ಬಜೆಟ್​ನಿಂದ ಷೇರುಪೇಟೆ ಅಲುಗಾಡಲು ಏನು ಕಾರಣ? ಮಾರುಕಟ್ಟೆಯಿಂದ ದೂರವಾಗ್ತಾರಾ ಹೂಡಿಕೆದಾರರು?

Budget effects on stock market: ಇಂದು ಮಂಗಳವಾರ ಮಂಡನೆಯಾದ ಬಜೆಟ್​ನಿಂದಾಗಿ ಷೇರು ಮಾರುಕಟ್ಟೆ ಸಾಕಷ್ಟು ಕುಸಿತ ಕಂಡಿತು. ಸೆನ್ಸೆಕ್ಸ್, ನಿಫ್ಟಿ ಸೇರಿದಂತೆ ಪ್ರಮುಖ ಸೂಚ್ಯಂಕಗಳು ಹಿನ್ನಡೆ ಕಂಡವು. ಎಸ್​ಟಿಟಿ ತೆರಿಗೆ ಹೆಚ್ಚಳ, ಎಲ್​ಟಿಸಿಜಿ, ಎಸ್​ಟಿಸಿಜಿ ತೆರಿಗೆ ಹೆಚ್ಚಳ, ಷೇರು ಮರುಖರೀದಿಸುವಾಗ ತೆರಿಗೆ ವಿಧಿಸಿದ್ದು ಈ ಹಿನ್ನಡೆಗೆ ಕಾರಣವಾಗಿರಬಹುದು.

ಬಜೆಟ್​ನಿಂದ ಷೇರುಪೇಟೆ ಅಲುಗಾಡಲು ಏನು ಕಾರಣ? ಮಾರುಕಟ್ಟೆಯಿಂದ ದೂರವಾಗ್ತಾರಾ ಹೂಡಿಕೆದಾರರು?
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 23, 2024 | 6:50 PM

ನವದೆಹಲಿ, ಜುಲೈ 23: ನಿನ್ನೆ ಬಜೆಟ್ ನಿರೀಕ್ಷೆಯಲ್ಲಿ ಗರಿಗೆದರಿದ್ದ ಷೇರು ಮಾರುಕಟ್ಟೆ ಇವತ್ತು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿರುವಂತೆಯೇ ಕುಸಿತಕ್ಕೊಳಗಾಯಿತು. ಬಿಎಸ್​ಇ ಮತ್ತು ಎನ್​ಎಸ್​ಇಯ ಹೆಚ್ಚಿನ ಸೂಚ್ಯಂಕಗಳು ಕುಸಿತ ಕಂಡವು. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕ ಹೆಚ್ಚು ಸಂಖ್ಯೆಯ ಅಂಕಗಳ ಹಿನ್ನಡೆ ಕಂಡವು. ದಿನಾಂತ್ಯದ ವೇಳೆಗೆ ತುಸು ಚೇತರಿಕೆ ಕಂಡರೂ ಒಟ್ಟಾರೆ ಷೇರು ಮಾರುಕಟ್ಟೆಗೆ ಇಂದು ಹಿನ್ನಡೆಯ ದಿನವಾಗಿತ್ತು.

ಸೆನ್ಸೆಕ್ಸ್​ನ ಪ್ರಮುಖ ಸೂಚ್ಯಂಕಗಳೆಲ್ಲವೂ ಕುಸಿತ ಕಂಡಿವೆ. ಐಟಿ, ವಾಹನ, ಕನ್ಸೂಮರ್, ಎಫ್​ಎಂಸಿಜಿ ಇತ್ಯಾದಿ ಕೆಲವೇ ವಲಯವಾರು ಸೂಚ್ಯಂಕಗಳು ಮಾತ್ರವೇ ಹಸಿರು ಬಣ್ಣದಲ್ಲಿವೆ.

ಇದನ್ನೂ ಓದಿ: ಎಸ್​ಟಿಟಿ, ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್ ದರಗಳ ಹೆಚ್ಚಳ; ಷೇರು ಹೂಡಿಕೆದಾರರಿಗೆ ಬಜೆಟ್ ಕಹಿ

