Raksha Bandhan 2022: ಲವರ್ ಬಾಯ್ಗೆ ರಾಖಿ ಕಟ್ಟಿದ ನಮ್ಮ ಕ್ಲಾಸಿನ ಹುಡುಗಿಯರು!
ಶಾಲೆಗೆ ಹೋದ್ರೆ ಈ ಹುಡ್ಗೀರ್ ಎಲ್ಲಿ ರಾಖಿ ಕಟ್ಟಿ ಅಣ್ಣ ಅಂದು ಬಿಡ್ತಾರೋ ಅಂತ ಒಂದು ಕಡೆ ಭಯ , ಇದಕ್ಕೆ ಏನಾದ್ರು ಮಾಡಲೇ ಬೇಕು ಅಂತ ಎಲ್ಲಾನು ಕ್ಲಾಸ್‌ಗೆ ಬಂಕ್ ಹಾಕುವ ನಿರ್ಧಾರ ಮಾಡಿದ್ವಿ
ಹೈಸ್ಕೂಲ್ ಕಾಲಿಟ್ಟಾಗ ಹುಚ್ಚುಕೋಡಿ ಮನಸು ಹದಿನಾರರ ವಯಸ್ಸು, ಅಂದ ಹಾಗೆ ನಮ್ಮ ಶಾಲೆಯಲ್ಲಿ ತುಂಟಾಟಗಳನ್ನು ಮಾಡುವುದು ಸಹಜ . ಹೆತ್ತವರಿಗೆ ಹೆಗಣ ಮುದ್ದು ಹೇಗೋ ನಮ್ಗೆ ಕಂಡ ಕಂಡ ಹುಡ್ಗೀರೆಲ್ಲಾ ಮುದ್ದು. ಅದರಲ್ಲೂ ನಮ್ಮ ಗ್ಯಾಂಗ್ ಮುಂದೆ ಸುಂದರ ಹುಡ್ಗೀರ್ ಹೋದರೆ ಸಾಕು ಇವಳು ನಂಗೆ ಅವಳು ನಿಂಗೆ ಅಂತ ಕಿತ್ತಾಡೋದರಲ್ಲೇ ಕಾಲ ಕಳೆಯುತ್ತಿತ್ತು. ಹೀಗೆ ಹಲವು ದಿನಗಳಿಂದ ನಡೆಯುತ್ತಿದ್ದ ತುಂಟಾಟಗಳೆಲ್ಲಾ ನಿಧಾನಕ್ಕೆ ನಮ್ಮ ಕ್ಲಾಸ್ ಹುಡ್ಗಿರ‍್ಗೆಲ್ಲಾ ಗೊತ್ತಗಿತ್ತು. ಅವರು ಕೂಡ ಹೇಗಾದರು ಪಾಠ ಕಲಿಸ್ಲೇಬೇಕು ಅಂತ ಕಾಯ್ತಾ ಇದ್ದರು. ಈ ನಡುವೆ ಅದೇ ಟೈಮ್ನಲ್ಲಿ ಮುಂಗಾರು ಮಳೆಯಂತ ಚಲನಚಿತ್ರ ಲವ್ ಮಾಡಿದ್ರು ಹೀಗೂ ಮಾಡಬಹುದು ಅನ್ನೋದನ್ನ ಇನ್ನೂ ಚಿಗುರು ಮೀಸೆಯೊಡೆಯದ ಬಿಸಿ ರಕ್ತದ ಹುಡುಗರನ್ನೂ ಕೆರಳಿಸಿತ್ತು.
