Income Tax: ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 80ಸಿ ಮಿತಿ ಏನಾದರೂ ಏರಿಕೆ ಆಗಬಹುದಾ?

ವೇತನದಾರರಿಗೆ ಸೆಕ್ಷನ್ 80ಸಿ ಅಡಿಯಲ್ಲಿ ಸಿಗುವ ಕಡಿತವು ಮತ್ತಷ್ಟು ಹೆಚ್ಚು ಮಾಡಬಹುದು ಎಂಬ ನಿರೀಕ್ಷೆ ಇದೆ. ಬಜೆಟ್ 2022ರಿಂದ ವೇತನದಾರರು ಏನನ್ನು ನಿರೀಕ್ಷೆ ಮಾಡಬಹುದು ಎಂಬ ವಿವರ ಇಲ್ಲಿದೆ.

Income Tax: ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 80ಸಿ ಮಿತಿ ಏನಾದರೂ ಏರಿಕೆ ಆಗಬಹುದಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 26, 2022 | 7:41 PM

ಉತ್ತರಪ್ರದೇಶದಲ್ಲಿನ ಆಗ್ರಾದ ನಿವಾಸಿ ಆಗಿರುವ ರವಿ ಪ್ರಕಾಶ ಅವರು ಕೊರೊನಾದಿಂದ ಸುಧಾರಿಸಿಕೊಂಡರು. ಆದರೆ ಈ ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಹಿನ್ನಡೆಯಿಂದ ಹೊರಗೆ ಬರುವುದಕ್ಕೆ ದಾರಿ ಸಿಗಲಿಲ್ಲ. ಇನ್ನು ಕೆಲಸ ಮಾಡುವ ಕಂಪೆನಿಯಿಂದ ಸಂಬಳ ಏರಿಕೆ ಮಾಡಿ 2 ವರ್ಷ ಆಯಿತು. ಇಂಥ ಕೆಟ್ಟ ಪರಿಸ್ಥಿತಿಯಲ್ಲೂ ಅವರು ಕೆಲಸ ಕಳೆದುಕೊಂಡಿರಲಿಲ್ಲ. ರವಿ ಅವರಂಥ ಮಧ್ಯಮವರ್ಗಕ್ಕೆ ಸೇರಿದ ಲಕ್ಷಾಂತರ ಜನ ತಮ್ಮ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕೆ ಬಹಳ ಕಷ್ಟ ಪಡುತ್ತಿದ್ದಾರೆ. ಮುಂಬರುವ ಬಜೆಟ್‌ನಲ್ಲಿ (Union Budget 2022) ಅವರು ಮಾಡುವ ಉಳಿತಾಯದ ಮೇಲೆ ತೆರಿಗೆ ಸೂಕ್ತವಾದ ವಿನಾಯಿತಿ ಬೇಕು ಎಂಬುದು ಒಂದೇ ಅವರ ಬಯಕೆ. ಸರ್ಕಾರವು ಆದಾಯ ತೆರಿಗೆ ಕಾನೂನಿನ ಸೆಕ್ಷನ್‌ 80ಸಿ ಅಡಿಯಲ್ಲಿ ಆದಾಯದ ಮಿತಿಯನ್ನು ಹೆಚ್ಚು ಮಾಡುವುದರ ಮೂಲಕ ಅವರ ನೆರವಿಗೆ ಬರಬಹುದು. ಸೆಕ್ಷನ್‌ 80C ಅಡಿಯಲ್ಲಿ ಸರ್ಕಾರ ಅದಾಯ ಮಿತಿಯನ್ನು 1.50 ಲಕ್ಷ ರೂಪಾಯಿಗಳಿಗೆ ಹೆಚ್ಚು ಮಾಡಿ ಅದಾಗಲೇ 8 ವರ್ಷಗಳೇ ಕಳೆದು ಹೋದವು.

