AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ECLGS: ಎಂಎಸ್​ಎಂಇ ತುರ್ತು ಸಾಲ ಯೋಜನೆ ಅವಧಿ 2022ರ ಮಾರ್ಚ್ ತನಕ ವಿಸ್ತರಣೆ

ತುರ್ತು ಸಾಲ ಯೋಜನೆ ಅವಧಿಯನ್ನು 2022ರ ಮಾರ್ಚ್​ ತನಕ ವಿಸ್ತರಣೆ ಮಾಡಲಾಗಿದೆ ಎಂದು ಸೆ. 29ರಂದು ಸರ್ಕಾರದಿಂದ ತಿಳಿಸಲಾಗಿದೆ.

ECLGS: ಎಂಎಸ್​ಎಂಇ ತುರ್ತು ಸಾಲ ಯೋಜನೆ ಅವಧಿ 2022ರ ಮಾರ್ಚ್ ತನಕ ವಿಸ್ತರಣೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Sep 29, 2021 | 8:50 PM

Share

ಹಣಕಾಸು ಸಚಿವಾಲಯವು ಸೆಪ್ಟೆಂಬರ್ 29ರಂದು ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ವ್ಯಾಪ್ತಿಯನ್ನು ಆರು ತಿಂಗಳವರೆಗೆ, ಅಂದರೆ ಮಾರ್ಚ್ 2022ರವರೆಗೆ ವಿಸ್ತರಿಸಿದೆ. “ಕೊವಿಡ್ 19 ಸಾಂಕ್ರಾಮಿಕದ ಎರಡನೇ ಅಲೆಯಿಂದ ಪ್ರಭಾವಕ್ಕೆ ಒಳಗಾಗಿರುವ ವಿವಿಧ ವ್ಯವಹಾರಗಳನ್ನು ಬೆಂಬಲಿಸುವ ದೃಷ್ಟಿಯಿಂದ, ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ಗಡುವನ್ನು 31.03.2022ರ ವರೆಗೆ ಅಥವಾ 4.5 ಲಕ್ಷ ಕೋಟಿ ರೂಪಾಯಿಯ ಮೊತ್ತದ ಗ್ಯಾರಂಟಿಯವರೆಗೆ ಈ ಎರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ,” ಎಂದು ಹಣಕಾಸು ಸಚಿವಾಲಯ ಹೇಳಿದೆ. ಅಲ್ಲದೆ, ಯೋಜನೆಯ ಅಡಿಯಲ್ಲಿ ವಿತರಣೆಯ ಕೊನೆಯ ದಿನಾಂಕವನ್ನು ಜೂನ್ 30, 2022ರ ತನಕ ವಿಸ್ತರಿಸಲಾಗಿದೆ. ಕೊವಿಡ್ -19 ಬಿಕ್ಕಟ್ಟಿನಿಂದ ಉಂಟಾಗುವ ಒತ್ತಡವನ್ನು ತಗ್ಗಿಸಲು 3 ಲಕ್ಷ ಕೋಟಿ ರೂಪಾಯಿಯ ಇಸಿಎಲ್‌ಜಿಎಸ್ ಅನ್ನು ಹಲವು ವಲಯಗಳಿಗೆ ಪರಿಚಯಿಸಲಾಯಿತು. ಈ ಯೋಜನೆಯನ್ನು 20 ಲಕ್ಷ ಕೋಟಿ ರೂಪಾಯಿಯ ಕೊವಿಡ್-19 ಪರಿಹಾರ ಪ್ಯಾಕೇಜ್ ಭಾಗವಾಗಿ ಘೋಷಿಸಿ, 2020ರ ಮೇ ತಿಂಗಳಲ್ಲಿ ಇದನ್ನು ಆತ್ಮನಿರ್ಭರ ಭಾರತ್ ಅಭಿಯಾನ್ ಎಂದು ಕರೆಯಲಾಯಿತು. ಈ ವರ್ಷದ ಆರಂಭದಲ್ಲಿ ಸರ್ಕಾರವು ಮಿತಿಯನ್ನು ರೂ. 4.5 ಲಕ್ಷ ಕೋಟಿಗೆ ಮತ್ತು ಜೂನ್ 30ರಿಂದ ಸೆಪ್ಟೆಂಬರ್ 30ರವರೆಗೆ ಯೋಜನೆಯ ಕಾಲಾವಧಿಯನ್ನು 3 ತಿಂಗಳು ವಿಸ್ತರಿಸಿತು.

