2022 March Bank Holidays: 2022ರ ಮಾರ್ಚ್​ ತಿಂಗಳಲ್ಲಿ ಬ್ಯಾಂಕ್​ಗಳಿಗೆ 13 ದಿನ ರಜಾ

| Updated By: Srinivas Mata

Updated on: Feb 28, 2022 | 11:45 AM

2022ರ ಮಾರ್ಚ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ ಇದೆ. ದೇಶದಾದ್ಯಂತ ಒಟ್ಟು ಹದಿಮೂರು ದಿನಗಳ ಕಾಲ ಬ್ಯಾಂಕ್ ರಜಾ ಇದ್ದು, ವಾರಾಂತ್ಯದ ರಜಾ ದಿನವೂ ಒಳಗೊಂಡಿದೆ.

2022 March Bank Holidays: 2022ರ ಮಾರ್ಚ್​ ತಿಂಗಳಲ್ಲಿ ಬ್ಯಾಂಕ್​ಗಳಿಗೆ 13 ದಿನ ರಜಾ
ಸಾಂದರ್ಭಿಕ ಚಿತ್ರ
Follow us on

2022ರ ಮಾರ್ಚ್​ ತಿಂಗಳಿನಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೊದಲಿಗೆ ದೇಶದಲ್ಲಿ ಹಲವಾರು ಬ್ಯಾಂಕ್ ಶಾಖೆಗಳ ಮುಚ್ಚುವ ಪ್ರಮುಖ ದಿನಗಳನ್ನು ಗಮನಿಸಿ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India) 2022ರ ಮಾರ್ಚ್​ನಲ್ಲಿ ಬ್ಯಾಂಕ್​ಗಳು ಕೆಲಸ ಮಾಡದಂಥ ಕೆಲವು ದಿನಗಳನ್ನು ಉಲ್ಲೇಖಿಸಿದರೂ ಆನ್‌ಲೈನ್ ಬ್ಯಾಂಕಿಂಗ್ ಚಟುವಟಿಕೆಗಳು ಕಾರ್ಯ ನಿರ್ವಹಿಸುತ್ತಲೇ ಇರುತ್ತವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರಜಾ ಕ್ಯಾಲೆಂಡರ್ ಪಟ್ಟಿಯ ಪ್ರಕಾರ ಮಾರ್ಚ್​ನಲ್ಲಿ 7 ದಿನ ರಜಾ ಇದ್ದರೂ ಉಳಿದ ದಿನಗಳು ವಾರಾಂತ್ಯಗಳಾಗಿವೆ. ಆದರೂ ಎಲ್ಲ ರಾಜ್ಯಗಳು ಅಥವಾ ಪ್ರದೇಶಗಳಲ್ಲಿ ಬ್ಯಾಂಕ್‌ಗಳನ್ನು 13 ದಿನಗಳವರೆಗೆ ಮುಚ್ಚುವುದಿಲ್ಲ ಎಂಬುದನ್ನು ಗಮನಿಸಬೇಕು. ಇದು ದೇಶದ ವಿವಿಧ ಭಾಗಗಳಲ್ಲಿನ ಬ್ಯಾಂಕ್‌ಗಳ ರಜಾ ದಿನ. ಆಯಾ ರಾಜ್ಯಗಳಲ್ಲಿ ರಜಾದಿನಗಳಿಗಾಗಿ ಮುಚ್ಚಿರುವ ಬೇರೆ ದಿನಗಳಿವೆ. ಉದಾಹರಣೆಗೆ ಬಿಹಾರದಲ್ಲಿ ಬಿಹಾರ ದಿವಸ್‌ಗಾಗಿ ಬ್ಯಾಂಕ್ ಶಾಖೆಗಳನ್ನು ಮುಚ್ಚಬಹುದು. ಆದರೆ ಅಸ್ಸಾಂನಲ್ಲಿ ಅದೇ ದಿನಕ್ಕೆ ಮುಚ್ಚುವುದಿಲ್ಲ. ಹೀಗೆ ಆಯಾ ರಾಜ್ಯದ ವಿವಿಧ ರಜಾ ದಿನಗಳನ್ನು ಒಳಗೊಂಡಂತೆ ಇರುವ ಪಟ್ಟಿ ಇಲ್ಲಿದೆ.

