19 ಕೆಜಿ ತೂಕದ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ (LPG Cylinder Price)ಇಂದು ದೆಹಲಿಯಲ್ಲಿ 105 ರೂಪಾಯಿ ಏರಿಕೆಯಾಗಿದೆ. ಹೀಗಾಗಿ ರಾಷ್ಟ್ರರಾಜಧಾನಿಯಲ್ಲಿ ಇನ್ನು ಮುಂದೆ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ 2012 ರೂಪಾಯಿ. ಇದರೊಂದಿಗೆ 5 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಬೆಲೆ 27ರೂಪಾಯಿ ಹೆಚ್ಚಾಗಿದ್ದು, ದೆಹಲಿಯಲ್ಲಿ 5ಕೆಜಿ ಸಿಲಿಂಡರ್ ಬೆಲೆ 569ರೂ.ಗೆ ಏರಿಕೆಯಾಗಿದೆ. 19 ಕೆಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ಫೆಬ್ರವರಿಯಲ್ಲಿ ರಾಷ್ಟ್ರೀಯ ತೈಲು ಮಾರುಕಟ್ಟೆ ಕಂಪನಿಗಳು 91.50ರಷ್ಟು ಕಡಿತಗೊಳಿಸಿದ್ದವು.
ಜನವರಿಯಲ್ಲೂ ಕೂಡ 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 102.50 ರೂಪಾಯಿ ಕಡಿತಗೊಂಡಿತ್ತು. ಅಲ್ಲಿಯವರೆಗೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಸತತವಾಗಿ ಏರಿಕೆಯಾಗುತ್ತಿತ್ತು. ಹೀಗಾಗಿ ರೆಸ್ಟೋರೆಂಟ್ಗಳು, ಹೋಟೆಲ್ಗಳು, ಉಪಾಹಾರ ಗೃಹಗಳ ಮಾಲೀಕರಿಗೆ ಕೊಂಚ ಹೊರೆ ತಗ್ಗಿತ್ತು. ಆದರೆ ಇಂದು ಮತ್ತೆ ದೆಹಲಿಯಲ್ಲಿ 105 ರೂ. ಏರಿಕೆಯಾಗಿದ್ದು, ವಿವಿಧ ಮಹಾನಗರಗಳಲ್ಲೂ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಡಿಸೆಂಬರ್ನಲ್ಲಿ ದೆಹಲಿಯಲ್ಲಿ 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 100 ರೂಪಾಯಿ ಏರಿಕೆಯಾಗುವ ಮೂಲಕ 2101 ರೂಪಾಯಿ ಆಗಿತ್ತು. 2012-13ರಲ್ಲಿ ಒಮ್ಮೆ ಈ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 2200ರೂಪಾಯಿ ತಲುಪಿದ ಮೇಲೆ ಇದೇ ಅತ್ಯಂತ ಹೆಚ್ಚು ಎಂದು ಪರಿಗಣಿಸಲಾಗಿತ್ತು. 2021ರ ಜನವರಿ ಮತ್ತು ಫೆಬ್ರವರಿಯಲ್ಲಿ ಇಳಿಕೆಯಾಗಿತ್ತು. ಆದರೀಗ ಮತ್ತೆ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 2000 ರೂಪಾಯಿ ಗಡಿ ದಾಟಿದೆ.
ಇದನ್ನೂ ಓದಿ: Petrol Diesel Rate Today: ಬೆಂಗಳೂರು ಸಹಿತ ಇತರ ನಗರಗಳ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಇಲ್ಲಿ ಪರಿಶೀಲಿಸಿ
Published On - 8:06 am, Tue, 1 March 22