Russia- Ukraine Crisis: ಐತಿಹಾಸಿಕವಾಗಿ ಐದನೇ ದಾಖಲೆ ಕುಸಿತ ಕಂಡ ಸೆನ್ಸೆಕ್ಸ್; 10 ಲಕ್ಷ ಕೋಟಿ ರೂಪಾಯಿ ನಷ್ಟ

ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್​ನಲ್ಲಿ ಐತಿಹಾಸಿಕ ದಾಖಲೆಯ ಐದನೇ ಕುಸಿತ ಫೆಬ್ರವರಿ 24ನೇ ತಾರೀಕಿನ ಗುರುವಾರದಂದು ದಾಖಲಾಯಿತು.

Russia- Ukraine Crisis: ಐತಿಹಾಸಿಕವಾಗಿ ಐದನೇ ದಾಖಲೆ ಕುಸಿತ ಕಂಡ ಸೆನ್ಸೆಕ್ಸ್; 10 ಲಕ್ಷ ಕೋಟಿ ರೂಪಾಯಿ ನಷ್ಟ
ಸಾಂದರ್ಭಿಕ ಚಿತ್ರ
Edited By:

Updated on: Feb 24, 2022 | 4:47 PM

ರಷ್ಯಾ- ಉಕ್ರೇನ್ ಬಿಕ್ಕಟ್ಟಿನ (Russia- Ukraine Crisis) ಕಾರಣಕ್ಕೆ ಹೂಡಿಕೆದಾರರಲ್ಲಿ ಮೂಡಿದ ಆತಂಕದಿಂದ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಲ್ಲಿ ಫೆಬ್ರವರಿ 24ನೇ ತಾರೀಕಿನ ಗುರುವಾರದಂದು ರಕ್ತದೋಕುಳಿ ಆಯಿತು. ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಪತ್ತು 10 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಕರಗಿತು. ಬಿಎಸ್​ಇ ಸೆನ್ಸೆಕ್ಸ್ 2702.15 ಪಾಯಿಂಟ್ಸ್ ಅಥವಾ ಶೇ 4.72ರಷ್ಟು ಕುಸಿದು 54,529.91 ಪಾಯಿಂಟ್ಸ್​​ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ ಹಾಗೂ ನಿಫ್ಟಿ 50 ಸೂಚ್ಯಂಕವು 815.30 ಪಾಯಿಂಟ್ಸ್ ಅಥವಾ ಶೇ 4.78ರಷ್ಟು ನೆಲ ಕಚ್ಚಿ, 16,248 ಪಾಯಿಂಟ್ಸ್​​ನೊಂದಿಗೆ ವಹಿವಾಟು ಮುಗಿಸಿದೆ. 240 ಕಂಪೆನಿ ಷೇರುಗಳು ಏರಿಕೆ ದಾಖಲಿಸಿದರೆ, 3084 ಕಂಪೆನಿ ಷೇರುಗಳು ಕುಸಿತ ಕಂಡವು ಮತ್ತು 69 ಕಂಪೆನಿಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಎಲ್ಲ ವಲಯದ ಸೂಚ್ಯಂಕಗಳು ಇಳಿಕೆಯಲ್ಲೇ ದಿನಾಂತ್ಯ ಕಂಡಿದ್ದು, ಶೇ 3ರಿಂದ ಶೇ 8ರಷ್ಟು ನಷ್ಟ ಕಂಡಿದೆ. ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ತಲಾ ಶೇ 5ರಷ್ಟು ಕುಸಿತ ಕಂಡಿವೆ.

ನಿಫ್ಟಿಯಲ್ಲಿ ಇಳಿಕೆ ದಾಖಲಿಸಿದ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ

ಟಾಟಾ ಮೋಟಾರ್ಸ್ ಶೇ -10.28

ಯುಪಿಎಲ್ ಶೇ -8.10

ಇಂಡಸ್​ಇಂಡ್​ ಬ್ಯಾಂಕ್​ ಶೇ -7.89

ಗ್ರಾಸಿಮ್ ಶೇ -7.51

ಜೆಎಸ್​ಡಬ್ಲ್ಯು ಸ್ಟೀಲ್ ಶೇ -7.38

ಬಿಎಸ್​ಇ- ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಒಂದೇ ದಿನದಲ್ಲಿ ಕಂಡ ಅತಿ ದೊಡ್ಡ ಕುಸಿತದ ವಿವರ ಇಲ್ಲಿದೆ:

23-3-2020: 4035.13 ಪಾಯಿಂಟ್ಸ್

13-3-2020: 3,389.17 ಪಾಯಿಂಟ್ಸ್

12-3-2020: 3,204.30 ಪಾಯಿಂಟ್ಸ್

16-3-2020: 2,827.18 ಪಾಯಿಂಟ್ಸ್

24-2-2022: 2,7202.15 ಪಾಯಿಂಟ್ಸ್

9-3-2020: 2,467.44 ಪಾಯಿಂಟ್ಸ್

22-1-2008: 2,272.93 ಪಾಯಿಂಟ್ಸ್

19-3-2020: 2,155.05 ಪಾಯಿಂಟ್ಸ್

26-2-2021: 2,148.83 ಪಾಯಿಂಟ್ಸ್

21-1-2022: 2,085.60 ಪಾಯಿಂಟ್ಸ್

21-12-2020: 2084.33 ಪಾಯಿಂಟ್ಸ್

21-1-2008: 2053.17 ಪಾಯಿಂಟ್ಸ್

24-1-2022: 2,037.61 ಪಾಯಿಂಟ್ಸ್

ಇದನ್ನೂ ಓದಿ: Russia- Ukraine Crisis: ರಷ್ಯಾ- ಉಕ್ರೇನ್​ ಬಿಕ್ಕಟ್ಟಿನ ಮಧ್ಯೆ ನಿಮ್ಮ ಮನೆ ಬಜೆಟ್​ಗೆ ಎಂಥ ಘಾತ!

Published On - 4:44 pm, Thu, 24 February 22