Video : ಮಗನ ಕನಸಿಗೆ ತಂದೆ ಸಾಥ್ : ಖ್ಯಾತ ರೆಸ್ಲರ್ ಅಂಡರ್‌ಟೇಕರ್ ಅವರಂತೆ ಮನೆಯೊಳಗೆ ಎಂಟ್ರಿ ಕೊಟ್ಟ ಪುಟ್ಟ ಬಾಲಕ
ಸೋಶಿಯಲ್ ಮೀಡಿಯಾದಲ್ಲಿ ದಿನಬೆಳಗಾದರೆ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ಹೃದಯಸ್ಪರ್ಶಿ ದೃಶ್ಯಗಳು ಸಹಜವಾಗಿ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಇಲ್ಲೊಬ್ಬ ಮಗನಿಗೆ ಜೀವನದಲ್ಲಿ ಸಾಕಷ್ಟು ಕನಸುಗಳಿವೆ. ಈ ಮಗನ ಕನಸನ್ನು ನನಸು ಮಾಡಲು ತಂದೆ ಹೇಗೆ ಸಾಥ್ ನೀಡಿದ್ದಾನೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಹೌದು ಮಗನಿಗೆ WWEನ ಖ್ಯಾತ ರೆಸ್ಲರ್ ಅಂಡರ್‌ಟೇಕರ್ ಅವರಂತೆ ಆಗುವ ಕನಸು. ಹೀಗಾಗಿ ತಂದೆ ಹಾಗೂ ಮಗ ಇಬ್ಬರೂ ಸೇರಿ ಆ ಕ್ಷಣವನ್ನು ಮರುಸೃಷ್ಟಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಬಗೆಗಿನ ವಿಡಿಯೋ ಇಲ್ಲಿದೆ.

ತಾಯಿ ಒಂಬತ್ತು ತಿಂಗಳು ಮಗುವನ್ನು ಹೊಟ್ಟೆಯಲ್ಲಿಟ್ಟುಕೊಂಡರೆ, ತಂದೆ ತನ್ನ ಹೆಗಲ ಮೇಲೆ ಕೂರಿಸಿಕೊಂಡು ಪ್ರಪಂಚ ತೋರಿಸುತ್ತಾನೆ. ತನ್ನ ಮಕ್ಕಳ ಆಸೆ ಕನಸುಗಳನ್ನು ನನಸು ಮಾಡಲು ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಾನೆ. ಇದೀಗ ಇಲ್ಲೊಬ್ಬ ತಂದೆಯೂ ಮಗನ ಕನಸನ್ನು ನನಸು ಮಾಡಲು ಹೇಗೆ ಪ್ರಯತ್ನಿಸುತ್ತಿದ್ದಾನೆ ಎನ್ನುವುದನ್ನು ನೋಡಬಹುದು. ಮಗನಿಗೆ ಖ್ಯಾತ ರೆಸ್ಲರ್ ಅಂಡರ್‌ಟೇಕರ್ ಅವರಂತೆ ಆಗಬೇಕೆನ್ನುವ ಬಹುದೊಡ್ಡ ಕನಸಿದೆ. ತಂದೆ ಹಾಗೂ ಮಗ ಇಬ್ಬರೂ ಸೇರಿ WWE ರೆಸ್ಲರ್ ಅಂಡರ್‌ಟೇಕರ್ (Wrestler Undertaker) ಅವರು ಮನೆಗೆ ಪ್ರವೇಶಿಸುವುದನ್ನು ಮರುಸೃಷ್ಟಿಸಿದ್ದಾರೆ. ಮಗನು ಖ್ಯಾತ ರೆಸ್ಲರ್ ಅಂಡರ್‌ಟೇಕರ್ ಅವರಂತೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ಈ ಹೃದಯಸ್ಪರ್ಶಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ (social media) ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ಓದಿ :Video : ಮಾಲೀಕ ಹಾಡು ಹಾಡುತ್ತಿದ್ದಂತೆ ಆನೆಗಳು ಕೊಟ್ಟ ರಿಯಾಕ್ಷನ್ ಹೇಗಿತ್ತು ನೋಡಿ
gauravsarwan ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ತಂದೆಯೊಬ್ಬರು ಹಾರ್ಮೋನಿಯಂನಲ್ಲಿ ಅಂಡರ್ ಟೇಕರ್ ಥೀಮ್ ಸಾಂಗ್ ಗ್ರೇವ್‌ಯಾರ್ಡ್ ಸಿಂಫನಿಯನ್ನು ನುಡಿಸುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಮಗನು ಆತ್ಮವಿಶ್ವಾಸದಿಂದ ತನ್ನ ಎರಡು ಕೈಗಳನ್ನು ಮೇಲಕ್ಕೆತ್ತಿ, ರೆಸ್ಲರ್ ಅಂಡರ್‌ಟೇಕರ್ ಅವರಂತೆ ಮನೆಯೊಳಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು. ಇಲ್ಲಿ ತಂದೆಯೂ ಮಗನ ಕನಸನ್ನು ನನಸು ಮಾಡಲು ಶ್ರಮಿಸುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಹದಿನಾಲ್ಕು ಲಕ್ಷದವರೆಗೆ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಡಿಯೋಗೆ WWE ಖ್ಯಾತ ರೆಸ್ಲರ್ ಅಂಡರ್‌ಟೇಕರ್ ಈ ಪುಟ್ಟ ಬಾಲಕನ ಪ್ರಯತ್ನವನ್ನು ಹೊಗಳಿದ್ದು, ಚೆನ್ನಾಗಿ ಮಾಡಿದ್ದೀರಿ ಎಂದಿದ್ದಾರೆ. ಬಳಕೆದಾರರೊಬ್ಬರು, ತಂದೆ ಮಾತ್ರ ಮಗನ ಕನಸುಗಳನ್ನು ಈಡೇರಿಸಲು ಸಾಧ್ಯ ಎಂದಿದ್ದಾರೆ. ಇನ್ನೊಬ್ಬರು, ಈ ಮಗನ ನಡೆ ನುಡಿ, ಸ್ಟೈಲ್ ಹಾಗೂ ದೇಹ ಭಾಷೆ WWE ಸೂಪರ್ ಸ್ಟಾರ್ ಅಂಡರ್‌ಟೇಕರ್‌ನಂತೆಯೇ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ನಿನ್ನ ಕನಸುಗಳು ನನಸಾಗಲಿ ಎಂದು ಆಶೀರ್ವಾದಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








