AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Union Budget 2024 Size: 48 ಲಕ್ಷ ಕೋಟಿ ರೂ ಗಾತ್ರದ ದಾಖಲೆ ಬಜೆಟ್; ಎಲ್ಲೆಲ್ಲಿಂದ ಬರುತ್ತೆ ಹಣ? ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಹಣ? ಇಲ್ಲಿದೆ ಡೀಟೇಲ್ಸ್

Budget Revenue and expenditure details: ನಿರ್ಮಲಾ ಸೀತಾರಾಮನ್ ಅವರ ಏಳನೇ ಬಜೆಟ್​ನ ಗಾತ್ರ ಅಂದಾಜು 48.21 ಲಕ್ಷ ಕೋಟಿ ರೂನದ್ದಾಗಿದೆ. ಆದಾಯ ತೆರಿಗೆ, ಜಿಎಸ್​ಟಿ ತೆರಿಗೆ, ವಿವಿಧ ಉಳಿತಾಯ ಯೋಜನೆ ಮೂಲಕ ಸರ್ಕಾರ ಹಣ ಪಡೆಯುತ್ತದೆ. ಆಂತರಿಕ ಮತ್ತು ಬಾಹ್ಯ ಸಾಲಗಳಿಗೆ ಬಡ್ಡಿ ಕೊಡುವುದು ಇತ್ಯಾದಿ ಹಲವು ವೆಚ್ಚಗಳನ್ನು ಸರ್ಕಾರ ಮಾಡುತ್ತದೆ.

Union Budget 2024 Size: 48 ಲಕ್ಷ ಕೋಟಿ ರೂ ಗಾತ್ರದ ದಾಖಲೆ ಬಜೆಟ್; ಎಲ್ಲೆಲ್ಲಿಂದ ಬರುತ್ತೆ ಹಣ? ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಹಣ? ಇಲ್ಲಿದೆ ಡೀಟೇಲ್ಸ್
ನಿರ್ಮಲಾ ಸೀತಾರಾಮನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 23, 2024 | 5:57 PM

Share

ನವದೆಹಲಿ, ಜುಲೈ 23: ಕೇಂದ್ರ ಸಚಿವೆ ತಮ್ಮ ಏಳನೇ ಮುಂಗಡಪತ್ರದಲ್ಲಿ ದಾಖಲೆ ಬರೆದಿದ್ದಾರೆ. 48.21 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. 2023ರ ಬಜೆಟ್​ನಲ್ಲಿ 44.90 ಲಕ್ಷ ಕೋಟಿ ರೂ ಮೊತ್ತದ ಬಜೆಟ್ ನೀಡಿದ್ದರು. 2024ರ ಮಧ್ಯಂತರ ಬಜೆಟ್ 47 ಲಕ್ಷ ಕೋಟಿ ರೂ ಮೊತ್ತದಿತ್ತು. ಈ ಬಾರಿ ಬಜೆಟ್ ಗರಿಷ್ಠ ಮಟ್ಟಕ್ಕೆ ಹೋಗಿದೆ. ಆದಾಯ ತೆರಿಗೆ, ಜಿಎಸ್​ಟಿ ತೆರಿಗೆ, ಸಾಲ ಇತ್ಯಾದಿಗಳಿಂದ ಸರ್ಕಾರಕ್ಕೆ ಹಣ ಹರಿದುಬರುತ್ತದೆ. ಇದರಲ್ಲಿ ವಿವಿಧ ತೆರಿಗೆಗಳ ಮೂಲಕ 31 ಲಕ್ಷ ಕೋಟಿ ರೂಗೂ ಅಧಿಕ ಆದಾಯ ಸರ್ಕಾರಕ್ಕೆ ಬರುತ್ತದೆ. ಸರ್ಕಾರದ ಪ್ರಮುಖ ವೆಚ್ಚದಲ್ಲಿ 11.6 ಲಕ್ಷ ಕೋಟಿ ರೂ ಒಳಗೊಂಡಿದೆ.

ಸರ್ಕಾರಕ್ಕೆ ಆದಾಯ ಮತ್ತು ಹಣದ ಹರಿವು ಎಲ್ಲೆಲ್ಲಿಂದ ಬರುತ್ತದೆ?

