“ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತದ್ಮೈ ಶ್ರೀ ಗುರುವೇ ನಮಃ”
ವಿದ್ಯಾರ್ಥಿಗಳ ಬಾಳು ಹೊಂಬೆಳಕು ಶಿಕ್ಷಕರು, ಎಂದರೆ ತಪ್ಪಾಗಲಾರದು. ಪ್ರಾಚೀನ ಕಾಲದಲ್ಲಿ ಶಿಕ್ಷಕರನ್ನು ಗುರು ಎಂದು ಕರೆದಿದ್ದರು. ಗುರು ಎಂದರೆ ಸಾವಿರ ವಿದ್ಯಾರ್ಥಿಗಳ ಬಾಳಿಗೆ ಬೆಳಕನ್ನು ತಂದ ವ್ಯಕ್ತಿ. ಒಬ್ಬ ಗುರು ಇಲ್ಲದೆ ವಿದ್ಯಾರ್ಥಿ ಜೀವನವನ್ನು ಊಹಿಸಲು ಸಾಧ್ಯವಿಲ್ಲ. ಒಬ್ಬ ಗುರುವಿಗೆ ತಾನು ಕಳಿಸಿದ್ದ ಎಲ್ಲಾ ವಿದ್ಯಾರ್ಥಿಗಳು ತನ್ನ ಮಕ್ಕಳಂತೆ ತೋರುವವರು. ಒಂದು ದೇಶದ ಭವಿಷ್ಯವನ್ನು ರೂಪಿಸುವುದು ಮಕ್ಕಳ ಕೈಯಲ್ಲಿದೆ ಎಂದು ಹೇಳಲಾಗುತ್ತದೆ. ಆದರೆ ಮಕ್ಕಳ ಭವಿಷ್ಯವನ್ನು ರೂಪಿಸುವುದು ಅಧ್ಯಾಪಕರ ಪ್ರಮುಖ ಪಾತ್ರ ವಹಿಸುತ್ತಾರೆ.
ತಂದೆ ತಾಯಿಯ ನಂತರ ಮಗುವಿಗೆ ಜೀವನದಲ್ಲಿ ಗುರುವನ್ನು ಎರಡನೇ ಪ್ರಮುಖ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ.
ರಾಧಾಕೃಷ್ಣನ್ ಒಬ್ಬ ಶ್ರೇಷ್ಠ ಶಿಕ್ಷಕ, ಇಂತಹ ಆದರ್ಶ ವ್ಯಕ್ತಿಯ ಜನ್ಮದಿನವನ್ನು ಭಾರತದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ವಿವಿಧ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ದಿನವನ್ನು ಆಚರಿಸುತ್ತಾರೆ. ಒಬ್ಬ ವಿದ್ಯಾರ್ಥಿಯ ಸೃಷ್ಟಿಗೆ ಗುರುವಿನ ಪಾತ್ರ ಅತಿ ದೊಡ್ಡದು. ತಾಯಿ ಮಕ್ಕಳಿಗೆ ಜೀವ ನೀಡಿದರೆ ಶಿಕ್ಷಕರು ಮಕ್ಕಳಿಗೆ ಜೀವನವನ್ನು ನೀಡುತ್ತಾರೆ. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಬಗ್ಗೆ ಗುರಿಯನ್ನು ಕಟ್ಟಿಕೊಡುವವರು ಗುರುಗಳು. ಗುರುಗಳು ಪ್ರತಿ ಬಾರಿ ಸರಿಯಾದ ಸಮಯಕ್ಕೆ ಶಾಲೆಗೆ ಬರುತ್ತಾರೆ. ಸರಿಯಾದ ಸಮಯಕ್ಕೆ ಪಾಠ ಶುರು ಮಾಡಿ ಕೊನೆಗೊಳಿಸುತ್ತಾರೆ. ವಿದ್ಯಾರ್ಥಿಗಳ ಯಶಸ್ವಿಗೆ ಶಿಕ್ಷಕರು ಖುಷಿ ಪಡುತ್ತಾರೆ ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಸಮಯವನ್ನು ಶಿಕ್ಷಕರು ಕಳೆಯುತ್ತಾರೆ.
ಬಾಲ್ಯದಲಿದ್ದಾಗ ವಿದ್ಯಾರ್ಥಿಗಳ ಕೈ ಹಿಡಿದು ಅಕ್ಷರ ಅಭ್ಯಾಸ ಮಾಡಿಸಿ, ಮಕ್ಕಳ ತುಂಟಾಟ ಕೀಟಲೆಗಳನ್ನೆಲ್ಲವನ್ನು ಸಹಿಸಿಕೊಂಡು ಸಣ್ಣಪುಟ್ಟ ತಪ್ಪುಗಳನ್ನು ತಿದ್ದಿಕೊಂಡು ವಿದ್ಯಾರ್ಥಿಗಳಿಗೆ ಬದುಕಿನ ಪಾಠಗಳನ್ನು ಸಣ್ಣ ಕಥೆಗಳ ರೂಪದಲ್ಲಿದೆ ಎಂದು ವಿವರಿಸುವವರು ಶಿಕ್ಷಕರು. ಸರಿ ತಪ್ಪುಗಳ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿ ತಿದ್ದಿ ಬುದ್ದಿ ಹೇಳುವವರು ಶಿಕ್ಷಕರು. ವಿದ್ಯಾರ್ಥಿಗಳ ಒಳ್ಳೆಯ ಪ್ರತಿಭೆಗಳಿಗೆ ಬೆಳಕು ಚೆಲ್ಲುವವರು ಶಿಕ್ಷಕರು. ವಿದ್ಯಾರ್ಥಿಗಳ ಸೋತಾಗ ಆತ್ಮಸ್ಥೈರ್ಯ ತುಂಬಿ ಧೈರ್ಯ ಹೇಳಿ ಪ್ರೋತ್ಸಾಹಿಸುವ ಶಿಕ್ಷಕರು ಆತ್ಮಸ್ಥೈರ್ಯ ತುಂಬಿ ಧೈರ್ಯ ಹೇಳಿ ಪ್ರೋತ್ಸಾಹಿಸುವ ಶಿಕ್ಷಕರು. ಗೆದ್ದಾಗ ಪ್ರೋತ್ಸಾಹಿಸುವವರು ಶಿಕ್ಷಕರು. ಒಂದು ಕಲ್ಲು ಸುಂದರವಾದ ಮೂತಿಯಾಗಿ ಮಾರ್ಪಡು ಮಾಡಲು ಅದರ ಹಿಂದೆ ಒಬ್ಬ ಅತ್ಯುತ್ತಮ ಶಿಲ್ಪಿ ಇದ್ದೇ ಇರುತ್ತಾನೆ. ಹಾಗೆ ಒಬ್ಬ ವಿದ್ಯಾರ್ಥಿಯ ಸಾಧನೆಯ ಬೆನ್ನ ಹಿಂದೆ ಶಿಕ್ಷಕರು ಇದ್ದೇ ಇರುತ್ತಾರೆ. ನನ್ನ ಜೀವನದಲ್ಲಿ ಹಲವಾರು ರೀತಿಯಲಿ ಮಹತ್ವದ ಪಾತ್ರನು ವಹಿಸಿರುವ ಶಿಕ್ಷಕರಿಗೆ ಕೃತಜ್ಞನಾಗಿರುತ್ತೇನೆ.
ಜಯಶ್ರೀ. ಸಂಪ