Village Herbal Product: ವಿದೇಶದಲ್ಲೂ ಮಾರಾಟವಾಗುತ್ತಿವೆ ಹಳ್ಳಿಯ ಹರ್ಬಲ್ ಪ್ರಾಡಕ್ಟ್, ಮಹಿಳೆಯರಿಗೆ ಮಾದರಿ ಹರ್ಷಿತ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 10, 2022 | 8:32 AM

Village Herbal Product: ಮಹಿಳೆರಿಗಾಗಿ ಹರ್ಬಲ್ ಪ್ರಾಡಕ್ಟ್ಸ್ ಶುರು ಮಾಡಿದ  ಹರ್ಷಿತಾ ಪ್ರಿಯಂವಾದ.ಓದ್ದಿದು ಬೆಂಗಳೂರಿನ ನ್ಯೂ ಹಾರಿಜೋನ್  ಇಂಜಿನಿಯರಿಂಗ್ ಕಾಲೇಜಿನಲ್ಲಿ.  MBA  ಆಗಿದ್ರು ಪಟ್ಟಣ ಜೀವನದ ಆಸೆ ಬಿಟ್ಟು ಹಳ್ಳಿಗೆ ಬಂದು ನೆಲೆಸಿ ಅಜ್ಜಿಯಿಂದ ಕಲಿತ ಹೇರ್ ಆಯಿಲ್  ಮತ್ತು ಅರಿಶಿನ ಕುಂಕುಮದಿಂದ ಇವ್ರ ಉದ್ಯಮವನ್ನು  ಪ್ರಾರಂಭ ಮಾಡಬೇಕು ಎಂದು ನಿರ್ಧರಿಸಿ,  ತಮ್ಮ  ಮನೆಯ ತೋಟದಲ್ಲೇ ನಾನಾ ಬಗೆಯ ಔಷಧಿ ಸಸ್ಯಗಳನ್ನು ಬೆಳೆಸಿದರು.

Village Herbal Product: ವಿದೇಶದಲ್ಲೂ ಮಾರಾಟವಾಗುತ್ತಿವೆ ಹಳ್ಳಿಯ ಹರ್ಬಲ್ ಪ್ರಾಡಕ್ಟ್, ಮಹಿಳೆಯರಿಗೆ ಮಾದರಿ ಹರ್ಷಿತ
Village Herbal Product
Follow us on

ಮನುಷ್ಯನಿಗೆ ಕೌಶಲ್ಯವಿದ್ದರೆ ಏನನ್ನು ಬೇಕಾದರೂ ಸಾಧಿಸಬಲ್ಲನು ಸಾಧನೆ ಮಾಡಲು ಊರು ಬಿಟ್ಟು  ಹೋಗಬೇಕು ಎನ್ನುವ ಹಾಗಿಲ್ಲ. ಹಣವೂ ಬೇಕಂತನು ಇಲ್ಲ ಸಾಧಿಸುವ ಛಲವೊಂದಿದ್ದರೆ  ಸಾಕು.  ಎನ್ನುವ ಮಾತಿದೆ ಅದಕ್ಕೆ ತಕ್ಕಂತೆ  ಮಂಗಳೂರು ಜಿಲ್ಲೆ ಕಡಬ ತಾಲೂಕಿನ ಅಲೆಕ್ಕಾಡಿ ಮಹಿಳೆಯೊಬ್ಬರು ಸ್ವಂತ ಉದ್ಯೋಗ ಸೃಷ್ಟಿಕೊಂಡಿದ್ದಾರೆ.  ಮಹಿಳೆರಿಗಾಗಿ ಹರ್ಬಲ್ ಪ್ರಾಡಕ್ಟ್ಸ್ ಶುರು ಮಾಡಿದ  ಹರ್ಷಿತಾ ಪ್ರಿಯಂವಾದ.ಓದ್ದಿದು ಬೆಂಗಳೂರಿನ ನ್ಯೂ ಹಾರಿಜೋನ್  ಇಂಜಿನಿಯರಿಂಗ್ ಕಾಲೇಜಿನಲ್ಲಿ.  MBA  ಆಗಿದ್ರು ಪಟ್ಟಣ ಜೀವನದ ಆಸೆ ಬಿಟ್ಟು ಹಳ್ಳಿಗೆ ಬಂದು ನೆಲೆಸಿ ಅಜ್ಜಿಯಿಂದ ಕಲಿತ ಹೇರ್ ಆಯಿಲ್  ಮತ್ತು ಅರಿಶಿನ ಕುಂಕುಮದಿಂದ ಇವ್ರ ಉದ್ಯಮವನ್ನು  ಪ್ರಾರಂಭ ಮಾಡಬೇಕು ಎಂದು ನಿರ್ಧರಿಸಿ,  ತಮ್ಮ  ಮನೆಯ ತೋಟದಲ್ಲೇ ನಾನಾ ಬಗೆಯ ಔಷಧಿ ಸಸ್ಯಗಳನ್ನು ಬೆಳೆಸಿ ಅವುಗಳನ್ನು ಸಂಸ್ಕರಿಸಿ ಅದರಿಂದ  ವಿವಿಧ ರೀತಿಯ ಲಿಪ್ ಬಾಂಮ್, ಆಂಟಿಜನಿಕ್ ಕ್ರೀಮ್, ಹೇರ್ ಆಯಿಲ್, ಕ್ಲೆನ್ ಜರ್ಸ್ , ಬಾಡಿ ಲೋಶನ್ ಮತ್ತು ಬೇಬಿ ಪೌಡರ್ ಅನ್ನು ತಯಾರಿಸುತ್ತಾರೆ. ಇವ್ರ ಹೇರ್ ಆಯಲ್ ಹೆಚ್ ಇ ಸಿಎಸ್ ಲ್ಯಾಬ್​ನಲ್ಲಿ  ಉತ್ತಮ ಗುಣಮಟ್ಟ ಹೊಂದಿರುವ ಅಯಲ್ ಎಂದು ಧೃಡ ಪಟ್ಟಿದೆ .

