Union Budget 2022: ಕೇಂದ್ರ ಬಜೆಟ್​ 2022ರಿಂದ ಆದಾಯ ತೆರಿಗೆಯ ಟಾಪ್ 5 ನಿರೀಕ್ಷೆಗಳು

ಕೇಂದ್ರ ಬಜೆಟ್​ 2022ರಿಂದ ಜನ ಸಾಮಾನ್ಯರು ನಿರೀಕ್ಷೆ ಮಾಡುತ್ತಿರುವ ಟಾಪ್ 5 ಆದಾಯ ತೆರಿಗೆ ನಿರೀಕ್ಷೆಗಳೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Union Budget 2022: ಕೇಂದ್ರ ಬಜೆಟ್​ 2022ರಿಂದ ಆದಾಯ ತೆರಿಗೆಯ ಟಾಪ್ 5 ನಿರೀಕ್ಷೆಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Feb 01, 2022 | 11:17 AM

ಜನವರಿ 31, 2022ರಂದು ಆರ್ಥಿಕ ಸಮೀಕ್ಷೆ (Economic Survey) ಮಂಡನೆ ಆದ ನಂತರ ಆರ್ಥಿಕ ಸೂಚಕಗಳು ಭಾರತದ ಸ್ಥಿತಿಯನ್ನು ಆಶಾವಾದಿ ಎಂಬಂತೆ ಚಿತ್ರಣ ಆಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ನಾಲ್ಕನೇ ಬಜೆಟ್ ಮಂಡನೆ ಆಗುತ್ತಿದ್ದು, ಇದೀಗ ವೈಯಕ್ತಿಕವಾಗಿ ಮತ್ತು ತೆರಿಗೆದಾರರು ಬಜೆಟ್ ಮಂಡನೆಯ ಘೋಷಣೆಗಳನ್ನು ಎದುರು ನೋಡುತ್ತಿದ್ದಾರೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ವಾರ್ಷಿಕ ಮಿತಿಯನ್ನು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಠೇವಣಿ ಮಿತಿ ಹೆಚ್ಚಿಸುವುದರಿಂದ ತೆರಿಗೆದಾರರು ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಸ್ವಲ್ಪ ಮಟ್ಟಿಗೆ ನಿರಾಳವನ್ನು ನಿರೀಕ್ಷಿಸುತ್ತಿದ್ದಾರೆ. ನಿರ್ಮಲಾ ಸೀತಾರಾಮನ್ ಅವರಿಂದ ತೆರಿಗೆದಾರರು ನಿರೀಕ್ಷಿಸುತ್ತಿರುವ ಟಾಪ್ 5 ರಿಲೀಫ್​ಗಳ ಕುರಿತು ವಿಶ್ಲೇಷಕರು ಹೀಗೆ ಹೇಳುತ್ತಾರೆ ಎಂದು “ಮಿಂಟ್” ವರದಿ ಮಾಡಿದೆ.

1] ಸೆಕ್ಷನ್ 80ಸಿ ವಾರ್ಷಿಕ ಮಿತಿಯಲ್ಲಿ ಹೆಚ್ಚಳ: ಸೆಕ್ಷನ್ 80ಸಿ ವಾರ್ಷಿಕ ಮಿತಿಯನ್ನು ಈಗಿರುವ ರೂ. 1.50 ಲಕ್ಷದಿಂದ ರೂ. 3 ಲಕ್ಷಕ್ಕೆ ಹೆಚ್ಚಿಸುವ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ (ICAI) ಸಲಹೆಗೆ ನಿರ್ಮಲಾ ಸೀತಾರಾಮನ್ ಅವರ ಪ್ರತಿಕ್ರಿಯೆಗಾಗಿ ರಾಷ್ಟ್ರದಾದ್ಯಂತ ತೆರಿಗೆದಾರರು ಕಾಯುತ್ತಿದ್ದಾರೆ. ಇದನ್ನು ಕೊನೆಯದಾಗಿ 2014ರಲ್ಲಿ ರೂ. 1.0 ಲಕ್ಷದಿಂದ ರೂ. 1.50 ಲಕ್ಷಕ್ಕೆ ಹೆಚ್ಚಿಸಲಾಯಿತು ಮತ್ತು ಐಸಿಎಐ ಮತ್ತು ತೆರಿಗೆದಾರರು ನರೇಂದ್ರ ಮೋದಿ ಸರ್ಕಾರವು ಈ ಸೆಕ್ಷನ್ 80ಸಿ ಮಿತಿಯನ್ನು ಹೆಚ್ಚಿಸಬೇಕು ಎಂದು ಭಾವಿಸುತ್ತಾರೆ.

2] ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್​ ಠೇವಣಿ ಮಿತಿಯಲ್ಲಿ ಹೆಚ್ಚಳ: ಸೆಕ್ಷನ್ 80ಸಿ ಮಿತಿಯಂತೆಯೇ ಐಸಿಎಐನಿಂದ ನರೇಂದ್ರ ಮೋದಿ ಸರ್ಕಾರಕ್ಕೆ ವಾರ್ಷಿಕ ಪಿಪಿಎಫ್​ ಠೇವಣಿ ಮಿತಿಯನ್ನು ಸದ್ಯಕ್ಕೆ ಇರುವ ರೂ. 1.50 ಲಕ್ಷದಿಂದ ರೂ. 3.0 ಲಕ್ಷಕ್ಕೆ ದುಪ್ಪಟ್ಟುಗೊಳಿಸುವಂತೆ ಸೂಚಿಸಿದೆ. ಆದಾಯ ತೆರಿಗೆದಾರರು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರಿಂದ ಈ ಬಗ್ಗೆ ಘೋಷಣೆಯನ್ನು ನಿರೀಕ್ಷಿಸುತ್ತಿದ್ದಾರೆ.

3] ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆ: ಎರಡು ವರ್ಷಗಳ ಹಿಂದೆ ಕೇಂದ್ರ ಬಜೆಟ್ 2020ರಲ್ಲಿ ನಿರ್ಮಲಾ ಸೀತಾರಾಮನ್ ಅವರು ದ್ವಿಮುಖ ತೆರಿಗೆ ಆಡಳಿತವನ್ನು ಪರಿಚಯಿಸಿದರು. ಅಲ್ಲಿ ಅವರು ತೆರಿಗೆದಾರರಿಗೆ ರೂ. 2.50 ಲಕ್ಷದಿಂದ ರೂ. 5.0 ಲಕ್ಷ ವಾರ್ಷಿಕ ಆದಾಯಕ್ಕೆ ಪ್ರಮಾಣಿತ ಕಡಿತವನ್ನು ನೀಡುವ ಹೊಸ ತೆರಿಗೆ ಪದ್ಧತಿ ಪರಿಚಯಿಸಿದರು. ಆ ಮೂಲಕ ವಾರ್ಷಿಕ ಆದಾಯ 5.0 ಲಕ್ಷದವರೆಗೆ ಆದಾಯ ತೆರಿಗೆ ಇಲ್ಲದಂತಾಯಿತಿ. ಆದರೆ ಈ ಹೊಸ ತೆರಿಗೆ ಪದ್ಧತಿಯನ್ನು ಪಡೆಯಲು ತೆರಿಗೆದಾರರು ಸೆಕ್ಷನ್ 80ಸಿ, ಸೆಕ್ಷನ್ 80ಸಿಸಿಡಿ, ಗೃಹ ಸಾಲದ ಬಡ್ಡಿ ಮರುಪಾವತಿ, ಗೃಹ ಸಾಲದ ಅಸಲು ಮರುಪಾವತಿ, ಮಕ್ಕಳ ಶಾಲಾ ಶುಲ್ಕ ಇತ್ಯಾದಿ ಎಲ್ಲ ತೆರಿಗೆ ಕ್ಲೇಮ್ ಬೆನಿಫಿಟ್​ಗಳನ್ನು ಕಳೆದುಕೊಳ್ಳಬೇಕಾಯಿತು. ಹಳೆಯ ಆಡಳಿತದ ತೆರಿಗೆ ಲಾಭದ ಕ್ಲೇಮ್​ಗಳ ಜತೆಗೆ ಅಸ್ತಿತ್ವದಲ್ಲಿರುವ ಹೊಸ ತೆರಿಗೆ ಪದ್ಧತಿಯ ಆದಾಯ ತೆರಿಗೆ ಸ್ಲ್ಯಾಬ್‌ಗಳನ್ನು ಒಳಗೊಂಡಿರುವ ಏಕ ತೆರಿಗೆ ಪದ್ಧತಿಯನ್ನು ಮೋದಿ ಸರ್ಕಾರ ಜಾರಿಗೆ ತರಲಿ ಎಂದು ನಿರೀಕ್ಷೆ ಮಾಡುತ್ತಿದ್ದಾರೆ.