ಬಜೆಟ್​ನಲ್ಲಿ ಸ್ವೀಕೃತಿ ಮತ್ತು ವೆಚ್ಚ ಎಂದು ವಿಭಾಗಿಸಲಾಗಿದೆ. ಸ್ವೀಕೃತಿಯಲ್ಲಿ ರಾಜಸ್ವ ಸಂಗ್ರಹ ಮತ್ತು ಬಂಡವಾಳ ಸಂಗ್ರಹ ಇದೆ. ಇವೆಲ್ಲವೂ ಸೇರಿ ಸರ್ಕಾರಕ್ಕೆ 48.21 ಲಕ್ಷ ಕೋಟಿ ರೂ ಬರುವ ನಿರೀಕ್ಷೆ ಇದೆ. ಈ ಹಣವನ್ನು ಸರ್ಕಾರ ವಿವಿಧ ಯೋಜನೆಗಳಿಗೆ ವಿನಿಯೋಗಿಸುತ್ತದೆ.

ಬಜೆಟ್ ಗಾತ್ರ ಅಂದಾಜು 48.21 ಲಕ್ಷ ಕೋಟಿ ರೂ

  • ಬಂಡವಾಳ ಸ್ವೀಕೃತಿ: 16.61 ಲಕ್ಷ ಕೋಟಿ ರೂ
  • ಟ್ಯಾಕ್ಸ್ ಸಂಗ್ರಹ: 25.84 ಲಕ್ಷ ಕೋಟಿ ರೂ
  • ತೆರಿಗೆಯೇತರ ಆದಾಯ: 5.46 ಲಕ್ಷ ಕೋಟಿ ರೂ
  • ಮಾರುಕಟ್ಟೆಗಳಿಂದ ಪಡೆಯುವ ಸಾಲ: 11.63 ಲಕ್ಷ ಕೋಟಿ ರೂ
  • ಸ್ಮಾಲ್ ಸೇವಿಂಗ್ಸ್ ಸ್ಕೀಮ್, ಪಿಎಫ್ ಇತ್ಯಾದಿ ಫಂಡ್​ಗಳಿಂದ: 4.50 ಲಕ್ಷ ಕೋಟಿ ರೂ
  • ಎನ್​​ಡಿಸಿಎಆರ್: 78 ಸಾವಿರ ಕೋಟಿ ರೂ
  • ಜಿಎಸ್​ಟಿ: 10.62 ಲಕ್ಷ ಕೋಟಿ ರೂ
  • ಕೇಂದ್ರ ಅಬಕಾರಿ ಸುಂಕ: 3.19 ಲಕ್ಷ ಕೋಟಿ ರೂ
  • ಆದಾಯ ತೆರಿಗೆ: 11.87 ಲಕ್ಷ ಕೋಟಿ ರೂ
  • ಕಾರ್ಪೊರೇಶನ್ ತೆರಿಗೆ: 10.20 ಲಕ್ಷ ಕೋಟಿ ರೂ
  • ಅಬಕಾರಿ ಸುಂಕ: 2.38 ಲಕ್ಷ ಕೋಟಿ ರೂ
  • ಇತರೆ ತೆರಿಗೆ: 14,000 ಕೋಟಿ ರೂ

ಇದನ್ನೂ ಓದಿ: Budget Memes: ಬಜೆಟ್ ಮುಗಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಮಧ್ಯಮ ವರ್ಗದ ಮೀಮ್ಸ್​ ಸುರಿಮಳೆ

  • ಬಡ್ಡಿಯಿಂದ ಬರುವ ಆದಾಯ: 38,000 ಕೋಟಿ ರೂ
  • ಡಿವಿಡೆಂಡ್ ಆದಾಯ: 2.89 ಲಕ್ಷ ಕೋಟಿ ರೂ
  • ಇತರೆ ಆದಾಯ: 2.19 ಲಕ್ಷ ಕೋಟಿ ರೂ

ಯಾವ್ಯಾವ ಇಲಾಖೆಗೆ ಮತ್ತು ಸಚಿವಾಲಯಕ್ಕೆ ಎಷ್ಟು ಹಣ ವಿನಿಯೋಗ?