ಸುತ್ತ – ಮುತ್ತ ಹಳ್ಳಿಯ ಜನರು ಇವ್ರ ಹೇರ್ ಆಯಿಲ್ ಹಾಗೂ ಇವರು ತಯಾರಿಸುವ ಉತ್ಪನ್ನಗಳನ್ನು ತೆಗೆದುಕೊಳ್ಳಲು ಮನೆ ಹತ್ತಿರ ಬರುತ್ತಾರೆ. ಅಲೆಕ್ಕಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಇವರು ತಮ್ಮ ಉದ್ಯವನ್ನು ಪ್ರಾರಂಭ ಮಾಡಿದ್ದರಿಂದ  ಮೊದಲಿಗೆ ಇವರಿಗೆ ಅಲ್ಲಿ ವಿದ್ಯುತ್ ಸಮಸ್ಯೆ ಬಹಳಷ್ಟು ಕಾಡುತಿತ್ತು. ಇಂಟರ್ನೆಟ್ ಸೌಲಭ್ಯದ ಕೊರತೆಯೂ ಸಹ ದೊಡ್ಡ ತಲೆನೋವಾಗಿತ್ತು. ಆದರೂ ಅವುಗಳನ್ನು ಲೆಕ್ಕಿಸದೆ ಸೋಷಿಯಲ್ ಮೀಡಿಯಾವನ್ನೆ ಪ್ರಚಾರದ ಮುಖ್ಯ ಅಸ್ತ್ರವನ್ನಾಗಿಸಿಕೊಂಡ ಇವರು ರಾಜ್ಯದ ಪ್ರಮುಖ ನಗರಗಳಿಗೆ ತಮ್ಮ ಸಂಪರ್ಕವನ್ನು ವಿಸ್ತರಿಸಿಕೊಂಡು.

ಈ ಇವರ ಕೆಲಸಕ್ಕೆ ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ  ಉತ್ತಮ ಪ್ರತಿಕ್ರಿಯೆ ದೊರೆಯಿತು.  ನಂತರ   ಹೊರ ರಾಜ್ಯಗಳದ ಮುಂಬೈ , ಆಂಧ್ರ ಪ್ರದೇಶ, ಹಾಗೂ ಇನ್ನಿತರ ರಾಜ್ಯಗಳಿಗೂ ತಮ್ಮ ಉತ್ಪನ್ನಗಳ ಮಾರಾಟವನ್ನು ವಿಸ್ತರಿಸಿಕೊಂಡರು.  ಇದೀಗ ಇವ್ರ ಈ ವಸ್ತುಗಳು ವಿದೇಶದಲ್ಲೂ ಲಭ್ಯವಾಗಲೂ ಸಜ್ಜಾಗಿವೆ, ಈ ಮೂಲಕ  ಸ್ವ-ಉದ್ಯೋಗ ಮಾಡಬೇಕು ಎನ್ನುವ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ
RR vs RCB Qualifier 2: ಇಲ್ಲಿ RCB ತಂಡವೇ ಬಲಿಷ್ಠ, ಆದರೆ…
Cholesterol: ಈ ಲಕ್ಷಣಗಳಿವೆಯಾ? ಹಾಗಾದ್ರೆ ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾಗಿದೆ
Heart Disease: ಟಿವಿ ವೀಕ್ಷಣೆ ಕಡಿಮೆ ಮಾಡಿ, ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಿ
Fish Allergy: ಮೀನು ಅಲರ್ಜಿ ಎಂದರೇನು? ನಿಭಾಯಿಸುವುದು ಹೇಗೆ?

ಮೊದಲಿಗೆ ಅಜ್ಜಿಯಿಂದ ಕಲಿತಂತಹ ವಿದ್ಯೆಯನ್ನು ಮನೆಯಲ್ಲಿ ತಯಾರಿಸಿದೆ, ನಂತರ ಅದನ್ನು ಸೋಷಿಯಲ್ ಮೀಡಿಯಾ ಮೂಲಕ ಮಾರಟ ಮಾಡಿದೆ, ನಂತರ ಲಿಪ್ ಬಾಂಬ್ ಹಾಗೂ ಇನ್ನಿತರ ತರಹದ ಹರ್ಬಲ್ ಪ್ರಾಡಕ್ಟ್​ನ್ನು ಕೆಮಿಕಲ್ ಇಲ್ಲದೇ ತಯಾರಿಸಿದೆ ಇಂದು ಈ ಪ್ರಾಡಕ್ಟ್ ವಿದೇಶದಲ್ಲೂ ಕೂಡ ಬೇಡಿಕೆ ಸಿಗುತ್ತಿರುವುದು ಖುಷಿ ತಂದಿದೆ. – ಹರ್ಷಿತ ಪ್ರಿಯಂವದ

ಐಶ್ವರ್ಯ ಕೋಣನ, ವಿಜಯನಗರ