ECLGS: ಕೇಂದ್ರ ಬಜೆಟ್​ನಲ್ಲಿ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ 2023ರ ಮಾರ್ಚ್​ವರೆಗೆ ವಿಸ್ತರಣೆ

| Updated By: Srinivas Mata

Updated on: Feb 01, 2022 | 12:41 PM

ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ಅನ್ನು 2023ರ ಮಾರ್ಚ್ ತನಕ ವಿಸ್ತರಣೆ ಮಾಡಲಾಗಿದೆ. ಇದರ ಜತೆಗೆ ಮೊತ್ತವನ್ನು ಹೆಚ್ಚಿಸಲಾಗಿದೆ.

ECLGS: ಕೇಂದ್ರ ಬಜೆಟ್​ನಲ್ಲಿ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ 2023ರ ಮಾರ್ಚ್​ವರೆಗೆ ವಿಸ್ತರಣೆ
ಸಾಂದರ್ಭಿಕ ಚಿತ್ರ
Follow us on

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ 2022ರ ಭಾಷಣದಲ್ಲಿ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ಅನ್ನು 2023ರ ಮಾರ್ಚ್​ವರೆಗೆ ವಿಸ್ತರಿಸಲಾಗುವುದು ಎಂದು ಘೋಷಣೆ ಮಾಡಿದರು. ಅಲ್ಲದೆ, ಯೋಜನೆಯ ಖಾತ್ರಿ ಕವರ್ ಅನ್ನು ರೂ. 50,000 ಕೋಟಿಯಿಂದ ರೂ. 5 ಲಕ್ಷ ಕೋಟಿಗೆ ವಿಸ್ತರಿಸಲಾಗುವುದು ಎಂದರು. 2023ರ ಮಾರ್ಚ್​ವರೆಗೆ ವಿಸ್ತರಿಸಲಾದ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ಎಂಎಸ್​ಎಂಇ ಕೇಂದ್ರೀಕೃತ ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪೆನಿಗಳಿಗೆ (NBFCs) ವ್ಯಾಪಾರ ಬೆಳವಣಿಗೆಗೆ ಬೆನಿಫಿಟ್​ ನೀಡುತ್ತದೆ ಎಂದು ಐಸಿಐಸಿಐ ಸೆಕ್ಯೂರಿಟೀಸ್‌ನ ವಿಶ್ಲೇಷಕರು ಹೇಳಿದ್ದಾರೆ ಎಂಬುದಾಗಿ ಮಿಂಟ್ ವರದಿ ಮಾಡಿದೆ. ಕೊವಿಡ್ ಬಾಧಿತ ಎಂಎಸ್​ಎಂಇಗಳನ್ನು ಮತ್ತಷ್ಟು ಬೆಂಬಲಿಸುವ ಸಲುವಾಗಿ ಸೆಪ್ಟೆಂಬರ್‌ನಲ್ಲಿ ಸರ್ಕಾರವು ತನ್ನ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯನ್ನು (ECLGS) 31 ಮಾರ್ಚ್, 2022ರವರೆಗೆ ಅಥವಾ ಯೋಜನೆಯಡಿ ರೂ. 4.5 ಲಕ್ಷ ಕೋಟಿ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯ ತನಕ ಖಾತ್ರಿ ನೀಡುವವರೆಗೆ ವಿಸ್ತರಿಸುವುದಾಗಿ ಘೋಷಿಸಿತ್ತು.

ಕಳೆದ ವರ್ಷ ಮೇ ತಿಂಗಳಲ್ಲಿ ಘೋಷಿಸಲಾದ ‘ಆತ್ಮನಿರ್ಭರ್ ಭಾರತ್ ಅಭಿಯಾನ’ ಅಡಿಯಲ್ಲಿ 20 ಟ್ರಿಲಿಯನ್ (ಲಕ್ಷ ಕೋಟಿ) ಆರ್ಥಿಕ ಉತ್ತೇಜಕ ಪ್ಯಾಕೇಜ್‌ನ ಪ್ರಮುಖ ಅಂಶಗಳಲ್ಲಿ ಇಸಿಎಲ್‌ಜಿಎಸ್ ಒಂದಾಗಿದೆ. ಇದು ಎಂಎಸ್‌ಎಂಇಗಳು ಮತ್ತು ವೃತ್ತಿಪರರಿಗೆ ಟರ್ಮ್ ಲೋನ್ ರೂಪದಲ್ಲಿ ಹೆಚ್ಚುವರಿ ವರ್ಕಿಂಗ್ ಕ್ಯಾಪಿಟಲ್ ಹಣಕಾಸು ಯೋಜನೆ ಅನ್ನು ನೀಡುತ್ತದೆ. ಆರಂಭದಲ್ಲಿ ಅದರ ನಿಧಿ 3 ಟ್ರಿಲಿಯನ್ ಆಗಿತ್ತು. ಇದನ್ನು ಕೊವಿಡ್ ಎರಡನೇ ಅಲೆಯ ನಂತರ ಜೂನ್‌ನಲ್ಲಿ 4.5 ಟ್ರಿಲಿಯನ್‌ಗೆ ಹೆಚ್ಚಿಸಲಾಯಿತು.

2022-2023ರ ಕೇಂದ್ರ ಬಜೆಟ್ ಅನ್ನು ಪೇಪರ್‌ಲೆಸ್ ಫಾರ್ಮ್ಯಾಟ್‌ನಲ್ಲಿ ಮಂಡಿಸಲಾಯಿತು. ಸೀತಾರಾಮನ್ ಅವರು ಸಾಂಪ್ರದಾಯಿಕ ‘ಬಹಿ ಖಾತಾ’ ಬದಲಿಗೆ ಟ್ಯಾಬ್ (ಗ್ಯಾಜೆಟ್​) ಮೂಲಕ ಸಂಸತ್ತಿನಲ್ಲಿ ಬಜೆಟ್ ಅನ್ನು ಓದಿದರು. ಸೀತಾರಾಮನ್ ಅವರು ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದರು. ಅವರೊಂದಿಗೆ ಹಣಕಾಸು ಖಾತೆಯ ರಾಜ್ಯ ಸಚಿವರಾದ ಪಂಕಜ್ ಚೌಧರಿ, ಭಾಗವತ್ ಕರದ್ ಮತ್ತು ಸಚಿವಾಲಯದ ಇತರ ಅಧಿಕಾರಿಗಳು ಇದ್ದರು.

ಇದನ್ನೂ ಓದಿ: ಸರ್ಕಾರದ ಯೋಜನೆಗಳು ಜನರನ್ನು ತಲುಪಲು ಬ್ಯಾಂಕ್​ಗಳು ಡಿಜಿಟಲ್ ವ್ಯವಸ್ಥೆ ಬಳಸಿಕೊಳ್ಳಬೇಕು: ನಿರ್ಮಲಾ ಸೀತಾರಾಮನ್