Opening Bell: ಬಜೆಟ್ ಉತ್ತೇಜನದ ನಿರೀಕ್ಷೆಯಲ್ಲಿ ಸೆನ್ಸೆಕ್ಸ್ 700 ಪಾಯಿಂಟ್ಸ್ಗೂ ಹೆಚ್ಚು ಏರಿಕೆ
ಕೇಂದ್ರ ಬಜೆಟ್ 2022ರ ಮಂಡನೆ ದಿನವಾದ ಫೆಬ್ರವರಿ 1ನೇ ತಾರೀಕಿನಂದು ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ 700ಕ್ಕೂ ಹೆಚ್ಚು ಪಾಯಿಂಟ್ಸ್ ಏರಿಕೆ ಕಂಡಿದೆ.
ಕೇಂದ್ರ ಬಜೆಟ್ (Union Budget 2022) ಹಿನ್ನೆಲೆಯಲ್ಲಿ ಫೆಬ್ರವರಿ 1ನೇ ತಾರೀಕಿನ ಮಂಗಳವಾರದಂದು ಸೆನ್ಸೆಕ್ಸ್ ಸೂಚ್ಯಂಕವು 718.22 ಪಾಯಿಂಟ್ಸ್ ಅಥವಾ ಶೇ 1.24ರಷ್ಟು ಮತ್ತು ನಿಫ್ಟಿ 50 ಸೂಚ್ಯಂಕವು 191.20 ಪಾಯಿಂಟ್ಸ್ ಅಥವಾ ಶೇ 1.10ರಷ್ಟು ಮೇಲೇರಿತ್ತು. ಇನ್ನು ಈ ದಿನದ ಬಜೆಟ್ ನಿರೀಕ್ಷೆಯಲ್ಲಿ ಯಾವ ಷೇರಿನ ಮೇಲೆ ಏನು ಬದಲಾವಣೆ ಆಗಿದೆ ಹಾಗೂ ಯಾವ ಸುದ್ದಿಯ ಹಿನ್ನೆಲೆಯಲ್ಲಿ ಹೀಗಾಗಿದೆ ಎಂಬುದರ ಬಗ್ಗೆ ಪ್ರಮುಖಾಂಶಗಳು ಇಲ್ಲಿವೆ.
* ಶೂನ್ಯ ಬಂಡವಾಳ ಕೃಷಿಗೆ ಕೇಂದ್ರ ಹಣಕಾಸು ಸಚಿವೆ ಒತ್ತು ನೀಡಬಹುದು ಎಂಬ ಕಾರಣಕ್ಕೆ ರಸಗೊಬ್ಬರ ಷೇರುಗಳು ಶೇ 1ರಿಂದ ಶೇ 1ರ ತನಕ ಕುಸಿತ ಕಂಡಿವೆ.
* ನಿರೀಕ್ಷೆಗಿಂತ ಕಡಿಮೆ ಸುಂಕ ಏರಿಕೆ ಹಿನ್ನೆಲೆಯಲ್ಲಿ ಸಿಗರೇಟ್ ಉತ್ಪಾದಕರ ಷೇರುಗಳು ಶೇ 1ರಿಂದ ಶೇ 2ರಷ್ಟು ಏರಿಕೆ ಕಂಡಿವೆ.
* ಚಿನ್ನದ ಮೇಲಿನ ಮೇಲಿನ ಆಮದು ಸುಂಕ ಏರಿಕೆ ಪ್ರಸ್ತಾವ ಇರುವುದರಿಂದ ಆಭರಣದ ಸ್ಟಾಕ್ಗಳು ಶೇ 2ರಿಂದ 7ರಷ್ಟು ಕುಸಿದಿವೆ.
* ಸರ್ಕಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಪ್ರಸ್ತಾವ ಇರುವುದರಿಂದ ಎಚ್ಪಿಸಿಎಲ್, ಬಿಪಿಸಿಎಲ್, ಐಒಸಿ ಷೇರುಗಳು ಶೇ 5ರಿಂದ 6ರಷ್ಟು ಇಳಿಕೆ ಆಗಿತ್ತು.
* ಸರ್ಕಾರದಿಂದ ಪ್ರವರ್ತಕ ಷೇರು ಪ್ರಮಾಣ ಇಳಿಸುವ ಪ್ರಸ್ತಾವ ಇರುವುದರಿಂದ 700ರಷ್ಟು ಕಂಪೆನಿಗಳ ಮೇಲೆ ಪ್ರಭಾವ ಆಗಬಹುದು.
* ಬೇಡಿಕೆಗೆ ಉತ್ತೇಜನ ದೊರಕಿಸುವುದಕ್ಕೆ ನಿರ್ಮಲಾ ಸೀತಾರಾಮನ್ ಅವರು ಏನು ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಕಾರ್ಪೊರೇಟ್ಸ್ಗಳು ಇದ್ದಾರೆ.
* ಮೂಲಸೌಕರ್ಯ ಯೋಜನೆಗಳ ಮೇಲೆ ವೆಚ್ಚ ಮಾಡುವುದು, ಕೊರೊನಾದಿಂದ ಹೊಡೆತ ಬಿದ್ದಿರುವ ಎಂಎಸ್ಎಂಇಯಂಥ ವಲಯಕ್ಕೆ ಉತ್ತೇಜನ ನೀಡಬಹುದು ಎಂಬ ನಿರೀಕ್ಷೆ ಇದೆ.
ಇದನ್ನೂ ಓದಿ: Union Budget 2022: 10 ವರ್ಷದಲ್ಲಿ ಬಜೆಟ್ ದಿನದಂದು ಷೇರುಪೇಟೆ ಸೂಚ್ಯಂಕಗಳ ಪರ್ಫಾರ್ಮೆನ್ಸ್ ಹೇಗಿತ್ತು?