Union budget: ಅಗತ್ಯ ಕೌಶಲ್ಯಗಳ ತರಬೇತಿಗೆ ವಿವಿಧ ಯೋಜನೆಗಳು; 2025ರ ಬಜೆಟ್​ನಿಂದ ಮತ್ತಷ್ಟು ಪುಷ್ಟಿ ನಿರೀಕ್ಷೆ

Updated on: Jan 21, 2025 | 3:58 PM

ನವದೆಹಲಿ, ಜನವರಿ 21: ಮುಂಬರುವ ಬಜೆಟ್​ನಲ್ಲಿ ಯುವಜನರ ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ಕೊಡುವ ಸಾಧ್ಯತೆ ಇದೆ. ದೇಶದ ಆರ್ಥಿಕತೆಯ ಬೆಳವಣಿಗೆಗೆ ದೂರಗಾಮಿ ದೃಷ್ಟಿಯಲ್ಲಿ ಕೌಶಲ್ಯವಂತ ಕೆಲಸಗಾರರ ಅಗತ್ಯತೆ ಬಹಳ ಇದೆ. ಇದನ್ನು ಗಮನದಲ್ಲಿರಿಸಿಕೊಂಡು ಬಜೆಟ್​ನಲ್ಲಿ ವಿವಿಧ ಸ್ಕೀಮ್​ಗಳ ವ್ಯಾಪ್ತಿ ಮತ್ತು ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನವಾಗಬಹುದು.

1 / 6
ದೇಶದ ಯುವಶಕ್ತಿಯ ಮಾನವ ಸಂಪನ್ಮೂಲಗಳು ಸರಿಯಾಗಿ ಬಳಕೆಯಾಗಲು ಆ ಶಕ್ತಿ ಪ್ರಬಲವಾಗಿರಬೇಕು. ಯುವಜನರು ಇಂದಿನ ದಿನಗಳ ಕೆಲಸಗಳಿಗೆ ತಕ್ಕುದಾದ ಕೌಶಲ್ಯಗಳನ್ನು ಹೊಂದಿರಬೇಕು. ಆಗ ಮಾತ್ರವೇ ಮಾನವ ಸಂಪನ್ಮೂಲಗಳ ಸದ್ಬಳಕೆ ಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೂರಗಾಮಿ ದೃಷ್ಟಿಯಲ್ಲಿ ವಿವಿಧ ಕೌಶಲ್ಯ ಮತ್ತು ತರಬೇತಿ ಯೋಜನೆಗಳನ್ನು ಹಮ್ಮಿಕೊಂಡಿದೆ. ಅಪ್ರೆಂಟಿಸ್​ಶಿಪ್ ಸ್ಕೀಮ್​ಗಳು, ಇಂಟರ್ನ್​ಶಿಪ್ ಯೋಜನೆ, ಸ್ಕಿಲ್ ಇಂಡಿಯಾ ಯೋಜನೆ ಇತ್ಯಾದಿ ಹಲವು ಯೋಜನೆಗಳನ್ನು ಸರ್ಕಾರ ಚಾಲನೆಯಲ್ಲಿ ಇರಿಸಿದೆ.

ದೇಶದ ಯುವಶಕ್ತಿಯ ಮಾನವ ಸಂಪನ್ಮೂಲಗಳು ಸರಿಯಾಗಿ ಬಳಕೆಯಾಗಲು ಆ ಶಕ್ತಿ ಪ್ರಬಲವಾಗಿರಬೇಕು. ಯುವಜನರು ಇಂದಿನ ದಿನಗಳ ಕೆಲಸಗಳಿಗೆ ತಕ್ಕುದಾದ ಕೌಶಲ್ಯಗಳನ್ನು ಹೊಂದಿರಬೇಕು. ಆಗ ಮಾತ್ರವೇ ಮಾನವ ಸಂಪನ್ಮೂಲಗಳ ಸದ್ಬಳಕೆ ಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೂರಗಾಮಿ ದೃಷ್ಟಿಯಲ್ಲಿ ವಿವಿಧ ಕೌಶಲ್ಯ ಮತ್ತು ತರಬೇತಿ ಯೋಜನೆಗಳನ್ನು ಹಮ್ಮಿಕೊಂಡಿದೆ. ಅಪ್ರೆಂಟಿಸ್​ಶಿಪ್ ಸ್ಕೀಮ್​ಗಳು, ಇಂಟರ್ನ್​ಶಿಪ್ ಯೋಜನೆ, ಸ್ಕಿಲ್ ಇಂಡಿಯಾ ಯೋಜನೆ ಇತ್ಯಾದಿ ಹಲವು ಯೋಜನೆಗಳನ್ನು ಸರ್ಕಾರ ಚಾಲನೆಯಲ್ಲಿ ಇರಿಸಿದೆ.

