Nirmala Sitharaman Saree: ಕಳೆದ ಬಜೆಟ್ನಲ್ಲಿ ಕರ್ನಾಟಕದ ಇಳಕಲ್ ಸೀರೆಯಲ್ಲಿ ಮಿಂಚಿದ್ದ ನಿರ್ಮಲಾ ಸೀತಾರಾಮನ್ ಈ ಬಾರಿ ನೀಲಿ ಮೆರಗು
Union Budget 2024: ನಿರ್ಮಲಾ ಸೀತಾರಾಮನ್ ಫೆ. 1ರಂದು ತಮ್ಮ ಸತತ ಆರನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಬಾರಿ ಅವರು ಪೂರ್ವಭಾರತದ ಭಾಗದಲ್ಲಿ ಸಿಗುವ ನೀಲಿ ಬಣ್ಣದ ತುಸ್ಸಾರ್ ಸೀರೆ ತೊಟ್ಟಿದ್ದಾರೆ. 2023ರ ಬಜೆಟ್ನಲ್ಲಿ ಅವರು ಕರ್ನಾಟಕ ಕೆಂಪು ಬಣ್ಣದ ಇಳಕಲ್ ಸೀರೆ ಉಟ್ಟಿದ್ದರು.
ನವದೆಹಲಿ, ಫೆಬ್ರುವರಿ 1: ನಿರ್ಮಲಾ ಸೀತಾರಾಮನ್ 2019ರಿಂದ ಬಜೆಟ್ (Interim budget) ಮಂಡಿಸುತ್ತಿದ್ದಾರೆ. ಪ್ರತೀ ವರ್ಷ ಅವರು ಯಾವ್ಯಾವುದಕ್ಕೆ ಎಷ್ಟೆಷ್ಟು ಅನುದಾನ ಕೊಡುತ್ತಾರೆ ಎನ್ನುವ ಕುತೂಹಲದ ಜೊತೆಗೆ ಅವರು ಯಾವ ರೂಢಿ ಅಥವಾ ಸಂಪ್ರದಾಯಕ್ಕೆ ತಿಲಾಂಜಲಿ ಹಾಡುತ್ತಾರೆ ಎಂಬುದೂ ಕುತೂಹಲ ಮೂಡಿಸುತ್ತದೆ. ಜೊತೆಗೆ ಅವರು ಯಾವ ಬಣ್ಣದ ಸೀರೆ ತೊಡುತ್ತಾರೆ ಎಂಬ ಕುತೂಹಲವೂ ಹಲವರಲ್ಲಿ ಇದೆ. 2019ರಿಂದ ಅವರು (Nirmala Sitharaman Saree)) ಪ್ರತೀ ಬಜೆಟ್ನಲ್ಲಿ ಬೇರೆ ಬೇರೆ ಬಣ್ಣದ ಸೀರೆ ತೊಟ್ಟಿದ್ದಾರೆ. ಕಳೆದ ವರ್ಷದ ಬಜೆಟ್ನಲ್ಲಿ (2023ರದ್ದು) ಅವರು ಕೆಂಪು ಬಣ್ಣದ ಇಳಕಲ್ ಸೀರೆ ತೊಟ್ಟು ಮಿಂಚಿದ್ದರು. ಈ ಬಾರಿಯ ಮಧ್ಯಂತರ ಬಜೆಟ್ನಲ್ಲಿ ಅವರು ನೀಲಿ ಮತ್ತು ಕ್ರೀಮ್ ಬಣ್ಣದ ಛಾಯೆ ಇರುವ ಸೀರೆ (Nirmala Sitharaman blue colour tone saree) ತೊಟ್ಟಿದ್ದಾರೆ.
ನಿರ್ಮಲಾ ಸೀತಾರಾಮನ್ ಈ ಬಾರಿ ತೊಟ್ಟಿರುವ ನೀಲಿ ಬಣ್ಣದ ಸೀತೆ ತುಸ್ಸಾರ್ ರೇಷ್ಮೆಯದ್ದು. ಪಶ್ಚಿಮ ಬಂಗಾಳ, ಬಿಹಾರ, ಝಾರ್ಖಂಡ್, ಒಡಿಶಾ ಪ್ರದೇಶಗಳಲ್ಲಿ ಸಿಗುವ ರೇಷ್ಮೆಯಿಂದ ಈ ಸೀರೆ ನೇಯಲಾಗುತ್ತದೆ.
