AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBMP Budget 2023 Live:ಬಿಬಿಎಂಪಿ ಬಜೆಟ್ ಲೈವ್, ರಸ್ತೆ, ಫ್ಲೈಓವರ್ ನಿರ್ಮಾಣಕ್ಕೆ ಭರಪೂರ ಕೊಡುಗೆ, ಇಲ್ಲಿದೆ ಸಂಪೂರ್ಣ ಮಾಹಿತಿ

2023-24ನೇ ಸಾಲಿನ ಬಿಬಿಎಂಪಿ ಆಯವ್ಯಯ ಇಂದು(ಮಾರ್ಚ್ 02) ಮಂಡನೆಯಾಗುತ್ತಿದೆ. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಅವರು ಮಂಡಿಸುತ್ತಿದ್ದು, ಕ್ಷಣ ಕ್ಷಣದ ಮಾಹಿತಿ ಈ ಕೆಳಗಿನಂತಿದೆ ನೊಡಿ

BBMP Budget 2023 Live:ಬಿಬಿಎಂಪಿ ಬಜೆಟ್ ಲೈವ್, ರಸ್ತೆ, ಫ್ಲೈಓವರ್ ನಿರ್ಮಾಣಕ್ಕೆ ಭರಪೂರ ಕೊಡುಗೆ, ಇಲ್ಲಿದೆ ಸಂಪೂರ್ಣ ಮಾಹಿತಿ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Mar 02, 2023 | 12:50 PM

Share

ಬೆಂಗಳೂರು: 2023-24ನೇ ಸಾಲಿನ ಬಿಬಿಎಂಪಿ ಆಯವ್ಯಯ (BBMP Budget 2023) ಇಂದು(ಮಾರ್ಚ್ 02) ಮಂಡನೆಯಾಗುತ್ತಿದೆ. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಅವರು ಬೆಂಗಳೂರಿನ ಸರ್.ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬಜೆಟ್‌ ಮಂಡನೆ ಮಾಡುತ್ತಿದ್ದು, ಬಜೆಟ್​ನ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಒಟ್ಟು 11,157.83 ಗಾತ್ರದ ಬಜೆಟ್ ಮಂಡನೆ‌ ಮಾಡಿದ್ದು, ಬೀದಿ ವ್ಯಾಪಾರಿಗಳ ವಲಯಗಳಿಗಾಗಿ 25 ಕೋಟಿ ರೂ. ಹಾಗೂ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ಮಾಣಕ್ಕಾಗಿ ಒಟ್ಟು 210 ಕೋಟಿ ರೂ ನೀಡಿದೆ. ಇದು ಆತ್ಮನಿರ್ಭರ ಆಯವ್ಯಯ ಎಂದು ಬಿಬಿಎಂಪಿ ಘೋಷಣೆ ಮಾಡಿದೆ.

ಬಜೆಟ್​ನ ಕ್ಷಣ ಕ್ಷಣದ ಮಾಹಿತಿ

ಬೀದಿ ಮರಗಳ ನೆಡುವಿಕೆಗೆ ಮತ್ತು ನಿರ್ವಹಣೆಗಾಗಿ 40 ಕೋಟಿ ರೂಪಾಯಿ ಮೀಸಲು. ಬಿ ಖಾತೆ ನಿರ್ವೇಶನಗಳನ್ನ ಕ್ರಮಬದ್ಧಗೊಳಿಸಿ ಎ ಖಾತೆ ನೀಡುವ ಯೋಜನೆ ಈ ವರ್ಷವೇ ಆರಂಭವಾಗಲಿದೆ.