2022ರ ಮಾರ್ಚ್​ನಲ್ಲಿ ಬರುವ ಬ್ಯಾಂಕ್ ರಜಾದಿನಗಳ ವಿಸ್ತೃತ ಪಟ್ಟಿ ಹೀಗಿದೆ:

ಮಹಾಶಿವರಾತ್ರಿ (ಮಹಾ ವದ್-14): ಮಾರ್ಚ್ 1

ಲೋಸರ್: ಮಾರ್ಚ್ 3

ಚಪ್ಚರ್ ಕುಟ್: ಮಾರ್ಚ್ 4

ಹೋಲಿಕಾ ದಹನ್: ಮಾರ್ಚ್ 17

ಹೋಳಿ/ಹೋಳಿ ಎರಡನೇ ದಿನ – ಧುಲೇಟಿ/ಡೋಲ್​ಜಾತ್ರಾ: ಮಾರ್ಚ್ 18

ಹೋಳಿ/ಯೋಸಾಂಗ್ 2ನೇ ದಿನ: ಮಾರ್ಚ್ 19

ಬಿಹಾರ ದಿವಸ್: ಮಾರ್ಚ್ 22

ಆರ್​ಬಿಐ ತಿಳಿಸಿದ ಮೇಲಿನ ರಜಾದಿನಗಳನ್ನು ಹೊರತುಪಡಿಸಿ ವಾರಾಂತ್ಯಗಳಲ್ಲಿ ಬ್ಯಾಂಕ್​ಗಳು ಮುಚ್ಚುತ್ತವೆ.

ಭಾನುವಾರ: ಮಾರ್ಚ್ 6

ಎರಡನೇ ಶನಿವಾರ: ಮಾರ್ಚ್ 12

ಭಾನುವಾರ: ಮಾರ್ಚ್ 13

ಭಾನುವಾರ: ಮಾರ್ಚ್ 20

ನಾಲ್ಕನೇ ಶನಿವಾರ: ಮಾರ್ಚ್ 26

ಭಾನುವಾರ: ಮಾರ್ಚ್ 27

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರಜಾದಿನಗಳನ್ನು ಮೂರು ಬ್ರಾಕೆಟ್​ಗಳ ಅಡಿಯಲ್ಲಿ ಇರಿಸುತ್ತದೆ – ನೆಗೋಷಿಯೇಬಲ್ ಇನ್​ಸ್ಟ್ರುಮೆಂಟ್ಸ್ ಆ್ಯಕ್ಟ್ ಅಡಿಯಲ್ಲಿ ರಜಾದಿನ; ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆ್ಯಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ; ಮತ್ತು ಬ್ಯಾಂಕ್‌ಗಳ ಖಾತೆಗಳನ್ನು ಮುಚ್ಚುವುದು. ಆದರೂ ಬ್ಯಾಂಕ್ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಬದಲಾಗುತ್ತವೆ ಮತ್ತು ಎಲ್ಲ ಬ್ಯಾಂಕಿಂಗ್ ಕಂಪೆನಿಗಳು ವಿವಿಧ ರಾಜ್ಯಗಳಲ್ಲಿ ಅನುಸರಿಸುವುದಿಲ್ಲ ಎಂದು ಗಮನಿಸಬೇಕು. ಬ್ಯಾಂಕಿಂಗ್ ರಜಾದಿನಗಳು ನಿರ್ದಿಷ್ಟ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳು ಅಥವಾ ಆ ರಾಜ್ಯಗಳಲ್ಲಿ ನಿರ್ದಿಷ್ಟ ಸಂದರ್ಭಗಳ ಅಧಿಸೂಚನೆಯನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: ವಿಜಯ್ ಮಲ್ಯ, ನೀರವ್ ಮೋದಿ, ಚೋಕ್ಸಿಯಿಂದ ಬ್ಯಾಂಕ್​ಗಳಿಗೆ 18,000 ಕೋಟಿ ರೂ. ಹಿಂತಿರುಗಿಸಲಾಗಿದೆ; ಸುಪ್ರೀಂ ಕೋರ್ಟ್​​ಗೆ ಸರ್ಕಾರ ಮಾಹಿತಿ

Published On - 1:31 pm, Thu, 24 February 22