Bank Holidays in July 2022: ಜುಲೈ ತಿಂಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ 14 ದಿನ ಬ್ಯಾಂಕ್​ ರಜಾ

| Updated By: Srinivas Mata

Updated on: Jun 27, 2022 | 12:24 PM

2022ರ ಜುಲೈ ತಿಂಗಳಲ್ಲಿ ದೇಶದಾದ್ಯಂತ ವಿವಿಧ ಭಾಗಗಳಲ್ಲಿ ಬ್ಯಾಂಕ್​ಗಳ ರಜಾ ದಿನಗಳ ಪಟ್ಟಿ ಇಲ್ಲಿದೆ. ಯಾವ್ಯಾವ ದಿನಗಳು ರಜಾ ಇದೆ ಎಂಬ ಮಾಹಿತಿ ತಿಳಿಯಿರಿ.

Bank Holidays in July 2022: ಜುಲೈ ತಿಂಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ 14 ದಿನ ಬ್ಯಾಂಕ್​ ರಜಾ
ಸಾಂದರ್ಭಿಕ ಚಿತ್ರ
Follow us on

2022ರ ಜೂನ್​ ತಿಂಗಳಲ್ಲಿ ಬ್ಯಾಂಕ್​ಗಳಿಗೆ ಹೆಚ್ಚು ದಿನ ರಜಾ ಇರಲಿಲ್ಲ. ಆದರೆ ಜುಲೈ ತಿಂಗಳಲ್ಲಿ ಭಾರತದ ವಿವಿಧ ಭಾಗಗಳಲ್ಲಿ ಸೇರಿ ಈ ತಿಂಗಳಲ್ಲಿ 14 ರಜಾ ದಿನಗಳಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ದಿನಗಳ ಕ್ಯಾಲೆಂಡರ್ ಸಿದ್ಧಪಡಿಸುತ್ತದೆ. ಪ್ರತಿ ತಿಂಗಳು ಯಾವ್ಯಾವ ದಿನ ಬ್ಯಾಂಕ್​ಗಳಿಗೆ ರಜಾ ಇರುತ್ತದೆ ಎಂಬುದನ್ನು ತಿಳಿಸಲಾಗುತ್ತದೆ. ಬ್ಯಾಂಕ್​ಗಳಿಗೆ ಇರುವ ರಜಾ ದಿನದ ಪೈಕಿ ಬಹುತೇಕ ಪ್ರಾದೇಶಿಕವಾದವು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಇದು ಬದಲಾಗುತ್ತದೆ. ಮೊದಲೇ ತಿಳಿಸಿದ ಹಾಗೆ ಜುಲೈ ತಿಂಗಳಲ್ಲಿ 14 ದಿನ ಬ್ಯಾಂಕ್ ರಜಾ ದಿನ ಇದೆ. ಆ ಪೈಕಿ 7 ದಿನ ವಾರಾಂತ್ಯದ ರಜಾ ದಿನಗಳು. ಮತ್ತೊಂದು ಕಡೆ 8 ಪ್ರಾದೇಶಿಕ ರಜಾ ದಿನಗಳಿವೆ. ಎರಡೂ ಕೆಟಗರಿ ಒಗ್ಗೂಡಿಸಿದರೆ ಒಟ್ಟು 15 ದಿನ ರಜಾ ಆಗುತ್ತದೆ. ಆದರೆ ಬಕ್ರೀದ್ ಪ್ರಾದೇಶಿಕ ರಜಾ ದಿನವಾಗಿದ್ದು, ಕೊಚ್ಚಿ, ತಿರುವನಂತಪುರಂಗೆ ಅನ್ವಯಿಸುತ್ತದೆ. ಇದು ಜುಲೈ 9ನೇ ತಾರೀಕು ಇದೆ. ಆ ದಿನ ಎರಡನೇ ಶನಿವಾರ ಆಗುತ್ತದೆ. ಅಂದು ಎಲ್ಲ ಬ್ಯಾಂಕ್​ಗಳಿಗೂ ರಜಾ ಇರುತ್ತದೆ.

ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆ್ಯಕ್ಟ್, ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆ್ಯಕ್ಟ್ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ ಮತ್ತು ಬ್ಯಾಂಕ್‌ಗಳ ಖಾತೆಗಳನ್ನು ಮುಚ್ಚುವ ಅಡಿಯಲ್ಲಿ ಕೇಂದ್ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ರಾಷ್ಟ್ರೀಯ ಮತ್ತು ಪ್ರಾದೇಶಿಕ ಎಂದು ವರ್ಗೀಕರಿಸುತ್ತದೆ. ಕೆಲವು ರಜಾದಿನಗಳು ಆಯಾ ಪ್ರದೇಶಕ್ಕೆ ನಿರ್ದಿಷ್ಟವಾಗಿರುತ್ತವೆ. ಅಂದರೆ ಅವು ರಾಜ್ಯದಿಂದ ರಾಜ್ಯಕ್ಕೆ ಬದಲಾಗಬಹುದು, ಇತರವು ರಾಷ್ಟ್ರೀಯವಾಗಿರುತ್ತವೆ.