4] ಈಕ್ವಿಟಿ ಹೂಡಿಕೆಗಳಿಗೆ ಬೆಂಬಲ: ತೆರಿಗೆದಾರರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್, ಯುಲಿಪ್‌ಗಳಂತಹ ಈಕ್ವಿಟಿಗೆ ಜೋಡಣೆಯಾದ ಹೂಡಿಕೆಗಳಿಗೆ ರಿಲೀಫ್ ಘೋಷಣೆ ನಿರೀಕ್ಷಿಸುತ್ತಿದ್ದಾರೆ. ಭವಿಷ್ಯ ನಿಧಿ (PF) ಅಥವಾ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅನ್ನು ಸಂಬಳದಾರರು ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ರಿಲೀಫ್ ಕ್ಲೇಮ್‌ಗಾಗಿ ಮಾಡುವಂತೆ ಪ್ರತ್ಯೇಕ ಸೆಕ್ಷನ್ ನಿರೀಕ್ಷಿಸುತ್ತಿದ್ದಾರೆ. ಅವರ ರೂ. 1.5 ಲಕ್ಷ ವಾರ್ಷಿಕ ವಿನಾಯಿತಿ ಮಿತಿ ಬಹುತೇಕ ಮುಕ್ತಾಯಗೊಳ್ಳುತ್ತದೆ. ಆದ್ದರಿಂದ, ಈಕ್ವಿಟಿಗೆ ಜೋಡಣೆಯಾದ ಹೂಡಿಕೆಗಳ ಮೇಲೆ ತೆರಿಗೆ ಪ್ರಯೋಜನ ಪಡೆಯಲು ಪ್ರತ್ಯೇಕ ಸೆಕ್ಷನ್ ಘೋಷಿಸುವುದನ್ನು ನಿರ್ಮಲಾ ಸೀತಾರಾಮನ್ ಅವರಿಂದ ನಿರೀಕ್ಷಿಸಲಾಗಿದೆ.

5] ಗೃಹ ಸಾಲದ ಬಡ್ಡಿ ಮರುಪಾವತಿ ಮೇಲಿನ ತೆರಿಗೆ ಬೆನಿಫಿಟ್ ಕ್ಲೇಮ್‌ನಲ್ಲಿ ಹೆಚ್ಚಳ: ಗೃಹ ಸಾಲದ ಇಎಂಐ ಪಾವತಿಸುವ ಗೃಹ ಖರೀದಿದಾರರು ಸೆಕ್ಷನ್ 24ರ ಅಡಿಯಲ್ಲಿ ಗೃಹ ಸಾಲದ ಬಡ್ಡಿ ಮರುಪಾವತಿಯ ಮೇಲಿನ ಆದಾಯ ತೆರಿಗೆ ವಿನಾಯಿತಿಯನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿದ್ದಾರೆ. ಆಸ್ತಿ ಬೆಲೆಗಳು ತುಂಬಾ ಹೆಚ್ಚಿದ್ದು, ಮನೆ ಖರೀದಿದಾರರು ತಮ್ಮ ಗೃಹ ಸಾಲದ ಅಸಲು ಮೇಲೆ ವಾರ್ಷಿಕ ಕನಿಷ್ಠ ರೂ. 3 ಲಕ್ಷದಿಂದ ರೂ. 3.5 ಲಕ್ಷ ಗೃಹ ಸಾಲದ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: Union Budget 2022: ಗೃಹ ಖರೀದಿದಾರರಿಗೆ ಆದಾಯ ತೆರಿಗೆ ವಿನಾಯ್ತಿ ಗಿಫ್ಟ್‌ ಸಾಧ್ಯತೆ, ಗರಿಗೆದರಿದ ನಿರೀಕ್ಷೆ

Published On - 10:51 am, Tue, 1 February 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