  1. ಈ ಬಾರಿ 11,157.83 ಕೋಟಿ ಮೊತ್ತದ ಬಜೆಟ್ ಮಂಡಿಸಿದ BBMP
  2. ಸದಾಶಿನಗರ ಠಾಣೆ ವೃತ್ತದಲ್ಲಿ 40 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ
  3. 1,410 ಕೋಟಿ ವೆಚ್ಚದಲ್ಲಿ 150 ಕಿ.ಮೀ.​​ ರಸ್ತೆಗೆ ವೈಟ್ ಟಾಪಿಂಗ್
  4. ಸರ್​ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಫ್ಲೈಓವರ್
  5. ಬೈಯ್ಯಪ್ಪನಹಳ್ಳಿಯಲ್ಲಿರುವ ಸರ್​ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ
  6. 345 ಕೋಟಿ ವೆಚ್ಚದಲ್ಲಿ ಎಲಿವೇಟೆಡ್ ರೋಟರಿ ಫ್ಲೈಓವರ್​ ನಿರ್ಮಾಣ
  7. 75 ಜಂಕ್ಷನ್​​ಗಳ ಅಭಿವೃದ್ಧಿಗೆ 150 ಕೋಟಿ ರೂಪಾಯಿ ಮೀಸಲು
  8. ಅಗೆಯಲ್ಪಟ್ಟ ರಸ್ತೆಗಳ ಪುನರ್ ನಿರ್ಮಾಣಕ್ಕೆ 300 ಕೋಟಿ ರೂ. ನಿಗದಿ
  9. ತುಮಕೂರು ರಸ್ತೆಯಿಂದ ನಾಯಂಡಹಳ್ಳಿ ಜಂಕ್ಷನ್​​ವರೆಗೆ ಕಾರಿಡಾರ್
  10. ಸಿಗ್ನಲ್ ಮುಕ್ತ ಕಾರಿಡಾರ್​ಗಾಗಿ 70 ಕೋಟಿ ರೂಪಾಯಿ ಮೀಸಲು
  11. ಯಶವಂತಪುರ ರೈಲ್ವೆ ನಿಲ್ದಾಣ ಬಳಿ ಕೆಳ‌ಸೇತುವೆಗಾಗಿ 125 ಕೋಟಿ
  12. ಬನ್ನೇರುಘಟ್ಟ ರಸ್ತೆಯ ಅಗಲೀಕರಣಕ್ಕೆ 70 ಕೋಟಿ ರೂ. ಮೀಸಲು
  13. ವಿಲ್ಸನ್ ಗಾರ್ಡನ್ ಫ್ಲೈಓವರ್​ ಗ್ರೇಡ್ ಸೆಪರೇಟರ್​​ಗೆ 85 ಕೋಟಿ
  14. ಯಲಹಂಕ ಮೇಲ್ಸೇತುವೆ ಗ್ರೇಡ್ ಸೆಪರೇಟರ್​​ಗೆ 60 ಕೋಟಿ ರೂ.
  15. ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ವಿತರಣೆ ವೇಳೆ $2 ಲಕ್ಷ ಪುರಸ್ಕಾರ
  16. ಹೂಡಿ ಜಂಕ್ಷನ್ ಐಟಿಪಿಎಲ್​​​ ಬಿಗ್ ಬಜಾರ್ ಜಂಕ್ಷನ್ ಹಾಗೂ  ಹೋಪ್ ಫಾರಂ ಜಂಕ್ಷನ್ ಮೇಲ್ಸೇತುವೆ ನಿರ್ಮಾಣಕ್ಕೆ 124 ಕೋಟಿ
  17. ಮಿನರ್ವ ಜಂಕ್ಷನ್ ಗ್ರೇಡ್ ಸೆಪರೇಟರ್​​ಗೆ 137 ಕೋಟಿ ರೂ.
  18. ಸುರಂಜನ್ ದಾಸ್ ಜಂಕ್ಷನ್ ಮೇಲ್ಸೇತುವೆ ನಿರ್ಮಾಣಕ್ಕೆ 104 ಕೋಟಿ
  19. ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ 80 ಕೋಟಿ ರೂ. ಮೀಸಲು
  20. ಜನವಸತಿ ಪ್ರದೇಶಗಳಲ್ಲಿ 10 ಹೊಸ ಸಿಟಿ ಪ್ಲಾಜಾಗಳ ನಿರ್ಮಾಣ
  21. ಪ್ಲಾಜಾಗಳಲ್ಲಿ ಕಾರಂಜಿ, ಆಟದ ಸ್ಥಳಗಳು, ಆಹಾರ ಮಳಿಗೆ ನಿರ್ಮಾಣ
  22. ಸುರಂಜನ್ ದಾಸ್ ಜಂಕ್ಷನ್ ಮೇಲ್ಸೇತುವೆ ನಿರ್ಮಾಣಕ್ಕೆ 104 ಕೋಟಿ
  23. ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ 80 ಕೋಟಿ ರೂ. ಮೀಸಲು
  24. ಜನವಸತಿ ಪ್ರದೇಶಗಳಲ್ಲಿ 10 ಹೊಸ ಸಿಟಿ ಪ್ಲಾಜಾಗಳ ನಿರ್ಮಾಣ
  25. ಪ್ಲಾಜಾಗಳಲ್ಲಿ ಕಾರಂಜಿ, ಆಟದ ಸ್ಥಳಗಳು, ಆಹಾರ ಮಳಿಗೆ ನಿರ್ಮಾಣ