AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Economy: ಭಾರತದ ಆರ್ಥಿಕತೆ ಚೇತರಿಕೆಗೆ ಕಚ್ಚಾ ತೈಲ ಬೆಲೆ ಏರಿಕೆಯ ಆತಂಕ ಇದೆಯೆಂದ ಅನಂತ ನಾಗೇಶ್ವರನ್

ಕಚ್ಚಾ ತೈಲ ಬೆಲೆ ಏರಿಕೆಯು ಭಾರತದ ಆರ್ಥಿಕತೆ ಚೇತರಿಕೆಗೆ ಸವಾಲಾಗಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಅಭಿಪ್ರಾಯ ಪಟ್ಟಿದ್ದಾರೆ.

Indian Economy: ಭಾರತದ ಆರ್ಥಿಕತೆ ಚೇತರಿಕೆಗೆ ಕಚ್ಚಾ ತೈಲ ಬೆಲೆ ಏರಿಕೆಯ ಆತಂಕ ಇದೆಯೆಂದ ಅನಂತ ನಾಗೇಶ್ವರನ್
ವಿ. ಅನಂತ ನಾಗೇಶ್ವರನ್ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: Feb 24, 2022 | 9:14 PM

Share

ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ. ಅನಂತ ನಾಗೇಶ್ವರನ್ (V Anantha Nageswaran) ಗುರುವಾರ ಮಾತನಾಡಿ, ಭಾರತದ ಆರ್ಥಿಕತೆಯು ಈಗ ಚೇತರಿಕೆಗೆ ಸಿದ್ಧವಾಗಿದ್ದು, ಹೆಚ್ಚಿನ ಕಚ್ಚಾ ತೈಲ ಬೆಲೆಯು ಆತಂಕಕ್ಕೆ ಕಾರಣವಾಗಿದೆ ಎಂದಿದ್ದಾರೆ. ದೇಶದಲ್ಲಿ ಬ್ಯಾಂಕಿಂಗ್ ಕ್ಷೇತ್ರವು ಸ್ಥಿರವಾಗಿದೆ, ಬಂಡವಾಳ ಲಭ್ಯವಿದೆ ಮತ್ತು ಕ್ರೆಡಿಟ್ ಆಫ್​ಟೇಕ್ ಚೇತರಿಕೆಗೆ ಸಿದ್ಧವಾಗಿದೆ ಎಂದು ಭಾರತ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಹೇಳಿದರು. “ಕೊರೊನಾ ರೋಗದಿಂದಾಗಿ ಅನಿಶ್ಚಿತ ಬೆಳವಣಿಗೆ ಮತ್ತು ಹೆಚ್ಚಿನ ಹಣದುಬ್ಬರದ ವಿದ್ಯಮಾನಕ್ಕೆ ನಾವು ಹೊರತಾಗಿಲ್ಲ. ಅಭಿವೃದ್ಧಿ ಹೊಂದಿದ ದೇಶಗಳು ಸಹ ಅದೇ ಸಮಸ್ಯೆಯನ್ನು ಎದುರಿಸುತ್ತಿವೆ,” ಎಂದು ಅವರು ಹೇಳಿದ್ದಾರೆ. ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್​ಗೆ 75 ಯುಎಸ್​ಡಿ ಎಂದು ಮನಸ್ಸಿನಲ್ಲಿ ಇಟ್ಟುಕೊಂಡು 2022-23ರ ಬಜೆಟ್ ಆಗಿದೆ. ಆದರೆ ರಷ್ಯಾ ಮತ್ತು ಉಕ್ರೇನ್ ಮಧ್ಯದ ಸಂಘರ್ಷದಿಂದಾಗಿ ಟೆಕ್ಸಾಸ್ ಕಚ್ಚಾ ತೈಲದ ಬೆಲೆ ಈಗ ಪ್ರತಿ ಬ್ಯಾರೆಲ್‌ಗೆ 96 ಯುಎಸ್​ಡಿ ಆಗಿದೆ. “ಭಾರತದ ಆರ್ಥಿಕತೆಯ ಮೇಲೆ ಇದರ ಪ್ರಭಾವವು ಈ ಹೆಚ್ಚಿನ ಬೆಲೆ ಎಷ್ಟು ಕಾಲ ಉಳಿಯುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ,” ಎಂದು ನಾಗೇಶ್ವರನ್ ಹೇಳಿದ್ದಾರೆ.

ನಾಗೇಶ್ವರನ್ ಅವರ ಪ್ರಕಾರ, ಹಣದುಬ್ಬರ ಮತ್ತು ಖರೀದಿಸುವ ಸಾಮರ್ಥ್ಯವು ಪ್ರಪಂಚದಾದ್ಯಂತದ ಸಮಸ್ಯೆಯಾಗಿದೆ. ಸಾಗಣೆ ವೆಚ್ಚಗಳು, ಹೆಚ್ಚಿನ ಕಂಟೇನರ್ ವೆಚ್ಚಗಳು ಮತ್ತು ಹೆಚ್ಚಿನ ತೈಲ ಬೆಲೆಗಳು ಇದಕ್ಕೆ ಕಾರಣ ಎನ್ನಲಾಗಿದೆ. ಭಾರತದಲ್ಲಿ ಹಣದುಬ್ಬರ ದರಗಳು ಸದ್ಯಕ್ಕೆ ಶೇಕಡಾ 5.2ರ ಆಸುಪಾಸಿನಲ್ಲಿವೆ. “ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಇದು ಆರ್‌ಬಿಐ ನಿಗದಿ ಮಾಡಿರುವ ಶೇಕಡಾ ನಾಲ್ಕರಿಂದ ಆರರೊಳಗೆ ಉಳಿಯಬೇಕು ಎಂಬುದಾಗಿ ನಾನು ಭಾವಿಸುತ್ತೇನೆ,” ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ಮಾರುಕಟ್ಟೆ ತಿದ್ದುಪಡಿ ಆರಂಭಿಸಿದೆ ಎಂದು ಸಿಇಎ ಹೇಳಿದ್ದಾರೆ.