ಕೊವಿಡ್ -19 ಬಿಕ್ಕಟ್ಟಿನಿಂದ ಬಳಲುತ್ತಿರುವ ಮತ್ತು ವರ್ಕಿಂಗ್ ಕ್ಯಾಪಿಟಲ್ ಪೂರೈಸಲು ಕಷ್ಟಪಡುತ್ತಿರುವ ವ್ಯಾಪಾರ ಸಂಸ್ಥೆಗಳಿಗೆ ತುರ್ತು ಸಾಲವನ್ನು ವಿಸ್ತರಿಸಲು ಅನುವು ಮಾಡಿಕೊಡುವ ಸಲುವಾಗಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) ಮತ್ತು ಇತರ ಸಾಲ ನೀಡುವ ಸಂಸ್ಥೆಗಳಿಗೆ ಶೇ 100ರಷ್ಟು ಖಾತ್ರಿ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಸೆಪ್ಟೆಂಬರ್ 24, 2021ರ ಹೊತ್ತಿಗೆ ರೂ 2.86 ಲಕ್ಷ ಕೋಟಿ ರೂಪಾಯಿ ಸಾಲ ಮಂಜೂರು ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಒಟ್ಟು ಖಾತ್ರಿಗಳ ಪೈಕಿ ಶೇ 95ರಷ್ಟು ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳಿಗೆ ಮಂಜೂರು ಮಾಡಲಾಗಿದೆ ಎಂದು ಅದು ಹೇಳಿದೆ. ಕೊವಿಡ್​ನ ಎರಡನೇ ಅಲೆಯಿಂದ ಪ್ರಭಾವಿತವಾದ ವ್ಯವಹಾರಗಳಿಗೆ ಬೆಂಬಲ ನೀಡಲು ಸರ್ಕಾರವು ಈ ಯೋಜನೆಯಲ್ಲಿ ಕೆಲವು ಮಾರ್ಪಾಡುಗಳನ್ನು ಘೋಷಿಸಿತು.

ಗರಿಷ್ಠ 200 ಕೋಟಿ ರೂಪಾಯಿ “ECLGS 1.0 ಮತ್ತು 2.0 ಅಡಿಯಲ್ಲಿ ಅಸ್ತಿತ್ವದಲ್ಲಿರುವ ಸಾಲಗಾರರು 29.02.2020 ಅಥವಾ 31.03.2021ರವರೆಗಿನ ಒಟ್ಟು ಕ್ರೆಡಿಟ್‌ನ ಶೇ 10ರ ವರೆಗಿನ ಸಾಲಕ್ಕೆ ಅಥವಾ ಯಾವುದು ಹೆಚ್ಚೋ ಆ ಮೊತ್ತದ ಕ್ರೆಡಿಟ್ ಬೆಂಬಲಕ್ಕೆ ಅರ್ಹರಾಗಿರುತ್ತಾರೆ,” ಎಂದು ಅದು ಹೇಳಿದೆ. ಅಲ್ಲದೆ, ECLGS 1.0 ಅಥವಾ 2.0 ಅಡಿಯಲ್ಲಿ ಕ್ರೆಡಿಟ್ ಅನ್ನು ಪಡೆಯದ ವ್ಯಾಪಾರಗಳು 31.03.2021 ರವರೆಗಿನ ತಮ್ಮ ಕ್ರೆಡಿಟ್ ಬಾಕಿಯ ಶೇ 30ರಷ್ಟು ಮತ್ತು ECLGS 3.0 ಅಡಿಯಲ್ಲಿರುವ ವಲಯಗಳು ತಮ್ಮ ಕ್ರೆಡಿಟ್ ಬಾಕಿಯ ಶೇ 40ವರೆಗೆ ಕ್ರೆಡಿಟ್ ಬೆಂಬಲವನ್ನು ಪಡೆಯಬಹುದು. 31.03.2021 ಅನ್ವಯ ಆಗುವಂತೆ ಒಬ್ಬ ಸಾಲಗಾರರಿಗೆ ಗರಿಷ್ಠ 200 ಕೋಟಿ ರೂಪಾಯಿ ಇದೆ.

