ಆಮದು ಸುಂಕ ಕಡಿತದಿಂದ ಚಿನ್ನದ ಬೆಲೆ ಎಷ್ಟು ಕಡಿಮೆ ಆಗಬಹುದು? 10 ಗ್ರಾಮ್​ಗೆ 6,000 ರೂವರೆಗೂ ಬೆಲೆ ಇಳಿಕೆ ಸಾಧ್ಯತೆ

|

Updated on: Jul 24, 2024 | 10:52 AM

Effects of gold, silver customs duty cut: ಚಿನ್ನದ ಬೆಲೆ ಬಜೆಟ್ ಬಳಿಕ ಇಳಿಯತೊಡಗಿದೆ. ಕೇಂದ್ರ ಬಜೆಟ್​ನಲ್ಲಿ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲಾಗಿದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 600 ರೂನಷ್ಟು ಕಡಿಮೆ ಆಗಬಹುದು. ಬೆಳ್ಳಿ, ಪ್ಲಾಟಿನಂ ಬೆಲೆಗಳಲ್ಲೂ ಇಳಿಕೆ ಆಗಬಹುದು ಎನ್ನಲಾಗಿದೆ.

ಆಮದು ಸುಂಕ ಕಡಿತದಿಂದ ಚಿನ್ನದ ಬೆಲೆ ಎಷ್ಟು ಕಡಿಮೆ ಆಗಬಹುದು? 10 ಗ್ರಾಮ್​ಗೆ 6,000 ರೂವರೆಗೂ ಬೆಲೆ ಇಳಿಕೆ ಸಾಧ್ಯತೆ
ಚಿನ್ನ
Follow us on

ಬೆಂಗಳೂರು, ಜುಲೈ 24: ನಿನ್ನೆ ಮಂಗಳವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್​ನಲ್ಲಿ ಚಿನ್ನ, ಬೆಳ್ಳಿ, ಪ್ಲಾಟಿನಂ ಇತ್ಯಾದಿ ಅಮೂಲ್ಯ ಲೋಹಗಳ ಮೇಲೆ ಆಮದು ಸುಂಕವನ್ನು ಕಡಿಮೆಗೊಳಿಸಿದ್ದಾರೆ. ಇದರಿಂದಾಗಿ ಇವುಗಳ ಆಮದು ವೆಚ್ಚ ಕಡಿಮೆ ಆಗುತ್ತದೆ. ಅದರ ಪರಿಣಾಮದಿಂದ ಆಭರಣಗಳ ಬೆಲೆಯೂ ಇಳಿಕೆ ಆಗುತ್ತದೆ. ಈಗಾಗಲೇ ಚಿನ್ನ ಮತ್ತು ಬೆಳ್ಳಿ ಬೆಲೆ ಕಡಿಮೆ ಆಗತೊಡಗಿದೆ. ಚಿನ್ನ ಮತ್ತು ಬೆಳ್ಳಿ ಮೇಲೆ ಮೂಲ ಆಮದು ಸುಂಕವನ್ನು ಶೇ. 6ಕ್ಕೆ ಇಳಿಸಲಾಗಿದೆ. ಈ ಮುಂಚೆ ಈ ಮೂಲ ಆಮದು ಸುಂಕ ಶೇ. 10 ಇತ್ತು. ಮತ್ತು ಎಐಡಿಸಿ (ಅಗ್ರಿಕಲ್ಚರ್ ಇನ್​ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಸೆಸ್) ಶುಲ್ಕ ಶೇ. 5 ಇತ್ತು. ಬಜೆಟ್​ನಲ್ಲಿ 4 ಪ್ರತಿಶತ ಅಂಕಗಳಷ್ಟು ಮೂಲ ಆಮದು ಸುಂಕದಲ್ಲಿ ಇಳಿಕೆ ಮಾಡಲಾಗಿ. ಆದರೆ, ಎಐಡಿಸಿ ಶುಲ್ಕ ಮುಂದುವರಿದಿದೆ. ಇದರೊಂದಿಗೆ ಚಿನ್ನ ಮತ್ತು ಬೆಳ್ಳಿ ಮೇಲೆ ಆಮದು ಸುಂಕ ಶೇ. 15 ಇದ್ದದ್ದು ಶೇ. 11ಕ್ಕೆ ಇಳಿದಂತಾಗುತ್ತದೆ.

