Budget 2023: ಬಜೆಟ್​ ನಿರೀಕ್ಷೆಯೊಂದಿಗೆ ಜಿಗಿದ ಷೇರುಪೇಟೆ; ಸೆನ್ಸೆಕ್ಸ್ 517 ಅಂಶ ಚೇತರಿಕೆ

|

Updated on: Feb 01, 2023 | 10:39 AM

ಕೇಂದ್ರ ಬಜೆಟ್​​​ (Budget 2023) ನಿರೀಕ್ಷೆಯೊಂದಿಗೆ ದೇಶದ ಷೇರು ಮಾರುಕಟ್ಟೆಗಳಲ್ಲಿ ಬುಧವಾರ ಬೆಳಗ್ಗಿನ ವಹಿವಾಟಿನಲ್ಲಿ ಜಿಗಿತ ಕಂಡಿದೆ. ಬಿಎಸ್​ಇ ಸೆನ್ಸೆಕ್ಸ್ ಬೆಳಗ್ಗೆ 10 ಗಂಟೆ ವೇಳೆಗೆ 516.97 ಅಂಶ ಚೇತರಿಸಿ 60,066.87 ಆಗಿದೆ.

Budget 2023: ಬಜೆಟ್​ ನಿರೀಕ್ಷೆಯೊಂದಿಗೆ ಜಿಗಿದ ಷೇರುಪೇಟೆ; ಸೆನ್ಸೆಕ್ಸ್ 517 ಅಂಶ ಚೇತರಿಕೆ
ಬಿಎಸ್​ಇ
Image Credit source: Reuters
Follow us on

ಮುಂಬೈ: ಕೇಂದ್ರ ಬಜೆಟ್​​​ (Budget 2023) ನಿರೀಕ್ಷೆಯೊಂದಿಗೆ ದೇಶದ ಷೇರು ಮಾರುಕಟ್ಟೆಗಳಲ್ಲಿ ಬುಧವಾರ ಬೆಳಗ್ಗಿನ ವಹಿವಾಟಿನಲ್ಲಿ ಜಿಗಿತ ಕಂಡಿದೆ. ಬಿಎಸ್​ಇ ಸೆನ್ಸೆಕ್ಸ್ (BSE Sensex) ಬೆಳಗ್ಗೆ 10 ಗಂಟೆ ವೇಳೆಗೆ 516.97 ಅಂಶ ಚೇತರಿಸಿ 60,066.87 ಆಗಿದೆ. ಎನ್​ಎಸ್​​ಇ ನಿಫ್ಟಿ (NSE Nifty) 153.15 ಅಂಶ ಚೇತರಿಸಿ 17,815.30 ಆಗಿದೆ. ಸೆನ್ಸೆಕ್ಸ್​​ನಲ್ಲಿ ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರಾ, ಏಷ್ಯನ್ ಪೈಂಟ್ಸ್, ಟಾಟಾ ಸ್ಟೀಲ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್​ಡಿಎಫ್​ಸಿ, ಎಚ್​ಡಿಎಫ್​ಸಿ ಬ್ಯಾಂಕ್, ಟೈಟಾನ್ ಹಾಗೂ ಎನ್​ಟಿಪಿಸಿ ಆರಂಭಿಕ ವಹಿವಾಟಿನಲ್ಲಿ ಉತ್ತಮ ಗಳಿಕೆ ದಾಖಲಿಸಿವೆ. ಐಟಿಸಿ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್, ಎಲ್​&ಟಿ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿವೆ.

‘ಬಜೆಟ್ ಉತ್ತಮವಾಗಿದ್ದರೆ, ಅನಿರೀಕ್ಷಿತ ನಿರ್ಧಾರಗಳು ಇಲ್ಲದಿದ್ದರೆ ಮಾರುಕಟ್ಟೆ ಜಿಗಿತ ಹೀಗೆಯೇ ಮುಂದುವರಿಯಲಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್​​ನ ಮುಖ್ಯ ಹೂಡಿಕೆ ತಂತ್ರಜ್ಞ ವಿಕೆ ವಿಜಯಕುಮಾರ್ ತಿಳಿಸಿದ್ದಾರೆ. ಆರ್ಥಿಕ ಸಮೀಕ್ಷೆಯು ಕಾರ್ಪೊರೇಟ್ ಗಳಿಕೆ ಹಾಗೂ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಆಶಾವಾದ ಮೂಡಿಸಿದೆ. ಇದು ಮಧ್ಯಮ ಅವಧಿಯ ಮಾರುಕಟ್ಟೆಗಳಿಗೆ ಉತ್ತಮ ಭವಿಷ್ಯದ ಮುನ್ಸೂಚನೆ ನೀಡಿದೆ ಎಂದು ಅವರು ಹೇಳಿದ್ದಾರೆ.