ಇಸಿಎಲ್‌ಜಿಎಸ್ ಅನ್ನು ಆರಂಭದಲ್ಲಿ ಎಂಎಸ್‌ಎಂಇ (ಕಿರು, ಸಣ್ಣ, ಮಧ್ಯಮ ಸಂಸ್ಥೆ) ವಲಯಕ್ಕೆ ಘೋಷಿಸಲಾಯಿತು. ಆದರೆ ನಂತರ ವಿವಿಧ ಪರಿಷ್ಕರಣೆಗಳೊಂದಿಗೆ ಕಾಮತ್ ಸಮಿತಿ, ಆರೋಗ್ಯ ರಕ್ಷಣೆ, ಆತಿಥ್ಯದಲ್ಲಿ ವ್ಯಾಪಾರ ಉದ್ಯಮಗಳು, ಪ್ರವಾಸ ಮತ್ತು ಪ್ರವಾಸೋದ್ಯಮ ಮತ್ತು ವಾಯುಯಾನದಿಂದ ಗುರುತಿಸಲಾದ 26 ಒತ್ತಡ ವಲಯಗಳಿಗೆ ವಿಸ್ತರಿಸಲಾಯಿತು. ಆಲ್ ಇಂಡಿಯಾ ಕೌನ್ಸಿಲ್ ಆಫ್ ಅಸೋಸಿಯೇಷನ್ ​​ಆಫ್ ಎಂಎಸ್‌ಎಂಇಗಳು (ಎಐಸಿಎ) ಸದಸ್ಯ ರಾಮಮೂರ್ತಿ, ದೇಶಾದ್ಯಂತ 170 ಎಂಎಸ್‌ಎಂಇ ಅಸೋಸಿಯೇಷನ್‌ಗಳನ್ನು ಪ್ರತಿನಿಧಿಸುತ್ತಿದ್ದು, ಈ ಯೋಜನೆಯ ವಿಸ್ತರಣೆಯು ಸ್ವಾಗತಾರ್ಹ ಹೆಜ್ಜೆ ಎಂದು ಹೇಳಿದ್ದಾರೆ. “ಮೊತ್ತವು ಮುಗಿಯದಿದ್ದಾಗ ಸ್ಕೀಮ್ ಅನ್ನು ಏಕೆ ಸ್ಥಗಿತಗೊಳಿಸಬೇಕು. ಆರ್ಥಿಕತೆಯು ಇನ್ನೂ ಚೇತರಿಕೆ ಹಂತದಲ್ಲಿದೆ. ಆದ್ದರಿಂದ ವಿಸ್ತರಣೆಯು ಸಾಧ್ಯವಾಗದ ಅನೇಕ ಉದ್ಯಮಗಳಿಗೆ ಅದನ್ನು ಪಡೆಯಲು ಸಹಾಯ ಮಾಡುತ್ತದೆ,” ಎಂದು ಅವರು ಹೇಳಿದರು.

ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆ ಸ್ಫೂರ್ತಿಯುತ ಉದ್ಯಮಿಗಳ ಒಕ್ಕೂಟದ ಅಧ್ಯಕ್ಷ ಯೋಗೀಶ್ ಪವಾರ್ ಮಾತನಾಡಿ, “ಬ್ಯಾಂಕಿಂಗ್ ಸಂಸ್ಥೆಗಳಿಂದ ಯೋಜನೆಗಳ ವಿತರಣೆಯಲ್ಲಿ ನಿಧಾನವಾಗಿದೆ ಮತ್ತು ಸರ್ಕಾರವು ಎಂಎಸ್‌ಎಂಇಗಳಿಗೆ ಉದ್ದೇಶಿತ ಮೊತ್ತವನ್ನು ಪೂರೈಸಲು ಸಾಧ್ಯವಾಗಲಿಲ್ಲ. ಮಾರ್ಚ್ 2022ರ ವರೆಗೆ ಈ ಯೋಜನೆಯ ವಿಸ್ತರಣೆಯಾಗಲು ಇದೇ ಪ್ರಾಥಮಿಕ ಕಾರಣವಾಗಿದೆ,” ಎಂದು ಹೇಳಿದ್ದಾರೆ. ಒಕ್ಕೂಟವು ತರಬೇತಿ ಮತ್ತು ಎಂಎಸ್ಎಂಇಗಳನ್ನು ಮೇಲಕ್ಕೆ ಏರಿಸಲು ಪ್ರಯತ್ನಿಸುತ್ತಿದೆ. ಪವಾರ್ ಗಮನಿಸಿದಂತೆ, ಕೊವಿಡ್​ ನಂತರ ಈ ಯೋಜನೆ ಮೂಲಕ ಎಂಎಸ್​ಎಂಇಗಳಿಗೆ ಉತ್ತೇಜನ ಸಿಕ್ಕಿದೆ. ಏಕೆಂದರೆ ಅವರು ವರ್ಕಿಂಗ್​ ಕ್ಯಾಪಿಟಲ್​ ಅಗತ್ಯಗಳಿಗೆ ಶ್ರಮಿಸುತ್ತಿದ್ದಾರೆ ಮತ್ತು ಇದೇ ವೇಳೆ ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: ಎಂಎಸ್​ಎಂಇ ಉದ್ಯಮ್​ ಪೋರ್ಟಲ್​ನಲ್ಲಿ ನಿಮ್ಮ ಸಂಸ್ಥೆಯನ್ನು ನೋಂದಣಿ ಮಾಡುವ ಯೋಜನೆ ಇದೆಯಾ? ಇಲ್ಲಿವೆ ಹಂತಗಳು

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