Union Budget 2022: ಕೇಂದ್ರ ಬಜೆಟ್ 2022ರಿಂದ ಜನ ಸಾಮಾನ್ಯರ ನಿರೀಕ್ಷೆಗಳೇನು?

Union Budget 2022: ಕೇಂದ್ರ ಬಜೆಟ್ 2022ರಿಂದ ಜನ ಸಾಮಾನ್ಯರ ನಿರೀಕ್ಷೆಗಳೇನು?
ಸಾಂದರ್ಭಿಕ ಚಿತ್ರ

ಕೇಂದ್ರ ಬಜೆಟ್ 2022ರಿಂದ ಜನಸಾಮಾನ್ಯರು ನಿರೀಕ್ಷೆ ಮಾಡುತ್ತಿರುವುದೇನು ಎಂಬ ಬಗ್ಗೆ ವಿವರಣಾತ್ಮಕವಾದ ಲೇಖನ ಇದೆ. ಅದರಲ್ಲೂ ಕಡಿತ, ವಿನಾಯಿತಿಗಳ ಕುರಿತು ಎಂಥ ಅಪೇಕ್ಷೆ ಇದೆ ಎಂಬುದರ ಮಾಹಿತಿ ಇದು.

TV9kannada Web Team

| Edited By: Srinivas Mata

Jan 31, 2022 | 2:54 PM

ಕೇಂದ್ರ ಬಜೆಟ್ 2022ರಿಂದ ಆದಾಯ ತೆರಿಗೆಗೆ ಸಂಬಂಧಿಸಿದಂತೆ ನಿರಾಳ ದೊರೆಯುವ ನಿರೀಕ್ಷೆಯಲ್ಲಿ ಇದ್ದಾರೆ. ಇದರಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ (Standard Deduction) ಮಿತಿ ಏರಿಕೆ ಮಾಡುವುದು ಜನಸಾಮಾನ್ಯರಿಗೆ ನಿರ್ಮಲಾ ಸೀತಾರಾಮನ್ ಅವರಿಂದ ನಿರೀಕ್ಷೆ ಮಾಡುತ್ತಿರುವ ಅತಿ ದೊಡ್ಡ ಭಾಗ ಆಗಿದೆ. ವಿಶ್ಲೇಷಕರು ಹೇಳುವಂತೆ, ಪ್ರಾಥಮಿಕ ವಿನಾಯಿತಿ ಮಿತಿಯನ್ನು 2017-18ರಲ್ಲಿ ಕೊನೆಯದಾಗಿ ಪರಿಷ್ಕೃತಗೊಳಿಸಲಾಗಿತ್ತು. ಆದ್ದರಿಂದ ಪ್ರಾಥಮಿಕ ವಿನಾಯಿತಿ ಹೆಚ್ಚಿಸಬಹುದು ಎಂಬ ನಿರೀಕ್ಷೆ ಬಹಳ ಎತ್ತರದಲ್ಲಿದೆ. ಈ ಬಜೆಟ್​ನಲ್ಲಿ ತೆರಿಗೆ ವಿನಾಯಿತಿ ಹೆಚ್ಚಿಸುವುದರಿಂದ ಮಧ್ಯಮ ವರ್ಗದ ತೆರಿಗೆದಾರರಿಗೆ ತೆರಿಗೆ ಹೊರೆಯನ್ನು ಕಡಿಮೆ ಮಾಡುವುದಕ್ಕೆ ಪ್ರಯತ್ನಿಸಬಹುದು.

ಕ್ರಿಪ್ಟೋಕರೆನ್ಸಿ ತೆರಿಗೆ ವಿಚಾರದಲ್ಲಿ ಸ್ಪಷ್ಟತೆ ಕ್ರಿಪ್ಟೋಕರೆನ್ಸಿ ಮಸೂದೆ ಬಗ್ಗೆ ಸ್ಪಷ್ಟತೆಗಾಗಿ ಕೇಂದ್ರ ಸರ್ಕಾರ ಕಾಯುತ್ತಿದೆ. “ಕ್ರಿಪ್ಟೋ ತೆರಿಗೆ ವಿಚಾರವಾಗಿ ನಾನಾ ಸಂಗತಿಗಳಿದ್ದು, ಅದರ ವರ್ಗೀಕರಣ, ಅನ್ವಯಿತ ತೆರಿಗೆ ದರಗಳು, ಟಿಡಿಎಸ್/ಟಿಸಿಎಸ್ ಮತ್ತು ಕ್ರಿಪ್ಟೋಕರೆನ್ಸಿಗಳ ಖರೀದಿ ಹಾಗೂ ಮಾರಾಟ ಮುಂತಾದವುಗಳ ಮೇಲೆ ಜಿಎಸ್​ಟಿ ಪರಿಣಾಮಗಳೇನು ಎಂಬುದು ಬಜೆಟ್​ ಅಧಿವೇಶನದಲ್ಲಿ ಸ್ಪಷ್ಟಗೊಳ್ಳಲಿದೆ,” ಎಂದು ವಿಶ್ಲೇಷಕರು ಹೇಳುತ್ತಾರೆ.

ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ ಹಣಕಾಸು ಸಚಿವಾಲಯವು ಈ ಬಾರಿ ಬಜೆಟ್​ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕೃತಗೊಳಿಸಬಹುದು. ಹಲವು ವಿಶ್ಲೇಷಕರ ಅಭಿಪ್ರಾಯದ ಪ್ರಕಾರ, ಎರಡೆರಡು ತೆರಿಗೆ ಪದ್ಧತಿಯು ಜನ ಸಾಮಾನ್ಯರಲ್ಲಿ ಈಗಲೂ ಗೊಂದಲ ಇದೆ. “ಸರ್ಕಾರವು ಹೆಚ್ಚಿನ ತೆರಿಗೆ ಸ್ಲ್ಯಾಬ್ 15 ಲಕ್ಷದಿಂದ 20 ಲಕ್ಷ ರೂಪಾಯಿಗೆ ಹೆಚ್ಚಿಸುವ ಬಗ್ಗೆ ಆಲೋಚಿಸಬಹುದು ಅಥವಾ ಕೆಲವು ಡಿಡಕ್ಷನ್​ಗಳು ಹೊಸ ಪದ್ಧತಿಯನ್ನು ಉತ್ತಮಗೊಳಿಸಬಹುದು. 2021ರ ಬಜೆಟ್​ನಲ್ಲಿ ವೇತನದಾರರಿಗೆ ಯಾವುದೇ ಪ್ರಮುಖ ರಿಲೀಫ್ ಸಿಕ್ಕಿರಲಿಲ್ಲ,” ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಸ್ಟ್ಯಾಂಡರ್ಡ್ ಡಿಡಕ್ಷನ್ ಮತ್ತು ವರ್ಕ್ ಫ್ರಮ್ ಹೋಮ್ ಡಿಡಕ್ಷನ್ ಕೇಂದ್ರ ಬಜೆಟ್ 2022ರಲ್ಲಿ ವೇತನದಾರರಿಗೆ ತೆರಿಗೆಮುಕ್ತ ವರ್ಕ್ ಫ್ರಮ್ ಹೋಮ್ ಭತ್ಯೆ ಪರಿಚಯಿಸಬಹುದು. ಅಂಥ ಖರ್ಚಿಗೆ ಡಿಡಕ್ಷನ್ಸ್ ಅವಕಾಶ ಮಾಡಿಕೊಡುವುದರಿಂದ ಟೇಕ್ ಹೋಮ್ ಸ್ಯಾಲರಿ ಹೆಚ್ಚಾಗುತ್ತದೆ. ಅಂತಿಮವಾಗಿ ದೇಶದಲ್ಲಿ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಸೃಷ್ಟಿಸುತ್ತದೆ. “ಈ ಹಣಕಾಸು ವರ್ಷದಲ್ಲಿ ಹೆಚ್ಚಿನ ನೇರ ತೆರಿಗೆ ಸಂಗ್ರಹ ಆಗಿರುವುದರಿಂದ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಹೆಚ್ಚಿಸಬಹುದು. ಉದಾಹರಣೆಗೆ ವೇತನದ ಮೇಲೆ ಸಿಗುವ ಸ್ಟ್ಯಾಂಡರ್ಡ್​ ಡಿಡಕ್ಷನ್. ಸದ್ಯಕ್ಕೆ 50 ಸಾವಿರ ರೂಪಾಯಿ ಇದೆ. ಪ್ರತಿ ವರ್ಷ ಹಣದುಬ್ಬರಕ್ಕೆ ಹೊಂದಿಸಲಾಗುತ್ತದೆ,” ಎಂದು ತಜ್ಞರು ಹೇಳುತ್ತಾರೆ.

