ಹೊಸ ವಾತ್ಸಲ್ಯ ಎನ್​ಪಿಎಸ್ ಯೋಜನೆ; ಸಣ್ಣ ಮಕ್ಕಳಿಗೆ ಭವಿಷ್ಯ ರೂಪಿಸಲು ಪೋಷಕರಿಗಿದೋ ಅವಕಾಶ

|

Updated on: Jul 24, 2024 | 3:20 PM

NPS Vatsalya Scheme for minors: ನಿರ್ಮಲಾ ಸೀತಾರಾಮನ್ ಜುಲೈ 23ರಂದು ಮಂಡಿಸಿದ ಬಜೆಟ್​ನಲ್ಲಿ ವಾತ್ಸಲ್ಯ ಎನ್​ಪಿಎಸ್ ಸ್ಕೀಮ್ ಪ್ರಕಟಿಸಲಾಯಿತು. ಇದು ಅಪ್ರಾಪ್ತ ಮಕ್ಕಳ ಹೆಸರಲ್ಲಿ ಆರಂಭಿಸಬಹುದಾದ ನ್ಯಾಷನಲ್ ಪೆನ್ಷನ್ ಸಿಸ್ಟಂ ಯೋಜನೆಯಾಗಿದೆ. ಮಗು ಹೆಸರಲ್ಲಿ ಆರಂಭಿಸುವ ಈ ಖಾತೆ ಆ ಮಗು 18 ವರ್ಷ ವಯಸ್ಸು ಪೂರ್ಣಗೊಂಡ ಬಳಿಕ ರೆಗ್ಯುಲರ್ ಎನ್​ಪಿಎಸ್ ಆಗಿ ಪರಿವರ್ತಿತವಾಗುತ್ತದೆ.

ಹೊಸ ವಾತ್ಸಲ್ಯ ಎನ್​ಪಿಎಸ್ ಯೋಜನೆ; ಸಣ್ಣ ಮಕ್ಕಳಿಗೆ ಭವಿಷ್ಯ ರೂಪಿಸಲು ಪೋಷಕರಿಗಿದೋ ಅವಕಾಶ
ವಾತ್ಸಲ್ಯ ಎನ್​ಪಿಎಸ್
Follow us on

ಬೆಂಗಳೂರು, ಜುಲೈ 24: ನಿನ್ನೆ ಬಜೆಟ್​ನಲ್ಲಿ ಗಮನ ಸೆಳೆದ ಹೊಸ ಸ್ಕೀಮ್​ಗಳಲ್ಲಿ ಎನ್​​ಪಿಎಸ್ ವಾತ್ಸಲ್ಯ (NPS Vatsalya) ಇದೆ. ಇದು ಎನ್​ಪಿಎಸ್​ನ ಇನ್ನೊಂದು ಅವತಾರ. ಯಾವುದೇ ವಯಸ್ಸಿನ ಸಣ್ಣ ಮಕ್ಕಳ ಹೆಸರಲ್ಲಿ ಅವರ ತಂದೆ ತಾಯಿ ಅಥವಾ ಪಾಲಕರು ಈ ವಾತ್ಸಲ್ಯ ಎನ್​ಪಿಎಸ್ ಖಾತೆ ಆರಂಭಿಸಬಹುದು. ಆ ಮಗು ಪ್ರಾಪ್ತ ವಯಸ್ಸಿಗೆ ಬಂದಾಗ, ಅಂದರೆ 18 ವರ್ಷ ವಯಸ್ಸಿನ ಗಡಿ ದಾಟಿದಾರ ವಾತ್ಸಲ್ಯ ಎನ್​ಪಿಎಸ್ ಖಾತೆಯು ರೆಗ್ಯುಲರ್ ಎನ್​ಪಿಎಸ್ ಖಾತೆಯಾಗಿ ಪರಿವರ್ತನೆ ಆಗುತ್ತದೆ. ಅದಾದ ಬಳಿಕ ಆ ಮಗು ತಾನೇ ಎನ್​ಪಿಎಸ್ ಖಾತೆಯನ್ನು ನಿರ್ವಹಿಸಿಕೊಂಡು ಹೋಗಲು ಅವಕಾಶ ಇರುತ್ತದೆ. ಮಗು ದೊಡ್ಡದಾಗುವುದರೊಳಗೆ ಅದರ ಬಾಳಿಗೊಂದು ಹಣಕಾಸು ಬುನಾದಿ ಹಾಕಲು ಪೋಷಕರಿಗೆ ಇದರಿಂದ ಸಾಧ್ಯವಾಗುತ್ತದೆ. ಹಾಗೆಯೇ, ಮಗು ದೊಡ್ಡದಾದ ಬಳಿಕ ಬಹಳ ಬೇಗನೇ ಉಳಿತಾಯ ಇತ್ಯಾದಿ ಹಣಕಾಸು ಶಿಸ್ತು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ.

ಎನ್​ಪಿಎಸ್ ಯೋಜನೆ ಏನು?

