Union Budget: ಸರ್ಕಾರಕ್ಕೆ ಈ ನಾಲ್ಕು ಜಾತಿಗಳ ಏಳ್ಗೆ ಮುಖ್ಯ: ನಿರ್ಮಲಾ ಸೀತಾರಾಮನ್

|

Updated on: Feb 01, 2024 | 11:44 AM

FM Nirmala Sitharaman Budget updates: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರನೆ ಬಜೆಟ್ ಮಂಡನೆ ಮಾಡಿದ್ದಾರೆ. ಸರ್ಕಾರಕ್ಕೆ ನಾಲ್ಕು ಜಾತಿಗಳು ಪ್ರಧಾನವಾಗಿದ್ದು, ಬಡವರು, ಮಹಿಳೆಯರು, ಯುವಸಮುದಾಯದವರು ಮತ್ತು ರೈತರು ಈವರೇ ನಾಲ್ಕು ಜಾತಿಗಳವರು ಎಂದು ಸಚಿವೆ ತಮ್ಮ ಬಜೆಟ್ ಮಂಡನೆಯಲ್ಲಿ ಹೇಳಿದ್ದಾರೆ.

Union Budget: ಸರ್ಕಾರಕ್ಕೆ ಈ ನಾಲ್ಕು ಜಾತಿಗಳ ಏಳ್ಗೆ ಮುಖ್ಯ: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us on

ನವದಹಲಿ, ಫೆಬ್ರುವರಿ 1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಸತತ ಆರನೇ ಬಾರಿ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಸರ್ಕಾರದ ಕಳೆದ 10 ವರ್ಷದಲ್ಲಿ ಮಾಡಿರುವ ಸಾಧನೆ ಹಾಗೂ ಸಮಾಜ ಮತ್ತು ಆರ್ಥಿಕತೆಯ ವಿವಿಧ ಮಜಲುಗಳಲ್ಲಿ ಆಗಿರುವ ಅಭಿವೃದ್ಧಿ ಬಗ್ಗೆ ಅವರು ವಿಸ್ತೃತವಾಗಿ ಮಾತನಾಡಿದ್ದಾರೆ, ವಿವರ ನೀಡಿದ್ದಾರೆ. ಇದೇ ವೇಳೆ ಅವರು ತಮ್ಮ ಸರ್ಕಾರ ನಾಲ್ಕು ಜಾತಿಗಳಿಗೆ ಹೆಚ್ಚು ಗಮನ ಕೊಡುತ್ತಿದೆ ಎಂದು ಹೇಳಿದ್ದಾರೆ. ಬಡವರು, ಮಹಿಳೆಯರು, ಯುವಸಮುದಾಯದವರು ಮತ್ತು ರೈತರು ಇವರೇ ತಮ್ಮ ಸರ್ಕಾರಕ್ಕೆ ನಾಲ್ಕು ಜಾತಿಗಳಾಗಿದ್ದು, ಇವರ ಏಳ್ಗೆ ತಮ್ಮ ಸರ್ಕಾರದ ಆದ್ಯತೆ ಆಗಿದೆ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.

2047ರಷ್ಟರಲ್ಲಿ ಭಾರತವನ್ನು ವಿಕಸಿತ ಭಾರತ ಅಥವಾ ಮುಂದುವರಿದ ದೇಶವನ್ನಾಗಿ ಮಾಡುವುದು ತಮ್ಮ ಸರ್ಕಾರದ ಸಂಕಲ್ಪ ಎಂದು ಅವರು ಹೇಳಿದರು.

‘ಕಳೆದ 10 ವರ್ಷಗಳಲ್ಲಿ ಪ್ರತಿ ಕುಟುಂಬಕ್ಕೆ ನೀರು, ಗ್ಯಾಸ್, ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಸಾಧನೆಗೆ ಸರ್ಕಾರ ಶ್ರಮಿಸಿದೆ. 80 ಕೋಟಿ ಜನರಿಗೆ ಉಚಿತ ಪಡಿತರ ನೀಡಿದ್ದೇವೆ. ಗ್ರಾಮೀಣ ಪ್ರದೇಶದ ಜನರ ಆರ್ಥಿಕತೆ ವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ.

ಲೈವ್ ಬಜೆಟ್ ಅಪ್​ಡೇಟ್ಸ್

‘ಕೇಂದ್ರದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಳವಾಗಿದೆ. ದೇಶದ ಜನರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವುದು ನಮ್ಮ ಮಾದರಿಯಾಗಿದೆ. ಬಡವರು, ಮಹಿಳೆಯರು, ಅನ್ನದಾತರ ಅಗತ್ಯಗಳು, ಅವರ ಕಲ್ಯಾಣ ನಮ್ಮ ಪ್ರಮುಖ ಆದ್ಯತೆಯಾಗಿದೆ.

‘ಯುವಕರ ಸಬಲೀಕರಣಕ್ಕೆ ಎನ್​ಇಪಿ ಜಾರಿಗೊಳಿಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸ್ಕಿಲ್ ಇಂಡಿಯಾ ಮಿಷನ್ ಅಡಿ 54 ಲಕ್ಷ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. 7 ಐಐಟಿಗಳು, 16 ಟ್ರಪಲ್ ಐಟಿಗಳು ಮತ್ತು 390 ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡಲಾಗಿದೆ.

‘ಭಾರತ ವಿಶ್ವದ ಅತಿದೊಡ್ಡ ಹಾಲಿನ ಉತ್ಪಾದಕ ದೇಶವಾಗಿದೆ. ಆದರೆ, ಹಾಲಿನ ಇಳುವರಿ ಬಹಳ ಕಡಿಮೆ. ಈ ಉದ್ಯಮ ಬಲಪಡಿಸಲು ಯೋಜನೆ ಹಾಕಿದ್ದೇವೆ’ ಎಂದು ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್​ನಲ್ಲಿ ಹೇಳಿದ್ದಾರೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