“ಕೆಲವು ಕೈಗಾರಿಕೆಗಳಲ್ಲಿನ ಚಟುವಟಿಕೆ ಮಟ್ಟಗಳು ಕೊರೊನಾ-ಪೂರ್ವ ಮಟ್ಟವನ್ನು ದಾಟಿದೆ. ಆದರೆ ಸೇವಾ ವಲಯವು ಇನ್ನೂ ಚೇತರಿಸಿಕೊಂಡಿಲ್ಲ”. ಖಾಸಗಿ ವಲಯದ ಹೂಡಿಕೆಯ ಸನ್ನಿವೇಶಕ್ಕೆ ಸಂಬಂಧಿಸಿದಂತೆ, ಕೊರೊನಾದ ಕಾರಣದಿಂದಾಗಿ ಅದು ಇನ್ನೂ ಹೆಚ್ಚಿಲ್ಲ ಎಂದು ಅವರು ತಿಳಿಸಿದ್ದಾರೆ. “ಬಳಕೆಯ ಮಟ್ಟಗಳು ಹೆಚ್ಚಾದಾಗ ಅದೂ ಹೆಚ್ಚಾಗುತ್ತದೆ. ಖಾಸಗಿ ವಲಯದ ಹೂಡಿಕೆ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಕೊರೊನಾದ ಕಾರಣದಿಂದಾಗಿ ಇದು ಇನ್ನೂ ಹೆಚ್ಚಾಗಬೇಕಿದೆ,” ಎಂದಿದ್ದಾರೆ. “ಆದರೆ 2022-23ರಲ್ಲಿ ಬಜೆಟ್‌ನಲ್ಲಿ ಬಂಡವಾಳ ವೆಚ್ಚದ ಯೋಜನೆ ಹೆಚ್ಚಾಗಿದೆ. ಶೂನ್ಯವನ್ನು ತುಂಬಲು ಇದನ್ನು ಮಾಡಲಾಗಿದೆ. ವಾಸ್ತವವಾಗಿ ರಾಜ್ಯಗಳ ಬಂಡವಾಳ ವೆಚ್ಚವೂ ಹೆಚ್ಚಾಗಿದೆ,” ಎಂದು ನಾಗೇಶ್ವರನ್ ತಿಳಿಸಿದ್ದಾರೆ.

ಬಜೆಟ್‌ನಲ್ಲಿ ನರೇಗಾಗೆ ಕಡಿಮೆ ಹಂಚಿಕೆ ಕುರಿತು, ಇದು ಬೇಡಿಕೆ-ಚಾಲಿತ ಕಾರ್ಯಕ್ರಮವಾಗಿದೆ. “ಆರ್ಥಿಕತೆಯು ಚೇತರಿಸಿಕೊಳ್ಳುತ್ತದೆ ಮತ್ತು MNREGA (ಮನರೇಗಾ) ನಿಧಿಯ ಬೇಡಿಕೆಯು ಕುಸಿಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಕಾರ್ಯಕ್ರಮಕ್ಕೆ ಬೇಡಿಕೆಯಿದ್ದರೆ ಅದಕ್ಕೆ ಹಣವನ್ನು ಒದಗಿಸಲಾಗುತ್ತದೆ,” ಎಂದಿದ್ದಾರೆ. ಬಜೆಟ್‌ನಲ್ಲಿ ನರೇಗಾಗೆ ಕಡಿಮೆ ಹಂಚಿಕೆಯ ಕುರಿತು, ಇದು ಬೇಡಿಕೆ-ಚಾಲಿತ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಅನಂತ ನಾಗೇಶ್ವರನ್ ಹೇಳುವಂತೆ, ಬಜೆಟ್‌ನಲ್ಲಿ ಅವಕಾಶಗಳಿವೆ. “ಮುಂದಿನ ಹಣಕಾಸು ವರ್ಷದ ದ್ವಿತೀಯಾರ್ಧದಿಂದ ಚೇತರಿಕೆ ಪ್ರಾರಂಭವಾಗಲಿದೆ ಎಂದು ನಾನು ನಿರೀಕ್ಷಿಸುತ್ತೇನೆ. ನಾಮಿನಲ್ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 11ಕ್ಕೆ ನಿಗದಿಪಡಿಸಲಾಗಿದೆ. ಶೇ 4ರ ಹಣದುಬ್ಬರದೊಂದಿಗೆ ನಿಜವಾದ ಜಿಡಿಪಿ ಬೆಳವಣಿಗೆಯು ಶೇಕಡಾ ಏಳು ಇರುತ್ತದೆ.” ಭಾರತವು ಐದು ಟ್ರಿಲಿಯನ್ ಯುಎಸ್​ಡಿ ಆರ್ಥಿಕತೆಯನ್ನು ಸಾಧಿಸಲು, ಕೃಷಿ, ಉತ್ಪಾದನೆ ಮತ್ತು ಸೇವೆಗಳ ಪಾಲು ದೇಶದ ಜಿಡಿಪಿಯಲ್ಲಿ 20:30:50 ಅನುಪಾತದಲ್ಲಿರಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: FY27ರ ವೇಳೆಗೆ ಭಾರತದ ನಾಮಿನಲ್ ಜಿಡಿಪಿಯಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಲಿದೆ ಎಂದ ಸಿಇಎ ಅನಂತ ನಾಗೇಶ್ವರನ್