ಕೇಂದ್ರ ಬಜೆಟ್ 2022ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವೇತನದಾರರಿಗೆ (Salaried Class) ಖುಷಿ ಪಡಿಸುವ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅಂಥ ಯಾವುದೇ ಘೋಷಣೆ ಬಂದಿಲ್ಲ. ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರನ್ನು ಮೂರು ವಿಭಾಗದಲ್ಲಿ ವರ್ಗೀಕರಿಸಲಾಗಿದೆ. 1) 60 ವರ್ಷದೊಳಗಿನ ವೈಯಕ್ತಿಕ ತೆರಿಗೆದಾರರು. ಇದರಲ್ಲಿ ನಿವಾಸಿಗಳು ಮತ್ತು ಅನಿವಾಸಿಗಳು ಒಳಗೊಂಡಿರುತ್ತಾರೆ. 2) ನಿವಾಸಿ ಹಿರಿಯ ನಾಗರಿಕರು, 60 ವರ್ಷ ವಯಸ್ಸಾದವರು ಆದರೆ 80 ವರ್ಷ ವಯಸ್ಸಿನ ಒಳಗಿನವರು. 3) ನಿವಾಸಿಗಳು ಅತಿ ಹಿರಿಯ ನಾಗರಿಕರು 80 ವರ್ಷ ಮೇಲ್ಪಟ್ಟವರು. ಹೊಸ ತೆರಿಗೆ ಪದ್ಧತಿ ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ ಕಡಿಮೆ ದರದಲ್ಲಿ ತೆರಿಗೆ ಪಾವತಿಸಬಹುದು. ಆದರೆ ಕಡಿತಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಹಳೇ ತೆರಿಗೆ ಪದ್ಧತಿ ಅಡಿಯಲ್ಲಿ ಜನರು ತಮ್ಮ ಈಗಿನ ತೆರಿಗೆ ಕಾನೂನಿನ ಅಡಿಯಲ್ಲಿ ಪಾವತಿಸುವುದಕ್ಕೆ ಮುಂದುವರಿಸಬಹುದು. ಯಾವುದೇ ಅನ್ವಯಿಸುವ ವಿನಾಯಿತಿಯನ್ನು ಪಡೆಯಬಹುದು. ಹೊಸ ತೆರಿಗೆ ವ್ಯವಸ್ಥೆ ಅಡಿಯಲ್ಲಿ ಏಳು ಆದಾಯ ಸ್ಲ್ಯಾಬ್ಗಳು ಲಭ್ಯ ಇವೆ.
– ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಯೊಳಗೆ ಇರುವ ವ್ಯಕ್ತಿಗಳಿಗೆ ತೆರಿಗೆಯಿಂದ ವಿನಾಯಿತಿ ಇದೆ.
– 2.5 ಲಕ್ಷದಿಂದ ಐದು ಲಕ್ಷ ವಾರ್ಷಿಕ ಆದಾಯಕ್ಕೆ ಶೇ 5ರಷ್ಟು ತೆರಿಗೆ
– 5 ಲಕ್ಷದಿಂದ 7.5 ಲಕ್ಷ ರೂಪಾಯಿ ಗಳಿಸುವವರು ಶೇ 10ರಷ್ಟು ತೆರಿಗೆ ಕಟ್ಟಬೇಕು.
– 7.5 ಲಕ್ಷದಿಂದ 10 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವವರು ಆದಾಯದ ಶೇ 15ರಷ್ಟು ಪಾವತಿಸಬೇಕು.
– 10 ಲಕ್ಷದಿಂದ 12.5 ಲಕ್ಷದ ಮಧ್ಯೆ ಆದಾಯ ಗಳಿಸುವವರು ತಮ್ಮ ಗಳಿಕೆಯ ಶೇ 20ರಷ್ಟು ಪಾವತಿಸಬೇಕು.
– 12.5 ಲಕ್ಷದಿಂದ 15 ಲಕ್ಷ ವಾರ್ಷಿಕ ಆದಾಯಕ್ಕೆ ಶೇ 15ರಷ್ಟು ಕಟ್ಟಬೇಕು.
– 15 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರು ಗಳಿಕೆ ಮೇಲೆ ಶೇ 30ರಷ್ಟು ಪಾವತಿ ಮಾಡಬೇಕಾಗುತ್ತದೆ.
ಇದರ ಅಡಿಯಲ್ಲಿ ಸೆಕ್ಷನ್ 80ಸಿ ವಿನಾಯಿತಿ ಸಾಧ್ಯವಿಲ್ಲ. ಅಷ್ಟೇ ಅಲ್ಲ, ಗೃಹ ಸಾಲದ ವಿನಾಯಿತಿ, ಇನ್ಷೂರೆನ್ಸ್ ವಿನಾಯಿತಿ ಹಾಗೂ ಸ್ಟ್ಯಾಂಡರ್ಡ್ ಡಿಡಕ್ಷನ್ಸ್ ಒಳಗೊಳ್ಳುವುದಿಲ್ಲ.
ಹಳೆ ತೆರಿಗೆ ಪದ್ಧತಿ 2.25 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರು ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇಲ್ಲ.
– 2.5 ಲಕ್ಷದಿಂದ 5 ಲಕ್ಷದ ಮಧ್ಯೆ ಆದಾಯ ಇರುವವರು ಶೇ 5ರಷ್ಟು ತೆರಿಗೆ ಪಾವತಿಸಬೇಕು.
– ವೈಯಕ್ತಿಕ ಗಳಿಕೆ 5 ಲಕ್ಷದಿಂದ 10 ಲಕ್ಷದೊಳಗೆ ಇದ್ದಲ್ಲಿ ಆದಾಯದ ಶೇ 20ರಷ್ಟು ಕಟ್ಟಬೇಕು.
– 10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರು ಶೇ 30ರಷ್ಟು ತೆರಿಗೆ ಪಾವತಿ ಮಾಡಬೇಕು.
ಅಂದಹಾಗೆ, ಹಳೇ ತೆರಿಗೆ ಪದ್ಧತಿಯು ಇನ್ನೂ ಒಂದು ವರ್ಷ ಮುಂದುವರಿದಿದೆ.
ಇದನ್ನೂ ಓದಿ: Union Budget 2022: ಕೇಂದ್ರ ಬಜೆಟ್ 2022ರಿಂದ ಜನ ಸಾಮಾನ್ಯರ ನಿರೀಕ್ಷೆಗಳೇನು?