Old or new tax regime: ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಳದ ಬಳಿಕ ಹೊಸ ಟ್ಯಾಕ್ಸ್ ರೆಜಿಮೆ ಸೂಕ್ತ ಎನಿಸುತ್ತಾ?

Income tax updates: ಹೊಸ ಟ್ಯಾಕ್ಸ್ ಸಿಸ್ಟಂನಲ್ಲಿ ಬದಲಾವಣೆ ಮಾಡಲಾಗಿದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಮೊತ್ತವನ್ನು 75,000 ರೂಗೆ ಹೆಚ್ಚಿಸಲಾಗಿದೆ. ಕೆಲ ಮಟ್ಟದ ಸ್ಲ್ಯಾಬ್​ಗಳನ್ನು ಬದಲಾವಣೆ ಮಾಡಲಾಗಿದೆ. ಹಳೆಯ ಟ್ಯಾಕ್ಸ್ ಸಿಸ್ಟಂನಲ್ಲಿ ನಿರೀಕ್ಷೆಯಂತೆ ಯಾವ ಬದಲಾವಣೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಟ್ಯಾಕ್ಸ್ ಫೈಲ್ ಮಾಡಲು ಹೊಸ ಟ್ಯಾಕ್ಸ್ ಸಿಸ್ಟಂ ಸೂಕ್ತವೋ ಅಥವಾ ಹಳೆಯದು ಸರಿಯೋ, ಈ ಗೊಂದಲಕ್ಕೆ ಉತ್ತರ ಇಲ್ಲಿದೆ...

Old or new tax regime: ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಳದ ಬಳಿಕ ಹೊಸ ಟ್ಯಾಕ್ಸ್ ರೆಜಿಮೆ ಸೂಕ್ತ ಎನಿಸುತ್ತಾ?
ಟ್ಯಾಕ್ಸ್ ಸಿಸ್ಟಂ ಸೂಕ್ತ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 24, 2024 | 11:55 AM

ನವದೆಹಲಿ, ಜುಲೈ 24: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್​ನಲ್ಲಿ ಆದಾಯ ತೆರಿಗೆ ದರದಲ್ಲಿ ಒಂದಷ್ಟು ಬದಲಾವಣೆ ತಂದಿದ್ದಾರೆ. ನಿರೀಕ್ಷೆಯಂತೆ ಹಳೆಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಮಾಡದೇ ಹಾಗೇ ಮುಂದುವರಿಸಿದ್ದಾರೆ. ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ತೆರಿಗೆ ರಿಯಾಯಿತಿ ಹೆಚ್ಚಿಸಿದ್ದಾರೆ. ಬಹುಸಂಖ್ಯಾತ ತೆರಿಗೆ ಪಾವತಿದಾರರು ಹಳೆಯ ಟ್ಯಾಕ್ಸ್ ರೆಜಿಮೆಯಲ್ಲೇ ಮುಂದುವರಿಯುತ್ತಿದ್ದಾರೆ. ಇವರಿಗೆ ಈಗ ಹೊಸ ರೆಜಿಮೆಗೆ ವರ್ಗವಾಗುವುದೋ, ಈಗಿರುವ ಹಳೆಯದರಲ್ಲೆ ಮುಂದುವರಿಯುವುದೋ ಎಂಬ ಗೊಂದಲ ಆಗುತ್ತಿರಬಹುದು.

ಮೊದಲಿಗೆ, ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಏನು ಬದಲಾವಣೆ ತರಲಾಗಿದೆ ಎಂಬುದನ್ನು ಗಮನಿಸಬಹುದು. ಸ್ಟಾಂಡರ್ಡ್ ಡಿಡಕ್ಷನ್ ಅನ್ನು 50,000 ರೂನಿಂದ 75,000 ರೂಗೆ ಹೆಚ್ಚಿಸಲಾಗಿದೆ. ಇದು ತೆರಿಗೆ ವಿನಾಯಿತಿ ಮೊತ್ತವನ್ನು ಹೆಚ್ಚಿಸುತ್ತದೆ. ಹಾಗೆಯೇ ಸ್ಲ್ಯಾಬ್ ದರಗಳಲ್ಲಿ 12,000 ರೂವರೆಗಿನ ಆದಾಯಕ್ಕೆ ತೆರಿಗೆ ಪ್ರಮಾಣದಲ್ಲಿ ವ್ಯತ್ಯಯವಾಗಿದೆ. ಸ್ಲ್ಯಾಬ್ ದರಗಳ ಮಿತಿ ಹೆಚ್ಚಳವಾಗಿದೆ. ಅದರ ಸ್ಲ್ಯಾಬ್ ದರ ಹೀಗಿದೆ:

  • 3 ಲಕ್ಷ ರೂವರೆಗೆ ತೆರಿಗೆ ಇರುವುದಿಲ್ಲ
  • 3-7 ಲಕ್ಷ ರೂ ಆದಾಯಕ್ಕೆ: ಶೇ. 5 ತೆರಿಗೆ
  • 7-10 ಲಕ್ಷ ರೂ ಆದಾಯಕ್ಕೆ: ಶೇ. 10 ತೆರಿಗೆ
  • 10-12 ಲಕ್ಷ ರೂ ಆದಾಯಕ್ಕೆ: ಶೇ. 15 ತೆರಿಗೆ
  • 12-15 ಲಕ್ಷ ರೂ ಆದಾಯಕ್ಕೆ: ಶೇ. 20 ತೆರಿಗೆ
  • 15 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ: ಶೇ. 30 ತೆರಿಗೆ

ಈ ಮುಂಚೆ 3ರಿಂದ 6 ಲಕ್ಷ ರೂ ಆದಾಯಕ್ಕೆ ಶೇ. 5 ತೆರಿಗೆ ಇತ್ತು. ಅದನ್ನು 7 ಲಕ್ಷ ರೂಗೆ ಹೆಚ್ಚಿಸಲಾಗಿದೆ. 6ರಿಂದ 9 ಲಕ್ಷ ರೂವರೆಗಿನ ಮೊತ್ತಕ್ಕೆ ಶೇ. 10 ತೆರಿಗೆ ಇತ್ತು. ಇದನ್ನು 10 ಲಕ್ಷ ರೂಗೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: Union Budget 2024 Size: 48 ಲಕ್ಷ ಕೋಟಿ ರೂ ಗಾತ್ರದ ದಾಖಲೆ ಬಜೆಟ್; ಎಲ್ಲೆಲ್ಲಿಂದ ಬರುತ್ತೆ ಹಣ? ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಹಣ? ಇಲ್ಲಿದೆ ಡೀಟೇಲ್ಸ್

ಓಲ್ಡ್ ಟ್ಯಾಕ್ಸ್ ರೆಜಿಮೆ ಕೈಬಿಡಬೇಕಾ?

ನಿಮ್ಮ ವಾರ್ಷಿಕ ಆದಾಯ 10 ಲಕ್ಷ ರೂವರೆಗೆ ಇದ್ದರೆ ಹೊಸ ಟ್ಯಾಕ್ಸ್ ಸಿಸ್ಟಂ ಸೂಕ್ತ ಎನಿಸುತ್ತದೆ. 11 ಲಕ್ಷ ರೂ ಮೇಲ್ಪಟ್ಟ ಆದಾಯ ಇದ್ದು ನೀವು ಎಲ್ಲಾ ರೀತಿಯ ಸೇವಿಂಗ್ಸ್ ಸ್ಕೀಮ್​ಗಳಲ್ಲಿ ಹೂಡಿಕೆ ಮಾಡಿ ಗರಿಷ್ಠ ಡಿಡಕ್ಷನ್ ಪಡೆಯಬಲ್ಲಿರೆಂದರೆ ಖಂಡಿತವಾಗಿ ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ಮುಂದುವರಿಯಬಹುದು.

ಹೋಮ್ ಲೋನ್ ಇತ್ಯಾದಿ ಎಲ್ಲವನ್ನೂ ನೀವು ಬಳಸಿದರೆ ಸುಮಾರು 4,00,000 ರೂವರೆಗೂ ಡಿಡಕ್ಷನ್ ಕ್ಲೇಮ್ ಮಾಡಲು ಸಾಧ್ಯ. ಸೆಕ್ಷನ್ 80 ಸಿ ಅಡಿಯಲ್ಲಿನ ಹೂಡಿಕೆ, ಗೃಹ ಸಾಲದ ಪ್ರೀಮಿಯಮ್ ಮತ್ತು ಬಡ್ಡಿ, ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಂ, ಮಕ್ಕಳ ಟ್ಯೂಷನ್ ಫೀ, ಮನೆಯ ಬಾಡಿಗೆ, ಸಂಬಳದಲ್ಲಿನ ಎಚ್​ಆರ್​ಎ ಇವೆಲ್ಲವನ್ನೂ ನೀವು ಬಳಸಬಲ್ಲಿರಾದರೆ ಆಗ ಹಳೆಯ ಟ್ಯಾಕ್ಸ್ ಸಿಸ್ಟಂ ಉಪಯೋಗವಾಗಬಹುದು. ಅವು ಸಾಧ್ಯವಾಗದೇ ಹೋದರೆ ಹೊಸ ಟ್ಯಾಕ್ಸ್ ಸಿಸ್ಟಂಗೆ ವರ್ಗವಾಗುವುದು ಸಮಂಜಸವೆನಿಸಬಹುದು ಎನ್ನುತ್ತಾರೆ ತಜ್ಞರು.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