ನ್ಯಾಷನಲ್ ಪೆನ್ಷನ್ ಸಿಸ್ಟಂ ಅಥವಾ ಎನ್​ಪಿಎಸ್ ಎಂಬುದು ಕೇಂದ್ರ ಸರ್ಕಾರದಿಂದ ರೂಪಿಸಲಾಗಿರುವ ಪಿಂಚಣಿ ಯೋಜನೆ. ಮೊದಲಿಗೆ ಇದು ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿತ್ತು. ಈಗ ಕಾರ್ಪೊರೇಟ್ ಸಂಸ್ಥೆಗಳೂ ಕೂಡ ತಮ್ಮ ಉದ್ಯೋಗಿಗಳನ್ನು ಎನ್​ಪಿಎಸ್​ಗೆ ಜೋಡಿಸಬಹುದು. ಹಾಗೆಯೇ ಸಾರ್ವತ್ರಿಕವಾಗಿ ಯಾರು ಬೇಕಾದರೂ ಎನ್​ಪಿಎಸ್ ಪಡೆಯಬಹುದು.

ಇದನ್ನೂ ಓದಿ: Old or new tax regime: ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಳದ ಬಳಿಕ ಹೊಸ ಟ್ಯಾಕ್ಸ್ ರೆಜಿಮೆ ಸೂಕ್ತ ಎನಿಸುತ್ತಾ?

ಈ ಮೊದಲು ಎನ್​ಪಿಎಸ್ 18 ವರ್ಷದಿಂದ 70 ವರ್ಷ ವಯೋಮಾನದೊಳಗೆ ಇರಬೇಕು. ಎನ್​ಆರ್​ಐಗಳೂ ಕೂಡ ಈ ಸ್ಕೀಮ್ ಪಡೆಯಬಹುದು. ಈಗ ಅಪ್ರಾಪ್ತ ವಯಸ್ಕರ ಹೆಸರಲ್ಲೂ ಎನ್​ಪಿಎಸ್ ಖಾತೆ ಆರಂಭಿಸಬಹುದು.

ಕಂಪನಿಗಳಿಂದ ಉದ್ಯೋಗಿಗಳಿಗೆ ನೀಡುವ ಎನ್​ಪಿಎಸ್ ಕೊಡುಗೆ ಮಿತಿ ಹೆಚ್ಚಳ

ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಎನ್​ಪಿಎಸ್ ಖಾತೆಗೆ ಅವರ ಮೂಲ ವೇತನದ ಶೇ. 10ರಷ್ಟು ಹಣವನ್ನು ಜಮೆ ಮಾಡಲು ಅವಕಾಶ ಇದೆ. ಈಗ ಅದನ್ನು ಶೇ. 14ಕ್ಕೆ ಹೆಚ್ಚಿಸಲಾಗಿದೆ. ಉದಾಹರಣೆಗೆ, ಉದ್ಯೋಗಿಯ ಮೂಲವೇತನ ಮತ್ತು ಡಿಎ ಸೇರಿ ತಿಂಗಳಿಗೆ 30,000 ರೂ ಇದ್ದಲ್ಲಿ ಕಂಪನಿ 4,200 ರೂವರೆಗೆ ಕೊಡುಗೆ ನೀಡಲು ಅವಕಾಶ ಇರುತ್ತದೆ. ಗಮನಿಸಬೇಕಾದ ಸಂಗತಿ ಎಂದರೆ ಕಂಪನಿ ಉದ್ಯೋಗಿಯ ಎನ್​ಪಿಎಸ್ ಖಾತೆಗೆ ಶೇ. 14ರಷ್ಟು ಹಣವನ್ನು ಜಮೆ ಮಾಡುವುದು ಕಡ್ಡಾಯವಲ್ಲ. ಅದು ಕಂಪನಿಯ ಐಚ್ಛಿಕ ಮಾತ್ರ.

ಇದನ್ನೂ ಓದಿ: ಆಮದು ಸುಂಕ ಕಡಿತದಿಂದ ಚಿನ್ನದ ಬೆಲೆ ಎಷ್ಟು ಕಡಿಮೆ ಆಗಬಹುದು? 10 ಗ್ರಾಮ್​ಗೆ 6,000 ರೂವರೆಗೂ ಬೆಲೆ ಇಳಿಕೆ ಸಾಧ್ಯತೆ

ಎನ್​ಪಿಎಸ್ ಸ್ಕೀಮ್ ಪಡೆಯುವುದು ಹೇಗೆ?

ನ್ಯಾಷನಲ್ ಪೆನ್ಷನ್ ಸ್ಕೀಮ್​ಗೆಂದು ರೂಪಿಸಲಾಗಿರುವ ಪೋರ್ಟಲ್​ನಲ್ಲಿ ಈ ಸ್ಕೀಮ್ ಆರಂಭಿಸಬಹುದು. ಪ್ರಮುಖ ಬ್ಯಾಂಕುಗಳಿಂದಲೂ ಎನ್​ಪಿಎಸ್ ಖಾತೆ ಆರಂಭಿಸಬಹುದು.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