Devadristi App: ಕಣ್ಣಿಲ್ಲದವರಿಗೆ “ದೇವದೃಷ್ಟಿ ಆ್ಯಪ್” ದಾರಿದೀಪ, ದಿವ್ಯಾಂಗರ ಬಾಳಿಗೆ ಬೆಳಕಾದ ವಿದ್ಯಾರ್ಥಿಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 11, 2023 | 4:13 PM

ವಿದ್ಯಾರ್ಥಿಗಳೇ ಕಂಡುಹಿಡಿದ "ದೇವದೃಷ್ಟಿ" ಆ್ಯಪ್ ಅನೇಕ ದಿವ್ಯಾಂಗರ ಬಾಳಿಗೆ ದಾರಿದೀಪವಾಗಲಿದೆ. ಕಣ್ಣು ಕಾಣದವರು ಸುಂದರ ಪ್ರಪಂಚವನ್ನು ಕಾಣದೆ, ತಮ್ಮದೆಯಾಗಿರುವ ಕಾಲ್ಪನಿಕ ಪ್ರಪಂಚದಲ್ಲಿ ಜೀವನದ ಪಯಣ ಮುಂದುವರಿಸುತ್ತಿದ್ದವರಿಗೆ ಈ ಆ್ಯಪ್ ಸಹಾಯವಾಗಲಿದೆ.

Devadristi App: ಕಣ್ಣಿಲ್ಲದವರಿಗೆ ದೇವದೃಷ್ಟಿ ಆ್ಯಪ್ ದಾರಿದೀಪ, ದಿವ್ಯಾಂಗರ ಬಾಳಿಗೆ ಬೆಳಕಾದ ವಿದ್ಯಾರ್ಥಿಗಳು
ದೇವದೃಷ್ಟಿ ಆ್ಯಪ್ ಮತ್ತು ವಿದ್ಯಾರ್ಥಿಗಳು
Follow us on

ಮನುಷ್ಯನ ದೇಹದಲ್ಲಿ ಪ್ರತಿಯೊಂದು ಅಂಗವು ಕೂಡ ಪ್ರಮುಖವಾದದ್ದು, ಅದರಲ್ಲಿ ಒಂದು ಅಂಗಕ್ಕೂ ಸಮಸ್ಯೆಯಾದರೂ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಕೆಲವರು ಹುಟ್ಟಿನಿಂದಲೇ ವಿಶೇಷಚೇತನರಾಗಿರುತ್ತಾರೆ, ಅದಕ್ಕಾಗಿ ಈಗಾಗಲೇ ಅನೇಕ ತಂತ್ರಜ್ಞಾನಗಳ ಮೂಲಕ ಸರಿಪಡಿಸಲಾಗುತ್ತಿದೆ. ಇದರಲ್ಲೂ ಕಣ್ಣು ಕಳೆದುಕೊಂಡವರ ಜೀವನ ಕತ್ತಲೆಯಲ್ಲಿಯೇ ಕಳೆಯುವಂತೆ ಮಾಡುತ್ತದೆ. ಒಬ್ಬ ಮನುಷ್ಯನಿಗೆ ಕಣ್ಣು ಎನ್ನುವುದು ತುಂಬಾ ಮುಖ್ಯ, ಅದನ್ನು ಕಳೆದುಕೊಂಡರೆ ಯಾರನ್ನೂ, ಯಾವುದನ್ನೂ ನೋಡಲು ಸಾಧ್ಯವಿಲ್ಲ. ಹಾಗಾಗಿ ವಿದ್ಯಾರ್ಥಿಗಳೇ ಕಂಡುಹಿಡಿದ “ದೇವದೃಷ್ಟಿ” ಆ್ಯಪ್ ಅನೇಕ ದಿವ್ಯಾಂಗರ ಬಾಳಿಗೆ ದಾರಿದೀಪವಾಗಲಿದೆ. ಕಣ್ಣು ಕಾಣದವರು ಸುಂದರ ಪ್ರಪಂಚವನ್ನು ಕಾಣದೆ, ತಮ್ಮದೆಯಾಗಿರುವ ಕಾಲ್ಪನಿಕ ಪ್ರಪಂಚದಲ್ಲಿ ಜೀವನದ ಪಯಣ ಮುಂದುವರಿಸುತ್ತಿದ್ದವರಿಗೆ ಈ ಆ್ಯಪ್ ಸಹಾಯವಾಗಲಿದೆ.

