Union Budget 2024: ರಾಮಮಂದಿರ ಪ್ರತಿಷ್ಠಾಪನೆಯಂದು ಮೋದಿ ನೀಡಿದ ಭರವಸೆ ಸಾಕಾರ: ಒಂದು ಕೋಟಿ ಹೊಸ ಮನೆಗಳಿಗೆ ಸೋಲಾರ್ ಸಂಪರ್ಕ
ಒಂದು ಕೋಟಿ ಹೊಸ ಮನೆಗಳಲ್ಲಿ ಸೋಲಾರ್ ಸಂಪರ್ಕ ಕಲ್ಪಿಸಲು ನೆರವು ನೀಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮಫ್ತ್ ಬಿಜ್ಲಿ ಯೋಜನೆಯ ಅಡಿಯಲ್ಲಿ ಇದನ್ನು ಅನುಷ್ಠಾನಗೊಳಿಸಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅದರ ನೆನಪಿಗಾಗಿ ಮೇಲ್ಛಾವಣಿ ಮೇಲೆ ಸೋಲಾರ್ ಸಂಪರ್ಕಕ್ಕೆ ನೆರವು ನೀಡುವ ಬಗ್ಗೆ ಹೇಳಿದ್ದರು. ಇದೀಗ ಅದನ್ನು ಈ ಬಜೆಟ್ನಲ್ಲಿ ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ದೆಹಲಿ, ಫೆ.1: ಒಂದು ಕೋಟಿ ಹೊಸ ಮನೆಗಳಲ್ಲಿ ಸೋಲಾರ್ ಸಂಪರ್ಕ ಕಲ್ಪಿಸಲು ನೆರವು ನೀಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮಫ್ತ್ ಬಿಜ್ಲಿ (Muft Bizli) ಯೋಜನೆಯ ಅಡಿಯಲ್ಲಿ ಇದನ್ನು ಅನುಷ್ಠಾನಗೊಳಿಸಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅದರ ನೆನಪಿಗಾಗಿ ಮೇಲ್ಛಾವಣಿ ಮೇಲೆ ಸೋಲಾರ್ ಸಂಪರ್ಕಕ್ಕೆ ನೆರವು ನೀಡುವ ಬಗ್ಗೆ ಹೇಳಿದ್ದರು. ಇದೀಗ ಅದನ್ನು ಈ ಬಜೆಟ್ನಲ್ಲಿ ಅನುಷ್ಠಾನಗೊಳಿಸುತ್ತಿದ್ದೇವೆ. ಇದರಿಂದ ಆ ಕುಟುಂಬಗಳಿಗೆ 300 ಯೂನಿಟ್ ವಿದ್ಯುತ್ ಉಳಿತವಾಗಲಿದೆ. ಇದು ಒಂದು ರೀತಿಯಲ್ಲಿ ಅವರಿಗೆ ಉಚಿತ ವಿದ್ಯುತ್ ನೀಡಿಂದತೆ ಎಂದು ಹೇಳಿದ್ದಾರೆ. ಇನ್ನು ಈ ಯೋಜನೆಯಿಂದ ವಾರ್ಷಿಕವಾಗಿ 15,000 – 18,000 ರೂಪಾಯಿ ಉಳಿತಾಯ ಮಾಡಲು ಕುಟುಂಬಗಳಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಮಹತ್ವದ ಯೋಜನೆಗಳಲ್ಲಿ ಇದು ಒಂದು ಎಂದು ಹೇಳಿದ್ದಾರೆ.
ತಮ್ಮ ಸರ್ಕಾರದ ಅಭಿವೃದ್ಧಿಯ ದೃಷ್ಟಿಕೋನವು ಎಲ್ಲಾ ಜಾತಿಗಳು ಮತ್ತು ಎಲ್ಲಾ ಹಂತಗಳಲ್ಲಿ ಜನರನ್ನು ಒಳಗೊಂಡಿದೆ. ಇನ್ನು 2047 ರ ವೇಳೆಗೆ ಭಾರತವನ್ನು ‘ವಿಕಾಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ಮಾಡುವ ಗುರಿಯಿದೆ ಎಂದು ಹೇಳಿದರು. ಈ ದೃಷ್ಟಿಗೆ ಅನುಗುಣವಾಗಿ ಕೆಲವೊಂದು ಯೋಜನೆಗಳನ್ನು ತರಲಾಗಿದೆ. ಇದು ನಮ್ಮ ಪ್ರಧಾನ ಮಂತ್ರಿಗಳು ದೃಢವಾದ ನಂಬಿಕೆಯಾಗಿದೆ ಎಂದು ಹೇಳಿದರು. ನಾವು ನಾಲ್ಕು ಪ್ರಮುಖ ಜಾತಿಗಳ ಗರೀಬ್ (ಬಡವರು), ಮಹಿಳಾ (ಮಹಿಳೆಯರು), ಯುವ (ಯುವಕರು) ಮತ್ತು ಅನ್ನದಾತ (ರೈತರು)ನ್ನು ಕೇಂದ್ರೀಕರಿಸಿ ಯೋಜನೆಗಳನ್ನು ತಂದಿದ್ದೇವೆ. ಅವರ ಆಕಾಂಕ್ಷೆಗಳನ್ನು ಮತ್ತು ಅವರ ಕಲ್ಯಾಣಕ್ಕೆ ನಮ್ಮ ಹೆಚ್ಚಿನ ಆದ್ಯತೆಯಾಗಿದೆ.
ಇದನ್ನೂ ಓದಿ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಇನ್ನೂ 2 ಕೋಟಿ ಮನೆ: ನಿರ್ಮಲಾ ಸೀತಾರಾಮನ್ ಘೋಷಣೆ
ಸೀತಾರಾಮನ್ ಅವರು 2024-25ರ ಆರ್ಥಿಕ ವರ್ಷಕ್ಕೆ ಮಧ್ಯಂತರ ಬಜೆಟ್ ಮಂಡಿಸುತ್ತಿದ್ದು, ಇದು ಅವರ ಆರನೇ ಬಜೆಟ್ ಆಗಿದ್ದು. ಇನ್ನು ಈ ಮಧ್ಯಂತಾರ ಬಜೆಟ್ ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಮಂಡಿಲಿಸಲಾಗಿದೆ. ಇನ್ನು ಲೋಕಸಭೆ ಚುನಾವಣೆ ಘೋಷಣೆ ಆಗುವ ಕಾರಣ ಈ ಬಜೆಟ್ಗಾಗಿ ಮಾರ್ಚ್ 31ರವರೆಗೆ ಖರ್ಚು ಮಾಡಬಹುದು.
ಇತ್ತಷ್ಟು ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:37 pm, Thu, 1 February 24