ಎನ್​ಎಸ್​ಇಯಲ್ಲೂ ನಿಫ್ಟಿ50 ಸೇರಿದಂತೆ ಪ್ರಮುಖ ಸೂಚ್ಯಂಕಗಳು ಹಿನ್ನಡೆ ಹೊಂದಿವೆ. ಐಟಿ, ಆಟೊ, ಫಾರ್ಮಾ, ಎಫ್​ಎಂಸಿಜಿ, ಮೀಡಿಯಾ, ಕನ್ಸಂಪ್ಷನ್ ಇತ್ಯಾದಿ ಸೆಕ್ಟೋರಲ್ ಇಂಡೆಕ್ಸ್​ಗಳು ಮಾತ್ರವೇ ಅಂಕ ಹೆಚ್ಚಿಸಿಕೊಂಡಿವೆ. ಒಟ್ಟಾರೆ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಸ್ಟಾಕ್​ಗಳು ತೀರಾ ಕುಸಿತ ಕಂಡಿರುವುದು ಗಮನಾರ್ಹ.

ಷೇರು ಮಾರುಕಟ್ಟೆ ಕುಸಿಯಲು ಈ ತೆರಿಗೆ ಹೆಚ್ಚಳವೇ ಕಾರಣ

ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್​ನಲ್ಲಿ ಷೇರು ವ್ಯವಹಾರದಲ್ಲಿ ಮೂರು ರೀತಿಯ ತೆರಿಗೆ ಹೆಚ್ಚಳ ಕ್ರಮ ಕೈಗೊಂಡಿದ್ದಾರೆ. ಮೊದಲನೆಯದು, ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ ಅಥವಾ ಎಸ್​ಟಿಟಿ. ಎರಡನೆಯದು ಕ್ಯಾಪಿಟಲ್ ಗೇಯ್ನ್ ಟ್ಯಾಕ್ಸ್​ಗಳಲ್ಲಿ ಹೆಚ್ಚಳ. ಅಂದರೆ ದೀರ್ಘಾವಧಿ ಲಾಭ ಹೆಚ್ಚಳ ತೆರಿಗೆ ಮತ್ತು ಅಲ್ಪಾವಧಿ ಲಾಭ ಹೆಚ್ಚಳ ತೆರಿಗೆಯನ್ನು ಏರಿಸಲಾಗಿದೆ. ಮೂರನೆಯದು, ಷೇರು ಮರುಖರೀದಿಸುವಾಗ ತೆರಿಗೆ ಹಾಕಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: Union Budget 2024 Size: 48 ಲಕ್ಷ ಕೋಟಿ ರೂ ಗಾತ್ರದ ದಾಖಲೆ ಬಜೆಟ್; ಎಲ್ಲೆಲ್ಲಿಂದ ಬರುತ್ತೆ ಹಣ? ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಹಣ? ಇಲ್ಲಿದೆ ಡೀಟೇಲ್ಸ್

ಈ ಮೂರೂ ತೆರಿಗೆ ಕೂಡ ಸರ್ಕಾರಕ್ಕೆ ಆದಾಯ ಹೆಚ್ಚಿಸಲಿವೆ. ಎಫ್ ಅಂಡ್ ಒ ಟ್ರೇಡಿಂಗ್​ನಲ್ಲಿ ಮಾತ್ರವೇ ಎಸ್​ಟಿಟಿ ತೆರಿಗೆ ಏರಿಸಲಾಗಿರುವುದು. ಫ್ಯೂಚರ್ಸ್ ಟ್ರೇಡಿಂಗ್​ನಲ್ಲಿ ಶೇ. 0.0125ರಷ್ಟಿದ್ದ ಸೆಕ್ಯೂರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ ಅನ್ನು ಶೇ. 0.02ಕ್ಕೆ ಏರಿಸಲಾಗಿದೆ. ಆಪ್ಷನ್ಸ್ ಟ್ರೆಡಿಂಗ್​ನಲ್ಲಿ ಎಸ್​ಟಿಟಿಯನ್ನು ಶೇ. 0.0625ರಿಂದ ಶೇ. 0.1ಕ್ಕೆ ಏರಿಸಲಾಗಿದೆ.

ಇನ್ನು, ಷೇರು ಮಾರುವಾಗ ಅನ್ವಯ ಆಗುವ ತೆರಿಗೆ ಪೈಕಿ ಎಸ್​ಟಿಸಿಜಿ ತೆರಿಗೆಯನ್ನು ಶೇ. 15ರಿಂದ ಶೇ. 20ಕ್ಕೆ ಹೆಚ್ಚಿಸಲಾಗಿದೆ. ಎಲ್​ಟಿಸಿಜಿ ತೆರಿಗೆಯನ್ನು ಶೇ. 10ರಿಂದ ಶೇ. 12.50ಗೆ ಹೆಚ್ಚಿಸಲಾಗಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