ಏನಿದು ವಾಹನಗಳ ಸ್ಕ್ರ್ಯಾಪಿಂಗ್ ಪ್ರಕ್ರಿಯೆ? RTO ನಿಯಮಗಳು ಏನಿವೆ? ವೆಹಿಕಲ್ ಸ್ಕ್ರ್ಯಾಪಿಂಗ್ ಕೇಂದ್ರ ಸ್ಥಾಪಿಸುವುದು ಹೇಗೆ?
15 ಮತ್ತು 20 ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ವಾಹನಗಳು ಮತ್ತು ಖಾಸಗಿ ವಾಹನಗಳು ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲವಾದರೆ, ಅವುಗಳನ್ನು ಸ್ಕ್ರ್ಯಾಪಿಂಗ್ ಮಾಡಬೇಕಾಗುತ್ತದೆ. ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾದರೆ ವಾಹನವನ್ನು ಜೀವಿತಾವಧಿ ಮುಗಿದ ವಾಹನ ಎಂದು ಪರಿಗಣಿಸಲಾಗುತ್ತದೆ.

15 ಮತ್ತು 20 ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ವಾಹನಗಳು ಮತ್ತು ಖಾಸಗಿ ವಾಹನಗಳು ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲವಾದರೆ, ಅವುಗಳನ್ನು ಸ್ಕ್ರ್ಯಾಪಿಂಗ್ ಮಾಡಬೇಕಾಗುತ್ತದೆ. ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾದರೆ ವಾಹನವನ್ನು ಜೀವಿತಾವಧಿ ಮುಗಿದ ವಾಹನ (ಎಂಡ್-ಆಫ್-ಲೈಫ್ ವೆಹಿಕಲ್ -ELV) ಎಂದು ಪರಿಗಣಿಸಲಾಗುತ್ತದೆ. ಜೀವಿತಾವಧಿ ಕೊನೆಗೊಂಡ ( End-of-Life Vehicle -ELV) ವಾಹನಗಳ ಸ್ಕ್ರ್ಯಾಪಿಂಗ್ ಪ್ರಕ್ರಿಯೆಯ ಕೆಲವು ಪ್ರಮುಖ ಹಂತಗಳು ಈ ಕೆಳಗಿನಂತಿವೆ: 1. ಕೊಟೇಶನ್ Quotation: ನಿಮ್ಮ ಕಾರಿನ ಉತ್ಪಾದನಾ ವರ್ಷ, ತಯಾರಿಕೆ, ಮಾಡಲ್, ಸ್ಥಿತಿಗತಿ ಮತ್ತು ತಯಾರಿಕೆ ಸ್ಥಳ ಸೇರಿದಂತೆ ಜೀವಿತಾವಧಿ ಮುಗಿದ ವಾಹನದ ಮಾಹಿತಿಯನ್ನು ಸ್ಕ್ರ್ಯಾಪಿಂಗ್ ಕೇಂದ್ರಕ್ಕೆ (RVSF) ಒದಗಿಸಬೇಕು. ವಾಹನ ಮಾಲೀಕರ ಕಡೆಯಿಂದ ಸೂಕ್ತ ಕೊಟೇಶನ್ ಸಿದ್ದಪಡಿಸಲು RVSF ಕೇಂದ್ರಗಳು ವಾಹನದ ಮೌಲ್ಯಮಾಪನ ಮಾಡುತ್ತವೆ. ಕೊನೆಗೆ ವಾಹನ ಮಾಲೀಕರು ತಮ್ಮ ವಿವೇಚನೆಗೆ ತಕ್ಕಂತೆ ಮಾರಾಟ ಆಫರ್ ಅನ್ನು ನಿರ್ಧರಿಸಬಹುದು. (function(v,d,o,ai){ ai=d.createElement("script"); ai.defer=true; ai.async=true; ai.src=v.location.protocol+o; d.head.appendChild(ai); })(window, document, "//a.vdo.ai/core/v-tv9kannada-v0/vdo.ai.js"); 2. ವಾಹನ ಜಮಾವಣೆ ವಾಹನ ಜಮಾವಣೆಗಾಗಿ ನಿಮಗೆ ಅನುಕೂಲಕರವಾದ ದಿನಾಂಕ ಮತ್ತು ಸಮಯವನ್ನು ನೀವು ಆಯ್ಕೆ ಮಾಡಬಹುದು. ವಾಹನದ ಸ್ಥಿತಿಯನ್ನು ಖಚಿತಪಡಿಸಲು ಸ್ಕ್ರ್ಯಾಪಿಂಗ್ ಕೇಂದ್ರದ ತಂತ್ರಜ್ಞರು ವಾಹನವನ್ನು ಪರಿಶೀಲಿಸುತ್ತಾರೆ. ವಾಹನವನ್ನು ಮಾಲೀಕರ ಸ್ಥಳದಿಂದ ಎತ್ತಿಕೊಂಡು ಸ್ಕ್ರ್ಯಾಪಿಂಗ್ ಕೇಂದ್ರಕ್ಕೆ ಸಾಗಿಸಲು ಆ ಕೇಂದ್ರವೇ ನೆರವಾಗುತ್ತದೆ. ಪಿಕಪ್ ಪೂರ್ಣಗೊಂಡ ನಂತರ ಹಣ ಪಾವತಿ ಮಾಡಲಾಗುತ್ತದೆ. 3. ವಾಹನ ನೋಂದಣಿ ರದ್ದುಪಡಿಸುವಿಕೆಗೆ ಬೆಂಬಲ Deregistration: ಸ್ಕ್ರ್ಯಾಪಿಂಗ್ ಕೇಂದ್ರದ ಕಾನೂನು ತಂಡವು ಸಂಬಂಧಿತ R.T.O ಕೇಂದ್ರದಲ್ಲಿ ಸ್ಕ್ರ್ಯಾಪಿಂಗ್ ಸಲುವಾಗಿ ವಾಹನದ ನೋಂದಣಿ ರದ್ದುಗೊಳಿಸುವುದಕ್ಕೆ ನೆರವು ನೀಡುತ್ತದೆ. ಸ್ಕ್ರ್ಯಾಪಿಂಗ್ ಪ್ರಮಾಣಪತ್ರ ಸೇರಿದಂತೆ ಸಂಬಂಧಿತ ದಾಖಲಾತಿಗಳನ್ನು ನೀಡುತ್ತದೆ. 4. ಮಾಲಿನ್ಯ ಮತ್ತು ಕಿತ್ತುಹಾಕುವಿಕೆ Depollution & Dismantling ಸ್ಕ್ರ್ಯಾಪಿಂಗ್ ಪ್ರಕ್ರಿಯೆಯನ್ನು...
Published On - 10:36 am, Sat, 13 July 24