ಈ ಆಪ್ಯ ಅಂಧ ಜನರಿಗೆ ದಾರಿ ದಾಟುವಾಗ ಅಥವಾ ಅಪಾಯ ಸಂದರ್ಭದಲ್ಲಿ ಉಪಯೋಗವಾಗುತ್ತದೆ.   ಕೆಲವೊಂದು ಬಾರಿ ಕಣ್ಣಿದರು ರಸ್ತೆಯಲ್ಲಿ ವಾಹನಗಳ ವೇಗವಾಗಿ ಓಡಿಸಿ ಅಪಘಾತಕ್ಕೆ ಒಳಾಗುತ್ತಾರೆ. ಜೊತೆಗೆ ಇತ್ತೀಚೆಗಿನ ದಿನಗಳಲ್ಲಿ ರಸ್ತೆ ಗುಂಡಿಗಳಿಂದ ಕೆಲ ಬಾರಿ ಅಪಘಾತದ ಘಟನೆಗಳು ಕೂಡ ನಡೆಯುತ್ತಿದೆ. ಇನ್ನೂ ಈ ಅಂಧರ ಪರಿಸ್ಥಿತಿ ಏನು? ಎಂದು ಅರಿತು ಕೆನರಾ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಾದ ಯಶಿಕಾ ರೈ, ವೈಷ್ಣವಿ, ದಿಶಾ, ಸಪ್ನಾ ಶೇಟ್ ಮತ್ತು ಶ್ರೀರಾಮ ಸಮರ್ಥ್ ಅವರು ದಯಾನಂದ ಜಿ.ಕೆ ಅವರ ಮಾರ್ಗದರ್ಶನದಲ್ಲಿ ಒಂದು “ದೇವದೃಷ್ಟಿ” ಆ್ಯಪ್ ಬಿಡುಗಡೆ ಮಾಡಿದ್ದಾರೆ.

ಇದನ್ನು ಓದಿ:ಸ್ತ್ರೀ ಆಟದ ವಸ್ತುವೇ? ಪುರಾಣ ಕಾಲದಿಂದಲೂ ಹೆಣ್ಣೆಂದರೆ ಎಲ್ಲರಿಗೂ ತಾತ್ಸಾರ

ಸಾಮಾನ್ಯವಾಗಿ ಅಂಧರು ರಸ್ತೆ ದಾಟಲು ಸ್ಟಿಕ್ ಉಪಯೋಗಿಸುತ್ತಾರೆ. ಆದರೆ ಕೆಲವೊಂದು ಬಾರಿ ಮುಂದೆ ಬರುವ ಅಪಾಯದ ಬಗ್ಗೆ ಅರಿವು ಇಲ್ಲದೆ ಅಪಘಾತ ನಡೆದು ಹೋಗುತ್ತದೆ. ಈ ಕಾರಣಕ್ಕೆ ಕೆನರಾ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು ಕಣ್ಣಿಲ್ಲದವರಿಗೆ ಕಣ್ಮಣಿಯಾಗುವ ದೇವದೃಷ್ಟಿ ಆ್ಯಪ್ ಕಂಡುಹಿಡಿದ್ದಾರೆ.  ಈ ಬಗ್ಗೆ ವಿದ್ಯಾರ್ಥಿಗಳು ಹೇಳಿರುವಂತೆ ನಾವು ನೀಡುವ ಜ್ಯಾಕೆಟ್​ನಲ್ಲಿ ಒಂದು ರಂಧ್ರ​ವಿದ್ದು , ಅದರಲ್ಲಿ ಮೊಬೈಲ್ ಇಡಲಾಗುತ್ತದೆ. ಈ ಮೊಬೈಲ್ ಮೂಲಕ ಆಪ್ಯ್​ ಕಾರ್ಯನಿರ್ವಹಿಸುತ್ತದೆ, ಇದರ ಜೊತೆಗೆ  ಕಿವಿಗೆ Ear birds ಕೂಡ ಇರುತ್ತದೆ. ಮುಂದೆ ಯಾವ ಅಪಾಯ ಇದೆ ಎಂಬುದರ ಬಗ್ಗೆ ಒಂದು ಧ್ವನಿ ಮೂಲಕ ಕೇಳುತ್ತದೆ. ಜೊತೆಗೆ ಅಂಧರು ರಸ್ತೆ ದಾಟುವಾಗ ಹತ್ತಿರವಿದ್ದ ಗುಂಡಿಗಳು, ವೇಗವಾಗಿ ಬರುವ ವಾಹನಗಳು ಅಂತರ ಬಗ್ಗೆ ತಿಳಿಸುವ ಮೂಲಕ ಅಪಾಯವನ್ನು ತಪ್ಪಿಸಿಕೊಳ್ಳಬಹುದು.

ಇದರ ಬೆಲೆಯು ಕಡಿಮೆವಿದ್ದು, ಹೆಚ್ಚು ಲಾಭವನ್ನು ನೀಡುತ್ತದೆ. ಈ ಆ್ಯಪ್ ಮುಂಬರುವ ದಿನಗಳಲ್ಲಿ ಪ್ಲೇ ಸ್ಟೋರಿನಲ್ಲಿ ಸಹ ಲಭ್ಯವಾಗುತ್ತದೆ. ಇಷ್ಟೇ ಮಾತ್ರವಲ್ಲದೆ, ಅಂಧರಿಗಾಗಿಯೇ ಅಕ್ಷರದಲ್ಲಿರುವ ಕೋಡಿಂಗ್ ಮಾಡಿ, ಆಡಿಯೋ ಮೂಲಕ ಕೇಳುವ ಹಾಗೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ

– ಆನಂದ ಜೇವೂರ್,

ಬ್ಲಾಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:13 pm, Wed, 11 January 23