ಸಖತ್ ಕಡಿಮೆ ಆಗುತ್ತಿರುವ ಚಿನ್ನದ ಬೆಲೆ

24 ಕ್ಯಾರಟ್​ನ ಚಿನ್ನದ ಬೆಲೆ ಸೋಮವಾರ ಗ್ರಾಮ್​ಗೆ 7,146 ರೂ ಇತ್ತು. ನಿನ್ನೆ ಮಂಗಳವಾರ ಅದರ ಬೆಲೆ 6,793 ರೂಗೆ ಇಳಿದಿದೆ. ಮೂಲಗಳ ಪ್ರಕಾರ ಚಿನ್ನದ ಬೆಲೆ ಗ್ರಾಮ್​ಗೆ 590 ರೂವರೆಗೂ ಇಳಿಕೆ ಆಗಬಹುದು. ಹತ್ತಿರ ಹತ್ತಿರ 6,000 ರೂವರೆಗೂ ಕುಸಿಯಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಜೆಟ್​ನಿಂದ ಷೇರುಪೇಟೆ ಅಲುಗಾಡಲು ಏನು ಕಾರಣ? ಮಾರುಕಟ್ಟೆಯಿಂದ ದೂರವಾಗ್ತಾರಾ ಹೂಡಿಕೆದಾರರು?

ಇನ್ನು, ಬೆಳ್ಳಿ ಬೆಲೆ ಗ್ರಾಮ್​ಗೆ 7.6 ರೂವರೆಗೂ ಕಡಿಮೆ ಆಗಬಹುದು ಎಂದೂ ಹೇಳಲಾಗುತ್ತಿದೆ. ಇದರ ಬೆಲೆ ಗ್ರಾಮ್​ಗೆ 90.50 ರೂ ಇತ್ತು. ಬೆಲೆ 87.50 ರೂಗೆ ಇಳಿದಿದೆ. ಈ ಬೆಳ್ಳಿ ಬೆಲೆ ಕೂಡ ಗ್ರಾಮ್​ಗೆ 80 ರೂವರೆಗೂ ಇಳಿಕೆ ಆಗುವ ಸಾಧ್ಯತೆ ಇದೆ.

ಸ್ಮಗ್ಲಿಂಗ್ ಕಡಿಮೆ ಮಾಡಲು ಈ ಕ್ರಮ

ಭಾರತ ಹಾಗೂ ಇತರ ಪ್ರಮುಖ ದೇಶಗಳಲ್ಲಿನ ಚಿನ್ನದ ಬೆಲೆಯಲ್ಲಿ ಬಹಳ ವ್ಯತ್ಯಾಸ ಇದೆ. ದುಬೈ, ಅಮೆರಿಕ, ಮಲೆಷ್ಯಾ ಮೊದಲಾದ ದೇಶಗಳಲ್ಲಿ ಚಿನ್ನದ ಬೆಲೆ ಭಾರತದಲ್ಲಿಗಿಂತ ಬಹಳ ಕಡಿಮೆ ಇದೆ. ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 7,000 ರೂ ಇದ್ದರೆ, ಕುವೇತ್​ನಲ್ಲಿ 6,000 ರೂಗಿಂತ ಕಡಿಮೆ ಇದೆ. ಹೆಚ್ಚಿನ ದೇಶಗಳಲ್ಲಿ ಚಿನ್ನದ ಬೆಲೆ 6,100 ರೂ ಆಸುಪಾಸಿನಲ್ಲಿ ಇದೆ.

ಇದನ್ನೂ ಓದಿ: ತಂಬಾಕು ತೆರಿಗೆ ಹೆಚ್ಚಳ ಇಲ್ಲ, ಏರಿಕೆ ಆಗಲ್ಲ ಸಿಗರೇಟ್ ಬೆಲೆ

ಇತ್ತೀಚಿನ ದಿನಗಳಲ್ಲಿ ವಿದೇಶಗಳಿಂದ ಭಾರತಕ್ಕೆ ಚಿನ್ನವನ್ನು ಕಳ್ಳಸಾಗಾಣಿಕೆ ಮಾಡುವುದು ಹೆಚ್ಚಾಗಿತ್ತು. ಈಗ ಚಿನ್ನದ ಮೇಲೆ ಆಮದು ಸುಂಕವನ್ನು ಕಡಿಮೆಗೊಳಿಸಿರುವ ಪರಿಣಾಮವಾಗಿ ಸ್ಮಗ್ಲಿಂಗ್ ಮಾಡುವ ಅಗತ್ಯ ತಪ್ಪುತ್ತದೆ. ಸರ್ಕಾರ ಆಮದು ಸುಂಕದ ದರ ಇಳಿಸಿದರೂ ಒಟ್ಟಾರೆಯಾಗಿ ಲಾಭ ಪಡೆಯುವುದು ಮುಂದುವರಿಯುತ್ತದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