2023-24ನೇ ಸಾಲಿನಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ 6ರಿಂದ 6.8ರಷ್ಟಿರಲಿದೆ ಎಂದು ಮಂಗಳವಾರ ಪ್ರಕಟಗೊಂಡಿದ್ದ ಆರ್ಥಿಕ ಸಮೀಕ್ಷೆ ಮುನ್ಸೂಚನೆ ನೀಡಿತ್ತು. ಇದು ಕಳೆದ ಮೂರು ವರ್ಷಗಳಲ್ಲೇ ನಿಧಾನಗತಿಯ ಜಿಡಿಪಿ ಬೆಳವಣಿಗೆ ಎಂದು ಅಂದಾಜಿಸಲಾಗಿತ್ತು. ಆದಾಗ್ಯೂ, ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತವು ಅಭಿವೃದ್ಧಿ ಪಥದಲ್ಲಿ ವೇಗವಾಗಿ ಸಾಗುತ್ತಿದೆ. ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿದೆ. ಕೋವಿಡ್ ಸಾಂಕ್ರಾಮಿಕ ಮತ್ತು ಇತರ ಜಾಗತಿಕ ಪರಿಸ್ಥಿತಿಗಳ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ವಿದೇಶಿ ಹೂಡಿಕೆ ದೇಶದತ್ತ ಹರಿದುಬರಲಿದೆ ಎಂದು ಆರ್ಥಿಕ ಸಮೀಕ್ಷೆ ಉಲ್ಲೇಖಿಸಿತ್ತು. ಅಭಿವೃದ್ಧಿಹೊಂದಿದ ದೇಶಗಳಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಹಿಂಜರಿತದಂಥ ಪರಿಸ್ಥಿತಿ, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಟೆಕ್ ಕಂಪನಿಗಳಲ್ಲಿನ ಉದ್ಯೋಗ ಕಡಿತವು ಭಾರತದ ಕಂಪನಿಗಳ ಮೇಲೆ ಹೂಡಿಕೆ ಹೆಚ್ಚಾಗಲು ಕಾರಣವಾಗಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದ್ದು, ಮಾರುಕಟ್ಟೆ ಮೇಲೂ ಪ್ರಭಾವ ಬೀರಿದೆ.

ಇದನ್ನೂ ಓದಿ: Union Budget 2023: ಶಕ್ತಿ ಹಾಗೂ ಆತ್ಮವಿಶ್ವಾಸದ ಪ್ರತೀಕವಾದ ಕೆಂಪು ಸೀರೆ ಉಟ್ಟು ಬಜೆಟ್ ಮಂಡಿಸಲು ಬಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಈ ಮಧ್ಯೆ, ಏಷ್ಯಾದಾದ್ಯಂತ ಮಾರುಕಟ್ಟೆಗಳಲ್ಲಿ ಆರಂಭಿಕ ವಹಿವಾಟು ಉತ್ತಮ ಗಳಿಕೆ ದಾಖಲಿಸಿದೆ. ಅಮೆರಿಕದಲ್ಲಿಯೂ ಷೇರು ಮಾರುಕಟ್ಟೆಗಳು ಮಂಗಳವಾರ ಉತ್ತಮ ವಹಿವಾಟು ದಾಖಲಿಸಿದ್ದವು.

ಅದಾನಿ ಸಮೂಹದ ಕುಸಿತದ ನಡುವೆಯೂ ಆಶಾಭಾವ

ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್ ವರದಿಯ ಪರಿಣಾಮ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿತ್ತು. ಇದು ದೇಶದ ಷೇರುಪೇಟೆಗಳ ಒಟ್ಟಾರೆ ವಹಿವಾಟಿನ ಮೇಲೂ ಪರಿಣಾಮ ಬೀರಿತ್ತು. ಆದಾಗ್ಯೂ, ಸೆನ್ಸೆಕ್ಸ್ 60,000 ಗಡಿ ದಾಟಿರುವುದು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ.

ಮತ್ತಷ್ಟು ಬಜೆಟ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:38 am, Wed, 1 February 23