ಜುಲೈ ತಿಂಗಳಲ್ಲಿ ನೆಗೋಷಿಯೇಬಲ್ ಇನ್​ಸ್ಟ್ರುಮೆಂಟ್​ ಕಾಯ್ದೆ ಅಡಿ ಬ್ಯಾಂಕ್ ರಜಾ ದಿನ

ಜುಲೈ 1: ಕಾಂಗ್ (ರಥಜಾತ್ರೆ)/ ರಥಯಾತ್ರಾ – ಭುವನೇಶ್ವರ್

ಜುಲೈ 7: ಖರ್ಚಿ ಪೂಜಾ- ಅಗರ್ತಲಾ

ಜುಲೈ 9: ಈದ್-ಉಲ್-ಅಧಾ (ಬಕ್ರೀದ್)- ಕೊಚ್ಚಿ, ತಿರುವನಂತಪುರಂ; ಈ ದಿನ ಎರಡನೇ ಶನಿವಾರವಾದ್ದರಿಂದ ದೇಶದಾದ್ಯಂತ ಬ್ಯಾಂಕ್​ಗಳಲ್ಲಿ ರಜಾ

ಜುಲೈ 11: ಈದ್-ಉಲ್-ಅಝಾ- ಶ್ರೀನಗರ್, ಜಮ್ಮು

ಜುಲೈ 13: ಭಾನು ಜಯಂತಿ- ಗ್ಯಾಂಗ್ಟಕ್

ಜುಲೈ 14: ಬೆಹ್ ದೀನ್​ಖಲಂ- ಶಿಲ್ಲಾಂಗ್

ಜುಲೈ 16: ಹರೆಲ- ಡೆಹ್ರಾಡೂನ್

ಜುಲೈ 26: ಕೆರ್ ಪೂಜಾ- ಅಗರ್ತಲಾ

ಈ ಮೇಲ್ಕಂಡದ್ದನ್ನು ಹೊರತುಪಡಿಸಿ ಏಳು ವಾರಾಂತ್ಯದ ರಜಾ ದಿನಗಳಿದ್ದಯ, ಒಂದು ದಿನ ಬಕ್ರೀದ್​ ಜತೆಗೆ ಬರುತ್ತದೆ. ಆ ದಿನ ದೇಶದಾದ್ಯಂತ ಬ್ಯಾಂಕ್​ಗಳಿಗೆ ರಜಾ ಇರುತ್ತದೆ. ವಾರಾಂತ್ಯದ ರಜಾ ದಿನಗಳು ಇಲ್ಲಿವೆ.

ಜುಲೈ 3: ಮೊದಲ ಭಾನುವಾರ

ಜುಲೈ 9: ಎರಡನೇ ಶನಿವಾರ

ಜುಲೈ 10: ಎರಡನೇ ಭಾನುವಾರ

ಜುಲೈ 17: ಮೂರನೇ ಭಾನುವಾರ

ಜುಲೈ 23: ನಾಲ್ಕನೇ ಶನಿವಾರ

ಜುಲೈ 24: ನಾಲ್ಕನೇ ಭಾನುವಾರ

ಜುಲೈ 31: ಐದನೇ ಭಾನುವಾರ

ಆದ್ದರಿಂದ ಬ್ಯಾಂಕ್​ಗೆ ಸಂಬಂಧಿಸಿದ ಕೆಲಸ-ಕಾರ್ಯಗಳು ಇದ್ದಲ್ಲಿ, ಅದರಲ್ಲೂ ಬ್ಯಾಂಕ್​ ಶಾಖೆಗೆ ತೆರಳಿ ಮಾಡಬೇಕಾದ ಕೆಲಸಗಳು ಇದ್ದಲ್ಲಿ ಈ ರಜಾ ದಿನಗಳ ಬಗ್ಗೆ ಗಮನ ವಹಿಸುವುದು ಉತ್ತಮ.

ಇದನ್ನೂ ಓದಿ: Personal Loan Interest Rate: ಈ 5 ಬ್ಯಾಂಕ್​ಗಳಲ್ಲಿ ಕಡಿಮೆ ಬಡ್ಡಿ ದರಕ್ಕೆ ಪರ್ಸನಲ್​ ಲೋನ್ ನೀಡುವುದು ಯಾವುದು?

Published On - 12:24 pm, Mon, 27 June 22