ಸೆಕ್ಷನ್‌ 80C ಅಡಿಯಲ್ಲಿ ಭವಿಷ್ಯನಿಧಿಯ (ಪ್ರಾವಿಡೆಂಟ್ ಫಂಡ್- provident fund) ಕೊಡುಗೆ ಮೂಲಕ ಮಾತ್ರವೇ ಯಾರಾದರೂ ಗರಿಷ್ಠ ಮೊತ್ತದ ತೆರಿಗೆ ಕಡಿತದ ಲಾಭ ಪಡೆಯಬಹುದು. ತೆರಿಗೆ ಕಡಿತದ ಲಾಭ ಪಡೆಯಬಹುದಾದ ಇತರ ಹೂಡಿಕೆಗಳಾದ ಮಕ್ಕಳ ಶಾಲಾ ಶುಲ್ಕಗಳು, ಗೃಹ ಸಾಲಗಳು, ಜೀವವಿಮೆಗಳು, ಸಾರ್ವಜನಿಕ ಭವಿಷ್ಯನಿಧಿಗಳಲ್ಲಿ ಮಾಡುವ ಹೂಡಿಕೆಗಳಿಂದ ಯಾವುದೇ ಪ್ರಯೋಜನ ಇಲ್ಲ. ಮಧ್ಯಮವರ್ಗದ ಜನರಿಗೆ ಇದು ನಿರಾಸೆಯನ್ನು ತಂದಿದೆ.

ಸದ್ಯ ಚಾಲ್ತಿಯಲ್ಲಿರುವ ನೀತಿ-ನಿಯಮಗಳೇನು? ಆದಾಯ ತೆರಿಗೆ ಕಾನೂನಿನ ಸೆಕ್ಷನ್‌ 80C ನೀವು ಮಾಡಿರುವ ಹೂಡಿಕೆಗಳು, ಇಬ್ಬರು ಮಕ್ಕಳ ಬೋಧನಾ ಶುಲ್ಕ, ಭವಿಷ್ಯನಿಧಿಗೆ ನೀಡಿರುವ ನಿಮ್ಮ ಭಾಗದ ಕಾಣಿಕೆ, ಪಾವತಿ ಮಾಡಿರುವ ಜೀವವಿಮಾ ಕಂತುಗಳು, ನೀವು ಪಡೆದಿರುವ ಗೃಹಸಾಲ ಸೌಲಭ್ಯಕ್ಕಾಗಿ ಪಾವತಿಸಿರುವ ಇಎಂಐಗಳನ್ನು ಪರಿಗಣಿಸಿ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ತೆರಿಗೆ ಕಡಿತದ ಲಾಭ ಪಡೆಯುವ ಸೌಲಭ್ಯ ನೀಡುತ್ತದೆ. ಆದರೆ ಈ ಎಲ್ಲ ಹೂಡಿಕೆಗಳು ವೆಚ್ಚಗಳನ್ನು ಕೂಡಿದಾಗ ಅದು ಸುಲಭವಾಗಿ 1.5 ಲಕ್ಷ ರೂಪಾಯಿಗಳನ್ನು ದಾಟಿಬಿಡುತ್ತದೆ. ಇದರಿಂದಾಗಿ, ರವಿ ಪ್ರಕಾಶ್‌ ಅವರಂಥವರು ಸೆಕ್ಷನ್‌ 80C ಅನ್ವಯ ನಿಗದಿಪಡಿಸಲಾಗಿರುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಲು ಬಯಸುವುದಿಲ್ಲ ಹಾಗೂ ಇದು ಜನಸಾಮಾನ್ಯರ ಹೂಡಿಕೆ ಮಾಡುವ ಆಸಕ್ತಿಯನ್ನು ಕುಂದಿಸಿಬಿಡುತ್ತದೆ.

