ನನ್ನ ಕಣ್ಣಿಗೆ ಕಂಡ ನಿಜವಾದ ದೇವರು ಅಪ್ಪ
ಹೌದು, ತನ್ನ ಇಡೀ ಬದುಕನ್ನು ನಮಗಾಗಿ ಮೀಸಲಿಟ್ಟ ಅವನು ಕರ್ಣನೇ ಸರಿ. ಪ್ರತಿಬಾರಿಯೂ ನಾನು ನೋವಿನಲ್ಲಿದ್ದಾಗ ಸ್ನೇಹಿತನಂತೆ ನನ್ನನ್ನು ಸಂತೈಸುವ ಈ ವ್ಯಕ್ತಿಯನ್ನು ವರ್ಣಿಸಲು ಅಸಾಧ್ಯ. ಬದುಕಿನಲ್ಲಿ ಎದುರಾಗುವ ಎಲ್ಲಾ ಕಷ್ಟ ನಷ್ಟಗಳನ್ನು ಹೇಗೆ ಎದುರಿಸಬೇಕೆಂದು ಹೇಳಿಕೊಟ್ಟ ಅವನೇ ನನ್ನ ಬದುಕಿನ ನಿಜವಾದ ಜಾದೂಗಾರ.
ಎಂದಿನಂತೆ ಕಾಲೇಜಿಗೆ ಬೆಳ್ಳಂಬೆಳಗ್ಗೆ ಹೊರಟಿದ್ದೆ , ಬಸ್ಸಿನಲ್ಲಿ ಅಷ್ಟೆಲ್ಲಾ ನೂಕುನುಗ್ಗಲು ಇದ್ದರೂ ಕಿಟಕಿ ಬದಿಯ ಒಂದು ಸೀಟು ನನಗಾಗಿಯೇ ಕಾದಿರುವಂತೆ ಕಂಡಿತು. ಖಾಲಿ ಇದ್ದ ಸೀಟಿನಲ್ಲಿ ಕುಳಿತುಕೊಂಡೆ . ಕೈಯಲ್ಲಿದ್ದ ಮೊಬೈಲ್ ಸದ್ದಾದ ಕಾರಣ ಕುತೂಹಲದಿಂದ ಏನೆಂದು ಮೊಬೈಲ್ ತೆರೆದು ನೋಡಿದೆ. ಅದಾಗಲೇ ಮೊದಲ ಅವಧಿಯ ತರಗತಿ ಇಲ್ಲ ಎಂದು ಮೇಡಂ ಮೆಸೇಜ್ ಹಾಕಿದ್ದರು. ಹೀಗಾಗಿ ಬೇಗ ಕ್ಲಾಸಿಗೆ ಹೋಗಲು ಮನಸ್ಸಿರಲಿಲ್ಲ , ಹೀಗಾಗಿ ನನ್ನ ಪಯಣವನ್ನು ಬಸ್ಸ್ಟ್ಯಾಂಡ್ ನ ಪಕ್ಕದಲ್ಲೇ ಇದ್ದ ದೇವಸ್ಥಾನಕ್ಕೆ ನಡೆದೆ. ಕಾಣದ ದೇವರನ್ನು ನೋಡಲು ಹೊರಟಾಗ ನನ್ನ ಕಣ್ಣಿಗೆ ಕಂಡದ್ದು ಬದುಕಿನ ನಿಜವಾದ ದೇವರ ಪ್ರೀತಿ. ಒಬ್ಬ ತಂದೆ ತನ್ನ ಮಗಳನ್ನು ಹೆಗಲ ಮೇಲೇರಿಸಿಕೊಂಡು ದೇವರನ್ನು ತೋರಿಸುತ್ತಿದ್ದ ಪರಿ. ಅದಾಗಲೇ ನನ್ನ ಜೀವನದ ಸೂಪರ್ ಹೀರೋ ನನ್ನಪ್ಪ ನೆನಪಿಗೆ ಬಂದರು, ಆತನನ್ನ ನೆನೆಯುತ್ತಲೇ ನನ್ನ ಕಣ್ಣುಗಳು ತೇವವಾದವು.