2 / 6

ಕಳೆದ ಬಾರಿಯ ಬಜೆಟ್​ನಲ್ಲಿ (2024-25) ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ತರಬೇತಿಗೆ 1.48 ಲಕ್ಷ ಕೋಟಿ ರೂ ವಿನಿಯೋಗಿಸಲಾಗಿತ್ತು. ಈ ಕ್ಷೇತ್ರದಲ್ಲಿ ನಿರೀಕ್ಷಿತ ರೀತಿಯಲ್ಲಿ ಪ್ರಗತಿ ಹೊಂದಲು ಸಾಧ್ಯವಾಗಿದೆ. ಇದೇ ಉತ್ಸಾಹ ಮುಂದುವರಿಸುವ ಇರಾದೆಯೊಂದಿಗೆ ಸರ್ಕಾರವು ಈ ಬಾರಿಯ ಬಜೆಟ್​ನಲ್ಲಿ (2025-26) ಈ ಕ್ಷೇತ್ರಗಳಿಗೆ ಹೆಚ್ಚಿನ ಗಮನ ಹರಿಸುವ ಸಾಧ್ಯತೆ ಇದೆ.

3 / 6

ನ್ಯಾಷನಲ್ ಅಪ್ರೆಂಟಿಸ್​ಶಿಪ್ ಪ್ರೊಮೋಶನ್ ಸ್ಕೀಮ್ ಮೂಲಕ 7.34 ಲಕ್ಷ ಯುವಜನರಿಗೆ ತರಬೇತಿ ನೀಡಲಾಗಿದೆ. ಕಳೆದ ಮೂರು ವರ್ಷದಲ್ಲಿ ಹೆಚ್ಚೆಚ್ಚು ಕಂಪನಿಗಳು ಅಪ್ರೆಂಟಿಸ್​ಗಳನ್ನು ಅಪ್ಪಿಕೊಳ್ಳುತ್ತಿವೆ. ವರದಿ ಪ್ರಕಾರ 40,000 ಕಂಪನಿಗಳು ಅಪ್ರೆಂಟೆಸ್​ಶಿಪ್ ಮಾದರಿಯನ್ನು ಅಳವಡಿಸಿಕೊಂಡಿವೆ. ಎರಡು ಲಕ್ಷ ಕಂಪನಿಗಳು ಯೋಜನೆಯ ಪೋರ್ಟಲ್​ನಲ್ಲಿ ನೊಂದಾಯಿಸಿವೆ.

4 / 6

ಇನ್ನು, ಪಿಎಂ ಇಂಟರ್ನ್​ಶಿಪ್ ಸ್ಕೀಮ್ ಕೂಡ ಭರ್ಜರಿ ಸ್ಪಂದನೆ ಪಡೆದಿವೆ. ಟಾಪ್ 500 ಕಂಪನಿಗಳಲ್ಲಿ ಯುವಜರು ತರಬೇತಿ ಪಡೆಯುವ ಅವಕಾಶವನ್ನು ಈ ಯೋಜನೆ ನೀಡಿದೆ. ಮೊದಲ ವರ್ಷದಂದು 1.27 ಲಕ್ಷ ಇಂಟರ್ನ್​ಶಿಪ್ ಅವಕಾಶ ಇದ್ದು ಅದಕ್ಕಾಗಿ 6.21 ಲಕ್ಷ ಮಂದಿ ಅರ್ಜಿ ಸಲ್ಲಿಸಿರುವುದು ಈ ಸ್ಕೀಮ್​ಗೆ ಉತ್ತಮ ಸ್ಪಂದನೆ ಸಿಗುತ್ತಿರುವುದಕ್ಕೆ ಸಾಕ್ಷಿ ಎನಿಸಿದೆ.

5 / 6

ಸ್ಕಿಲ್ ಇಂಡಿಯಾ ಯೋಜನೆ ಅಡಿಯಲ್ಲಿ ಒಂದು ವರ್ಷದ ಅಂತರದಲ್ಲಿ 17 ಲಕ್ಷಕ್ಕೂ ಅಧಿಕ ಮಂದಿ ತರಬೇತಿ ಪಡೆದಿದ್ದಾರೆ. 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ 729 ಜಿಲ್ಲೆಗಳಲ್ಲಿನ ಜನರು ಟ್ರೈನಿಂಗ್ ಪಡೆದಿದ್ದಾರೆ. 37 ಸೆಕ್ಟರ್​ಗಳು ಹಾಗೂ 790 ಕೆಲಸಗಳಿಗೆ ತರಬೇತಿ ನೀಡಲಾಗಿದೆ. ರೋಬೋಟಿಕ್ಸ್, ಎಐ, ಮೆಕಾಟ್ರಾನಿಕ್ಸ್, ಡ್ರೋನ್ ಇತ್ಯಾದಿ ಕ್ಷೇತ್ರಗಳೂ ಇದರಲ್ಲಿವೆ.

6 / 6

2025ರ ಬಜೆಟ್​ನಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಅಪ್ರೆಂಟಿಸ್​ಶಿಪ್ ಯೋಜನೆಗಳ ವ್ಯಾಪ್ತಿಯನ್ನು ಹೆಚ್ಚಿಸುವುದು, ಹೆಚ್ಚೆಚ್ಚು ಮಹಿಳೆಯರಿಗೆ ಉದ್ಯೋಗಾವಕಾಶ ಸಿಗುವ ರೀತಿಯಲ್ಲಿ ತರಬೇತಿ ನೀಡುವುದು ಇತ್ಯಾದಿಗೆ ಈ ಬಜೆಟ್​ನಲ್ಲಿ ಒತ್ತು ಕೊಡುವ ಸಾಧ್ಯತೆ ಇದೆ.

Published On - 3:48 pm, Tue, 21 January 25

Loading...
Unable to load recommendations.
Follow Us