  • ಬಡ್ಡಿಗಳಿಗೆ: 11.63 ಲಕ್ಷ ಕೋಟಿ ರೂ
  • ಸಾರಿಗೆ: 5.44 ಲಕ್ಷ ಕೋಟಿ ರೂ
  • ರಕ್ಷಣಾ ಇಲಾಖೆ: 4.54 ಲಕ್ಷ ಕೋಟಿ ರೂ
  • ಗ್ರಾಮೀಣಾಭಿವೃದ್ಧಿ: 2.65 ಲಕ್ಷ ಕೋಟಿ ರೂ
  • ಪಿಂಚಣಿ: 2.43 ಲಕ್ಷ ಕೋಟಿ ರೂ
  • ಐಟಿ ಮತ್ತು ಟೆಲಿಕಾಂ: 1.16 ಲಕ್ಷ ಕೋಟಿ ರೂ
  • ರಸಗೊಬ್ಬರ ಸಬ್ಸಿಡಿ: 1.64 ಲಕ್ಷ ಕೋಟಿ ರೂ
  • ಆಹಾರ ಸಬ್ಸಿಡಿ: 2.05 ಲಕ್ಷ ಕೋಟಿ ರೂ
  • ಗೃಹ ಇಲಾಖೆ: 1.50 ಲಕ್ಷ ಕೋಟಿ ರೂ
  • ಪೆಟ್ರೋಲಿಯಂ ಸಬ್ಸಿಡಿ: 11,925 ಕೋಟಿ ರೂ
  • ಕೃಷಿ ಸಂಬಂಧಿಸಿದ ಸಬ್ಸಿಡಿ: 1.51 ಲಕ್ಷ ಕೋಟಿ ರೂ
  • ಶಿಕ್ಷಣ: 1.25 ಲಕ್ಷ ಕೋಟಿ ರೂ
  • ವಾಣಿಜ್ಯ ಮತ್ತು ಕೈಗಾರಿಕೆ: 47,559 ಕೋಟಿ ರೂ
  • ಈಶಾನ್ಯ ಭಾರತದ ಅಭಿವೃದ್ಧಿ: 5,900 ಕೋಟಿ ರೂ
  • ಇಂಧನ: 68,769 ಕೋಟಿ ರೂ
  • ವಿದೇಶಾಂಗ ವ್ಯವಹಾರಗಳ ಇಲಾಖೆ: 22,155 ಕೋಟಿ ರೂ
  • ಹಣಕಾಸು ಇಲಾಖೆ: 86,339 ಕೋಟಿ ರೂ
  • ಆರೋಗ್ಯ ಇಲಾಖೆ: 89,287 ಕೋಟಿ ರೂ
  • ಯೋಜನಾ ಮತ್ತು ಸಾಂಖ್ಯಿಕ: 6,291 ಕೋಟಿ ರೂ
  • ವೈಜ್ಞಾನಿಕ ಇಲಾಖೆಗಳು: 32,736 ಕೋಟಿ ರೂ
  • ಸಮಾಜ ಕಲ್ಯಅಣ: 56,501 ಕೋಟಿ ರೂ
  • ತೆರಿಗೆ ಆಡಳಿತ: 2.03 ಲಕ್ಷ ಕೋಟಿ ರೂ
  • ಜಿಎಸ್​ಟಿ ಕಾಂಪೆನ್ಸೇಶನ್: 1.50 ಲಕ್ಷ ಕೋಟಿ ರೂ
  • ರಾಜ್ಯಗಳಿಗೆ ತೆರಿಗೆ ಹಂಚಿಕೆ: 3.23 ಲಕ್ಷ ಕೋಟಿ ರೂ
  • ಕೇಂದ್ರಾಡಳಿತ ಪ್ರದೇಶಗಳಿಗೆ: 68,660 ಕೋಟಿ ರೂ
  • ನಗರಾಭಿವೃದ್ಧಿ: 82,577 ಕೋಟಿ ರೂ

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