ಇಷ್ಟೆಲ್ಲಾ ನಡೆಯುತ್ತಿರುವಾಗ ಹುಡುಗರ ಪಾಲಿನ ಕರಾಳ ದಿನ ರಕ್ಷಾ ಬಂಧನ ಹಬ್ಬ ಬಂದಿತ್ತು. ಶಾಲೆಗೆ ಹೋದ್ರೆ ಈ ಹುಡ್ಗೀರ್ ಎಲ್ಲಿ ರಾಖಿ ಕಟ್ಟಿ ಅಣ್ಣ ಅಂದು ಬಿಡ್ತಾರೋ ಅಂತ ಒಂದು ಕಡೆ ಭಯ , ಇದಕ್ಕೆ ಏನಾದ್ರು ಮಾಡಲೇ ಬೇಕು ಅಂತ ಎಲ್ಲಾನು ಕ್ಲಾಸ್‌ಗೆ ಬಂಕ್ ಹಾಕುವ ನಿರ್ಧಾರ ಮಾಡಿದ್ವಿ, ಆದರೆ ಬಂಕ್ ಹಾಕಿ ಹೊರಗೆ ಸುತ್ತೋಕೆ ನಮ್ಮ ಮನೆಯಿಂದ ಶಾಲೆ ಅಲ್ಲೆ ಹೊದ್ದು ಬದಿ ಇತ್ತು, ಶಾಲೆಗೆ ಹೋಗಿಲ್ಲ ಅಂದ್ರೆ ಎಲ್ಲಾರು ಕೇಳೋದೊಂದೆ ಯಾಕೆ? ಶಾಲೆಗೆ ಹೋಗಿಲ್ಲ ಅಂತ. ಏನಾದ್ರೂ ಆಗ್ಲೀ ಹುಡ್ಗೀರ್ ಮೆಚುರ್ ಆಗಿದಾರೆ ಹಾಗೆಲ್ಲಾ ಮಾಡೊಲ್ಲಾ ಅಂತ ಧೈರ್ಯ ಮಾಡಿ ಶಾಲೆ ಬಂತು
ಶಾಲೆ ಅಂದ್ರೆ ಗೊತ್ತಲ 4, 4 ಒಟ್ಟು 8 ಪಿರಿಡ್ ಹೆಂಗೋ 2ಪಿರಿಯೆಡ್ ಕಳೆದವು ಮೂರನೆ ಪಿರಿಯೆಡ್ನಲ್ಲಿ ಹಿಂದಿ ಕ್ಲಾಸ್ ಪ್ರಾರಂಭ ಆಯ್ತು, ಹುಡ್ಗೀರ್ ರಾಖಿ ತಂದ ಭರದಲ್ಲಿ ಸರ್‌ಗೂ ಬಿಡದೇ ಕೈ ತುಂಬಾ ಕಟ್ಟಿದ್ದೇ ಕಟ್ಟಿದ್ದು, ನಮ್ಮ ಕ್ಲಾಸ್ನಲ್ಲಿ ನಮ್ಮೆಲ್ಲರಿಗಿಂತ ಪೋಲಿ ವಿಶ್ವಾಸ್, ನಮ್ಮ ಬ್ಯಾಚ್‌ನಲ್ಲೇ ಸುಂದರ ಹುಡುಗ. ಅವನು ಯೋಚನೆ ಮಾಡ್ತಾ ಇದ್ದದೇ ಬೇರೆ, ಹೇಗಾದರೂ ಆಗ್ಲೀ ಹುಡ್ಗಿರನ್ನ ಇಂಪ್ರೆಸ್ ಮಾಡಿ ಎಷ್ಟು ಕಷ್ಟ ಆದ್ರೂ ಒಬ್ಬರನ್ನಾದರೂ ಪಟಾಯಿಬೇಕು ಅಂತ, ಆದರೆ ಹುಡುಗಿಯರು ಒಂದು ಹೆಜ್ಜೆ ಮುಂದೆ ಹೋಗಿ ಆ ಹಿಂದಿ ಕ್ಲಾಸ್ನಲ್ಲಿ ಸರ್ ಯಾರು ಯಾರಿಗೆ ರಾಖಿ ಕಟ್ತೀರಾ ಅಂದಾಗ ಎಲ್ಲಾ ಲಲನೆಯರ ಬಾಯಲ್ಲೂ ವಿಶ್ವಾಸ್, ವಿಶ್ವಾಸ್ ಅಂತ ಆ ಕ್ಷಣಕ್ಕೆ ವಿಶ್ವಾಸ್‌ಗೆ ವಿಶ್ವಾಸಘಾತ ಆದಂತಿತ್ತು.
ಆ ಹಳಸಿದ ಸಪ್ಪೆ ಮುಖ ಹೊತ್ತುಕೊಂಡು ಡಯಾಸ್ ಬಳಿ ನಿಂತ, ಸಿಕ್ಕಿದ್ದೇ ಚಾನ್ಸು ಅಂತ ಇರೋ ಬರೋ ಹುಡ್ಗೀರ್ ಎಲ್ಲಾ ಅವನ ಮೊಳಕೈವರೆಗೂ ರಾಖಿ ತುಂಬಿಸಿ ಇಷ್ಟು ದಿನ ಲವರ್ ಬಾಯ್ ಆಗಿದ್ದ ವಿಶ್ವಾಸನನ್ನು ಅಣ್ಣ ಅಂತ ಕರೆದು, ದ್ವಾಪರಯುಗದ ಕೃಷ್ಣನಾಗ ಹೊರಟ್ಟಿದ್ದ ವಿಶ್ವಾಸನಿಗೆ ಆಧುನಿಕ ಯುಗದ ಅಣ್ಣನಾಗಿ ಮಾಡಿದ್ದು ವಿಪರ್ಯಾಸವೇ ಸರಿ.
ರಂಜಿತ್ ಗೌಡ, ಸಾಗರ
Published On - 9:55 am, Thu, 11 August 22