ನವದೆಹಲಿ, ಜುಲೈ 22: ಮನುಷ್ಯ ಸಂತತಿಯಲ್ಲಿ ಹೆಚ್ಚೂಕಡಿಮೆ ಪುರುಷರಷ್ಟೇ ಸಂಖ್ಯೆಯಲ್ಲಿ ಮಹಿಳೆಯರೂ ಇದ್ದಾರೆ. ಆದರೆ, ಸಾಮಾಜಿಕ ರಚನೆಯ ವೈಭಿನ್ಯತೆಯಿಂದ ಭಾರತದಲ್ಲಿ ಮಹಿಳೆಯರು ಪೂರ್ಣವಾಗಿ ಉದ್ಯೋಗಕ್ಕೆ ತೆರೆದುಕೊಳ್ಳಲು ಸಾಧ್ಯವಾಗಿಲ್ಲ. ಅಂತೆಯೇ, ಹೆಚ್ಚಿನ ಮಹಿಳೆಯರು ಇನ್ನೂ ಅವಲಂಬಿತರಾಗಿ ಉಳಿದಿದ್ದಾರೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪೂರ್ಣವಾಗಿ ಸಬಲರಾಗಿಲ್ಲ. ಉದ್ಯೋಗಸ್ಥಳದಲ್ಲೂ ಪುರುಷರಿಗೆ ಸಿಗುವಷ್ಟು ವೇತನ ಮಹಿಳೆಯರಿಗೆ ಸಿಗುವುದಿಲ್ಲ. ಈ ವೇತನ ತಾರತಮ್ಯ ಸೇರಿದಂತೆ ಹಲವು ಸಮಸ್ಯೆಗಳು ಮಹಿಳೆಯರನ್ನು ಕಟ್ಟಿಹಾಕಿರುವುದು ಹೌದು. ಈ ಬಾರಿಯ ಬಜೆಟ್ನಲ್ಲಿ ಈ ಸಮಸ್ಯೆಗಳ ಕಡೆ ಗಮನ ಹರಿಸಬಹುದು ಎನ್ನುವ ನಿರೀಕ್ಷೆ ಮಹಿಳಾ ಸಮುದಾಯದ್ದಾಗಿದೆ.
ಕಾರ್ಪೊರೇಟ್ ಸೆಕ್ಟರ್ನಲ್ಲಿ ಮಹಿಳಾ ಉದ್ಯೋಗಿಗಳು ಬಹಳಷ್ಟಿದ್ದಾರಾದರೂ ಉನ್ನತ ಹುದ್ದೆಗಳಲ್ಲಿ ಮಹಿಳೆಯರ ಪ್ರಮಾಣ ಶೇ. 20 ಕೂಡ ಇಲ್ಲ ಎಂದು ಇತ್ತೀಚೆಗೆ ವರದಿಯೊಂದು ಹೈಲೈಟ್ ಮಾಡಿತ್ತು. ಗಾರ್ಮೆಂಟ್ಸ್ ಕೆಲಸದಿಂದ ಹಿಡಿದು ಸಿಇಒವರೆಗೆ ಮಹಿಳೆಯರಿಗೆ ಪುರುಷರಿಗಿಂತ ಸಿಗುವ ವೇತನ ಬಹಳ ಕಡಿಮೆ. ದೇಶದಲ್ಲಿ ಸ್ಥಾಪನೆಯಾಗಿರುವ ಸ್ಟಾರ್ಟಪ್ಗಳಲ್ಲಿ ಶೇ. 15ರಷ್ಟು ಕಂಪನಿಗಳು ಮಾತ್ರ ಮಹಿಳಾ ಮುಖ್ಯಸ್ಥರನ್ನು ಹೊಂದಿವೆ.
ಎಂಎಸ್ಎಂಇ ವಲಯದಲ್ಲಂತೂ ಮಹಿಳಾ ಉದ್ಯೋಗಿಗಳ ಸಂಖ್ಯೆ ಬಹಳ ಕಡಿಮೆ. ವರದಿಯೊಂದರ ಪ್ರಕಾರ ಎಂಎಸ್ಎಂಇ ವಲಯದಲ್ಲಿ ಇರುವ ಕಾರ್ಮಿಕರಲ್ಲಿ ಮಹಿಳೆಯರು ಶೇ. 20 ಮಾತ್ರ ಇದ್ದಾರೆ.
ಇದನ್ನೂ ಓದಿ:
2021-22ರಲ್ಲಿ ಒಟ್ಟೂ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣ ಶೇ 32.8ರಷ್ಟಿತ್ತು. 2022-23ರಲ್ಲಿ ಇದು ಶೇ. 37ಕ್ಕೆ ಹೆಚ್ಚಿದೆ. ಭಾರತ ಶೇ. 8ಕ್ಕಿಂತ ಹೆಚ್ಚಿನ ವೇಗದಲ್ಲಿ ಜಿಡಿಪಿ ವೃದ್ಧಿ ಕಾಣಬೇಕಾದರೆ ಮಹಿಳಾ ಉದ್ಯೋಗಿಗಳ ಸಂಖ್ಯೆ ಶೇ. 50ಕ್ಕೆ ಏರಬೇಕು ಎನ್ನುವ ಅಭಿಪ್ರಾಯ ಇದೆ. ಆ ನಿಟ್ಟಿನಲ್ಲಿ ಬಜೆಟ್ ಗಮನ ಹರಿಸುತ್ತಾ ನೋಡಬೇಕು.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