ನವದೆಹಲಿ, ಜನವರಿ 17: ಫೆಬ್ರುವರಿ 1ರಂದು ಮಂಡನೆಯಾಗುವ ಕೇಂದ್ರ ಬಜೆಟ್ ಬಗ್ಗೆ ಸಹಜವಾಗಿ ಸಾಕಷ್ಟು ನಿರೀಕ್ಷೆಗಳಿವೆ. ಕಳೆದ ಬಾರಿಯ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಸರ್ಕಾರದ ಮುಂದಿರುವ ನಾಲ್ಕು ಜಾತಿಗಳನ್ನು ಹೆಸರಿಸಿದ್ದರು. ಅದರಲ್ಲಿ ಮಹಿಳೆ ವರ್ಗವೂ ಒಂದು. ಮಹಿಳೆಯರು, ರೈತರು, ಯುವಕರು ಮತ್ತು ಬಡವರು ಈ ನಾಲ್ಕು ವರ್ಗಗಳು ನಾಲ್ಕು ಜಾತಿಗಳೆಂದು ಸಚಿವೆ ಬಣ್ಣಿಸಿದ್ದರು. ಅಂತೆಯೇ 2024ರ ಜುಲೈನಲ್ಲಿ ಮಂಡಿಸಲಾದ ಬಜೆಟ್ನಲ್ಲಿ ಮಹಿಳೆಯರು ಮತ್ತು ಬಾಲಕಿಯರಿಗೆ ಅನುಕೂಲವಾಗುವ ಯೋಜನೆಗಳಿಗೆಂದು ಮೂರು ಲಕ್ಷ ಕೋಟಿ ರೂ ಹಣವನ್ನು ನೀಡಲಾಯಿತು. ಈ ಬಾರಿಯೂ ಮಹಿಳೆಯರನ್ನು ಉತ್ತೇಜಿಸಲು ಬಜೆಟ್ನಲ್ಲಿ ಕೆಲ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ.
ಮಹಿಳಾ ತೆರಿಗೆ ಪಾವತಿದಾರರಿಗೆ ಪ್ರೋತ್ಸಾಹ ನೀಡಲು ಈ ಬಜೆಟ್ನಲ್ಲಿ ಕೆಲ ಕ್ರಮಗಳನ್ನು ಘೋಷಿಸುವ ನಿರೀಕ್ಷೆ ಇದೆ. ವಿಶೇಷ ಟ್ಯಾಕ್ಸ್ ಎಕ್ಸೆಂಪ್ಷನ್ ಅಥವಾ ಟ್ಯಾಕ್ಸ್ ಡಿಡಕ್ಷನ್ ಇತ್ಯಾದಿಯನ್ನು ಮಹಿಳಾ ಸಂಬಂಧಿತ ಯೋಜನೆಗಳಿಗೆ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್; ಠೇವಣಿ ಮೊತ್ತ, ಅವಧಿ, ಬಡ್ಡಿ ಇತ್ಯಾದಿ ವಿವರ
ಮಹಿಳಾ ಉದ್ಯೋಗಿಗಳ ನೇಮಕಾತಿಗೆ ಪ್ರೋತ್ಸಾಹಿಸಲೂ ಕಂಪನಿಗಳಿಗೆ ಇನ್ಸೆಂಟಿವ್ ನೀಡುವ ಸಾಧ್ಯತೆ ಇದೆ. ಸ್ವಂತ ಉದ್ಯೋಗ ಮಾಡುವ ಮಹಿಳೆಯರಿಗೆ ಹೆಚ್ಚಿನ ಸಹಾಯ ಘೋಷಿಸುವ ನಿರೀಕ್ಷೆಯೂ ಇದೆ.
ಸರ್ಕಾರ ಆದಾಯ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಲು ಎರಡು ವರ್ಷದ ಹಿಂದೆ ಹೊಸ ಟ್ಯಾಕ್ಸ್ ರೆಜಿಮೆಯನ್ನು ಪರಿಚಯಿಸಿತ್ತು. ಆದರೆ, ಇನ್ನೂ ಕೂಡ ಹೆಚ್ಚಿನ ತೆರಿಗೆ ಪಾವತಿದಾರರು ಹಳೆಯ ಟ್ಯಾಕ್ಸ್ ರೆಜಿಮೆಯಲ್ಲೇ ಐಟಿ ರಿಟರ್ನ್ಸ್ ಸಲ್ಲಿಸುತ್ತಿದ್ದಾರೆ. ಸರ್ಕಾರವೂ ತನ್ನ ಸ್ಟ್ರಾಟಿಜಿ ಬದಲಿಸುವ ಸಾಧ್ಯತೆ ಇಲ್ಲದಿಲ್ಲ.
ಇದನ್ನೂ ಓದಿ: ಪಿಎಂ ಇಂಟರ್ನ್ಶಿಪ್ ಸ್ಕೀಮ್; ಶೇ. 80ಕ್ಕೂ ಹೆಚ್ಚು ಭಾರತೀಯ ಕಂಪನಿಗಳಿಂದ ಬೆಂಬಲ
ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಫೀಚರ್ ಪ್ರಮುಖ ಆಕರ್ಷಣೆಯಾಗಿದೆ. ಸರ್ಕಾರವು ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಡಿಡಕ್ಷನ್ ಫೀಚರ್ ಸೇರ್ಪಡಿಸಿ, ಹಳೆಯ ಟ್ಯಾಕ್ಸ್ ರೆಜಿಮೆಯನ್ನೇ ನಿಲ್ಲಿಸಿಬಿಡಬಹುದು ಎನ್ನಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