#WATCH | Union Finance Minister Nirmala Sitharaman will present the interim budget today pic.twitter.com/irGtbAcPbP
— ANI (@ANI) February 1, 2024
ಇದನ್ನೂ ಓದಿ: ಬಜೆಟ್ ಲೈವ್ ಅಪ್ಡೇಟ್ಸ್
ಪ್ರಹ್ಲಾದ್ ಜೋಷಿ ಗಿಫ್ಟ್ ಕೊಟ್ಟಿದ್ದ ಸೀರೆ
ಕಳೆದ ವರ್ಷ ನಿರ್ಮಲಾ ಸೀತಾರಾಮನ್ ತೊಟ್ಟಿದ್ದ ಇಳಕಲ್ ಸೀರೆ ಉತ್ತರ ಕರ್ನಾಟಕದಲ್ಲಿ ಬಹಳ ಪ್ರಸಿದ್ಧವಾಗಿರುವ ಸೀರೆ. ಕೆಂಪು ಬಣ್ಣದ ಇಳಕಲ್ ಸೀರೆಯಲ್ಲಿ ಸಾಕಷ್ಟು ಕಸೂತಿ ಕಲೆ ಮೇಳೈಸಿತ್ತು. ಪ್ರಹ್ಲಾದ್ ಜೋಷಿ ಈ ಸೀರೆಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಅದನ್ನೇ ಬಜೆಟ್ ಮಂಡನೆ ದಿನ ಹಣಕಾಸು ಸಚಿವರು ತೊಟ್ಟು ಹೋಗಿದ್ದರು.
ಕರ್ನಾಟಕದಿಂದಲೇ ರಾಜ್ಯಸಭೆಗೆ ಆರಿಸಿಹೋಗಿರುವ ಅವರು ರಾಜ್ಯದ ಸೀರೆ ತೊಟ್ಟು ಅಭಿಮಾನ ತೋರ್ಪಡಿಸಿದ್ದರು. ಧಾರವಾಡದ ಆರತಿ ಕ್ರಾಫ್ಟ್ಸ್ ಎಂಬ ಸಂಸ್ಥೆ ಈ ಸೀರೆ ಮತ್ತು ಕಸೂತಿಯನ್ನು ಸಿದ್ಧಪಡಿಸಿತ್ತು.
ಹಿಂದಿನ ವರ್ಷಗಳಲ್ಲಿ ಯಾವ ಬಣ್ಣದ ಸೀರೆ ತೊಟ್ಟಿದ್ದರು ನಿರ್ಮಲಾ ಸೀತಾರಾಮನ್?
2022ರ ಬಜೆಟ್ನಲ್ಲಿ ಕೆಂಪು ಮತ್ತು ಕಂದು ಮಿಶ್ರಿತ ಬಣ್ಣದ ಸೀರೆ ತಟ್ಟಿದ್ದರು. ಅದು ಬೊಮಕಾಯ್ ರೇಷ್ಮೆ ಸೀರೆ.
2021ರಲ್ಲಿ ಅವರು ಕೆಂಪು ಮತ್ತು ಬಿಳಿ ಮಿಶ್ರಿತ ಸೀರೆ ತೊಟ್ಟಿದ್ದರು.
2020ರಲ್ಲಿ ಅವರು ಹಳದಿ ಬಣ್ಣ ಸೀರೆ ತೊಟ್ಟಿದ್ದರೆ 2019ರಲ್ಲಿ ಗುಲಾಬಿ ಬಣ್ಣದ ಮಂಗಳಗಿರಿ ಸೀರೆ ಹಾಕಿದ್ದರು.
ಇದನ್ನೂ ಓದಿ: LPG Cylinder Price Hike: ಬಜೆಟ್ಗೂ ಮುನ್ನ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ
ಇವತ್ತು ಫೆ. 1ರಂದು ನಿರ್ಮಲಾ ಸೀತಾರಾಮನ್ ತಮ್ಮ ಆರನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಇದು ಅವರಿಗೆ ಚೊಚ್ಚಲ ಮಧ್ಯಂತರ ಬಜೆಟ್. ಸತತ ಆರು ಬಜೆಟ್ ಮಂಡನೆ ಮೂಲಕ ಅವರು ಮೊರಾರ್ಜಿ ದೇಸಾಯಿ ದಾಖಲೆ ಸರಿಗಟ್ಟಲಿದ್ದಾರೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:33 am, Thu, 1 February 24