80ಸಿ ಡಿಡಕ್ಷನ್ ಮಿತಿ ಏರಿಕೆ ತೆರಿಗೆ ತಜ್ಞರು ಹೇಳುವಂತೆ, ವಿವಿಧ ತೆರಿಗೆ ಉಳಿತಾಯ ಹೂಡಿಕೆಗಳು/ವೆಚ್ಚಗಳು ರೂ 1.5 ಲಕ್ಷ ಮೊತ್ತವು ಕಳೆದ 5 ವರ್ಷದಿಂದ ಹಾಗೇ ಉಳಿದಿದೆ. ಆರ್ಥಿಕ ಸನ್ನಿವೇಶವನ್ನು ಗಮನದಲ್ಲಿ ಇಟ್ಟುಕೊಂಡು ಹೇಳುವುದಾದರೆ, ಬೇಡಿಕೆಗೆ ಉತ್ತೇಜನ ನೀಡುವುದು ಸರ್ಕಾರದ ಈಗಿನ ಆದ್ಯತೆಗಳಲ್ಲಿ ಒಂದಾಗಿದೆ. “ಸೆಕ್ಷನ್ 80ಸಿ ಮತ್ತು 80ಡಿ ಮಿತಿಯನ್ನು ಈ ವರ್ಷ ಖಂಡಿತಾ ಹೆಚ್ಚಳ ಮಾಡಬಹುದು. ಬಹಳ ಸಮಯದಿಂದ ಇದು ಬದಲಾಗಿಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹವು ಜಾಸ್ತಿ ಆಗಿರುವುದರಿಂದ ಈ ಮಿತಿಯನ್ನು ಹೆಚ್ಚಳ ಮಾಡಬಹುದು. ಭಾರತದಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಉತ್ತೇಜಿಸುವುದಕ್ಕೆ ಪ್ರತ್ಯೇಕ ಮಿತಿಯನ್ನು ವ್ಯಾಖ್ಯಾನಿಸಬಹುದು.ಅಥವಾ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ಇಎಲ್​ಎಸ್​ಎಸ್​) ಅಡಿಯಲ್ಲಿ ಹೆಚ್ಚಿನ ಕಡಿತ ನೀಡಬಹುದು. ಇನ್ನೂ ಮುಂದುವರಿದು ಸೆಕ್ಷನ್ 80ಡಿ ಅಥವಾ 80ಡಿಡಿಬಿ ಅಡಿಯಲ್ಲಿ ಕೊವಿಡ್​19 ರೋಗಿಗಳು ಮತ್ತು ಅವರ ಕುಟುಂಬದವರಿಗೆ ತೆರಿಗೆ ವಿನಾಯಿತಿ ನೀಡಿ, ಕೊವಿಡ್​ಗೆ ಸಂಬಂಧಿಸಿದ ವೆಚ್ಚಕ್ಕೆ ಈ ಮೇಲ್ಕಂಡ ಸೆಕ್ಷನ್​ನ ವಿನಾಯಿತಿಗೆ ಸೇರಿಸಬಹುದು,” ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಐಟಿಆರ್​ ಫಾರ್ಮ್​ಗಳು ಇನ್ನಷ್ಟು ಸರಳೀಕೃತಗೊಳ್ಳಬೇಕು ವೈಯಕ್ತಿಕ ತೆರಿಗೆ ಪಾವತಿದಾರರು ಸದ್ಯಕ್ಕೆ ಬಹಳ ಮಾಹಿತಿ ನೀಡಬೇಕು, ಖಾತ್ರಿ ಅಗತ್ಯಗಳನ್ನು ಪೂರೈಸಬೇಕು. ಅದಲ್ಲೂ ವೇತನದ ಹೊರತಾಗಿ ಆದಾಯವಾದ ಬಡ್ಡಿ ಮುಂತಾದವುಗಳು ಇರುವವರಿಗೆ ಶ್ರಮದಾಯಕ ಆಗಿದೆ. ಇಂಥ ಖಾತ್ರಿ ದೊಡ್ಡ ಸಂಖ್ಯೆಯ ತೆರಿಗೆದಾರರಿಗೆ ಅನ್ವಯ ಆಗುವುದಿಲ್ಲ. ಬಹಳ ಸಲ ಎಲ್ಲ ಮಾಹಿತಿಗಳನ್ನು ಸರಿಯಾಗಿ ಮಾಡಿದ ನಂತರವೂ ಹಾಗೂ ವ್ಯಾಲಿಡೇಷನ್ ಮೂಲಕ ಮುಂದುವರಿದ ಮೇಲೂ ತಾಂತ್ರಿಕ ದೋಷಗಳು ಸಲ್ಲಿಕೆ ಅಥವಾ ಐಟಿಆರ್​ಗಳ ದೃಢೀಕರಣದ ವೇಳೆ ಕಾಣಿಸಿಕೊಳ್ಳುತ್ತಿದೆ. ತೆರಿಗೆ ವಿಶ್ಲೇಷಕರು ಹೇಳುವಂತೆ, ಆನ್​ಲೈನ್​ ಫಾರ್ಮ್​ಗಳನ್ನು ಸರಳೀಕೃತ ಮಾಡಲು ಬಜೆಟ್ ಪ್ರಯತ್ನಿಸಲಿದೆ ಹಾಗೂ ಖಾತ್ರಿಗಳು ಹಾಗೂ ಮಾಹಿತಿಗಳ ಹಂಚಿಕೊಳ್ಳುವುದನ್ನು ವೈಯಕ್ತಿಕ ತೆರಿಗೆದಾರರಿಗೆ ಐಚ್ಛಿಕವಾಗಿ ಮಾಡಲಿದೆ.

ಇದನ್ನೂ ಓದಿ: Union Budget 2022: ಆದಾಯ ತೆರಿಗೆ ಸ್ಲ್ಯಾಬ್ ಲೆಕ್ಕಾಚಾರ ಅರ್ಥ ಮಾಡಿಕೊಳ್ಳುವುದು ಹೇಗೆ? ನೀವೆಷ್ಟು ತೆರಿಗೆ ಪಾವತಿಸಬೇಕು?

Follow us on

Related Stories

Most Read Stories

Click on your DTH Provider to Add TV9 Kannada