವೊ ಇಂಡಿಯಾ ಕಂಪನಿಯ ಒಟ್ಟಾರೆ ಕಾರು ಮಾರಾಟದಲ್ಲಿ ಇವಿ ಕಾರು ಮಾರಾಟ ಪ್ರಮಾಣವನ್ನು ಶೇ. 35 ಕ್ಕೆ ಹೆಚ್ಚಿಸುವ ನೀರಿಕ್ಷೆಯಲ್ಲಿದೆ.

ಇದನ್ನೂ ಓದಿ: ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹ್ಯುಂಡೈ ವೆರ್ನಾ

ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್ ಕಂಪ್ಯಾಕ್ಟ್ ಮಾಡ್ಯೂಲರ್ ಆರ್ಕಿಟೆಕ್ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗಿರುವ ಸಿ40 ರೀಚಾರ್ಜ್ ಎಲೆಕ್ಟ್ರಿಕ್ ಎಸ್ ಯುವಿ ಕೂಪೆಯಲ್ಲಿ 78kWh ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಇದು ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಜೊತೆಗೆ ಪ್ರತಿ ಚಾರ್ಜ್ ಗೆ ಗರಿಷ್ಠ 530 ಕಿ.ಮೀ ಮೈಲೇಜ್ ನೀಡುತ್ತದೆ. ಹೊಸ ಕಾರಿನಲ್ಲಿರುವ ಬ್ಯಾಟರಿ ಪ್ಯಾಕ್ ಚಾರ್ಜ್ ಮಾಡಲು 150kW ಫಾಸ್ಟ್ ಚಾರ್ಜರ್ ಸೌಲಭ್ಯವು ಕೇವಲ 27 ನಿಮಿಷಗಳಲ್ಲಿ ಪೂರ್ತಿ ಚಾರ್ಜ್ ಒದಗಿಸಲಿದ್ದು, ಹೋಂ ಚಾರ್ಜರ್ ಸೌಲಭ್ಯದಿಂದ ಪೂರ್ತಿ ಚಾರ್ಜ್ ಮಾಡಲು ಸುಮಾರು 18 ಗಂಟೆಗಳ ಸಮಯಾವಕಾಶ ತೆಗೆದುಕೊಳ್ಳಬಹುದಾಗಿದೆ.

ಹೊಸ ಕಾರಿನಲ್ಲಿ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಎರಡು ಆಕ್ಸೆಲ್ ಮೇಲೆ ತಲಾ ಒಂದರಂತೆ ಜೋಡಣೆ ಮಾಡಲಾಗಿದ್ದು, ಇದು ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಸೌಲಭ್ಯದೊಂದಿಗೆ 408 ಹಾರ್ಸ್ ಪವರ್ ಮತ್ತು 660 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಹೊಸ ಇವಿ ಕಾರು 4.7 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿಂದ 100 ಕಿ.ಮೀ ವೇಗವರ್ದನೆ ಸಾಮರ್ಥ್ಯ ಹೊಂದಿದ್ದು, ಇದು ಎಕ್ಸ್ ಸಿ40 ರೀಚಾರ್ಜ್ ಗಿಂತಲೂ ಹೆಚ್ಚಿನ ವೇಗದೊಂದಿಗೆ ಪ್ರತಿ ಗಂಟೆಗೆ ಗರಿಷ್ಠ 180 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದೆ.

Volvo C40 Recharge (20)

ಇದನ್ನೂ ಓದಿ: ಎಂಜಿ ಜೆಡ್ಎಸ್ ಇವಿ ಮೇಲೆ ಭರ್ಜರಿ ಆಫರ್- ರೂ. 2.30 ಲಕ್ಷ ಬೆಲೆ ಇಳಿಕೆ..

ಇನ್ನು ಹೊಸ ಸಿ40 ರೀಚಾರ್ಜ್ ಎಲೆಕ್ಟ್ರಿಕ್ ಎಸ್ ಯುವಿ ಕೂಪೆಯಲ್ಲಿ ಥೋರ್-ಹ್ಯಾಮರ್ ವಿನ್ಯಾಸದ ಫಿಕ್ಸಲ್ ಎಲ್ಇಡಿ ಹೆಡ್ ಲೈಟ್ ಗಳು ಮತ್ತು ಟೈಲ್ ಲ್ಯಾಂಪ್ ನೊಂದಿಗೆ ವುಡ್ ಇಂಟೇಕ್ ಡ್ಯಾಶ್‌ಬೋರ್ಡ್‌ ಮತ್ತು 12.3-ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ ನೀಡಲಾಗಿದ್ದು, ಪ್ರೀಮಿಯಂ ಅನುಭವಕ್ಕಾಗಿ ಪನೊರಮಿಕ್ ಸನ್ ರೂಫ್, ವೈರ್ ಲೆಸ್ ಫೋನ್ ಚಾರ್ಜಿಂಗ್, 360 ಡಿಗ್ರಿ ಕ್ಯಾಮೆರಾ, ಸೆನ್ಸಾರ್ ಆಧರಿತ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ, ಕನೆಕ್ಟೆಡ್ ಕಾರ್ ಟೆಕ್, ಪವರ್ಡ್ ಫ್ರಂಟ್ ಸೀಟ್ಸ್, ಡ್ರೈವರ್ ಸೈಡ್ ಮೊಮೆರಿ ಫಂಕ್ಷನ್, ಹಿಟಿಂಗ್ ಮತ್ತು ಕೂಲಿಂಗ್ ಹೊಂದಿರುವ ಆಸನಗಳು, ಡ್ಯುಯಲ್ ಜೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, ಪ್ರೀಮಿಯಂ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಂನೊಂದಿಗೆ 413 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯಗಳಿವೆ.

ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!