ನಿರ್ಮಲಾ ಸೀತಾರಾಮನ್ ಯಾವ ರಾಜ್ಯದವರು? ಎಲ್ಲಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ? ಅವರ ಮೊದಲ ಬಜೆಟ್ ಹೇಗಿತ್ತು?
Who is Nirmala sitharaman? ನಿರ್ಮಲಾ ಸೀತಾರಾಮನ್ ಅವರಿಗೆ ಇದು ಸತತ ಆರನೇ ಬಜೆಟ್ ಮಂಡನೆಯಾಗಿದೆ. ತಮಿಳುನಾಡಿನ ಮದುರೈ ಜಿಲ್ಲೆಯಲ್ಲಿ ಜನಿಸಿದ ನಿರ್ಮಲಾ ಸೀತಾರಾಮನ್ ಅರ್ಥಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. 2016ರಿಂದ ಇವರು ಕರ್ನಾಟದಿಂದಲೇ ರಾಜ್ಯಸಭೆಗೆ ಆಯ್ಕೆ ಆಗುತ್ತಾ ಬಂದಿದ್ದಾರೆ. ಅದಕ್ಕೂ ಮುನ್ನ ಆಂಧ್ರದಿಂದ ಇವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ನವದೆಹಲಿ, ಫೆ. 1: ನಿರ್ಮಲಾ ಸೀತಾರಾಮನ್ (Nirmala Sitharaman Profile) ಅವರಿಗೆ ಇಂದಿನದ್ದು ಸತತ ಆರನೇ ಬಜೆಟ್ (Interim budget 2024) ಮಂಡನೆ ಆಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ನಿರ್ಮಲಾ ಸೀತಾರಾಮನ್ ತಮಿಳುನಾಡು ಮೂಲದವರು. ರಾಜಕೀಯಕ್ಕೆ ಬಹಳ ತಡವಾಗಿ ಬಂದವರಾದರೂ ಉನ್ನತ ಹುದ್ದೆಗಳನ್ನು ಬಹಳ ಬೇಗ ಗಳಿಸಿ ತಮ್ಮ ಕ್ಷಮತೆಯನ್ನೂ ನಿರೂಪಿಸಿದ್ದಾರೆ. ರಕ್ಷಣಾ ಖಾತೆ, ಹಣಕಾಸು ಖಾತೆ, ಕಾರ್ಪೊರೇಟ್ ವ್ಯವಹಾರಗಳ ಖಾತೆ, ವಾಣಿಜ್ಯ ಮತ್ತು ಉದ್ಯಮ ಖಾತೆಗಳನ್ನು ಅವರು ನಿಭಾಯಿಸಿದ್ದಾರೆ. ಇಂದಿರಾ ಗಾಂಧಿ ನಂತರ ರಕ್ಷಣಾ ಖಾತೆ ನಿಭಾಯಿಸಿದ ಮೊದಲ ಮಹಿಳೆ ನಿರ್ಮಲಾ ಸೀತಾರಾಮನ್.
2019ರಲ್ಲಿ ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತೀಯ ಸೇನೆ ವಾಯುದಾಳಿ ಮಾಡಿದಾಗ ರಕ್ಷಣಾ ಖಾತೆಯಲ್ಲಿ ಇದ್ದದ್ದು ನಿರ್ಮಲಾ ಸೀತಾರಾಮನ್ ಅವರೆಯೇ.
ನಿರ್ಮಲಾ ಸೀತಾರಾಮನ್ ಅವರ ಹುಟ್ಟೂರು ತಮಿಳುನಾಡಿನ ಮದುರೈ. ಅಯ್ಯಂಗಾರಿ ಕುಟುಂಬಕ್ಕೆ ಸೆರಿದವರು. ವಿಲಿಪ್ಪುರಂ, ತಿರುಚ್ಚಿಯಲ್ಲಿ ಇವರು ಬಿಎವರೆಗೆ ಓದಿ ಬಳಿಕ ದೆಹಲಿಯ ಜೆಎನ್ಯುನಲ್ಲಿ ಎಂಎ ಮಾಡಿದರು. ಬಳಿಕ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಉನ್ನತ ವ್ಯಾಸಂಗ ಮಾಡಿದರು.
ಇದನ್ನೂ ಓದಿ: ಬಜೆಟ್ ಲೈವ್ ಅಪ್ಡೇಟ್ಸ್
2008ರಲ್ಲಿ ಬಿಜೆಪಿ ಸೇರಿದ ಅವರು 2014ರವರೆಗೂ ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿದ್ದರು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ ಇವರು ಕಿರಿಯ ಸಚಿವೆಯಾದರು. ಲೋಕಸಭಾ ಚುನಾವಣೆ ಬದಲು ಇವರು ರಾಜ್ಯಸಭೆಯಿಂದ ಸಂಸತ್ತಿಗೆ ಆಯ್ಕೆಯಾಗುತ್ತಾ ಬರುತ್ತಿದ್ದಾರೆ. 2016ರಿಂದ ಇವರು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆ ಆಗುತ್ತಿದ್ದಾರೆ. ಅದಕ್ಕೂ ಮುನ್ನ 2014ರಿಂದ 2016ರವರೆಗೆ ಇವರು ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದರು.
ನಿರ್ಮಲಾ ಸೀತಾರಾಮನ್ ಅವರ ಚೊಚ್ಚಲ ಬಜೆಟ್
2019ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಎರಡನೇ ಅವಧಿಗೆ ಸರ್ಕಾರ ರಚಿಸಿತ್ತು. ಅರುಣ್ ಜೇಟ್ಲಿ ವಿಧಿವಶರಾದ ಹಿನ್ನೆಲೆಯಲ್ಲಿ ಹಣಕಾಸು ಖಾತೆ ನಿರ್ಮಲಾ ಸೀತಾರಾಮನ್ ಅವರ ಹೆಗಲಿಗೆ ಸಿಕ್ಕಿತು. 2019ರ ಜುಲೈ 5ರಂದು ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದರು.
ಅಲ್ಲಿಂದ ಅವರು ಸತತವಾಗಿ ಐದು ಬಾರಿ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ್ದು ಸತತ ಆರನೇ ಬಜೆಟ್ ಆಗಿದೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