ಕೊವಿಡ್‌ನ ಎರಡನೆಯ ಅಲೆಯ ಸಮಯದಲ್ಲಿ ರವಿ ಪ್ರಕಾಶ್‌ ಅವರಿಗೆ ಕೊರೊನಾ ಇರುವುದು ಖಚಿತವಾದಾಗ ದೊಡ್ಡ ಮೊತ್ತದ ಹಣ ವೆಚ್ಚ ಮಾಡಬೇಕಾಯಿತು. ಇದರೊಂದಿಗೆ, ಅವರ ಅನಾರೋಗ್ಯಪೀಡಿತ ತಂದೆಯವರ ವೈದ್ಯಕೀಯ ವೆಚ್ಚವೂ ಸೇರಿ ಪರಿಸ್ಥಿತಿ ಇನ್ನಷ್ಟು ಕೆಟ್ಟಿತು. ಸೆಕ್ಷನ್‌ 80D ಅಡಿಯಲ್ಲಿ ನಿಮ್ಮ ಹಾಗೂ ಕುಟುಂಬದ ಸದಸ್ಯರ ಆರೋಗ್ಯವಿಮೆಗಳ ಪ್ರೀಮಿಯಮ್‌ಗಳನ್ನು ಪಾವತಿಸಿದಾಗ ಅದರ ಮೇಲೆ 25 ಸಾವಿರ ರೂಪಾಯಿಗಳ ತೆರಿಗೆ ಕಡಿತವನ್ನು ಪಡೆಯಬಹುದು. ನಿಮ್ಮ ತಂದೆ-ತಾಯಿ ಒಂದೊಮ್ಮೆ ಹಿರಿಯ ನಾಗರಿಕರಾದರೆ ಅವರ ಆರೋಗ್ಯ ವಿಮೆಗಾಗಿ ಪಾವತಿಸುವ ಪ್ರೀಮಿಯಮ್‌ಗಳ ಮೇಲೆ 50 ಸಾವಿರ ರೂಪಾಯಿಗಳವರೆಗೆ ತೆರಿಗೆ ಕಡಿತವನ್ನು ಪಡೆಯಬಹುದು.

ಆದರೆ, ಒಳರೋಗಿಗಳಾಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದರೆ ಮಾತ್ರ ಈ ಸೌಲಭ್ಯವನ್ನು ಪಡೆಯಬಹುದು ಅಂತ ರವಿ ಹೇಳುತ್ತಾರೆ. ಆದರೆ ಔ‍ಷಧಗಳಿಗೆ ಮಾಡಿದ ವೆಚ್ಚ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆಯಬೇಕಾಗಿ ಬಂದಲ್ಲಿ ಅಂತಹ ವೆಚ್ಚಗಳ ಬಗ್ಗೆ ಏನು ಮಾಡಬೇಕು? ಕೊರೊನಾದಿಂದ ಉಂಟಾದ ಆರ್ಥಿಕ ಮುಗ್ಗಟ್ಟಿನಿಂದ ಹೇಗೋ ಮಾಡಿ ಹೊರಬಂದ ನಂತರ, ಈಗ ರವಿ ಅವರ ಗಮನವೆಲ್ಲಾ ತಮ್ಮ ಕುಟುಂಬದ ಆರೋಗ್ಯ ಹಾಗೂ ಆರ್ಥಿಕ ದೃಢತೆಯನ್ನು ಹೆಚ್ಚಿಸುವುದರ ಮೇಲಿದೆ. ಹಾಗಾಗಿ, ಅವರು ಈಗ ಒಂದು ಕೋಟಿ ರೂಪಾಯಿಗಳ ಸಮ್ ಅಷ್ಯುರೆನ್ಸ್ ಇರುವ ಒಂದು ಟರ್ಮ್‌ ಇನ್ಷೂರೆನ್ಸ್‌ ಪಾಲಿಸಿಯನ್ನು ಕೊಳ್ಳಬೇಕು ಎಂದಿದ್ದಾರೆ. ಆದರೆ ಕಳೆದ ಒಂದು ವರ್ಷದಲ್ಲಿ ಟರ್ಮ್‌ ಇನ್ಷೂರೆನ್ಸ್‌ ಪ್ಲಾನ್‌ಗಳ ಪ್ರೀಮಿಯಮ್‌ಗಳನ್ನು ಶೇ 30ರಷ್ಟು ಹೆಚ್ಚಿಸಲಾಗಿದೆ. ಅಲ್ಲದೇ, ಕ್ಲೇಮ್‌ ಮೊತ್ತವನ್ನು ಬಿಡುಗಡೆ ಮಾಡುವ ಮುನ್ನ ಕಂಪೆನಿಗಳು ಹೆಚ್ಚಿನ ಮಟ್ಟದ ಪರಿಶೀಲನೆಯನ್ನೂ ಮಾಡುತ್ತಿವೆ. ಕಳೆದ ಒಂದು ವರ್ಷದಲ್ಲಿ ಆರೋಗ್ಯ ವಿಮೆ ಪ್ರೀಮಿಯಮ್‌ ಮೊತ್ತವೂ ಸಹ ಶೇ 40ರಷ್ಷು ಹೆಚ್ಚಾಗಿದೆ.

