
Modi 3.0 budget: ಕರ್ನಾಟಕದ ಸಂಸದೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರದ ಮೂರೂ ಅವಧಿಯ ಆಡಳಿತದಲ್ಲಿ ಸತತವಾಗಿ 7 ಬಜೆಟ್ ಗಳನ್ನು ಮಂಡಿಸುವ ಮೂಲಕ ಮೋದಿ ಆಡಳಿತದಲ್ಲಿ ಕಾಮನಬಿಲ್ಲು ಮೂಡಿಸಿದ್ದಾರೆ. ಅಂದರೆ ಸತತವಾಗಿ ಏಳೂ ಬಜೆಟ್ಗಳ ಮಂಡನೆ ವೇಳೆ ಏಳು ಬಣ್ಣಗಳ ವಿವಿಧ ಸೀರೆಗಳನ್ನು ಧರಿಸುವ ಮೂಲಕ ಆಧ್ಯಾತ್ಮಿಕತೆ ಸೇರಿದಂತೆ ಸಾಕಷ್ಟು ಆಯಾಮಗಳನ್ನು ಪ್ರತಿನಿಧಿಸಿದ್ದಾರೆ. ಹಾಗಾದರೆ, ದೇಶದ ವಿತ್ತ ವಲಯಕ್ಕೆ ಸಚಿವೆ ನೀಡಿದ ನಿರ್ಮಲ ಸಂದೇಶ ಏನು? ತಾವು ನಿರಂತರವಾಗಿ ಮಂಡಿಸಿದ ಏಳು ಬಜೆಟ್ಗಳಲ್ಲಿ ನಿರ್ಮಲಾ ಸೀತಾರಾಮನ್ ಅವರು ಏಳೂ ಬಾರಿಯೂ ಸೀರೆಗಳನ್ನೇ ಧರಿಸಿ ಲೋಕಸಭೆಯಲ್ಲಿ ಮಿಂಚಿದ್ದಾರೆ. ಪ್ರಸಕ್ತ 2024 ರ ಬಜೆಟ್ಗಾಗಿ ಅವರು ಧರಿಸಿರುವ ಸೀರೆ ಆಂಧ್ರಪ್ರದೇಶ ರಾಜ್ಯದ ಶೈಲಿಯದ್ದಾಗಿದೆ. ಆಫ್-ವೈಟ್ ಮಂಗಳಗಿರಿ ಸೀರೆಯನ್ನು ಉಟ್ಟಿದ್ದರು. Loading... ...
Published On - 1:24 pm, Tue, 23 July 24