ಹೌದು, ತನ್ನ ಇಡೀ ಬದುಕನ್ನು ನಮಗಾಗಿ ಮೀಸಲಿಟ್ಟ ಅವನು ಕರ್ಣನೇ ಸರಿ. ಪ್ರತಿಬಾರಿಯೂ ನಾನು ನೋವಿನಲ್ಲಿದ್ದಾಗ ಸ್ನೇಹಿತನಂತೆ ನನ್ನನ್ನು ಸಂತೈಸುವ ಈ ವ್ಯಕ್ತಿಯನ್ನು ವರ್ಣಿಸಲು ಅಸಾಧ್ಯ. ಬದುಕಿನಲ್ಲಿ ಎದುರಾಗುವ ಎಲ್ಲಾ ಕಷ್ಟ ನಷ್ಟಗಳನ್ನು ಹೇಗೆ ಎದುರಿಸಬೇಕೆಂದು ಹೇಳಿಕೊಟ್ಟ ಅವನೇ ನನ್ನ ಬದುಕಿನ ನಿಜವಾದ ಜಾದೂಗಾರ.
ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ನನ್ನ ಬದುಕಿನ ರಾಯಭಾರಿ ಅಪ್ಪ
ಅದೆಷ್ಟು ನೋವಿದೆಯೋ ನಿನ್ನಲ್ಲಿ, ಅದೆಷ್ಟು ಆಸೆ ಇತ್ತೋ ನಿನ್ನಲ್ಲಿ. ಇದೆಲ್ಲವನ್ನ ನಮಗಾಗಿ ಅದುಮಿಟ್ಟುಕೊಂಡು ನಮ್ಮ ಖುಷಿಗಾಗಿ ಹಗಲು-ರಾತ್ರಿ ದುಡಿಯುತ್ತಲೇ ಇರುತ್ತಿ. ನಿನ್ನ ಈ ಪ್ರೀತಿಯ ಮುಂದೆ ಎಲ್ಲಾವೂ ಶೂನ್ಯ ಅಪ್ಪ!. ಅದೆಷ್ಟೋ ಸಲ ನಾ ಕೇಳಿದ್ದನ್ನೆಲ್ಲ ದೇವರು ಕೊಡದೇ ಇರಬಹುದು. ಆದರೆ ಕೇಳಿದ್ದನ್ನೆಲ್ಲಾ ಕೊಡಿಸುವ ಅಪ್ಪಕ್ಕಿಂತ ನನಗೆ ಇನ್ನೇನು ಬೇಕು. ತನ್ನ ಸಂಸಾರಕ್ಕಾಗಿ ಬಿಸಿಲು-ಮಳೆ ಎನ್ನದೆ ದಿನವಿಡೀ ದುಡಿಯುವ ಆತ ನನ್ನ ಪಾಲಿನ ದೇವರು. ಎಷ್ಟೋ ಬಾರಿ ಇಂಥ ಅಪ್ಪನನ್ನು ಪಡೆದ ನಾನು ಪುಣ್ಯವಂತೆ ಎನಿಸಿದ್ದು ಇದೆ. ಭವಿಷ್ಯ ಕಟ್ಟುವ ಭರವಸೆ ನೀಡಿ ಕೈ ಹಿಡಿದು ಸರಿಯಾದ ದಡಕ್ಕೆ ಸೇರಿಸುವ ನೀನು ಯಾವ ಅಂಬಿಗನಿಗೂ ಕಮ್ಮಿಯಿಲ್ಲ!
ಶಮಿತಾ ಮುತ್ಲಾಜೆ
ತೃತೀಯ ಪತ್ರಿಕೋದ್ಯಮ
ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Mon, 20 June 22