ನಮ್ಮ ಕನಸಿಷ್ಟೇ: ಕೊರೊನಾ ಜನರಿಗೆ ಉಳಿತಾಯದ ಮಹತ್ವ ಏನು ಎಂಬುದನ್ನು ಮನದಟ್ಟು ಮಾಡಿಸಿದೆ ಎಂಬುದು ರವಿ ಪ್ರಕಾಶ್‌ ಅವರ ಅಭಿಪ್ರಾಯ. ತಮ್ಮದೇ ಉದಾಹರಣೆ ಕೊಡುತ್ತಾ, ಈ ಹಿಂದೆ ಮಾಡಿದ ಉಳಿತಾಯವು ಕೊವಿಡ್‌ನಂಥ ಕಷ್ಟದ ಸಮಯದಲ್ಲಿ ಸಹಾಯ ಮಾಡಿರುವುದು ನೆಮ್ಮದಿ ತಂದಿದೆ ಎಂದು ಅವರು ಹೇಳ್ತಾರೆ. ಮುಂಬರುವ ಬಜೆಟ್‌ನಲ್ಲಿ ಜನರು ಹೆಚ್ಚು-ಹೆಚ್ಚು ಉಳಿತಾಯ ಮಾಡಲು ಪ್ರೋತ್ಸಾಹ ನೀಡುವಂತಹ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಅವರು ಹೇಳುತ್ತಾರೆ. ಇದು ಆಗಬೇಕು ಅಂದರೆ ಸರ್ಕಾರವು ಸೆಕ್ಷನ್‌ 80C ಅಡಿಯಲ್ಲಿ ತೆರಿಗೆ ಕಡಿತದ ಮಿತಿಯನ್ನು 3 ಲಕ್ಷ ರೂಪಾಯಿಗಳಿಗೆ ಏರಿಸಬೇಕು. ರವಿ ಅವರ ವಾದ ಕೂಡ ಸರಿಯಾದದ್ದೇ ಆಗಿದೆ. ಸರ್ಕಾರ ಕಳೆದ 8 ವರ್ಷಗಳಲ್ಲಿ ಈ ಮಿತಿಯನ್ನು ಹೆಚ್ಚಿಸಿಲ್ಲ. 2014ರಲ್ಲಿ ಅಂದಿನ ಹಣಕಾಸು ಸಚಿವ ಅರುಣ್‌ ಜೇಟ್ಲಿಯವರು ಆದಾಯ ತೆರಿಗೆ ಕಡಿತದ ಮಿತಿಯನ್ನು ಸೆಕ್ಷನ್‌ 80C ಅಡಿಯಲ್ಲಿ 1 ಲಕ್ಷ ರೂಪಾಯಿಗಳಿಂದ 1.5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದ್ದರು. ಆದರೆ ಕಳೆದ 8 ವರ್ಷಗಳಲ್ಲಿ ಇದನ್ನು ಹೆಚ್ಚಿಸಲಾಗಿಲ್ಲ. ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರವು ಈ ವರ್ಷದ ಬಜೆಟ್‌ನಲ್ಲಿ ಮಿತಿಯನ್ನು ಹೆಚ್ಚಿಸುವುದು ಅತ್ಯವಶ್ಯಕವಾಗಿದೆ.

