Happy Teachers Day: ವಿದ್ಯಾರ್ಥಿಜೀವನದ ಮೊದಲ ಶಿಕ್ಷಕರ ದಿನಾಚರಣೆ, ಇಂದಿಗೂ ಅದು ಸವಿ ನೆನಪು
ತಾಯಿಯಂತೆ ಕಾಳಜಿ, ಪ್ರೀತಿಯನ್ನು ನೀಡುವ ನಮ್ಮ ಗುರುಗಳಿಗೆ ವಂದಿಸುವ ಪರ್ವಕಾಲ. ಇದು ನನ್ನ ವಿದ್ಯಾರ್ಥಿ ಜೀವನದ ಮೊದಲ ಶಿಕ್ಷಕರ ದಿನಾಚರಣೆ, ಪ್ರಾಥಮಿಕ, ಪ್ರೌಢ, ಕಾಲೇಜು ಈ ಸಮಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದ ಸವಿ ನೆನಪಿಲ್ಲ. ಆದರೆ ಸ್ನಾತಕೋತ್ತರ ಪದವಿಗೆ ಬಂದ ನಂತರ ಮೊದಲ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಭಾಗ್ಯ ನನ್ನದಾಗಿತ್ತು.
ನಮ್ಮ ಜೀವನದಲ್ಲಿ ಒಬ್ಬರು ಮಾರ್ಗದರ್ಶಕರು ಇರಬೇಕು. ಆಗಾ ಮಾತ್ರ ನಮ್ಮ ಜೀವನದಲ್ಲಿ ಯಶಸ್ಸುಗಳನ್ನು ಕಾಣಬಹುದು. ಹೌದು ಈ ನಮ್ಮಲ್ಲಿ ಯಶಸ್ಸುಗಳನ್ನು ಕಾಣಲು ವಿಶ್ವಾಸಯುತವಾದ ಗುರಿಯನ್ನು ಹುಟ್ಟುಹಾಕಲು ಪ್ರೋತ್ಸಾಹ ನೀಡುವವರು ಶಿಕ್ಷಕರು. ಅನೇಕ ಕನಸುಗಳನ್ನು ಹುಟ್ಟು ಹಾಕಿ, ಅವುಗಳನ್ನು ಸಹಕಾರಗೊಳಿಸಲು ಮುನ್ನಡಿ ಬರೆಯುವವರು ಶಿಕ್ಷಕರು. ಇತಂಹ ಗುರುಗಳಿಗೆ ಶಿಷ್ಯರಾದ ನಾವು ಒಂದು ನಮನ ಸಲ್ಲಿಸುವುದು ನಮ್ಮ ಧರ್ಮ.
ತಾಯಿಯಂತೆ ಕಾಳಜಿ, ಪ್ರೀತಿಯನ್ನು ನೀಡುವ ನಮ್ಮ ಗುರುಗಳಿಗೆ ವಂದಿಸುವ ಪರ್ವಕಾಲ. ಇದು ನನ್ನ ವಿದ್ಯಾರ್ಥಿ ಜೀವನದ ಮೊದಲ ಶಿಕ್ಷಕರ ದಿನಾಚರಣೆ, ಪ್ರಾಥಮಿಕ, ಪ್ರೌಢ, ಕಾಲೇಜು ಈ ಸಮಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದ ಸವಿ ನೆನಪಿಲ್ಲ. ಆದರೆ ಸ್ನಾತಕೋತ್ತರ ಪದವಿಗೆ ಬಂದ ನಂತರ ಮೊದಲ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಭಾಗ್ಯ ನನ್ನದಾಗಿತ್ತು. ನಮ್ಮ ವಿಭಾಗದ ಮುಖ್ಯಸ್ಥರಿಗೆ ಮತ್ತು ಉಪನ್ಯಾಸಕರು ಅಚ್ಚರಿ ಪಡುವಂತೆ ಅಂದಿನ ಶಿಕ್ಷಕರ ದಿನಾಚರಣೆಯನ್ನು ನಾವು ಮಾಡಿದ್ದೇವು. ಹೌದು ನಮ್ಮ ಉಪನ್ಯಾಸಕರಿಗೆ ಶಿಕ್ಷಣ ಮತ್ತು ಜೀವನದ ಪಾಠ ಮಾಡಿದ ಅವರ ಗುರುಗಳನ್ನು ನಮ್ಮ ಎಂಸಿಜೆ ವಿಭಾಗಕ್ಕೆ ಬರಲು ಹೇಳಿ, ನಮ್ಮ ಉಪನ್ಯಾಸಕರು ಅವರ ಗುರುಗಳಿಗೆ ಸನ್ಮಾನ ಮಾಡುವಂತೆ ಒಂದು ಅದ್ಭುತ ವೇದಿಕೆಯನ್ನು ನಾವು ಸಿದ್ಧಗೊಳಿಸಿದ್ದೇವು.
ಅಂದು ನಾವು ನಮ್ಮ ಉಪನ್ಯಾಸಕರನ್ನು ಸಂತೋಷದಲ್ಲಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿತ್ತು. ತಮ್ಮ ಗುರುಗಳನ್ನು ವಂದಿಸಿದ ನಂತರ ಅವರಿಗೆ ವಿಭಿನ್ನವಾದ ಆಟಗಳನ್ನು ಆಯೋಜಿಸಿ, ಅವರ ಪ್ರತಿನಿತ್ಯದ ಒತ್ತಡದಲ್ಲಿ ಒಂದು ದಿನ ಅವರನ್ನು ಖುಷಿಗೊಳಿಸುವ ಪ್ರಯತ್ನ ನಮ್ಮದಾಗಿತ್ತು. ಇಂದಿಗೂ ಆ ಕ್ಷಣವನ್ನು ನೆನಪಿಕೊಳ್ಳತ್ತಿದ್ದಾರೆ, ಮತ್ತೆ ಮತ್ತೆ ಅದರಲ್ಲಿ ನಮ್ಮನ್ನು ನಾವು ತೋಡಗಿಸಿಕೊಳ್ಳಬೇಕು ಎಂಬ ಆಸೆ. ಅದರೂ ನಮ್ಮ ಗುರುಗಳಿಗೆ ವಂದಿಸುವ ಮೌಲ್ಯತೆ ನಮ್ಮಲ್ಲಿ ಇಂದಿಗೂ ಇದೆ.