ಸರ್ಕಾರವು ಸೆಕ್ಷನ್‌ 80D ಅಡಿಯಲ್ಲಿ ನೌಕರರ ತೆರಿಗೆ ಕಡಿತದ ಮಿತಿಯನ್ನು 1 ಲಕ್ಷ ರೂಪಾಯಿಗಳಿಗೆ ಏರಿಸಬೇಕೆಂದೂ ರವಿ ಬಯಸುತ್ತಾರೆ. ಇದೇ ನೀತಿಯು ಪೋಷಕರಿಗೂ ಅನ್ವಯ ಆಗಬೇಕಿದೆ. ಏರುತ್ತಿರುವ ಹಣದುಬ್ಬರದ ಪರಿಸ್ಥಿತಿಯಲ್ಲಿ ಇದೇನೂ ಬಹಳ ದೊಡ್ಡ ಬೇಡಿಕೆಯಲ್ಲ. ಕೊವಿಡ್‌ನ ಎರಡನೆಯ ಅಲೆಯ ಸಮಯದಲ್ಲಿ ಜನರಿಗೆ ಚಿಕಿತ್ಸೆ ಪಡೆಯಲು 8ರಿಂದ 10 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಬೇಕಾಯಿತು. ಸರ್ಕಾರವು ತನ್ನ 2010ರ ಬಜೆಟ್‌ನಲ್ಲಿ ಇನ್‌ಫ್ರಾ ಬಾಂಡ್‌ಗಳ ಮೇಲೆ ಮಾಡಲಾದ ಹೂಡಿಕೆಗಳ ಮೇಲೆ ಗರಿಷ್ಠ 20 ಸಾವಿರ ರೂಪಾಯಿಗಳವರೆಗಿನ ತೆರಿಗೆ ಕಡಿತವನ್ನು ನೀಡಿತ್ತು. ಆದರೆ ಇದನ್ನು 2011-12ರ ಆರ್ಥಿಕ ವರ್ಷಕ್ಕೆ ಮಾತ್ರ ಅನ್ವಯ ಆಗುವಂತೆ ಜಾರಿಗೊಳಿಸಲಾಗಿತ್ತು. ಮುಂಬರುವ ಬಜೆಟ್‌ನಲ್ಲಿ ಸರ್ಕಾರವು ಮತ್ತೊಮ್ಮೆ ಇನ್‌ಫ್ರಾ ಬಾಂಡ್‌ ಅನ್ನು ಪರಿಚಯಿಸಬೇಕು ಎಂದು ರವಿ ಬಯಸುತ್ತಾರೆ.

ಸರ್ಕಾರವು ಇನ್‌ಫ್ರಾ ಬಾಂಡ್‌ಗಳ ಮೇಲಿನ ಹೂಡಿಕೆ ಮಿತಿಯನ್ನು ಏನಾದರೂ 50 ಸಾವಿರ ರೂಪಾಯಿಗಳಿಗೆ ಹೆಚ್ಚಿಸಿದರೆ ಅದು ದೇಶದಲ್ಲಿ ಹೂಡಿಕೆ ಅಭ್ಯಾಸವನ್ನು ಹೆಚ್ಚಿಸಲು ಪ್ರೇರಣೆ ನೀಡಲಿದೆ. ಇದರೊಂದಿಗೆ, ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹಾಗೂ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಸರ್ಕಾರಕ್ಕೆ ಸಹಾಯಕವಾಗಲಿದೆ.

ಇದನ್ನೂ ಓದಿ: Union Budget 2022: ಕೇಂದ್ರ ಬಜೆಟ್ 2022ರಿಂದ ವ್ಯಾಪಾರ ವರ್ಗದ ನಿರೀಕ್ಷೆಗಳೇನು?

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